ಹೆಂಗಸರ ಮಾಂಗಲ್ಯದಲ್ಲಿ ಈ ರೀತಿ ಇದ್ರೆ ಗಂಡನ ಆಯುಷ್ಯ ಹೆಚ್ಚಿಸುತ್ತದೆ

0
1591

ಮದ್ವೆ ಆಗಿರುವ ಹೆಣ್ಣು ಮಕ್ಕಳು ಈ ವಿಧಾನ ಪಾಲಿಸಿದರೆ ತಮ್ಮ ಮಾಂಗಲ್ಯದಲ್ಲಿ ಈ ಕ್ರಮ ಅನುಸರನೇ ಮಾಡಿದ್ರೆ ನಿಮಗೆ ಹೆಚ್ಚಿನ ಒಳಿತು ಆಗುವುದರ ಜೊತೆಗೆ ನಿಮ್ಮ ಗಂಡನ ಆಯುಷ್ಯ ಸಹ ಹೆಚ್ಚಿಸುತ್ತದೆ ಅಂತೆ ಹಾಗಾದ್ರೆ ಈ ಲೇಖನ ಸಂಪೂರ್ಣ ಓದಿ. ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನಕಂತೇ ಬಧ್ನಾಮಿ ಸುಭಗೆ ತ್ವಂಜೀವ ಶರದ ಶತಂ. ಈ ಶ್ಲೋಕ ಎಲ್ಲಾ ಹಿಂದೂ ಮದುವೆಗಳಲ್ಲಿ ತಾಳಿ ಕಟ್ಟುವಾಗ ಕೇಳಿ ಬರುವುದು ಸರ್ವೇಸಾಮಾನ್ಯ. ಹಿಂದೂ ಧರ್ಮದಲ್ಲಿ ಮದುವೆ ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವವಿದೆಯೋ ಅದೇ ರೀತಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ ಮದುವೆ ಸಾಂಕೇತಿಕವಾಗಿ ಸ್ತ್ರೀಯರಿಗೆ ಕರಿಮಣಿ ತಾಳಿ ಕುಂಕುಮ ಗಾಜಿನ ಬಳೆ ಕಾಲುಂಗುರ ಹೂವು ನೀಡಲಾಗುವುದು. ಅದು ಗೃಹಿಣಿಗೆ ಬಹಳ ಸೌಭಾಗ್ಯಕರವಾಗಿರುವುದು. ಆದಿ ಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ ಶಿವನು ಪಾರ್ವತಿಗೆ ಮಂಗಳಸೂತ್ರವನ್ನು ಕಟ್ಟಿದನಂತೆ ಲಲಿತಾ ಸಹಸ್ರನಾಮ ಸೌಂದರ್ಯ ಲಹರಿಗಳು ಚಾಲ್ತಿಯಲ್ಲಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯ ಧಾರಣೆಯನ್ನು ಪ್ರಸ್ತಾಪಿಸಿದೆ. ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದು ಮಂಗಳಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆ ಇದೆ.

ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿ ಕ್ಷೇತ್ರವನ್ನೆಲ್ಲಾ ಹೀರಿಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣ ಇರುತ್ತದೆ. ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯ ಏನೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಇದರ ಅತಿ ಮುಖ್ಯವಾದ ಉಪಯುಕ್ತತೆ ಎಂದರೆ ಹಾಲುಣಿಸುವ ತಾಯಿಯಲ್ಲಿ ಎದೆಹಾಲಿನ ಉಷ್ಣತೆಯನ್ನು ಹೀರಿಕೊಂಡು ಎದೆಹಾಲು ಕೆಡದಂತೆ ಶಿಶುವಿಗೆ ಉಣ್ಣಲು ಅನುಕೂಲವಾದ ಸಮ ಉಷ್ಣತೆಯಲ್ಲಿ ಇರಿಸಲು ಸಹಾಯ ಮಾಡುತ್ತದೆ. ಆಯಾ ಮತ ಪಂಥಗಳಿಗೆ ಕರಿಮಣಿಯ ಬಗೆಗಳ ಬಗ್ಗೆ ತಿಳಿಯೋಣ. ಬ್ರಾಹ್ಮಣ ವರ್ಗದಲ್ಲಿ 2 ಪದಕಗಳ ತಾಳಿ ಕಾಯಸ್ಥ ಮರಾಟ ಸ್ತ್ರೀಯರಿಗೆ ಒಂದು ಪದಕದ ತಾಳಿ ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿನ್ನ ವಜ್ರ ವೈಡೂರ್ಯಗಳು ಇರುವ ತಾಳಿ ಹೀಗೆ ವೈವಿಧ್ಯಗಳಿವೆ.

