ರಾಯಲ್ ಎನ್ಫೀಲ್ಡ್ ಬೈಕ್ ಗೆ ಗುಡಿ ಕಟ್ಟಿ ದೇವರ ತರ ಪೂಜೆ ಮಾಡ್ತಾರೆ ಏಕೆ ಗೊತ್ತೇ

0
482

ಭಾರತದಲ್ಲಿ ನಡೆಯುವ ಹತ್ತು ಹಲವು ವಿಚಿತ್ರ ಸಂಪ್ರದಾಯಗಳು ಅನುಸರಿಸುವ ಕ್ರಮಗಳು ಬಗ್ಗೆ ವಿದೇಶಿಯರಿಗೆ ಬಿಡಿ ಭಾರತದ ಇತರ ಪ್ರದೇಶಗಳಲ್ಲಿರುವವರಿಗೂ ಅಚ್ಚರಿ ತರಿಸಬಹುದು. ಉದಾಹರಣೆಗೆ ತಮಿಳುನಾಡಿನಲ್ಲಿ ನೆಚ್ಚಿನ ತಾರೆಯರನ್ನು ದೇವರ ಸಮಾನವಾಗಿ ಕಂಡು ದೇವಾಲಯ ಕಟ್ಟಿ ಪೂಜಿಸುತ್ತಾರೆ. ಇನ್ನು ಕೆಲವು ಬುಡಕಟ್ಟು ಜನಾಂಗದಲ್ಲಿ ವರ್ಷಕ್ಕೊಮ್ಮೆ ಸ್ನಾನ ಮಾಡುವ ಸಂಪ್ರದಾಯವೂ ಕೂಡ ಇದೆ. ಆದರೆ ರಾಜಸ್ಥಾನದ ಒಂದು ಊರಿನ ಈ ಸಂಪ್ರಾದಾಯ ಆಧುನಿಕವಾದದ್ದು ಅಂದರೆ ಕೆಲವೇ ವರ್ಷಗಳ ಹಿಂದೆ ಹೊಸದಾಗಿ ಪ್ರಾರಂಭವಾಗಿದೆ. ಇಲ್ಲಿನ ಜನರು ರಾಯಲ್ ಎನ್ಫೀಲ್ಡ್ ಬುಲ್ಲೆಟ್ ಎಂಬ ಬಾರಿ ಬಾರದ ಗುಡುಗುಡು ಶಬ್ದ ಹೊರಡಿಸುವ ಬೈಕಿಗೆ ಈಗಲೂ ಪೂಜೆಯನ್ನು ಸಲ್ಲಿಸುತ್ತಿದ್ದಾರೆ.

ಹೌದು ಸುಮಾರು 25 ವರ್ಷಗಳಿಂದ ಈ ಊರಿನಲ್ಲಿ ಹಾದುಹೋಗುವ ಹೈವೇ ಎನ್ ಹೆಚ್ 4 ಅರವತ್ತೈದು ಮೈಲಿಕಲ್ಲು ಪಕ್ಕದಲ್ಲಿರುವ ಗುಡಿಯೊಂದರಲ್ಲಿ ನಿಲ್ಲಿಸಲಾಗಿರುವ ಬುಲೆಟ್ ಬೈಕ್ ಗೆ ಪೂಜೆ ಸಲ್ಲಿಸಲಾಗುತ್ತಿದೆ. ಏಕೆ ಪೂಜೆ ಈ ಪೂಜೆ ಹಿಂದಿನ ರಹಸ್ಯವೇನು ಅಂತ ಈ ಲೇಖನವನ್ನು ಪೂರ್ತಿಯಾಗಿ ಓದಿ ತಿಳಿಯಿರಿ. ರಾಜಸ್ತಾನದ ಜೋಧಪುರ ಜಿಲ್ಲೆಯ ಪಾಲಿ ತಾಲೂಕಿನ ಚೋಟಿಲ ಎಂಬ ಊರಿನಲ್ಲಿ ಸುಮಾರು ಸಾವಿರದಷ್ಟು ಜನಸಂಖ್ಯೆ ಇದ್ದು ಸರಿಸುಮಾರು ಎಲ್ಲರೂ ಈ ಬೈಕಿಗೆ ನಿಯಮಿತವಾಗಿ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಹಾಗಿದ್ದರೆ ಈ ಗುಡಿಯ ಹಿನ್ನೆಲೆ ಏನು ಅಂತ ತಿಳಿದುಕೊಳ್ಳಿ ಈ ಊರಿನಲ್ಲಿ ಹಾದುಹೋಗುವ ಪಾಲಿ ಜೋಧ್ಪುರ್ ಹೈವೇ 65 ರ ಪಕ್ಕದಲ್ಲಿಯೇ 350 ಸಿಸಿ ಸಾಮರ್ಥ್ಯದ ದೊಡ್ಡ ಗಾತ್ರದ ಬುಲ್ಲೆಟ್ ಒಂದನ್ನು ನಿಲ್ಲಿಸಿದ್ದು ನಿತ್ಯ ಇದಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತಿದೆ.

