ಮಗು ಅಳುವ ಸದ್ದು ಕೇಳಿ ರಾತ್ರಿ ಮನೆ ಬಾಗಿಲು ತೆಗೆದರೆ ನಿಮ್ಮ ಸಾವು ಖಚಿತ ಏಕೆ ಗೊತ್ತೇ

0
1125

ರಾತ್ರಿ ಸಮಯದಲ್ಲಿ ಮಗು ಅಳುವ ಶಬ್ದ ಕೇಳಿದರೆ ನೀವು ಬಾಗಿಲು ತೆಗೆದರೆ ನಿಮ್ಮ ಜೀವನವೇ ಮುಗಿದು ಹೋಯಿತು ಎಂದು ತಿಳಿಯಿರಿ ಏಕೆ ಗೊತ್ತೇ? ಇತ್ತೀಚೆಗೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮತ್ತು ಇನ್ನಿತರ ರಾಜ್ಯಗಳಲ್ಲಿ ಒಂದು ದರೋಡೆ ಗುಂಪು ಸಕ್ರಿಯವಾಗಿ ಇಂತಹ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಅವರ ಉದ್ದೇಶ ಏನೆಂದರೆ ಮನೆಯನ್ನು ಸಂಪೂರ್ಣವಾಗಿ ದೋಚುವುದು. ಅಥವಾ ಅವರಿಗೆ ಕೈಗೆ ಸಿಕ್ಕಿದ್ದನ್ನು ದೋಚುವುದು. ಇತ್ತೀಚೆಗೆ ಬೆಂಗಳೂರು ಸೇರಿದಂತೆ ಕೆಲವು ಇನ್ನಿತರ ಮಹಾನಗರಗಳಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದೆ. ಅದೇನೆಂದರೆ ಮಧ್ಯರಾತ್ರಿ ಸಮಯದಲ್ಲಿ ನಿಮ್ಮ ಮನೆಯ ಬಾಗಿಲ ಮುಂದೆ ಮಗು ಅಳುವ ಸದ್ದು ಕೇಳಿಸುತ್ತದೆ. ಈ ಸದ್ದು ಕೇಳಿದಾಗ ಯಾವುದೋ ಮಗು ಅಳುತ್ತಿದೆ ಎಂದು ಅಕಸ್ಮಾತಾಗಿ ನೀವು ಬಾಗಿಲು ತೆಗೆದು ನೋಡಿದಾಗ ಆ ತಂಡವು ನಿಮ್ಮನ್ನು ನಿಮ್ಮ ಮನೆಯನ್ನು ದರೋಡೆ ಮಾಡದೇ ಬಿಡುವುದಿಲ್ಲ.

ನಿಮ್ಮ ಬಳಿಯಿರುವ ಸಂಪೂರ್ಣ ಹಣ ಬೆಲೆಬಾಳುವ ವಸ್ತುಗಳು ಹಾಗೂ ಮೊಬೈಲನ್ನು ಸಹ ಬಿಡದೆ ಅವರು ದೋಚುತ್ತಾರೆ. ಆ ತಂಡದಲ್ಲಿರುವ ಕೆಲವು ಸದಸ್ಯರು ಮಗು ಅಳುತ್ತಿರುವ ರೀತಿಯಲ್ಲೇ ಅಳುತ್ತಾ ನಾಟಕವಾಡಿ ಜನರನ್ನು ದಿಕ್ಕು ತಪ್ಪಿಸುತ್ತಾರೆ. ಇಂತಹ ಹಲವು ಪ್ರಕರಣಗಳು ಈಗ ಬೆಳಕಿಗೆ ಬಂದಿದೆ. ಇದೀಗ ಮಹಾನಗರಗಳಲ್ಲಿ ಮತ್ತು ಕೆಲವೊಂದು ಕಡೆಗಳಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಹೇಳುತ್ತಿದ್ದಾರೆ. ರಾತ್ರಿ ಸಮಯದಲ್ಲಿ ನಿಮ್ಮ ಮನೆ ಬಾಗಿಲ ಬಳಿ ಏನಾದರೂ ಈ ರೀತಿಯ ಶಬ್ದಗಳು ಕೇಳಿಸಿದರೆ ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು. ಹಲವು ಜನರು ಯಾವುದೋ ಮಗು ಅಳುತ್ತಿದೆ ಎಂದು ತಕ್ಷಣವೇ ಬಾಗಿಲನ್ನು ತೆಗೆದು ನೋಡುತ್ತಾರೆ. ನೀವು ಆ ರೀತಿ ಏನಾದರೂ ಮಾಡಿದರೆ ಖಂಡಿತವಾಗಿಯೂ ಸಮಸ್ಯೆಗೆ ಸಿಲುಕುತ್ತೀರಿ. ಅದರಲ್ಲೂ ಒಂಟಿ ಇರುವ ಮಹಿಳೆಯರು ಮತ್ತು ಪುರುಷರು ಯಾವುದೇ ಕಾರಣಕ್ಕೂ ಸಹ ಹಿಂದೆ ಮುಂದೆ ನೋಡದೇ ಮಗು ಅಳುವ ಸದ್ದು ಕೇಳಿದ ತಕ್ಷಣ ಬಾಗಿಲನ್ನು ತೆಗೆಯಬೇಡಿ. ಅಕಸ್ಮಾತ್ ನೀವೇನಾದರೂ ಈ ರೀತಿ ಬಾಗಿಲನ್ನು ತೆಗೆದರೆ ಖಂಡಿತವಾಗಿಯೂ ನಿಮ್ಮ ಸಾವನ್ನು ನೀವೇ ತಂದುಕೊಳ್ಳುತ್ತೀರಿ.

ಇಂತಹ ದರೊಡೆಕೋರರ ಬಗ್ಗೆ ಪೊಲೀಸರು ಸಾಕಷ್ಟು ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ. ಅವರನ್ನು ಸದ್ಯದಲ್ಲೇ ಬಂಧಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂಬ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಈ ಕಳ್ಳರ ತಂಡವು ಪ್ರತಿನಿತ್ಯ ಸ್ಥಳಾಂತರಗೊಳ್ಳುವುದರಿಂದ ಪೊಲೀಸರಿಗೆ ಇದೊಂದು ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ನೀವು ನಿಮ್ಮ ಜಾಗ್ರತೆಯಲ್ಲಿರುವುದು ಉತ್ತಮ. ನಾಳೆ ದಿನ ನಿಮ್ಮ ಊರಿಗೆ ಅಥವ ನಿಮ್ಮ ಮನೆಗೆ ಬರುವ ಸಾಧ್ಯತೆ ಸಹ ಇರುತ್ತದೆ ಯಾವುದೇ ಕಾರಣಕ್ಕೂ ಸಹ ರಾತ್ರಿ ಸಮಯದಲ್ಲಿ ಮಗು ಅಳುವ ಶಬ್ದ ಬೀದಿಯಲ್ಲಿ ಕೇಳಿಸಿದರೆ ತಟ್ಟನೆ ಬಾಗಿಲನ್ನು ತೆರೆಯದೆ ಒಂದಿಷ್ಟು ಆಲೋಚಿದ ನಂತರ ನಿರ್ಧಾರ ತೆಗೆದುಕೊಳ್ಳಿ. ಈ ಮಾಹಿತಿಯನ್ನು ಮರೆಯದೇ ಶೇರ್ ಮಾಡಿ ಎಲ್ಲರನ್ನೂ ಜಾಗೃತಗೊಳಿಸೋಣ.

LEAVE A REPLY

Please enter your comment!
Please enter your name here