ಅಕ್ಷಯ ತೃತೀಯ ದಿನ ಈ ಕೆಲಸ ಮಾಡಿದ್ರೆ ನೀವು ಶ್ರೀಮಂತರಾಗುತ್ತೀರಿ

0
483

ಅಕ್ಷಯ ತೃತೀಯ ದಿನ ನೀವು ಈ ಕೆಲಸಗಳನ್ನು ಮಾಡಿದರೆ ನಿಮಗೆ ಶುಭಫಲಗಳು ದೊರೆಯಲಿದೆ ಮತ್ತು ನಿಮಗೆ ಆದಾಯ ಹೆಚ್ಚಾಗಲಿದೆ. ಹಿಂದೂ ಧರ್ಮದ ಪ್ರಕಾರ ಅಕ್ಷಯ ತೃತೀಯ ದಿನಕ್ಕೆ ವಿಶೇಷ ದಿನಗಳಲ್ಲಿ ಒಂದಾಗಿದೆ. ನಾವು ಈ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಸಹ ನೀಡುತ್ತೇವೆ. ವೈಶಾಖ ಮಾಸದ ಶುಕ್ಲಪಕ್ಷದ ತಿಥಿಯನ್ನು ಅಕ್ಷಯ ತೃತೀಯ ಎಂದು ನಾವು ಕರೆಯುತ್ತೇವೆ. ನಾವು ಈ ದಿನ ಹಲವು ರೀತಿಯ ಒಳ್ಳೆಯ ಕೆಲಸವನ್ನು ಮಾಡುವುದರಿಂದ ನಮಗೆ ಒಳಿತಾಗಲಿದೆ. ಅಕ್ಷಯ ತೃತೀಯ ದಿನ ನಾವು ಮದುವೆ ಮುಂಜಿ ಗೃಹಪ್ರವೇಶ ಇಂತಹ ಶುಭ ಕಾರ್ಯಕ್ರಮಗಳನ್ನು ಸಹ ಮಾಡಬಹುದು.

ಆದರೆ ಕೆಲವರು ಹೇಳುವ ಪ್ರಕಾರ ಈ ದಿನ ಬಂಗಾರ ಅಥವಾ ಬೆಳ್ಳಿಯನ್ನು ಖರೀದಿ ಮಾಡಿದರೆ ನಮ್ಮ ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬುತ್ತಾರೆ. ಆದರೆ ಬಂಗಾರವನ್ನು ಖರೀದಿ ಮಾಡಬೇಕೆಂದು ಯಾವ ಪುರಾಣ ಶಾಸ್ತ್ರಗಳಲ್ಲಿ ಸಹ ಹೇಳಿಲ್ಲ. ಕೆಲವರು ತಮ್ಮ ವ್ಯಾಪಾರ ಅಭಿವೃದಿ ಆಗೋಕೆ ಈ ರೀತಿ ಹೇಳಿದ್ದಾರೆ ಎಂಬುದು ಕೆಲವು ಜನರ ವಾದವಾಗಿದೆ. ಅದು ಬಿಡಿ ಶ್ರೀಮಂತರು ಹೇಗೋ ಹಣ ಕೊಟ್ಟು ಬಂಗಾರವನ್ನು ಖರೀದಿ ಮಾಡಿದರೆ ಬಡವರು ಏನನ್ನು ಖರೀದಿ ಮಾಡಬೇಕು? ಈಗಾಗಲೇ ಬಂಗಾರದ ಬೆಲೆ ಗಗನಕ್ಕೆ ಏರಿದೆ. ನಿಮಗೆ ಸಾಧ್ಯವಾದರೆ ಈ ದಿನ ನಾವು ಹೇಳಿದ ರೀತಿಯಲ್ಲಿ ಈ ಸಣ್ಣ ವಸ್ತು ಖರೀದಿ ಮಾಡಿ ನಿಮಗೆ ಅಕ್ಷಯ ವೃದ್ದಿ ಆಗಲಿದೆ. ಹಾಗಾದ್ರೆ ಅದು ಏನಪ್ಪಾ ಖರೀದಿ ಮಾಡಬೇಕು ಅಂದ್ರೆ ನಾವು ಕೊಟ್ಟಿರೋ ಲೇಖನ ಸಂಪೂರ್ಣವಾಗಿ ಓದಿ.