ವೀರಶೈವ ಸ್ತ್ರೀಯರು ತಾಯಿಯೊಂದಿಗೆ ಲಿಂಗದ ಕರಂಡಕವನ್ನು ಕಟ್ಟಿಕೊಳ್ಳುವುದು ಇದೆ. ದಕ್ಷಿಣ ಭಾರತದಲ್ಲಿ ಹಿಂದುಗಳು ಅಷ್ಟೇ ಅಲ್ಲದೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತಸ್ತ ಸ್ತ್ರೀಯರು ವಿವಾಹದ ನಂತರ ತಾಳಿ ಕರಿಮಣಿ ಸರ ಧರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿಕೊಳ್ಳಬೇಕು ಎಂಬುದನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಹೆಣ್ಣು ಮಕ್ಕಳು ಆಯಾ ರಾಶಿಗಳಿಗೆ ಅನುಗುಣವಾಗಿ ಕರಿಮಣಿಗಳ ಸಂಖ್ಯೆಗೆ ಅನುಗುಣವಾಗಿ ಮಾಂಗಲ್ಯ ಸರವನ್ನು ಧರಿಸುತ್ತಾರೆ. ಹಾಗಾದ್ರೆ ಯಾವ ರಾಶಿಗೆ ಎಷ್ಟು ಸಂಖ್ಯೆ ಕರಿಮಣಿ ಗಳನ್ನು ಧರಿಸುತ್ತಾರೆ ಅಂತ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿಗೆ 21 ಮಣಿಗಳು ವೃಷಭ ರಾಶಿಗೆ 40 ಮಣಿಗಳು ಮಿಥುನ ರಾಶಿಗೆ 34 ಮಣಿಗಳು ಕಟಕ ರಾಶಿಗೆ 20 ಮಣಿಗಳು ಸಿಂಹ ರಾಶಿಯವರು 18 ಮಣಿಗಳ ಸರವನ್ನು ಧರಿಸಿದರೆ ಒಳಿತಾಗುತ್ತದೆ. ಕನ್ಯಾ ರಾಶಿಗೆ 34 ಮಣಿಗಳು ತುಲಾ ರಾಶಿಗೆ 40 ಮಣಿಗಳು ವೃಶ್ಚಿಕ ರಾಶಿಗೆ 21 ಮಣಿಗಳು ಧನಸ್ಸು ರಾಶಿಗೆ 32 ಮಣಿಗಳು ಮಕರ ರಾಶಿಗೆ 38 ಮಣಿಗಳು ಕುಂಭರಾಶಿಗೆ 38 ಮಣಿಗಳು ಹಾಗೂ ಮೀನ ರಾಶಿಗೆ 32 ಮಣಿಗಳ ಸರವನ್ನು ಧರಿಸಿದರೆ ಸ್ತ್ರೀಯರಿಗೆ ತುಂಬಾ ಒಳಿತಾಗುತ್ತದೆ ಇದರ ಜೊತೆಗೆ ಗಂಡನಿಗೆ ಆಯುಷ್ಯ ಹೆಚ್ಚು ಆಗುತ್ತದೆ ಎಂದು ಶಸ್ತ್ರ ಹೇಳುತ್ತದೆ. ಈ ಲೇಖನವನ್ನು ಶೇರ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ. ನಿಮಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಕೊಡಲೇ ಈ ಸಂಖ್ಯೆಗೆ ಉಚಿತ ಕರೆ ಮಾಡಿರಿ .ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

LEAVE A REPLY

Please enter your comment!
Please enter your name here