ಶನಿ ದೇವರಿಗೆ ಎಳ್ಳೆಣ್ಣೆ ತಗೊಂಡು ಈ ರೀತಿ ಮಾಡಿರಿ ನಿಮಗೆ ಒಳ್ಳೇದು ಆಗುತ್ತೆ

0
562

ಶನಿ ದೇವರಿಗೆ ಪ್ರಿಯವಾದ ಎಳ್ಳು ಎಣ್ಣೆಯ ಹಿಂದಿನ ರಹಸ್ಯ ಇಂದಿನ ವಿಶ್ಲೇಷಣೆ. ಹಿಂದೂ ಸಂಪ್ರದಾಯದಲ್ಲಿ ಶನಿಯ ಪ್ರಭಾವ ಸಾಡೇಸಾತಿ ಅಥವಾ ಏಳೂವರೆ ವರ್ಷಗಳ ಕಾಲ ದೋಷಗಳನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ ಏಳೂವರೆ ವರ್ಷಗಳ ಅವಧಿಯಲ್ಲಿ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ. ಈ ಅವಧಿಯಲ್ಲಿ ಒತ್ತಡ ಸೋಮಾರಿತನ ಆರೋಗ್ಯ ಸಂಬಂಧಿ ತೊಂದರೆಗಳು ಮತ್ತು ವೃತ್ತಿಜೀವನದಲ್ಲಿ ಸಾಕಷ್ಟು ತೊಡಕುಗಳು ಉಂಟಾಗುತ್ತದೆ. ಮುಕ್ತಿ ಪಡೆದುಕೊಳ್ಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಪರಿಹಾರಗಳು ಹೇಳಿದ್ದಾರೆ. ಇದರಲ್ಲಿ ಪ್ರಮುಖವಾದದ್ದು ಶನಿ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನ. ಇದರ ಪ್ರಯೋಗ ಶನಿ ದೇವರನ್ನು ಎಳ್ಳೆಣ್ಣೆಯಿಂದ ಸ್ನಾನ ಹಾಗೂ ಅಭ್ಯಂಜನ ಮಾಡಿಸುವುದು ಪ್ರಮುಖವಾಗಿದೆ. ಆದರೆ ಹೆಚ್ಚಿನವರಿಗೆ ಇದರ ಮಹತ್ವದ ಕಾರಣ ಏನೆಂದು ತಿಳಿದಿಲ್ಲ. ಹನುಮಂತನಿಗೆ ಸವಾಲು ಎಸೆದ ಶನಿದೇವ ಒಂದು ದಿನ ಹನುಮಂತ ಮರದ ಕೆಳಗೆ ಕುಳಿತು ರಾಮ ಧ್ಯಾನದಲ್ಲಿ ತೊಡಗಿರುವಾಗ ಶನಿದೇವ ಅಲ್ಲಿ ಪ್ರತ್ಯಕ್ಷವಾಗಿ ಹೇಳಿದ. ಈ ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ನಾನೇ ಆದರೆ ನೀನು ಸಹ ಪ್ರಬಲನೆಂದು ಕೇಳ್ಪಟ್ಟೆ ನಿನ್ನ ಪರಾಕ್ರಮ ಎಷ್ಟಿದೆ ಎಂದು ನನಗೆ ತಿಳಿಯಬೇಕಿದೆ.

