ನಿಮ್ಮ ಕಣ್ಣು ಸೂಪರ್ ಆಗಿ ಕೆಲಸ ಮಾಡಬೇಕು ಅಂದ್ರೆ ಪಪ್ಪಾಯ ಕಾಯಿ ತಿನ್ನಿ

0
469

ಆತ್ಮೀಯರೇ ಪಪ್ಪಾಯ ಕಾಯಿಯ ಆರೋಗ್ಯಕರ ಲಾಭಗಳ ಬಗ್ಗೆ ನಿಮಗೆ ಗೊತ್ತೇ? ಪಪ್ಪಾಯ ಕಾಯಿ ಇಂದ ಸಾಕಷ್ಟು ಆರೋಗ್ಯಕರ ಲಾಭಗಳು ನಮಗೆ ದೊರೆಯುತ್ತೆ ಅದೆಲ್ಲ ಯಾವುದು ಎಂದು ಈ ಲೇಖನ ಪೂರ್ತಿ ಓದಿ ತಿಳಿದುಕೊಳ್ಳಿ. ಪಪ್ಪಾಯ ಕಾಯಿ ಅಲ್ಲಿ ವಿಟಮಿನ್ ಎ ವಿಟಮಿನ್ ಸಿ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಆಂಟಿ ಆಕ್ಸಿಡೆಂಟ್ ಮತ್ತು ಅಧಿಕ ಪ್ರಮಾಣದಲ್ಲಿ ಫೈಬರ್ ಇದೆ. ಹಾಗಾಗಿ ನಮ್ಮ ಡಯಟ್ ನಲ್ಲಿ ಪಪ್ಪಯ ಕಾಯಿ ಅನ್ನು ಸಹಾ ನಾವು ಆಡ್ ಮಾಡಿಕೊಳ್ಳಬಹುದು. ಇದರಲ್ಲಿರುವ ಆಕ್ಟೀವ್ ಎಂಸೈಂಸ್ ಗಳು ನಮ್ಮಲ್ಲಿ ವಿಟಮಿನ್ ಅಥವಾ ಜೀವಸತ್ವ ಗಳ ಕೊರತೆ ಆಗದಂತೆ ಸಹಾಯ ಮಾಡುತ್ತೆ. ಮೂಲ ಪಪ್ಪಾಯ ಅನ್ನು ಅಥವಾ ಪಪ್ಪಾಯ ಕಾಯಿ ಅನ್ನುಣ್ಣಾವು ಸೇವಿಸುತ್ತಾ ಇದ್ದರೆ ಹಲವು ಹೊಟ್ಟೆ ಸಂಬಂಧಿತ ಖಾಯಿಲೆ ಗಳನ್ನ ಬರದಂತೆ ನೋಡಿಕೊಳ್ಳಬಹುದು.

ಈ ಪರಂಗಿ ಕಾಯಿಯ ಆರೋಗ್ಯಕರ ಲಾಭಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ನಮ್ಮಲ್ಲಿ ಏನದದ್ರು ಕ್ಯಾನ್ಸರ್ ಸೆಲ್ ಬೆಳೆಯತ್ತ ಇದ್ದರೆ ಈ ಕ್ಯಾನ್ಸರ್ ಜೀವಕೋಶ ಗಳನ್ನ ಬೆಳೆಯದಂತೆ ನೋಡುತ್ತದೆ. ಹಾಗೆ ಪಪ್ಪಾಯ ಕಾಯಿ ಅಲ್ಲಿ ಇರುವ ಪೊಟ್ಯಾಶಿಯಂ ನಮ್ಮ ರಕ್ತದ ಒತ್ತಡವನ್ನು ಸಮತೋಲನ ಗೊಳಿಸುತ್ತದೆ. ಹೈ ಬೀಪಿ ಇರುವವರು ತಮ್ಮ ಡಯಟ್ ಅಲ್ಲಿ ಪಪ್ಪಾಯ ಕಾಯಿ ಅನ್ನು ಆಡ್ ಮಾಡಿಕೊಳ್ಳುವುದು ಒಳ್ಳೆಯದು. ಜೊತೆಗೆ ಮಧುಮೇಹ ರೋಗಿಗಳಿಗೂ ಫ್ರೆಂಡ್ಲಿ ಆಹಾರ ಆಗಿದೆ. ಇವರಲ್ಲಿ ರಕ್ತದಲ್ಲಿ ಇರುವ ಸಕ್ಕರೆಯ ಪ್ರಮಾಣ ಅನ್ನು ಸಮತೋಲನ ಮಾಡುತ್ತೆ. ಹಾಗೆ ಈ ಪರಂಗಿ ಕಾಯಿ ಅಲ್ಲಿ ಇರುವಂತಹ ವಿಟಮಿನ್ ಎ ನಮ್ಮ ಕಣ್ಣಿನ ಆರೋಗ್ಯ ಅನ್ನು ಹೆಚ್ಚಿಸುತ್ತದೆ ಕಣ್ಣಿಗೆ ಸಂಬಂಧಿಸಿದ ಖಾಯಿಲೆ ಇಂದ ನಮ್ಮನ್ನ ರಕ್ಷಿಸುತ್ತದೆ

