ಚಾಣಕ್ಯ ಹೇಳ್ತಾರೆ ಈ 3 ವಿಷಯಗಳಲ್ಲಿ ನಾವು ನಾಚಿಕೆ ಪಟ್ಟರೆ ನಮಗೆ ಸಾಕಷ್ಟು ಸಮಸ್ಯೆ ಅಂತೆ

0
896

ಚಾಣಕ್ಯ ಹೇಳ್ತಾರೆ ಈ ಮೂರು ವಿಷ್ಯದಲ್ಲಿ ನೀವು ನಾಚಿಕೆ ಪಟ್ಟರೆ ಸಾಕಷ್ಟು ಸಮಸ್ಯೆ ಆಗುತ್ತೆ ಅಂತ. ಸಾಧಾರಣವಾಗಿ ನಾವು ಇಂತಹ ವಾಕ್ಯಗಳನ್ನ ಕೇಳಿರ್ತೇವೆ ಅಂದ್ರೆ ನಿನಗೆ ಸ್ವಲ್ಪಾನು ನಾಚಿಕೆ ಇಲ್ಲ ಜನರ ಬಗ್ಗೆ ಇಲ್ಲ ಅಂದ್ರು ನಿನ್ನ ಬಗ್ಗೆ ಯಾರಾದ್ರು ನಾಚ್ಕೆಪಡು ಅಂತ ಹೇಳ್ತಿರ್ತರೆ ನಮ್ಮ ಸಮಾಜ ನಮಗೆ ಸ್ವಲ್ಪನಾದ್ರು ನಾಚಿಕೆ ಪಡೋದಿಕ್ಕೆ ಹೇಳುತ್ತೆ ಆದ್ರೆ ಚಾಣುಕ್ಯಾ ಹೇಳ್ತಾರೆ ಈ ಮೂರು ವಿಚಾರದಲ್ಲಿ ಒಂದು ವೇಳೆ ನೀವು ನಾಚಿಕೆ ಪಟ್ರೆ ನೀವು ತುಂಬಾ ದೊಡ್ಡು ನಷ್ಟವನ್ನು ಅನುಭವಿಸಬೇಕಾಗುತ್ತೆ ಹಾಗಾದ್ರೆ ಆ ಮೂರು ವಿಷಯಗಳು ಯಾವುದು ಅಂಥ ಹೇಳ್ತೀವಿ ಕೇಳಿ

ಮೊದಲೇನೆಯದು ಊಟಮಾಡುವಾಗ ಕೆಲವರು ಬೇರೆ ಕಡೆ ಊಟಕ್ಕೆ ಹೋದಾಗ ಊಟದ ವಿಚಾರದಲ್ಲಿ ತುಂಬಾನೇ ಸಂಕೋಚ ಪಡ್ತಾರೆ .ಅವರು ಹೇಗೆ ಯೋಚನೆ ಮಾಡ್ತಾರೆ ಅಂತ ನಾನು ತುಂಬಾ ಊಟ ಮಾಡಿದ್ರೆ ಜನ ಏನಂತಾರೆ ಅಂತ ಯೋಚನೆ ಮಾಡ್ತಿರ್ಥರೆ ಅದ್ಕೆ ಅವರು ಕಡಿಮೆ ಊಟ ಮಾಡಿ ನಷ್ಟ ಮಾಡ್ಕೊಳ್ತಾರೆ ಈಗ ಉದಾಹರಣೆಗೆ ನಾವು ನಮ್ಮ ಸಂಬಂಧಿಕರ ಮನೆಗೆ ಹೋದಾಗ ನಮಗೆ ಹಸಿವಾದ್ರೆ ನಮಗೆ ಊಟ ಕೊಡಿ ಅಂತ ಅವರಿಗೆ ಹೇಳೋದಕ್ಕೆ ನಾವು ಸಂಕೋಚ ಪಡ್ತಿವಿ ಆದ್ರೆ ಚಾಣುಕ್ಯ ಹೇಳ್ತಾರೆ ಅವಾಗ ನಾವು ಊಟದ ವಿಷಯದಲ್ಲಿ ಸ್ವಲ್ಪಾನು ನಾಚ್ಕೆ ಪಡಬಾರ್ದು ಇಲ್ಲ ಅಂದ್ರೆ ಅರ್ಧ ಹೊಟ್ಟೆಯಿಂದ ನಾವು ಉಪವಾಸ ಮಲಗಬೇಕಾಗುತ್ತೆ ಅದಕ್ಕೆ ಊಟದ ವಿಚಾರದಲ್ಲಿ ಯಾರು ಏನಂತಾರೆ ಅಂತ ಯೋಚನೆ ಮಾಡಬಾರದಂತೆ.

