ಗಣೇಶನಿಗೆ ಪ್ರಿಯವಾದ ಗರಿಕೆ ಹುಲ್ಲಿನಲ್ಲಿ ನಿಮ್ಮ ಖಾಯಿಲೆ ಗುಣ ಮಾಡುವ ಔಷಧೀಯ ಗುಣ ಇದೆ

0
817

ಗಣೇಶನಿಗೆ ಪ್ರಿಯವಾದ ಪತ್ರೆ ಗರಿಕೆ ಹುಲ್ಲಿನ ಔಷಧೀಯ ಗುಣಗಳ ಬಗ್ಗೆ ನಾವು ಎಂದು ತಿಳಿದುಕೊಳ್ಳೋಣ ಕನ್ನಡದಲ್ಲಿ ಗರಿಕೆ ಹುಲ್ಲು ಅಂಬಟಿ ಎಂದು ಕರೆಯಲ್ಪಡುವ ಈ ಪತ್ರೆ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ಅಷ್ಟಮಂಗಳ ವಸ್ತುಗಳಲ್ಲಿ ಇದು ಒಂದು. ಹಿಂದಿನ ಕಾಲದಲ್ಲಿ ಅನಲಾಸುರ ಎಂಬ ರಾಕ್ಷಸ ಗಣಪತಿ ಹೊಟ್ಟೆಯಲ್ಲಿ ಹೋಗಿ ಕುಳಿತಾಗ ಅದರಿಂದ ಉರಿಯು ಹೆಚ್ಚಾದಾಗ ಉರಿಯ ಶಮನಕ್ಕಾಗಿ ಪಾರ್ವತಿಯು 21 ಧ್ರುವ ಪತ್ರೆಯ ರಸವನ್ನು ಗಣೇಶನಿಗೆ ಕುಡಿಯಲು ಕೊಡಲಾಗಿ ಉರಿ ತಣ್ಣಗಾಯಿತು. ಅಂದಿನಿಂದ ಧ್ರುವ ಪತ್ರಿಕೆಯು ಗಣೇಶನ ಪ್ರಿಯ ಪತ್ರೆಯಾಯಿತು ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ.

ಪೂಜೆಗಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಗರಿಕೆಯು ಮುಂಚೂಣಿಯಲ್ಲಿದೆ. ಅದರ ಕೆಲವು ಔಷಧಿಯ ಗುಣಗಳು ಈ ಗರಿಕೆ ಹುಲ್ಲಿನಲ್ಲಿ ಹೇರಳವಾಗಿದೆ. ನಮ್ಮ ದೇಹದಲ್ಲಿ ಆಗುವ ಸಣ್ಣ ಪುಟ್ಟ ವ್ಯತ್ಯಾಸಗಳಿಗೆ ಮತ್ತು ಸಮಸ್ಯೆಗಳಿಗೆ ಪ್ರತಿಯೊಂದು ಸಮಸ್ಯೆಗಳಿಗೂ ಮಾತ್ರೆ ನುಂಗುವ ಬದಲು ಈ ಗರಿಕೆ ಹುಲ್ಲಿನ ಮನೆ ಮದ್ದಾಗಿ ಪರಿವರ್ತನ್ನೇ ಮಾಡಿಕೊಳ್ಳಬಹುದು. ಸುಟ್ಟ ಗಾಯಗಳಿಗೆ ಗರಿಕೆಯ ರಸವನ್ನು ಕೊಬ್ಬರಿ ಎಣ್ಣೆಯ ಜೊತೆ ಬೆರೆಸಿ ಹಚ್ಚಿದರೆ ಕಲೆಗಳು ಮಾಯವಾಗುತ್ತದೆ. ಅಜೀರ್ಣ ಉಂಟಾದಾಗ ಗರಿಕೆ ರಸದ ಸೇವನೆ ಒಳ್ಳೆಯದು ಜ್ವರದಿಂದ ನಿಶ್ಯಕ್ತಿ ಇರುವಾಗ ಗರಿಕೆ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ. ಹಸಿವಾಗದಿದ್ದಲ್ಲಿ ಗರಿಕೆ ರಸಕ್ಕೆ ಶುಂಠಿ ಪುಡಿ ಜೀರಿಗೆ ಪುಡಿ ಮತ್ತು ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಹಸಿವು ಕಾಣಿಸಿಕೊಳ್ಳುತ್ತದೆ. ನವೇ ಕಜ್ಜಿ ಮುಂತಾದ ಚರ್ಮ ರೋಗಗಳಿಂದ ಬಾದೆ ಪಡುವವರು ದಿನಕ್ಕೆ ಎರಡು ಬಾರಿ ಗರಿಕೆ ಮತ್ತು ಅರಿಶಿನವನ್ನು ನುಣ್ಣಗೆ ಹರಿದು ಲೇಪಿಸಿದಲ್ಲಿ ಚರ್ಮ ಸಂಬಂಧಿ ಕಾಯಿಲೆಗಳಿಂದ ಮುಕ್ತರಾಗಬಹುದು.

