ಭಾರತೀಯ ಸೇನೆಯಲ್ಲಿರುವ ಶ್ವಾನಗಳ ನಿವೃತ್ತಿ ನಂತರ ಏಕೆ ಕೊಲ್ಲುತ್ತಾರೆ ಗೊತ್ತೇ?

0
689

ನಮ್ಮ ಭಾರತೀಯ ಸೈನ್ಯದಲ್ಲಿ ಹಲವಾರು ಸೈನಿಕರು ತಮ್ಮ ಪ್ರಾಣವನ್ನು ಮುಡಿಪಿಟ್ಟು ಅಲ್ಲಿ ನಮಗೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕೇವಲ ಸೈನಿಕರು ಅಷ್ಟೇ ಅಲ್ಲ ಅದರ ಜೊತೆಗೆ ಪ್ರಾಣಿಗಳು ಸಹ ಸೈನ್ಯದಲ್ಲಿ ಇದೆ ಅವುಗಳ ಸಹ ಸೇವೆಯನ್ನು ಮಾಡುತ್ತಾ ಇದ್ದಾವೇ. ಆ ಪ್ರಾಣಿಗಳು ತಮ್ಮ ಸೇವೆಯಲ್ಲಿ ನಿವೃತ್ತರಾದ ನಂತರ ಆ ಪ್ರಾಣಿಗಳಿಗೆ ಏನು ಮಾಡುತ್ತಾರೆ ಎಂದು ಈ ಲೇಖನದಲ್ಲಿ ತಿಳಿಯೋಣ. ಭಾರತೀಯ ಸೈನ್ಯದಲ್ಲಿ ಸೈನಿಕರಸ್ಟೇ ಕೆಲಸವನ್ನ ಶ್ವಾನಗಳು ಸಹ ಮಾಡುತ್ತೆ. ಶ್ವಾನಗಳಿಗೆ ಒಂದು ಸ್ಪೆಷಲ್ ರೀತಿಯಲ್ಲಿ ಅವುಗಳಿಗೆ ಟ್ರೈನಿಂಗ್ ಅನ್ನು ನೀಡಲಾಗುತ್ತದೆ. ಸೈನಿಕರು ಯಾವ ಯಾವ ರೀತಿ ಕೆಲಸವನ್ನು ಮಾಡುತ್ತಾರೋ ಅದೇ ರೀತಿ ನಮ್ಮ ಸೈನ್ಯಕ್ಕೆ ಸಹಾಯ ಆಗುವ ರೀತಿಯಲ್ಲಿ ಶ್ವಾನಗಳಿಗೂ ತರಬೇತಿ ನೀಡಲಾಗುತ್ತದೆ. ಒಂದೊಂದು ಬಾರಿ ಸೈನಿಕರು ಮಾಡಲಾಗದ ಕೆಲಸಗಳನ್ನ ಶ್ವಾನಗಳಿಂದ ಮಾಡಿಸಲಾಗುತ್ತದೆ. ಹೌದು ಶ್ವಾನಗಳಿಗೆ ವಿಶೇಷ ರೀತಿಯಾಗಿ ತರಬೇತಿಯನ್ನು ನೀಡಿ ಆ ತರಬೇತಿಯನ್ನು ನೀಡುವ ಸಮಯದಲ್ಲಿ ಅವುಗಳಿಗೆ ನಮ್ಮ ಭಾರತ ಸೈನ್ಯದ ಹಲವಾರು ವಿಷಯಗಳನ್ನ ತಿಳಿಸಲಾಗುತ್ತದೆ.