ಕಾಣಿಕೆಯ ರೂಪದಲ್ಲಿ ಹೂವು ಹಣ್ಣು ಚಿಲ್ಲರೆಗಳ ಜೊತೆಗೆ ಮದ್ಯವನ್ನು ಕೂಡ ಅರ್ಪಿಸಲಾಗುತ್ತದೆ. 1991ರಲ್ಲಿ ಈ ಊರಿನ ನಿವಾಸಿ ಓಂ ಸಿಂಗ್ ರಾಥೋಡ್ ಅಥವಾ ಓಂಬಾರ ನಾಥ ಎಂಬ ವ್ಯಕ್ತಿ ಈ ಬುಲೆಟ್ ಬೈಕ್ ಓಡಿಸುತ್ತಿದ್ದಾಗ ಅಪಘಾತದಲ್ಲಿ ಈ ಸ್ಥಳದಲ್ಲಿ ಮೃತಪಟ್ಟುತ್ತಾನೆ. ಈ ವ್ಯಕ್ತಿ ಊರಿನ ಮುಖಂಡನ ಪುತ್ರನಾಗಿದ್ದನು. ಅಪಘಾತವಾದ ನಂತರ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಅಚ್ಚರಿ ಎಂಬಂತೆ ಮರುದಿನ ಬೆಳಗ್ಗೆ ಈ ಬೈಕು ಇಂದಿನ ದಿನ ಅಪಘಾತದ ಸ್ಥಳದಲ್ಲೇ ಮತ್ತೆ ಪ್ರತ್ಯಕ್ಷವಾಗಿತ್ತು. ಪೊಲೀಸ್ ಠಾಣೆಯ ಬಿಗಿ ಭದ್ರತೆಯನ್ನು ಭೇದಿಸಿಕೊಂಡು ಈ ಬೈಕ್ ಇಲ್ಲಿಗೆ ಹೇಗೆ ಬಂದಿತು ಎಂಬುದು ಇಂದಿಗೂ ಚಿದಂಬರ ರಹಸ್ಯವಾಗಿದೆ. ಹೌದು ಅಪಘಾತವಾದ ಬಳಿಕ ಕಾನೂನಿನ ಪ್ರಕಾರ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡು ಪೊಲೀಸ್ ಠಾಣೆಯ ಅಂಗಳದಲ್ಲಿ ನಿಲ್ಲಿಸಿದ್ದರು. ಯಾರೋ ಕಿಡಿಗೇಡಿಗಳ ಕಿತಾಪತಿ ಅಂದುಕೊಂಡಿದ್ದ ಪೊಲೀಸರು ಮತ್ತೊಮ್ಮೆ ಬೈಕನ್ನು ಠಾಣೆಗೆ ಕೊಂಡೊಯ್ದು ಇನ್ನಷ್ಟು ಸುರಕ್ಷಿತ ಸ್ಥಳದಲ್ಲಿ ಇರಿಸಿ ಯಾರೂ ಕದಿಯಲು ಸಾಧ್ಯವಾಗದಂತೆ ಸರಪಳಿಗಳಿಂದ ಕಟ್ಟಿ ಎರಡೆರಡು ಬೀಗ ಹಾಕಿ ಬೀಗಿದರು. ಯಾರೋ ಕಿಡಿಗೇಡಿಗಳು ಕಿತಾಪತಿ ಎಂದುಕೊಂಡಿದ್ದ ಪೊಲೀಸರಿಗೆ ಒಂದು ಅಚ್ಚರಿ ಕಾದಿತ್ತು.

