ಪವಾಡಗಳನ್ನು ಮಾಡುವ ಆದಿಶಕ್ತಿ ಕೊಲ್ಲೂರು ಮೂಕಾಂಬಿಕೆ

0
657

ಕೊಲ್ಲೂರ ಮುಕಾಂಬಿಕಾ ದೇವಿಯ ಬಗ್ಗೆ ನಿಮಗೆ ತಿಳಿಯದ ಕ್ಷೇತ್ರದ ಸ್ವಾರಸ್ಯಕರ ವಿಚಾರಗಳು. ಕಾಮಾಸುರನು ಮೃತ್ಯುಂಜಯನಾಗಿ ಇರಬೇಕೆಂದುಕೊಂಡರೆ ಸ್ತ್ರೀ ಶಕ್ತಿ ಸುಮ್ಮನೆ ಇರುತ್ತಾಳೆಯೇ ಸುಮ್ಮನಿರುವುದಿಲ್ಲ ಎನ್ನುವುದಕ್ಕೆ ಉದಾಹರಣೆ ಮೂಕಾಂಬಿಕಾ ದೇವಿ ಈ ದೇವಿಯ ಮಹಿಮೆಯ ಬಗ್ಗೆ ತಿಳಿದುಕೊಳ್ಳೋಣ. ಅತ್ಯಂತ ಪ್ರಾಚೀನ ಕಾಲದ ಕ್ಷೇತ್ರಗಳಲ್ಲಿ ಮೂಕಾಂಬಿಕೆ ಕ್ಷೇತ್ರವು ಒಂದೂ. ಇದು ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹದಿನೇಳನೆಯ ರಾಷ್ಟ್ರೀಯ ಹೆದ್ದಾರಿಯ ಸಮೀಪ ಹೊಂದಿಕೊಂಡು ಕೊಡಚಾದ್ರಿ ಬೆಟ್ಟಗಳನ್ನು ಬಳಸಿಕೊಂಡು ಈ ಕ್ಷೇತ್ರದ ಉತ್ತರ ಭಾಗದಲ್ಲಿ ಸೌಪರ್ಣಿಕಾ ಎಂಬ ನದಿ ಇದೆ. ಸುವರ್ಣ ಎಂಬ ಗರುಡ ಪಕ್ಷಿ ಈ ನದಿಯ ತೀರದಲ್ಲಿ ತಪಸ್ಸು ಮಾಡಿ ಮೋಕ್ಷ ಪಡೆದಿದ್ದರಿಂದ ಈ ನದಿಗೆ ಸೌಪರ್ಣಿಕಾ ನದಿ ಎಂದು ಹೆಸರು ಬಂದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ನದಿಯ ನೀರಿನಲ್ಲಿ ಎಷ್ಟು ಔಷಧೀಯ ಗುಣಗಳಿವೆ ಎಂದು ಸ್ನಾನ ಮಾಡಿದರೆ ಅನೇಕ ರೋಗಗಳು ಗುಣವಾಗುತ್ತವೆ ಎಂಬುದು ಭಕ್ತರ ಅಗಾಧವಾದ ನಂಬಿಕೆ.

ಈ ಮಾತೆಯು ಸ್ವಯಂಭೂವಾಗಿ ನೆಲೆಸಿದ್ದಾಳೆ ಏನು ಎಂಬುದು ಸಾಕ್ಷಾತ್ ಪರಮೇಶ್ವರ ತನ್ನ ಮಗನಾದ ಕುಮಾರಸ್ವಾಮಿಗೆ ಈ ಕ್ಷೇತ್ರದ ಬಗ್ಗೆ ತಿಳಿಸಲು ಸುಬ್ರಹ್ಮಣ್ಯ ಸ್ವಾಮಿ ಇಲ್ಲಿ ತಪಸ್ಸು ಮಾಡಿದ ಎಂಬುದು ಪುರಾಣದ ಕಥೆ ಇದೆ. ಕೃತಯುಗದಲ್ಲಿ ಈ ಪ್ರದೇಶದಲ್ಲಿ ಕಾಮಾಸುರ ಎಂಬ ರಾಕ್ಷಸನು ದೇವತೆಗಳನ್ನು ಋಷಿಗಳನ್ನು ಸಾಕಷ್ಟು ಹಿಂಸೆ ನೀಡುತ್ತಿದ್ದ. ಆತ ತಪಸ್ಸು ಮಾಡಿ ಪರಶಿವನ ಅನುಗ್ರಹದಿಂದ ಮರಣ ಬರದ ಹಾಗೆ ಮರವನ್ನು ಪಡೆಯಲು ಸಂಕಲ್ಪ ಮಾಡಿದನಂತೆ. ಪರಮೇಶ್ವರ ಪ್ರತ್ಯಕ್ಷವಾದೊಡನೆ ವರವನ್ನು ಕೇಳದ ಹಾಗೆ ದೇವಿಯು ಕಾಮಾಸುರನ ಬಾಯಿ ಬರದ ಹಾಗೆ ಮಾಡಿದಳಂತೆ. ಆದ್ದರಿಂದ ನಂತರ ಮೂಕಾಸುರ ಎಂದು ಹೆಸರು ಬಂದಿದೆ. ಆದರೆ ಕಾಮಾಸುರನು ಋಷಿಗಳನ್ನು ದೇವತೆಗಳನ್ನು ಹಿಂಸಿಸುತ್ತಿದ್ದರೆ ಜೇಷ್ಠ ಶುಕ್ಲ ಅಷ್ಟಮಿ ದಿವಸ ಕೊಡಚಾದ್ರಿ ಬೆಟ್ಟದ ಮೇಲೆ ದೇವಿಯು ಈತನನ್ನು ಸಂಹಾರ ಮಾಡಿದಳಂತೆ. ಮೂಕಾಸುರನನ್ನು ಸಂಹಾರ ಮಾಡಿದ್ದರಿಂದ ಈ ದೇವಿಗೆ ಮೂಕಾಂಬಿಕೆ ಎಂದು ಹೆಸರು ಬಂದಿದೆ ಎಂದು ಪ್ರತೀತಿ. ದೇವಿಗೆ ಈ ದೇವಾಲಯವನ್ನು ಕೇರಳ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ. ಒಳಗೆ ಪ್ರವೇಶಿಸುತ್ತ ಹಾಗೆ 20 ಅಡಿಗಳ ದೀಪದ ಸ್ತಂಭವು ಪ್ರತ್ಯಕ್ಷವಾಗುತ್ತದೆ.

