ನೀವು ಈ ಮನೆ ಮದ್ದು ಮಾಡಿದ್ರೆ ಹೊಟ್ಟೆಯಲ್ಲಿರುವ ಕಲ್ಮಶಗಳು ಹೊರಗೆ ಹಾಕುತ್ತೆ

0
668

ಹೊಟ್ಟೆಯ ಕಲ್ಮಶ ಹೊರಹಾಕಲು ನ್ಯೆಸರ್ಗಿಕವಾದ ಮನೆ ಮದ್ದನ್ನು ಉಪಯೋಗಿಸಬಹುದು. ಇದನ್ನು ನೀವು ಮಾಡಿದ್ರೆ ನಿಮ್ಮ ಆರೋಗ್ಯ ಸೂಪರ್ ಆಗಿರುತ್ತದೆ. ಈಗಿನ ಆಹಾರ ಪದ್ಧತಿಯಲ್ಲಿ ಅನಿವಾರ್ಯ ಕಾರಣಗಳಿಂದ ಸಿದ್ದ ಆಹಾರಗಳನ್ನೇ ಸೇವಿಸಿ ಅನಾರೋಗ್ಯಕರ ಜೀವನ ಶ್ಯೆಲಿಯನ್ನು ಅನುಸರಿಸುತ್ತ ಮಾಲಿನ್ಯ ಭರಿತ ವಾಯು ಸೇವಿಸುತ್ತಾ ಬಂದಿದ್ದರೆ ನಿಮ್ಮ ಹೊಟ್ಟೆಯಲ್ಲಿ ಅನಿವಾರ್ಯವಾಗಿ ನಿಮ್ಮ ಹೊಟ್ಟೆಯಲ್ಲಿ ಸಾಕಷ್ಟು ವಿಷಕಾರಿ ವಸ್ತುಗಳ ಸಂಗ್ರಹವೇ ಇರಬಹುದು. ನಮ್ಮ ಮನಸ್ಸಿಗೆ ಸುಂದರ ಮತ್ತು ರುಚಿಕರವಾಗಿ ಯಾವುದು ಕಂಡಿತೋ ಅವೆಲ್ಲವೂ ನೇರವಾಗಿ ಹೊಟ್ಟೆ ಸೇರುತ್ತವೆ. ಅನಾರೋಗ್ಯದ ಆಹಾರದ ಪರಿಣಾಮವಾಗಿ ಹೊಟ್ಟೆಯಲ್ಲಿ ಮತ್ತು ಕರುಳುಗಳಲ್ಲಿ ಸಾಕಷ್ಟು ವಿಷಕಾರಿ ವಸ್ತುಗಳು ಸಂಗ್ರಹವಾಗುತ್ತವೆ. ಇಂದು ನಾವು ಸೇವಿಸುವ ಆಹಾರ ಪಾನೀಯಗಳು ಮತ್ತು ವಾಯು ಸಹ ಸಾಕಷ್ಟು ಕಲುಷಿತಕ್ಕೊಳಗಾಗಿದೆ.

ಅಲ್ಲದೇ ಆಹಾರದಲ್ಲಿರುವ ಸೂಕ್ಷ್ಮ ಜೀವಾಣುಗಳು ಹೊಟ್ಟೆ ಮತ್ತು ಕರುಳುಗಳಲ್ಲಿ ಉಳಿದು ಮನೆ ಮಾಡಿಕೊಂಡು ಆಹಾರವನ್ನು ಸೇವಿಸುತ್ತಾ ಉಂಡ ಮನೆಗೆ ದ್ರೋಹ ಬಗೆಯುತ್ತವೆ. ಆದ್ದರಿಂದ ಹೊಟ್ಟೆಯನ್ನು ಆಗಾಗ ಪೂರ್ಣವಾಗಿ ಕಲ್ಮಶ ರಹಿತವಾಗಿಸುತ್ತಾ ಇರಬೇಕಾಗುತ್ತದೆ ಹಿರಿಯರು ಇದನ್ನು ಹೊಟ್ಟೆತೊಳಸುವುದು ಎಂದು ಕರೆಯುತ್ತಿದ್ದರು. ಹೊಟ್ಟೆಯೊಳಗಿನ ಕಲ್ಮಶವನ್ನು ಹೋಗಲಾಡಿಸಲು ಉಪ್ಪು ನೀರಿನ ರೆಸಿಪಿ ಎಂಬ ಪ್ರಯೋಗದಿಂದ ಹೊಟ್ಟೆಯನ್ನು ಶುದ್ದಿ ಮಾಡಿಕೊಳ್ಳುತ್ತಿದ್ದರು. ಇಂದಿನವರೆಗೂ ಅನುಸರಿಸುತ್ತಿದ್ದ ವಿಧಾನವೆಂದರೆ ಹರಳೆಣ್ಣೆಯ ಸೇವನೆ ಆದರೆ ಇದಕ್ಕಿಂತಲೂ ಉತ್ತಮವಾದ ಮತ್ತು ಸುರಕ್ಷಿತವಾದ ಮತ್ತು ಯಾವುದೇ ಅಡ್ಡ ಪರಿಣಾಮಗಳಿಲ್ಲದ ಇನ್ನೊಂದು ವಿಧಾನವಿದೆ. ಇದು ಅಪ್ಪಟ ನ್ಯೆಸರ್ಗಿಕವಾಗಿದ್ದು ಹೊಟ್ಟೆಯಲ್ಲಿರುವ ಎಲ್ಲ ಕಲ್ಮಶಗಳು ಹಾಗೂ ಮನೆ ಮಾಡಿಕೊಂಡಿದ್ದ ಹುಳಗಳು ಮತ್ತು ಕ್ರಿಮಿಗಳನ್ನು ಹೊರಹಾಕಲು ನೆರವಾಗುತ್ತದೆ.