ಮೂಗಿನಿಂದ ರಕ್ತಸ್ರಾವವಾಗುತ್ತಿದ್ದಲ್ಲಿ ಗರಿಕೆ ಹುಲ್ಲಿನ ರಸ ಕುಡಿಯುವುದಿಲ್ಲದೆ ರಸದ ಕೆಲವು ಹನಿಗಳನ್ನು ಮೂಗಿಗೆ ಹಾಕಬೇಕು. ಮೂಲ ವ್ಯಾಧಿ ಯಿಂದ ಬಳಲುತ್ತಿರುವವರು ಗರಿಕೆಯ ರಸವನ್ನು ದಿನಕ್ಕೆರಡು ಬಾರಿ ಮೂರು ಚಮಚದಷ್ಟು ಕುಡಿಯಬೇಕು. ವಾಂತಿ ಆಗುತ್ತಿದ್ದಲ್ಲಿ ಗರಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಬೆರೆಸಿ ಕುಡಿಯಬೇಕು. ಮೂತ್ರ ಕಟ್ಟಿದಲ್ಲಿ ಗರಿಕೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು. ಗರಿಕೆಯನ್ನು ನೀರಿನಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ ಅರ್ಧ ಲೀಟರ್ ನಷ್ಟು ಆದಾಗ ಇಳಿಸಿ ಅದಕ್ಕೆ ಹಾಲು ಮತ್ತು ಬೆಲ್ಲ ಬೆರೆಸಿ ಕುಡಿಯುವುದರಿಂದ ವೀರ್ಯ ವೃದ್ಧಿ ಆಗುತ್ತದೆ.

ಚೇಳು ಕಚ್ಚಿದಾಗ ಗರಿಕೆಯ ರಸವನ್ನು ಕಚ್ಚಿದ ಭಾಗಕ್ಕೆ ಲೇಪಿಸುವುದಲ್ಲದೇ ಗರಿಕೆಯ ರಸವನ್ನು ಕುಡಿಯಬೇಕು. ಈ ಮನೆಮದ್ದನ್ನು ಚಿಕ್ಕ ಚಿಕ್ಕ ಸಾಮಾನ್ಯ ಕಾಯಿಲೆಗಳಿಗೆ ಉಪಯೋಗಿಸಬಹುದು. ನಿಮ್ಮನ್ನು ಪದೇ ಪದೇ ಕಾಡುತ್ತಿರುವಂತಹ ಕಾಯಿಲೆಗಳಿಗೆ ನೀವು ವೈದ್ಯರನ್ನು ಭೇಟಿ ಮಾಡಬಹುದು. ಓದಿದರಲ್ಲ ಸ್ನೇಹಿತರೇ ಗರಿಕೆ ಹುಲ್ಲಿನಿಂದ ಆರೋಗ್ಯಕರ ಲಾಭ ಎಷ್ಟಿದೆ ಎಂಬುದು. ಈ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲಾ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here