ಇನ್ನೂ ಎರಡನೆಯದು ವ್ಯವಹಾರ ಇನ್ನೂ ವ್ಯವಹಾರ ಮಾಡುವಾಗ ಚಾಣುಕ್ಯ ಹೇಳ್ತಾರೆ ನೀವು ವ್ಯವಹಾರದ ವಿಚಾರದಲ್ಲಿ ನಿರ್ಜಲರಾಗಿರ್ಬೇಕು ಅಂತ ತುಂಬಾ ಜನ ಏನ್ಮಾಡ್ತಾರೆ ಅಂದ್ರೆ ಸ್ನೇಹಿತರಿಗೆ ಸಂಬಂಧಿಕರಿಗೆ ನಂಬಿಕೆಯಿಂದ ಹಣ ಕೊಟ್ಟಿರ್ಥಾರೆ ಯಾವಾಗ ಅವರು ಟೈಮ್ಗೆ ಹಣ ಕೊಡೋದಿಲ್ಲ ಆಗ ಅವರು ತಮ್ಮದೇ ಸ್ವಂತ ಹಣವನ್ನ ಅವರಿಂದ ಕೇಳೋದಕ್ಕೆ ಸಂಕೋಚಪಡ್ತಾರೆ ಅಂದ್ರೆ ಇವರಿಗೆ ಏನಂಸುತ್ತೆ ಅಂದ್ರೆ ಹೇಗಪ್ಪಾ ಹಣ ಕೇಳೋದು ಅವನು ನನ್ನ ಸ್ನೇಹಿತನಾಗಿದ್ದಾನೆ ಸಂಭಂದಿಕರಾಗಿರ್ಥಾರೆ ಅಂತ ಆದ್ರೆ ಚಾಣುಕ್ಯ ಹೇಳ್ತಾರೆ ಯಾವುದೇ ವ್ಯವಹಾರದ ವಿಚಾರದಲ್ಲಿ ನೀವು ತುಂಬಾ ನಿಷ್ಯೇ ಮತ್ತು ಗಟ್ಟಿತನ ಇರ್ಬೇಕು ಅಂತೆ ಇನ್ನೊಂದು ವಿಚಾರ ಏನು ಅಂದ್ರೆ ವ್ಯವಹಾರ ಮಾಡುವಾಗ ಕಾಗದ ಪತ್ರ ದಿನಾಂಕದ ಬಗ್ಗೆ ನೀವು ತಪಾಸಣೆ ಮಾಡ್ಬೇಕು ಇಲ್ಲ ಅಂದ್ರೆ ನಾವು ನೋಡ್ತಿವಿ ಎಷ್ಟೋ ಸಂಬಂಧಗಳು ದೂರ ಆಗಿರ್ತಾವೆ ಸ್ವಂತ ಅಣ್ಣ ತಮ್ಮಂದಿರು ಕೂಡ ವೈರಿಗಳಾಗ್ಬಿಟ್ಟಿದ್ದಾರೆ ಅದಕ್ಕೆ ಈ ವಿಚಾರದಲ್ಲಿ ನಾಚಕೆ ಪಡಬಾರದಂತೆ.

ಇನ್ನು ಮೂರನೆಯದು ಕಲಿಯುವಾಗ ಚಾಣುಕ್ಯ ಹೇಳ್ತಾರೆ ಬಂಗಾರ ಎಷ್ಟು ಹೊಲಸು ಜಾಗದಲ್ಲಿ ಬಿದ್ದಿದ್ರು ಕೂಡ ಅದರ ಮೌಲ್ಯ ಮಾತ್ರ ಕಡಿಮೆ ಆಗೋದಿಲ್ಲ ಮತ್ತು ಯಾವಾಗ ಬೇಕಾದ್ರುಅದನ್ನ ಎತ್ತಿ ನಮ್ಮಲ್ಲಿ ಇಟ್ಟಿಕೊಳ್ಳಬಹುದು ಅದೇ ರೀತಿ ಜ್ಞಾನ ವೂ ಕೂಡ ಇದು ಎಷ್ಟೇ ಚಿಕ್ಕವರಿಂದ ಬಂದ್ರು ಅದಕ್ಕೆ ನಾವು ಬೆಲೆ ಕೊಡಬೇಕು ಮತ್ತು ಅದನ್ನ ಕಲಿಬೇಕು ತುಂಬಾ ಸಲ ಏನಾಗುತ್ತೆ ಅಂದ್ರೆ ಮನುಷ್ಯ ಅಹಂಕಾರದಿಂದ ಇರ್ತನೆ ನಾನು ಎಷ್ಟು ದೊಡ್ಡ ವ್ಯಕ್ತಿ ಆಗಿದೆನಿ ಆ ಚಿಕ್ಕ ಮನುಷ್ಯನಿಂದ ನಾನೇಕೆ ಕಲಿಬೇಕು ಅಂತ ಅಂದುಕೊಂಡಿರ್ಥಾನೆ. ನೆನಪಿನಲ್ಲಿಡಿ ಯಾವ ವ್ಯಕ್ತಿ ತನ್ನ ಜೀವನದಲ್ಲಿ ಯಾವಾಗ್ಲೂ ಕಲಿತನೆ ಇರ್ತನೊ ಆ ವ್ಯಕ್ತಿ ಜೀವನದಲ್ಲಿ ಏನೂ ಕೂಡ ಕಡಿಮೆ ಆಗಿರೋದಿಲ್ಲ ಯಾಕಂದ್ರೆ ಸಕ್ಸಸ್ ಆಗಿರಲಿ ಫೈಲುಆರ್ ಆಗಿರಲಿ ಅದರಿಂದ ಏನಾದ್ರು ಒಂದು ಕಲಿತಾನೆ ಇರ್ಥಾನೆ ದೊಡ್ಡ ವ್ಯಕ್ತಿಗಳಾಗಬೇಕಂಡ್ರೆ ನಾವು ಒಳ್ಳೆಯದನ್ನೇ ಕಳಿತಾನೆ ಇರಬೇಕು .

LEAVE A REPLY

Please enter your comment!
Please enter your name here