ದೇಹದೊಳಗಿನ ಕಲ್ಮಶ ಹೊರಹಾಕುವ ಮನೆಮದ್ದುಗಳು ಇದಕ್ಕೆ ಬಳಸಬೇಕಾದ ಸಾಮಗ್ರಿಗಳು. ನಿಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಸದಾ ಇರುವುದೇ ಆಗಿದೆ. ಹೊರಗಿನಿಂದ ತರಬೇಕಾದ ಒಂದೇ ಒಂದು ಸಾಮಗ್ರಿ ಎಂದರೆ ಪಪಾಯಿ ಎಲೆಗಳು. ಬನ್ನಿ ಈ ವಿಧಾನದ ಬಗ್ಗೆ ಅರಿಯೋಣ. ಅಗತ್ಯವಿರುವ ಸಾಮಗ್ರಿಗಳು. ಮೂರು ದೊಡ್ಡ ಚಮಚ ಪಪಾಯಿ ಎಲೆಯ ರಸ ಒಂದು ದೊಡ್ಡ ಚಮಚ ಜೇನು ತುಪ್ಪ ಈ ಮನೆ ಮದ್ದಿನ ಮೂಲಕ ಹೊಟ್ಟೆಯಲ್ಲಿದ್ದ ಮತ್ತು ಕರಳುಗಳಲ್ಲಿ ಅವಿತಿದ್ದ ಅಷ್ಟೂ ಕಲ್ಮಶಗಳು ಮತ್ತು ಕ್ರಿಮಿಗಳು ತೊಳಸಲ್ಪಟ್ಟು ಹೊರಡಬ್ಬಲ್ಪಡುತ್ತವೆ. ಇದರ ಜೊತೆಗೆ ಈ ಮನೆ ಮದ್ದಿನ ಸೇವನೆಯಿಂದ ಹೊಟ್ಟೆ ಮತ್ತು ಕರಳುಗಳಲ್ಲಿದ್ದ ಸೂಕ್ಷ್ಮ ಜೀವಿಗಳು ಮತ್ತು ಬಾಕ್ಟೀರಿಯಾಗಳು ಹೋಗಿ ಹೊಟ್ಟೆ ಮತ್ತು ಕರುಳುಗಳು ಶುದ್ಧಗೊಳ್ಳುತ್ತವೆ.

ಹಿತ್ತಲ ಗಿಡ ಪಪಾಯಿ ಗಿಡದ ಎಲೆಗಳ ಜಬರ್ದಸ್ತ್ ಪವರ್ ಇದು. ಈ ಮದ್ದಿನಲ್ಲಿ ಬಳಸಲಾದ ಜೇನು ಮತ್ತು ಪಪಾಯ ಎಲೆಯ ರಸದ ಸಂಯೋಜನೆಯಲ್ಲಿರುವ ವಿವಿಧ ವಿಟಮಿನ್ ಗಳು ಮತ್ತು ಖನಿಜಗಳು ಹೊಟ್ಟೆ ಒಳಗಿರುವ ಜೀವಕೋಶಗಳು ಹೊಸದಾಗಿ ಹುಟ್ಟಲು ನೆರವಾಗುತ್ತದೆ. ಹಾಗೂ ತನ್ಮೂಲಕ ಆರೋಗ್ಯಕರ ಜೀರ್ಣರಸ ಹೊಸರಲು ನೆರವಾಗುತ್ತದೆ. ತಯಾರಿಕೆಯ ವಿಧಾನ. ಇವೆರಡನ್ನು ಒಂದು ಲೋಟಕ್ಕೆ ಹಾಕಿ ಚೆನ್ನಾಗಿ ಕಲಕಿ ಶಪಥವಾಗಿ ಹದಿನೈದು ದಿನಗಳ ವರೆಗೆ ಬೆಳಗ್ಗೆ ಎದ್ದ ತಕ್ಷಣ ಉಪಹರಕ್ಕೂ ಮುನ್ನ ನೇರವಾಗಿ ಕುಡಿಯಿರಿ. ಈ ರೀತಿ ನೀವು ತಪ್ಪದೇ ಪಾಲನೆ ಮಾಡಿದ್ದೇ ಆದಲ್ಲಿ ಅದರ ಫಲಿತಾಂಶವನ್ನು ನೀವೆ ನೋಡಬಹುದು. ಈ ಲೇಖನವನ್ನು ಶೇರ್ ಮಾಡಿ.

LEAVE A REPLY

Please enter your comment!
Please enter your name here