ಹಾಗೆ ಈ ಪಪ್ಪಾಯ ಕಾಯಿ ಅಲ್ಲಿ ಇರುವ ಆಂಟಿ ಆಕ್ಸಿಡೆಂಟ್ ನಮ್ಮಲ್ಲಿ ಇರುವ ರೋಗ ನಿರೋಧಕ ಶಕ್ತಿ ಅನ್ನು ಹೆಚ್ಚಿಸುತ್ತದೆ ನಮ್ಮ ಜೀರ್ಣ ಕ್ರಿಯೆ ಅನ್ನು ಬೂಸ್ಟ್ ಮಾಡುತ್ತೆ. ನಮಗೆ ಆಗುವ ಕೆಲವೊಂದು ಇನ್ಫೆಕ್ಷನ್ ಗಳಿಂದ ನಮ್ಮನ್ನು ಉಳಿಸುತ್ತೆ. ಈ ಪಪ್ಪಾಯ ಕಾಯಿ ಮಲಬದ್ಧತೆ ತೊಂದರೆ ಇರುವವರು ತಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ. ಮಲಬದ್ಧತೆ ಖಾಯಿಲೆ ಅನ್ನು ಗುಣ ಪಡಿಸಲು ಹಾಗೆ ಜೀರ್ಣ ಕ್ರಿಯೆಗೆ ಸುಲಭ ಆಗುವಂತೆ ಮತ್ತು ಜೀರ್ಣ ಕ್ರಿಯೆ ಅನ್ನು ಉತ್ತಮಗೊಳಿಸಲು ಪಪ್ಪಾಯ ಕಾಯಿ ತುಂಬಾ ಉಪಯುಕ್ತ ಆಗಿದೆ. ಏಕೆಂದರೆ ಈ ಪಪ್ಪಾಯ ಕಾಯಿ ಅಲ್ಲಿ ಹೆಚ್ಚಾಗಿ ಫೈಬರ್ ಇರುವುದರಿಂದ ನಮಗೆ ಈ ಎಲ್ಲ ಬೆನಿಫಿಟ್ಸ್ ಸಿಗುತ್ತೆ.

ಹಾಗೆ ನಮ್ಮಲ್ಲಿ ಗ್ಯಾಸ್ ಫಾರ್ಮ್ ಆಗುವುದಕ್ಕೆ ಬಿಡುವುದಿಲ್ಲ ಅಂದರೆ ಗ್ಯಾಸ್ಟ್ರಿಕ್ ಆಗದಂತೆ ನೋಡಿಕೊಳ್ಳುವುದಕ್ಕೆ ಸಹಾಯ ಆಗಿದೆ. ಜೊತೆಗೆ ನಮ್ಮ ದೇಹದ ಕಲ್ಮಶವನ್ನು ಹೊರಹಾಕುತ್ತದೆ ಇದರಿಂದ ನಮ್ಮ ಚರ್ಮದ ಆರೋಗ್ಯ ಸಹಾ ಚೆನ್ನಾಗಿ ಇರುತ್ತೆ. ಮುಖ್ಯವಾಗಿ ಯಾರಲ್ಲಿ ಹೆಚ್ಚಾಗಿ ಪಿಗ್ ಮೆಂಟೇಶನ್ ತೊಂದರೆ ಇದೆಯೋ ಹೆಚ್ಚಾಗಿ ಯಾರಿಗೆ ಮೊಡವೆ ಇದೆಯೋ ಅವರು ತಮ್ಮ ಆಹಾರದಲ್ಲಿ ಹಸಿ ಪಪ್ಪಾಯ ಅನ್ನು ಸೇರಿಸಿ ನಮ್ಮ ಎಲ್ಲ ಚರ್ಮ ತೊಂದರೆ ಗಳು ಗುಣ ಆಗಲು ನಮ್ಮ ದೇಹ ಸಂಪೂರ್ಣವಾಗಿ ಕಲ್ಮಶ ಹೊರ ಹಾಕಬೇಕು. ಪಪ್ಪಾಯ ಕಾಯಿ ಅಲ್ಲಿ ಈ ಗುಣ ಇರುವುದರಿಂದ ಇದನ್ನು ಕಡೆ ಗಣಿಸಬೇಡಿ. ಹಾಗೆ ಲಿವರ್ ಆರೋಗ್ಯವಾಗಿರಲು ಶೀತ ಕೆಮ್ಮು ಜ್ವರ ಬಂದಾಗ ಉಸಿರಾಟದ ತೊಂದರೆ ಇರುವವರು ಆಸ್ತಮಾ ಇರುವವರು ಹಾಲುಣಿಸುವ ತಾಯಿಯರು ಈ ಕಾಯಿ ಅನ್ನು ಸೇವಿಸಿ ಆರೋಗ್ಯಕಾರಿ ಆಗಿದೆ.

LEAVE A REPLY

Please enter your comment!
Please enter your name here