ಈ ರೀತಿ ಅವುಗಳನ್ನ ಮನುಷ್ಯರಂತೆಯೇ ತರಬೇತಿ ನೀಡಿ ಒಬ್ಬ ಸೈನಿಕರನ್ನಾಗಿ ಮಾಡಲಾಗುತ್ತದೆ. ಮತ್ತು ಈ ಶ್ವಾನಗಳನ್ನು ಹೆಸರಿನಿಂದ ಮತ್ತು ಅದರ ನಂಬರಿನಿಂದ ಗುರುತಿಸಲಾಗುತ್ತೆ. ಭಾರತೀಯ ಸೈನ್ಯದಲ್ಲಿ ಹೆಚ್ಚಾಗಿ ಲಾಬ್ರಡಾರ್ ಜರ್ಮನ್ ಶೇಫರ್ಡ್ ಮತ್ತು ಬೆಲ್ಜಿಯನ್ ಶೇಫರ್ಡ್ ಮಾದರಿಯ ಶ್ವಾನಗಳನ್ನು ನಾವು ನಮ್ಮ ಸೈನ್ಯದಲ್ಲಿ ಉಪಯೋಗಿಸುತ್ತಿದ್ದೇವೆ. ಅವುಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತಿಯನ್ನು ಕೊಟ್ಟು ಅವುಗಳನ್ನು ಒಬ್ಬ ಬಲಿಷ್ಠ ಸೈನಿಕರಂತೆ ತಯಾರು ಮಾಡಲಾಗುತ್ತೆ. ಹಾಗೂ ಅವುಗಳನ್ನ ಒಂದೊಂದು ಶ್ವಾನಗಳು ಒಂದೊಂದು ಕೆಲಸಕ್ಕೆ ಮುಡಿಪಾಗಿಟ್ಟಿರುತ್ತೆ. ಶ್ವಾನಗಳ ವಿಶೇಷತೆಗಳನ್ನ ತಿಳಿದು ಅವುಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ಈ ರೀತಿ ಆ ಶ್ವಾನವನ್ನ ಒಬ್ಬ ಉತ್ತಮ ಸೈನಿಕನನ್ನಾಗಿ ಮಾಡಲಾಗುತ್ತದೆ. ಆದರೆ ಈ ರೀತಿ ಎಲ್ಲ ಮಾಡಿದ ನಂತರ ಶ್ವಾನಗಳಿಗೆ ಆರೋಗ್ಯದಲ್ಲಿ ಏನಾದರೂ ಏರು ಪೇರಾದರೆ ಅವುಗಳನ್ನು ಆಸ್ಪತ್ರೆಗೆ ತೋರಿಸಲಾಗುತ್ತದೆ. ಆದರೆ ಅವುಗಳ ಆರೋಗ್ಯ ಸುಧಾರಿಸದೇ ಇದ್ದ ಪಕ್ಷದಲ್ಲಿ ಅಥವಾ ಅವುಗಳಿಗೆ ವಯಾಸ್ಸಾದ ಪಕ್ಷದಲ್ಲಿ ಸೇನೆಯಲ್ಲಿ ಅವುಗಳನ್ನು ಆಹಾರದಲ್ಲಿ ವಿಷ ಬೆರೆಸಿ ಅಥವಾ ಗುಂಡಿಟ್ಟು ಕೊಲ್ಲಲಾಗುತ್ತದೆ.

ಇದು ಬಹಳಷ್ಟು ಅಮಾನವೀಯತೆ ಅನಿಸಿದರೂ ಸಹ ಸೈನ್ಯ ಒಂದು ಒಳ್ಳೆಯ ದೃಷ್ಟಿಯಿಂದ ಈ ಕೆಲಸವನ್ನು ಮಾಡುತ್ತಿತ್ತು. ಯಾಕೆಂದರೆ ಶ್ವಾನಗಳಿಗೆ ಸೈನ್ಯದ ಎಲ್ಲ ರಹಸ್ಯ ಸ್ಥಳಗಳ ಬಗ್ಗೆ ಮಾಹಿತಿ ಇರುತ್ತೆ. ಅವು ಬೇರೆಯವರ ಕೈಗೆ ಸಿಕ್ಕಿಬಿದ್ದು ಅವುಗಳನ್ನ ದುರುಪಯೋಗ ಪಡಿಸಿಕೊಳ್ಳದೇ ಇರಲಿ ಎಂಬ ಒಂದು ಕಾರಣಕ್ಕೆ ಶ್ವಾನಗಳನ್ನು ಸೈನ್ಯದ ನಿವೃತ್ತಿಯ ನಂತರ ಸಾಯಿಸಲಾಗುತ್ತಿತ್ತು. ಆದರೆ ಈಗಲೂ ಸಹ ಬೇರೆ ದೇಶಗಳಲ್ಲಿ ಶ್ವಾನಗಳನ್ನು ನಿವೃತ್ತಿಯ ನಂತರ ದತ್ತು ಮಾಡಿಕೊಳ್ಳುವ ಒಂದು ಪ್ರೊಸೆಸ್ ಇದೆ. ಆದರೆ ನಮ್ಮ ಭಾರತದಲ್ಲಿ ಶ್ವಾನವನ್ನ ದತ್ತು ಪಡೆದುಕೊಳ್ಳಲು ಕೊಡಲಾಗುವುದಿಲ್ಲ ಯಾಕೆಂದರೆ ಆ ಶ್ವಾನಗಳನ್ನು ಸೈನ್ಯದಲ್ಲಿ ಸಾಕಿರುವಂಥಹ ರೀತಿಯಲ್ಲಿ ಯಾವುದೇ ಒಬ್ಬ ಮನುಷ್ಯನಿಗೂ ಸಾಕಲು ಸಾಧ್ಯವಿಲ್ಲ. ಯಾಕೆಂದರೆ ಬಹಳಷ್ಟು ಖರ್ಚಾಗುತ್ತದೆ ಜೊತೆಗೆ ಅದಕ್ಕೆ ಸೂಕ್ತ ಟ್ರೇನಿಂಗ ಬೇಕಾಗುತ್ತದೆ ಅವುಗಳು ಬೇರೆ ಶ್ವಾನಗಳ ರೀತಿಯಲ್ಲಿ ಇರೋದಿಲ್ಲ ಅದಕ್ಕೆ ಗುಂಡಿಟ್ಟು ಅಥವ ವಿಷ ಹಾಕಿ ಕೊಂದು ಹಾಕ್ತಾರೆ.