ಈ ಮ್ಯಾಜಿಕ್ ಮತ್ತೊಮ್ಮೆ ನಡೆಯಿತು ಆದರೆ ಪೊಲೀಸರೇ ಬೆರಗಾಗುವಂತೆ ಮರುದಿನ ಬೈಕು ಅಪಘಾತ ಸ್ಥಳದಲ್ಲಿಯೇ ಇತ್ತು. ಪಟ್ಟು ಬಿಡದ ಪೊಲೀಸರು ಮತ್ತೆ ಹಿಂದೆ ತಂದು ಇನ್ನಷ್ಟು ಸರಪಳಿ ಬಿಗಿದರು ಸರ್ಪಗಾವಲು ಹಾಕಿದರು ಏನು ಮಾಡಿದರೂ ಸತತ ಆರು ತಿಂಗಳವರೆಗೆ ಬೈಕ್ ಮರುದಿನ ಬೆಳಗ್ಗೆ ಅಪಘಾತವಾದ ಸ್ಥಳದಲ್ಲಿಯೇ ಇರುತ್ತಿತ್ತು. ಇಂತಹದ್ದು ಏನಾದರೂ ಬೇರೆಡೆ ನಡೆದರೆ ಇದಕ್ಕೆ ವೈಜ್ಞಾನಿಕ ಕಾರಣ ನೀಡುತ್ತಿದ್ದರು ಏನೋ. ಆದರೆ ನಮ್ಮ ಭಾರತದಲ್ಲಿ ಈ ವಿಷಯ ಕಿವಿಯಿಂದ ಕಿವಿಗೆ ದಾಟುತ್ತ ಓಂ ಸಿಂಗ್ ರಾಥೋಡ್ ಆತ್ಮವೇ ಬೈಕನ್ನು ಬಿಟ್ಟಿರಲಾರದೆ ಠಾಣೆಯಿಂದ ತರುತ್ತಿದೆ ಎಂಬ ವದಂತಿಯ ರೂಪದಲ್ಲಿ ದಟ್ಟವಾಗಿ ಹರಡಿತು.

ಆತ್ಮ ಎಂದ ಬಳಿಕ ನಮ್ಮ ಭಕ್ತರು ಅವಕಾಶವನ್ನು ಕಳೆದು ಕೊಳ್ಳುತ್ತಾರೆಯೇ ಆಗಲೇ ಈ ಬೈಕಿಗೆ ದೈವಿ ಕಳೆಯನ್ನು ನೀಡಿ ಪೊಲೀಸರಿಗೆ ಇದನ್ನು ಕೊಂಡೊಯ್ಯಲು ಬಿಡದೆ ಅಲ್ಲಿಯೇ ಪೂಜೆಯನ್ನು ಸಲ್ಲಿಸಲು ಪ್ರಾರಂಭಿಸುತ್ತಾರೆ. ಕ್ರಮೇಣ ಈ ಸ್ಥಳ ಪೂಜಾ ಸ್ಥಳವಾಗಿ ಮಾರ್ಪಟ್ಟು ಕೆಲದಿನಗಳ ಬಳಿಕ ಈ ಬೈಕು ನಿಂತಲ್ಲೇ ಗುಡಿಯೊಂದನ್ನು ಕಟ್ಟಲಾಗುತ್ತದೆ. ಮಳೆಯಿಂದ ರಕ್ಷಿಸಲು ಇದಕ್ಕೆ ಗಾಜಿನ ಆಭರಣ ಒಂದನ್ನು ನಿರ್ಮಿಸಲಾಗುತ್ತಿದೆ. ಈ ಬೈಕಿಗೆ ಗೌರವ ಸಲ್ಲಿಸಳು ಈ ಹೆದ್ದಾರಿಯ ಮೂಲಕ ಹಾದು ಹೋಗುವ ಯಾವುದೇ ವಾಹನಗಳು ಈ ಸ್ಥಳದಲ್ಲಿ ಹಾರ್ನ್ ಕೂಡ ಒಡೆಯುವುದಿಲ್ಲ.

LEAVE A REPLY

Please enter your comment!
Please enter your name here