ಅದರ ಪಕ್ಕದಲ್ಲಿ ಅದಕ್ಕಿಂತ ಚಿಕ್ಕದಾದ ಧ್ವಜಸ್ತಂಭವು ಚಿನ್ನದ ಹೊದಿಕೆ ಹಾಕಿರುವ ಸ್ತಂಭವು ಕಾಣಿಸುತ್ತದೆ. ಧ್ವಜಸ್ತಂಭವನ್ನು ದರ್ಶನ ಮಾಡಿದ ನಂತರ ಭಕ್ತರು ಗರ್ಭಗುಡಿಯ ಒಳಗೆ ಪ್ರವೇಶ ಮಾಡುತ್ತಾರೆ. ಒಳಗಡೆ ಪ್ರವೇಶ ಮಾಡುವಾಗ ಪುರುಷರು ಅಂಗಿ ಮತ್ತು ಬನಿಯನ್ ಕಳಚಿ ಪ್ರವೇಶ ಮಾಡಬೇಕು. ಮೂಕಾಂಬಿಕ ತಾಯಿಯು ಪದ್ಮಾಸನದಲ್ಲಿ ದರ್ಶನ ಕೊಡುತ್ತಾಳೆ. ಶಾಂತ ಸ್ವರೂಪಳಾಗಿ ಕಾಣಿಸುತ್ತಾಳೆ. ನಾಲ್ಕು ಕೈಗಳಿರುವ ದೇವಿಗೆ ಎರಡು ಕೈಯಲ್ಲಿ ಒಂದು ಕೈಯಲ್ಲಿ ಚಕ್ರ ಇನ್ನೊಂದು ಕೈಯಲ್ಲಿ ಶಂಕು ಹಿಡಿದಿರುತ್ತಾಳೆ. ಇನ್ನೂ ಎರಡು ಕೈಗಳು ಒಂದು ಅಭಯ ಮುದ್ರೆಯಲ್ಲಿ ಇನ್ನೊಂದು ವರದ ಮುದ್ರೆಯಲ್ಲಿ ಇರುತ್ತಾಳೆ. ದೇವಿಯಲ್ಲಿ ಶೌರ್ಯವನ್ನು ತೋರಿಸುವ ಖಡ್ಗವನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ ಜಿ ರಾಮಚಂದ್ರರವರು ದಾನವಾಗಿ ನೀಡಿದ್ದಾರೆ. ದೇವಿಯನ್ನು ಆಗಾಗ ದರ್ಶನ ಮಾಡಿಕೊಳ್ಳುತ್ತಿದ್ದರಂತೆ. ಈಗ ಇರುವ ದೇವಿಯ ವಿಗ್ರಹವನ್ನು ಪಂಚ ಲೋಹದಿಂದ ತಯಾರಿಸಿದ ಸ್ತ್ರೀ ಚಕ್ರ ಸಮೇತ ಪ್ರತಿಷ್ಠಾಪನೆ ಮಾಡಿದವರು ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ಶ್ರೀ ಶಂಕರಾಚಾರ್ಯರ ಪೀಠವಿದೆ.

ಮೊದಲು ದೇವಿಯು ಉಗ್ರ ರೂಪದಲ್ಲಿ ಇದ್ದಳೆಂದು ಶ್ರೀ ಶಂಕರಾಚಾರ್ಯರು ಬಾಲ್ಯದಲ್ಲಿ ಕಾಲು ನಡಿಗೆಯಲ್ಲಿ ಈ ಪ್ರದೇಶಕ್ಕೆ ಬಂದಾಗ ಆಕೆಯ ಉಗ್ರ ರೂಪ ನೋಡಿ ಭಯಬೀತರಾಗಿ ಆಕೆಯನ್ನು ಶಾಂತ ಸ್ವರೂಪಳನ್ನಾಗಿ ಮಾಡಿದರೆಂದು ಕಥೆಯು. ಉಚಿತ ಪರಿಹಾರ ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಗುರುಗಳಿಗೆ ಒಮ್ಮೆ ಕರೆ ಮಾಡಿರಿ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 9886 83 5333

LEAVE A REPLY

Please enter your comment!
Please enter your name here