ಆದರೆ ಬೇರೆ ದೇಶಗಳಲ್ಲಿ ನಿವೃತ್ತಿಆದ ದೇಶಕ್ಕೆ ಸೇವೆ ನೀಡಿದ ಶ್ವಾನಗಳಿಗೆ ಅವರು ಅದನ್ನ ಒಂದು ಓಲ್ಡೇಜ್ ಹೋಮ್ ಅಂತ ಮಾಡಿ ಅಲ್ಲಿ ಸಾಕುತ್ತಾರೆ. ಮತ್ತು ಯಾವುದಾದರೂ ಇಷ್ಟ ಪಟ್ಟು ಮತ್ತು ಅದನ್ನು ಸಾಕುವುದಕ್ಕೆ ಕೇಪಬಲ್ ಆಗಿರುವಂತಹ ಕೈಗೆ ಕೊಟ್ಟು ಶ್ವಾನಗಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಈ ರೀತಿ ದತ್ತು ಪಡೆದುಕೊಳ್ಳುವುದು ಹಲವಾರು ದೇಶದಲ್ಲಿ ಇದೆ ಮತ್ತು ಚೈನಾದಲ್ಲಿ ಹೇಳಬೇಕು ಎಂದರೆ ದೊಡ್ಡ ಆಸ್ಪತ್ರೆಯನ್ನೇ ತೆರೆಯಲಾಗಿದೆ. ಅಲ್ಲಿ ಸೈನ್ಯದ ಶ್ವಾನಗಳನ್ನು ಮನುಷ್ಯರ ರೀತಿಯಲ್ಲಿ ಟ್ರೀಟ್ ಮಾಡ್ತಾರೆ. ಅವುಗಳಿಗೆ ಮನುಷ್ಯರಿಗೆ ನೀಡುವ ಎಲ್ಲ ಸೌಕರ್ಯಗಳನ್ನು ನೀಡಿ ಅವುಗಳನ್ನ ಸಾಕುತ್ತಾರೆ. ಇದೇ ರೀತಿ ಹಲವಾರು ದೇಶದಲ್ಲಿ ಸೈನ್ಯದ ನಂತರ ಶ್ವಾನಗಳನ್ನು ಒಬ್ಬ ಉತ್ತಮ ವ್ಯಕ್ತಿಯ ರೀತಿಯ ತರಹ ನೋಡಿಕೊಂಡು ಅವುಗಳಿಗೆ ರೇಸ್ಪೆಕ್ಟ್ ಅನ್ನ ನೀಡಲಾಗುತ್ತದೆ. ಸಾವಿರಾರು ಕೋಟಿ ವ್ಯರ್ಥ ಆಗುತ್ತಲೇ ಇರುತ್ತದೆ ಇಂತಹ ಸಮಯದಲ್ಲಿ ನಮ್ಮ ಕೇಂದ್ರ ಸರ್ಕಾರವು ಸಹ ಶ್ವಾನಗಳ ಬಗ್ಗೆ ಕಾಳಜಿ ತೆಗೆದುಕೊಂಡು ಅದಕ್ಕೆ ಒಂದು ಗೂಡು ಮಾಡಿಕೊಟ್ಟು ಅದಕ್ಕೆ ಕೊನೆವರೆಗೂ ಒಂದು ತುತ್ತು ಆಹಾರ ನೀಡಿದರೆ ಯಾವುದೇ ತಪ್ಪಿಲ್ಲ ಅಲ್ವೇ? ಈ ಲೇಖನವನ್ನು ಶೇರ್ ಮಾಡಿ.

LEAVE A REPLY

Please enter your comment!
Please enter your name here