ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಈ ರಾಜ್ಯಗಳು ಭಾರತಕ್ಕೆ ಸೇರಲು ಒಪ್ಪಲಿಲ್ಲ ಏಕೆ ಗೊತ್ತೇ

0
594

ಇವತ್ತಿನ ಲೇಖನದಲ್ಲಿ ನಾವು ನಿಮಗೆ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ನಮ್ಮ ದೇಶದ ಜೊತೆ ಹೊಂದಿಕೆ ಆಗೋದಕ್ಕೆ ನಿರಾಕರಿಸಿದ ಐದು ರಾಜ್ಯಗಳ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತೇವೆ. ಇನ್ನು ಈ ಲೇಖನದಲ್ಲಿ ಹೇಳಿರುವ ಐದು ರಾಜ್ಯಗಳು ಒಂದು ಕಾಲದಲ್ಲಿ ಎಷ್ಟು ಹಠವನ್ನು ಮಾಡಿತ್ತು ಎಂದರೆ ಬೇರೆ ಎಲ್ಲಾ ರಾಜ್ಯಗಳು ನಮ್ಮ ಭಾರತವನ್ನು ಹೊಂದಿಕೆ ಆಗೋದಕ್ಕೆ ಒಪ್ಪಿದರು ಕೂಡ ಈ ಐದು ರಾಜ್ಯಗಳು ಮಾತ್ರ ಭಾರತವನ್ನು ಹೊಂದಿಕೆ ಆಗೋದಕ್ಕೆ ಕಡೆ ಕ್ಷಣದವರೆಗೂ ಒಪ್ಪೋದಿಲ್ಲ. ಈ ಲೇಖನದಲ್ಲಿ ಆ ರಾಜ್ಯಗಳು ಯಾವುದು ಹಾಗೂ ಅದಕ್ಕೆ ಕಾರಣ ಏನೆಂದು ತಿಳಿಸಿಕೊಡುತ್ತೇವೆ.

ಮೊದಲನೆಯದು ಟ್ರಾವಂಕೋರ್. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಭಾರತವನ್ನು ಸೇರೋದಕ್ಕೆ ನಿರಾಕರಿಸಿದ ಮೊದಲನೇ ರಾಜ್ಯ ಇದು. ಯಾಕೆಂದರೆ ಟ್ರಾವಂಕೋರ್ ಗೆ ಭಾರತವನ್ನು ಸೇರುವ ಬದಲು ಅದರದ್ದೇ ಸ್ವಂತ ದೇಶವನ್ನು ಕಟ್ಟಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿತ್ತು. ಆದರೆ ಭಾರತ ಸರ್ಕಾರ ಹಾಗೂ ಟ್ರಾವಂಕೋರ್ ನಡುವೆ ನಡೆದ ಸತತ ಮಾತುಕತೆಯ ನಂತರ ಲಾಸ್ಟ್ ನಲ್ಲಿ ಭಾರತವನ್ನು ಸೇರುವುದಕ್ಕೆ ಒಪ್ಪಿಕೊಳ್ಳುತ್ತದೆ. ಹಾಗೂ 1956ರಲ್ಲಿ ಟ್ರಾವಂಕೋರ್ ನ ಕೇರಳ ರಾಜ್ಯ ಅಂತ ಮರು ನಾಮಕರಣ ಮಾಡಲಾಯಿತು. ಈಗ ಅದೇ ಕೇರಳ ರಾಜ್ಯ ಭಾರತದ ಅತ್ಯಂತ ಸುಂದರವಾದ ರಾಜ್ಯ ಅಂತ ಹೇಳಲಾಗುತ್ತೆ. ಎರಡನೆಯದು ಜೋದ್ಪುರ್.

ಜೋದ್ಪುರ್ ಒಂದು ರಾಜ್ಯ ಅಲ್ಲದೆ ಇದ್ರು ಕೂಡ ನಮ್ಮ ಭಾರತ ದೇಶವನ್ನು ಸೇರೋದಕ್ಕೆ ನಿರಾಕರಿಸಿದ ಒಂದು ನಗರ. ಯಾಕಂದರೆ ಆಗಿನ ಕಾಲದ ಜೋದ್ಪುರ್ ನ ರಾಜ ಭಾರತವನ್ನು ಸೇರೋ ಬದಲು ಪಾಕಿಸ್ತಾನ ಸೇರಿದರೆ ತುಂಬಾ ಲಾಭದಾಯಕವಾಗಿದೆ ಅಂತ ಯೋಚಿಸ್ತಾರೆ. ಯಾಕೆಂದರೆ ಜೋಧ್ಪುರ್ ಅದರ ಬಾರ್ಡರ್ ಅನ್ನು ಪಾಕಿಸ್ತಾನದ ಜೊತೆ ಹಂಚಿಕೊಂಡಿರುತ್ತದೆ. ಆದ್ದರಿಂದ ಪಾಕಿಸ್ತಾನ್ ಜೊತೆಯಲ್ಲಿ ಸೇರುವುದಕ್ಕೆ ಜೋದ್ಪುರ್ ಯೋಚಿಸುತ್ತದೆ. ಆದರೆ ಭಾರತದ ಡೆಪ್ಯೂಟಿ ಪ್ರೈಮ್ ಮಿನಿಸ್ಟರ್ ಜೋಧ್ಪುರ್ ರಾಜನ ಜೊತೆ ಮಾತುಕತೆ ಮಾಡಿ ಭಾರತವನ್ನು ಸೇರೋ ರೀತಿ ಒಪ್ಪಿಸುತ್ತಾರೆ.