ಬಾ ಕಣ್ಣು ತೆರೆದು ನನ್ನೊಂದಿಗೆ ಯುದ್ಧ ಮಾಡು ಎಂದು ಸವಾಲೆಸೆದ. ನಂತರ ಹನುಮಂತನು ಶನಿ ದೇವರ ಸವಾಲಿಗೆ ಮುಂದೆ ನಿಂತು ವಿಚಲನಾಗದೆ ಹನುಮಂತ ಕಣ್ಣನ್ನು ತೆರೆದು ಈ ರೀತಿಯಾಗಿ ಉತ್ತರಿಸಿದ. ಈಗ ನಾನು ನನ್ನ ಇಷ್ಟ ದೇವರನ್ನು ಪ್ರಾರ್ಥಿಸುತ್ತಿದ್ದೇನೆ. ಈ ಸಮಯದಲ್ಲಿ ನನ್ನನ್ನು ಚಂಚಲಗೊಳಿಸಬೇಡ ನನ್ನನ್ನು ಒಂಟಿಯಾಗಿ ಪ್ರಾರ್ಥಿಸಲು ಬಿಡು ಎಂದು ಸಿಟ್ಟಿಗೆದ್ದ ಹನುಮಂತ. ಆದರೆ ಇದಕ್ಕೆ ಮಣಿಯದ ಶನಿದೇವ ಮತ್ತೆ ಮತ್ತೆ ಯುದ್ಧಕ್ಕೆ ಬರುವಂತೆ ಕಾಡತೊಡಗುತ್ತಾನೆ. ಆಗ ತಾಳ್ಮೆ ಕಳೆದುಕೊಂಡ ಹನುಮಂತ ತನ್ನ ಬಾಲದಿಂದ ಶನಿ ದೇವರ ಶರೀರವನ್ನು ಸುತ್ತುವರೆದು ನಿಧಾನವಾಗಿ ಒತ್ತಡ ಹೆಚ್ಚಿಸಲು ತೊಡಗುತ್ತಾನೆ. ಸಿಟ್ಟಿಗೆದ್ದ ಹನುಮಂತನ ಬಾಲದಿಂದ ಬಿಡಿಸಿಕೊಳ್ಳಲು ಶನಿದೇವ ಎಷ್ಟು ಪ್ರಯತ್ನಿಸಿದರೂ ಬಾಲದ ಒತ್ತಡ ಹೆಚ್ಚುತ್ತಲೇ ಹೋಗುತ್ತಿತ್ತು. ತನ್ನ ಭಾಗದಿಂದಲೇ ಶನಿದೇವರನ್ನು ಎತ್ತಿ ಅಲುಗಾಡಿಸಿದಾಗ ಶನಿ ದೇವರ ಶರೀರ ಲಂಕೆಯ ಸೇತುವೆಗೆ ತಾಗಿ ರಕ್ತ ಹರಿಯಲು ಪ್ರಾರಂಭವಾಗುತ್ತದೆ. ಇದರಿಂದ ನೋವನ್ನು ತಡೆದುಕೊಳ್ಳಲಾಗದೆ ಶನಿದೇವ ಸೋಲನ್ನು ಒಪ್ಪಿಕೊಂಡು ಹನುಮಂತನ ಬಳಿ ದಯಾಭಿಕ್ಷೆ ಯಾಚಿಸಲು ತೊಡಗುತ್ತಾನೆ.

ದಯವಿಟ್ಟು ನನ್ನನ್ನು ಬಿಡುಗಡೆ ಮಾಡು ನಾನು ಎಂದಿಗೂ ಈ ತಪ್ಪನ್ನು ಮತ್ತೆ ಮಾಡಲಾರೆ ಎಂದು ಅಂಗಲಾಚಿದ. ಅದಕ್ಕೆ ಉತ್ತರಿಸಿದ ಹನುಮಂತ ಇನ್ನು ಮುಂದೆ ನೀನು ಎಂದಿಗೂ ರಾಮ ಭಕ್ತರಿಗೆ ತೊಂದರೆ ಮಾಡಲಾರೆ ಎಂದು ಭರವಸೆ ನೀಡಿದರೆ ಮಾತ್ರ ಬಿಡುಗಡೆ ಮಾಡುವೆ ಎಂದ. ನೋವು ತದೆಯಲಾರೆ ಶನಿದೇವ ಹೀಗೆ ಉತ್ತರಿಸಿದ. ನೀನು ಹೇಳಿದ ಹಾಗೆಯೇ ಆಗಲಿ ನಾನು ಇನ್ನು ಮುಂದೆ ನಿನ್ನ ಹಾಗೂ ರಾಮ ಭಕ್ತರಿಗೆ ತೊಂದರೆ ನೀಡಲಾರೆ ಎಂದು ಭರವಸೆ ಕೊಡುತ್ತಾನೆ. ಶನಿ ದೇವರ ಮಾತಿಗೆ ಒಪ್ಪಿ ಹನುಮಂತ ತನ್ನ ಬಂಧನದಿಂದ ಶನಿದೇವರನ್ನು ಬಿಡುಗಡೆ ಮಾಡಿದ. ಬಳಿಕ ಶನಿದೇವ ತನ್ನ ಶರೀರದ ನೋವನ್ನು ಕಡಿಮೆಗೊಳಿಸಲು ಹನುಮಂತನನ್ನು ಈ ರೀತಿಯಾಗಿ ಬೇಡಿದ. ಈ ನೋವನ್ನು ಶಮನಗೊಳಿಸಲು ಯಾವುದಾದರೂ ಔಷಧಿಯನ್ನು ನೀಡುವೆಯಾ ಎಂದು ಕೇಳುತ್ತಾನೆ. ಇದಕ್ಕೆ ಒಪ್ಪಿದ ಹನುಮಂತ ನೋವನ್ನು ಕಡಿಮೆಗೊಳಿಸಲು ಒಂದು ಎಣ್ಣೆಯನ್ನು ನೀಡುತ್ತಾನೆ.

