ನೀವು ಸಹ ಗೂಗಲ್ ಪೇ ಬಳಕೆ ಮಾಡ್ತೀರ ಹಾಗಾದ್ರೆ ಈ ಮಾಹಿತಿ ನಿಮಗಾಗಿ

0
872

ಇತ್ತೀಚೆಗೆ ಗೂಗಲ್ ಪೇ. ಫೋನ್ ಪೇ ಮತ್ತು ಪೇಟಿಯಂ ಹೀಗೆ ಹಲವು ಪೇಮೆಂಟ್ ಆಪ್ ಗಳ ಆಫಾರ್ ಮೂಲಕ ಹಲವಾರು ಮಂದಿ ಒಂದಿಷ್ಟು ಲಾಭ ಪಡೆಯುತ್ತಾ ಇದ್ದಾರೆ. ಹಾಗೆ ಕೂಡ ಇದರ ಜೊತೆಗೆ ಮೋಸ ಹೋಗಿದ್ದಾರೆ. ತಂತ್ರಜ್ಞಾನ ಹೆಚ್ಚು ಮುಂದುವರಿದಂತೆ ಕಳ್ಳರು ಕೂಡ ಆಧುನಿಕ ತಂತ್ರಜ್ಞಾನದ ರೀತಿಯಲ್ಲಿ ಜನರನ್ನು ವಂಚನೆಗೆ ಒಳ ಪಡಿಸುತ್ತಿದ್ದಾರೆ. ನಾವು ಯಾವಾಗಲೂ ಸಹ ಅಂಗಡಿಯಲ್ಲಿ ಇನ್ನಿತರ ವಸ್ತುಗಳನ್ನು ಖರೀದಿ ಮಾಡಿದರೆ ಪೇಟಿಮ್ ಅಥವಾ ಫೋನ್ ಪೇ ಯಲ್ಲಿ ಗೂಗಲ್ ಪೆ ಯಲ್ಲಿ ಹಣವನ್ನು ಪಾವತಿ ಮಾಡುವುದು ಇದೀಗ ಸಾಮಾನ್ಯವಾಗಿದೆ. ಒಂದಿಷ್ಟು ಹಳೆಯ ತಲೆಮಾರಿನ ಜನರನ್ನು ಬಿಟ್ಟರೆ ಇತ್ತೀಚೆಗಿನ ಯುವಕ ಯುವತಿಯರು ಎಲ್ಲರೂ ಇಂತಹ ಆಪ್ ಗಳನ್ನು ಬಳಕೆ ಮಾಡುತ್ತಿದ್ದಾರೆ.

ಇದೀಗ ಬೆಂಗಳೂರಿನ ಮಹಾವೀರ್ ಎಂಬುವವರು ವಂಚನೆಗೆ ಒಳಗಾಗಿದ್ದು ಅವರ ಖಾತೆಯಲ್ಲಿನ ಇಪ್ಪತ್ತೆಂಟು ಸಾವಿರಕ್ಕೂ ಹೆಚ್ಚು ಹಣವನ್ನು ಅವರು ಕಳೆದು ಕೊಂಡಿದ್ದಾರೆ. ಇವರು ಬೆಂಗಳೂರಿನ ಮತ್ತಿಕೆರೆಯಲ್ಲಿ ಆಟೋಮೊಬೈಲ್ ಅಂಗಡಿಯನ್ನು ನಡೆಸುತ್ತಿದ್ದಾರೆ. ಹೀಗೆ ಮಹಾವೀರ್ ಅವರ ಅಂಗಡಿಗೆ ಬಂದ ವ್ಯಕ್ತಿಯೊಬ್ಬರು ಅವರಿಂದ ಸರಿ ಸುಮಾರು ಆರು ಸಾವಿರ ರೂಪಾಯಿ ಬೆಲೆಬಾಳುವ ವಸ್ತುವೊಂದನ್ನು ಖರೀದಿ ಮಾಡಿದ್ದಾರೆ. ಆದರೆ ಆ ವ್ಯಕ್ತಿ ಅಮೆಜಾನ್ ಪೇಮೆಂಟ್ ಮೊಲಕ ಮಾಡಿದ ಹಣ ಮಹಾವೀರ್ ಅವರ ಖಾತೆಗೆ ಜಮಾ ಆಗಲೇ ಇಲ್ಲ. ಇದನ್ನು ಮೂರು ನಾಲ್ಕು ದಿನ ಕಾದು ನೋಡಿದರೂ ಸಹ ಅವರ ಖಾತೆಗೆ ಬಂದಿರಲೇ ಇಲ್ಲ. ನಂತರ ಅಮೆಜಾನ್ ಕಸ್ಟಮರ್ ಕೇರ್ ನ ಸಂಖ್ಯೆಯನ್ನು ಗೂಗಲ್ನಲ್ಲಿ ಪಡೆದು ಅವರು ಸಂಪರ್ಕ ಮಾಡಲು ಪ್ರಯತ್ನಿಸಿದರು. ಆದರೆ ಅವರಿಗೆ ಅಲ್ಲಿ ದೊರೆತ ಸಂಖ್ಯೆಯಿಂದ ಕಸ್ಟಮರ್ ಕೇರ್ ನ್ನು ಸರಿಯಾಗಿ ಸಂಪರ್ಕ ಮಾಡಲು ಸಾಧ್ಯ ಆಗಲಿಲ್ಲ.