ಮೂರನೇಯದು ಬೋಪಾಲ್. ಬೋಪಾಲ್ ನ ನಗರದ ಜನತೆ ಭಾರತವನ್ನು ಸೇರೋ ಆಸೆಯನ್ನು ವ್ಯಕ್ತಪಡಿಸಿದರರೂನೂ ಅಲ್ಲಿನ ರಾಜ ಮಾತ್ರ ಭಾರತವನ್ನು ಸೇರೋದಕ್ಕೆ ಒಪ್ಪಲಿಲ್ಲ. ಹಾಗೂ ಆ ರಾಜ ಲಾರ್ಡ್ ಮೌಂಟ್ ಬ್ಯಾಟನ್ ಗೆ ಕೂಡ ಆತನ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದರು. ಆದರೆ ಆ ರಾಜನಿಗೆ ಅಲ್ಲಿನ ಪ್ರಜೆಗಳು ಮಂತ್ರಿಗಳು ಯಾರಿಂದಲೂ ಸಪೋರ್ಟ್ ಇಲ್ಲದೆ ಇದ್ದದ್ದರಿಂದ ಬೇರೆ ದಾರಿ ಇಲ್ಲದೆ ನಮ್ಮ ಭಾರತ ದೇಶವನ್ನು ಸೇರುವುದಕ್ಕೆ ಒಪ್ಪಿಕೊಳ್ಳುತ್ತಾರೆ. ಆದರೆ ಈಗ ಅದೇ ಭೋಪಾಲ್ ಮಧ್ಯ ಪ್ರದೇಶದ ರಾಜ್ಯದ ರಾಜಧಾನಿಯಾಗಿದೆ. ನಾಲ್ಕನೆಯದು ಜುನಗಾದ್ಧ್. ಗುಜರಾತ್ ರಾಜ್ಯಕ್ಕೆ ಸೇರಿದ ಜುನಗಾದ್ಧ್ ನಮ್ಮ ಭಾರತವನ್ನು ಸೇರಿದ ಕಥೆಯೇ ಸ್ವಲ್ಪ ಇಂಟರೆಸ್ಟಿಂಗ್ ಆಗಿರುತ್ತದೆ. ಯಾಕೆಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಜುನಗಾದ್ಧ್ ಭಾರತವನ್ನು ಸೇರುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಲ್ಲಿನ ರಾಜ ಮುಂಚೆಯೇ ಭಾರತವನ್ನು ಸೇರೋ ಬದಲು ಪಾಕಿಸ್ತಾನದ ಜೊತೆ ಕೈಜೋಡಿಸಿದರು.

ಈ ವಿಷಯ ತಿಳಿದ ಜುನಗಾದ್ಧ್ ಪ್ರಜೆಗಳು ಹೋರಾಟ ನಡೆಸುತ್ತಾರೆ. ಆ ನಂತರ ಅವರಿಗೆ ಭಾರತ ಬೇಕಾ ಅಥವಾ ಪಾಕಿಸ್ತಾನ ಬೇಕಾ ಅಂತ ಒಂದು ಎಲೆಕ್ಷನ್ ನಡೆಸುತ್ತಾರೆ. ಆಗ ಅಲ್ಲಿನ 90% ಪ್ರಜೆಗಳು ಭಾರತವೇ ಬೇಕು ಅಂತ ವೋಟ್ ಹಾಕಿರುತ್ತಾರೆ. ಆಗ ಜುನಗಾದ್ಧ್ ಭಾರತವನ್ನು ಸೇರುತ್ತೆ. ಐದನೆಯದು ಹೈದರಾಬಾದ್. ಹೈದರಾಬಾದ್ ಭಾರತವನ್ನು ಸೇರಿದ ಸ್ಟೋರಿ ಕೂಡ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ. ಯಾಕಂದರೆ ಆಗಿನ ಕಾಲದ ಹೈದರಾಬಾದ್ ರಾಜ ಏನು ಯೋಚನೆ ಮಾಡ್ತಾರೆ ಅಂದ್ರೆ ಹೈದರಾಬಾದ್ ನ ಒಂದು ಇಂಡಿಪೆಂಡೆಂಟ್ ರಾಜ್ಯವನ್ನಾಗಿ ಮಾಡಿ ಬ್ರಿಟಿಷ್ ಕಾಮನ್ ವೆಲ್ತ್ ಆಫ್ ನೇಶನ್ಸ್ ನ ಮೆಂಬರ್ ಆಗಬೇಕು ಅಂತ ಯೋಚನೆ ಮಾಡ್ತಾರೆ. ಆದರೆ ಭಾರತದ ಕೊನೆಯ ವೈಸ್ರಾಯ್ ನಿಮ್ಮನ್ನ ಮೆಂಬರ್ ಆಗಿ ಸೇರಿಸಿಕೊಳ್ಳುವುದಕ್ಕೆ ಸಾಧ್ಯ ಇಲ್ಲ ಅಂತ ತುಂಬಾ ಸ್ಪಷ್ಟವಾಗಿ ಆಗಿನ ಕಾಲದ ಹೈದರಾಬಾದ್ ರಾಜನಿಗೆ ತಿಳಿಸುತ್ತಾರೆ ಆಗ ಕೊನೆಗೆ ಆ ರಾಜ ಭಾರತವನ್ನು ಸೇರುವುದಕ್ಕೆ ಒಪ್ಪಿಕೊಳ್ಳುತ್ತಾನೆ. ಈ ಲೇಖನವನ್ನು ಶೇರ್ ಮಾಡಿ. ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here