ಈ ಎಣ್ಣೆಯನ್ನು ಹಚ್ಚಿದ ಬಳಿಕ ಶನಿದೇವರಿಗೆ ನೋವು ಶಮನವಾಯಿತು. ಶನಿದೇವನ ನೋವನ್ನು ಕಡಿಮೆ ಮಾಡಿದ ಎಣ್ಣೆ ಅಂದಿನಿಂದ ಶನಿದೇವರಿಗೆ ಎಣ್ಣೆಯನ್ನು ಅರ್ಪಿಸುವ ಸಂಪ್ರದಾಯ ಪ್ರಾರಂಭವಾಯಿತು. ಇದು ಎಲ್ಲಾ ನೋವನ್ನು ಕಡಿಮೆ ಮಾಡುವ ಸಂಕೇತವಾಗಿದೆ. ತೊಂದರೆಗಳಿಗೆ ಕಾರಣನಾಗುವ ಶನಿದೇವನಿಗೆ ಎಣ್ಣೆಯನ್ನು ಅರ್ಪಿಸುವ ಮೂಲಕ ಶನಿದೇವ ತನ್ನ ನೋವನ್ನು ಕಡಿಮೆ ಮಾಡಿಕೊಂಡು ಎಣ್ಣೆ ಅರ್ಪಿಸಿದ ಭಕ್ತರ ತೊಂದರೆಗಳನ್ನು ಕಡಿಮೆ ಮಾಡುತ್ತಾನೆ ಎಂದು ನಂಬಲಾಗಿದೆ. ಶನಿದೇವನಿಗೆ ಯಾವ ಎಣ್ಣೆ ಅರ್ಪಿಸುವುದು ಧರ್ಮಗ್ರಂಥಗಳ ಪ್ರಕಾರ ಶನಿ ದೇವರಿಗೆ ಅರ್ಪಿಸಲು ಎಳ್ಳೆಣ್ಣೆ ಸೂಕ್ತವಾಗಿದೆ. ಇದನ್ನು ಅರ್ಪಿಸಲು ಶನಿದೇವರ ದಿನವಾದ ಶನಿವಾರವೇ ಅತ್ಯಂತ ಸೂಕ್ತವಾದ ದಿನವಾಗಿದ್ದು ಶನಿ ದೇವರ ಪ್ರಭಾವದಿಂದ ಹೊರಬರಲು ಹನುಮಂತನನ್ನು ಆರಾಧಿಸುವುದು ಇನ್ನೊಂದು ವಿಧವಾಗಿದೆ. ಈ ಲೇಖನವನ್ನು ಶೇರ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.

ಅತ್ಯಂತ ಶಕ್ತಿಶಾಲಿ ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

LEAVE A REPLY

Please enter your comment!
Please enter your name here