ನಂತರ ಗೂಗಲ್ ನಲ್ಲಿ ಕೆಲವು ಸಂಪರ್ಕಗಳನ್ನು ಹುಡುಕಿ ಕೊನೆಗೆ ಅಮೆಜಾನ್ ಕಸ್ಟಮರ್ ಕೇರ್ ಎಂದು ಲಗತ್ತಿಸಿದ ನಕಲಿ ಕಸ್ಟಮರ್ ಸಂಖ್ಯೆಗೆ ಇವರು ಕರೆ ಮಾಡಿದ್ದಾರೆ. ನಕಲಿ ನಂಬರ್ ಗೆ ಕರೆ ಮಾಡಿ ಅವರು ಮಾಹಿತಿಯನ್ನು ಕೇಳಿದಾಗ ಆ ನಕಲಿ ಕರೆಯನ್ನು ಸ್ವೀಕರಿಸಿದ ವ್ಯಕ್ತಿ ತಾನು ಅಮೆಜಾನ್ ಪ್ರತಿನಿಧಿ ಎಂದು ಇವರಲ್ಲಿ ಪರಿಚಯ ಮಾಡಿಕೊಂಡಿದ್ದಾನೆ. ಹೀಗೆ ಮಹಾವೀರ್ ಅವರನ್ನು ಪರಿಚಯ ಮಾಡಿಕೊಂಡ ವ್ಯಕ್ತಿ ಇವರ ಬಳಿ ಅಕೌಂಟ್ ಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳು ಮತ್ತು ಗೂಗಲ್ ಪೇ ನ ಮಾಹಿತಿಗಳನ್ನು ಕೇಳಿದ್ದಾನೆ. ಇದನ್ನು ಕೇಳಿದ ಕೆಲವೇ ಕ್ಷಣಗಳಲ್ಲಿ ಮಹಾವೀರ್ ಅವರ ಖಾತೆಯಲ್ಲಿದ್ದ ಇಪ್ಪತ್ತೆಂಟು ಸಾವಿರಕ್ಕೂ ಹೆಚ್ಚು ಹಣ ಕಳವಾಗಿದೆ. ಇದೀಗ ಮಹಾವೀರ್ ಅವರು ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ. ಇವರು ಆರು ಸಾವಿರ ಬರಲಿಲ್ಲ ಎಂದು ದೂರು ನೀಡಲು ಹೋಗಿ ಇದೀಗ ಇಪ್ಪತ್ತೆಂಟು ಸಾವಿರ ರೂಪಾಯಿ ಸಮೇತ ಇವರ ಖಾತೆಯಿಂದ ಕಳೆದು ಕೊಂಡಿದ್ದಾರೆ.

ಸ್ನೇಹಿತರೇ ಯಾರೇ ಆಗಲಿ ಏನೇ ಆಗಲಿ ನೀವು ಆನ್ಲೈನ್ ವ್ಯವಹಾರ ಮಾಡುವಾಗ ಜಾಗ್ರತೆ ಇರುವುದು ಸೂಕ್ತ. ಗೂಗಲ್ನಲ್ಲಿ ಸಿಗುವ ಅನೇಕ ರೀತಿಯ ಸಂಖ್ಯೆಗಳನ್ನು ಹುಡುಕಿ ಕಸ್ಟಮರ್ ಕೇರ್ ಎಂದು ಕರೆಯನ್ನು ಮಾಡಲು ಹೋಗಬೇಡಿ. ನಿಮಗೆ ದೂರು ನೀಡುವ ಉದ್ದೇಶವಿದ್ದರೆ ಆಪ್ ನ ಅಧಿಕೃತ ವೆಬ್ಸೈಟ್ ಗಳಲ್ಲೇ ಮಾಹಿತಿಯನ್ನು ಪಡೆದುಕೊಂಡು ಅಲ್ಲಿಯೇ ನೀವು ನೇರವಾಗಿ ದೂರನ್ನು ನೀಡಬಹುದು. ಹೀಗೆ ಸಾಕಷ್ಟು ಜನ ನಿಮ್ಮ ಗೌಪ್ಯ ಮಾಹಿತಿಯನ್ನು ಪಡೆದುಕೊಂಡು ನಿಮ್ಮ ಹಣವನ್ನು ಕ್ಷಣಾರ್ಧದಲ್ಲಿ ಲೂಟಿ ಮಾಡುತ್ತಿದ್ದಾರೆ. ನಾವು ನಮ್ಮ ಶೋಕಿಗೋಸ್ಕರ ಫೋನ್ ಪೇ ಗೂಗಲ್ ಪೇ ಪೇಟಿಮ್ ಇವೆಲ್ಲವನ್ನು ಮಾಡುವುದು ದೊಡ್ಡ ತನವಲ್ಲ ಆದರೆ ಅದನ್ನು ನಿರ್ವಹಣೆ ಮಾಡುವುದು ಹೇಗೆ ಮತ್ತು ನಮ್ಮ ಗೌಪ್ಯತೆಯನ್ನು ಕಾಪಾಡಿ ಕೊಳ್ಳುವುದು ಹೇಗೆ ಎಂಬುದನ್ನು ನಾವು ಮೊದಲು ತಿಳಿದು ಕೊಳ್ಳಬೇಕು.

LEAVE A REPLY

Please enter your comment!
Please enter your name here