ನೀವು ಈ ಅಕ್ಷಯ ತೃತೀಯ ದಿನ ಸಾವಿರಾರು ರುಪಾಯಿ ಕೊಟ್ಟು ಚಿನ್ನ ಬೆಳ್ಳಿ ಖರೀದಿ ಮಾಡಿಲ್ಲ ಎಂಬ ಬೇಸರ ಬೇಡ ನೀವು ಈ ದಿನ ಒಂದು ನವಿಲುಗರಿಯನ್ನು ಖರೀದಿಸಿ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮಗೆ ಶ್ರೇಯಸ್ಸು ಉಂಟಾಗಲಿದೆ. ನಿಮ್ಮ ಸಂಪತ್ತು ಇಮ್ಮಡಿಯಾಗುತ್ತದೆ. ಚಿನ್ನವನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂಬುವವರು ಖಂಡಿತವಾಗಿಯೂ ಈ ದಿನ ಒಂದು ನವಿಲುಗರಿಯನ್ನು ತಪ್ಪದೇ ಖರೀದಿ ಮಾಡಿ. ಹಾಗೆಯೇ ಈ ದಿನ ವಾಹನ ಖರೀದಿ ಬಟ್ಟೆ ಭೂ ವ್ಯವಹಾರಕ್ಕೆ ಸಂಬಂಧಿಸಿದ ವ್ಯವಹಾರ ಮಾಡುವವರಿಗೆ ಇಂದು ಶುಭದಿನವಾಗಲಿದೆ. ಹಾಗೆಯೇ ನಿಮ್ಮ ಹೊಸ ಉದ್ಯಮಕ್ಕೆ ಹಣವನ್ನು ಹೂಡಿಕೆ ಮಾಡುವವರಿದ್ದರೆ ಈ ದಿನ ಮಾಡಬಹುದು. ಅಲ್ಲದೆ ಈ ದಿನ ನೀವು ಗಂಗಾ ಸ್ನಾನ ಮತ್ತು ಪೂಜೆಯನ್ನು ಮಾಡಿದರೆ ನಿಮ್ಮ ಪಾಪಗಳೆಲ್ಲವು ಕಳೆಯುವವು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ಅಕ್ಷಯ ತೃತೀಯ ದಿನ ನಮ್ಮ ಹಿಂದೂ ಧರ್ಮದಲ್ಲಿ ದಾನಧರ್ಮಕ್ಕೆ ಹೆಚ್ಚಿನ ವಿಶೇಷತೆಯನ್ನು ನೀಡಲಾಗಿದೆ. ನೀವು ಈ ದಿನ ದಾನ ಧರ್ಮಗಳನ್ನು ಮಾಡಿದರೆ ನಿಮಗೆ ಆ ಭಗವಂತನು ಹೆಚ್ಚಿನ ಫಲವನ್ನು ಕೊಡುತ್ತಾನೆ ಎಂದು ಹೇಳಲಾಗಿದೆ. ನೀವು ಈ ದಿನ ಬಡವರಿಗೆ ನಿಮ್ಮ ಕೈಲಾದಷ್ಟು ವಸ್ತ್ರ ದಾನ ಧಾನ್ಯಗಳು ಮತ್ತು ಬಡವರಿಗೆ ಆಹಾರ ಇಂತಹ ಹಲವು ರೀತಿಯ ಕೆಲಸ ಕಾರ್ಯಗಳು ಮಾಡಿದರೆ ಸಂಪತ್ತು ವೃದ್ದಿ ಆಗುತ್ತದೆ. ಈ ದಿನ ಮೊದಲೇ ನಾವು ಮೊದಲೇ ಹೇಳಿದಂತೆ ನವಿಲುಗರಿಯನ್ನು ಖರೀದಿ ಮಾಡಿದರೆ ಶುಭ ಫಲವನ್ನು ಪಡೆಯಬಹುದು. ಖರೀದಿ ಮಾಡಿದ ನವಿಲುಗರಿಯನ್ನು ದೇವರ ಮುಂದೆ ಇಟ್ಟು ಜೋಪಾನವಾಗಿ ತೆಗೆದಿರಿಸಿದರೆ ನಿಮಗೆ ನಿಮ್ಮ ಸಂಪತ್ತು ವೃದ್ಧಿಯಾಗಲಿದೆ. ನೀವು ಚಿನ್ನ ಖರೀದಿ ಮಾಡಲಿಲ್ಲ ಎಂದು ಬೇಸರ ಪಟ್ಟುಕೊಳ್ಳಬೇಡಿ. ಚಿನ್ನದ ಖರೀದಿಗೆ ಬೇಕಾಗುವಷ್ಟು ಹಣವಿಲ್ಲವೆಂದು ಬೇಸರಿಸಬೇಡಿ. ನಿಮಗೆ ಸಾಧ್ಯವಾಗುವುದಿದ್ದರೆ ನವಿಲಗರಿಯನ್ನು ಖರೀದಿ ಮಾಡಿ ಸಂಪತ್ತನ್ನು ವೃದ್ಧಿಗೊಳಿಸಿ.

LEAVE A REPLY

Please enter your comment!
Please enter your name here