ಅಮೆಜಾನ್ ಮಾಡಿದ ಕೆಲ್ಸಕ್ಕೆ ಭಾರತೀಯರಿಗೆ ತುಂಬಾ ಸಹಾಯ ಆಗಿದೆ

0
507

ಅಮೆಜಾನ್ ಸಂಸ್ಥೆ ಎಂಬುದು ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಇಡೀ ಪ್ರಪಂಚದಲ್ಲೇ ದೈತ್ಯ ಸ್ಥಾನವನ್ನು ಹೊಂದಿರುವ ಅಮೆಜಾನ್ ಸಂಸ್ಥೆ ಸಾವಿರಾರು ಜನಕ್ಕೆ ಪರೋಕ್ಷವಾಗಿ ಮತ್ತು ನೇರವಾಗಿ ನೆರವನ್ನು ಒದಗಿಸಿದೆ. ಇದರಿಂದ ಸಾವಿರಾರು ಜನಕ್ಕೆ ಉದ್ಯೋಗ ಸೃಷ್ಟಿಯಾಗಿದೆ. ನೀವು ಒಮ್ಮೆಯಾದರೂ ಅಮೆಜಾನ್ ನಲ್ಲಿ ಖರೀದಿ ಮಾಡಿರುತ್ತೀರಿ. ಸಾಕಷ್ಟು ಜನ ಆನ್ಲೈನ್ ಶಾಪಿಂಗ್ ಅಂದರೆ ಹೆದರುವ ಕಾಲವೊಂದಿತ್ತು ಆದರೆ ಈಗ ಕಾಲ ಬದಲಾಗಿದೆ. ಅಮೆಜಾನ್ ಫ್ಲಿಪ್ ಕಾರ್ಟ್ ಸ್ನಾಪಡಿಲ್ ಹೀಗೆ ಹತ್ತು ಹಲವು ಆನ್ಲೈನ್ ಕಂಪನಿಗಳು ಇದೀಗ ನಮ್ಮ ದೇಶದಲ್ಲಿ ತನ್ನದೆ ಅದ ಪ್ರಾಬಲ್ಯವನ್ನು ಹೊಂದಿದೆ. ಇತ್ತೀಚೆಗೆ ಅಮೆಜಾನ್ ಅವರು ಮಾಡಿರುವ ಕೆಲಸ ನಿಜಕ್ಕೂ ನಮ್ಮ ದೇಹಕ್ಕೆ ಶ್ಲಾಘನೀಯ ಎನ್ನಬಹುದು.

ಅಮೆಜಾನ್ ಕಂಪೆನಿ ನಮ್ಮ ದೇಹದ್ದು ಅಲ್ಲದೇ ಆಗಿದ್ದರೂ ಸಹ ಅದು ನಮ್ಮ ದೇಶಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ಅದು ಏನಪ್ಪಾ ಅಂತಂದರೆ ನಮ್ಮ ಭಾರತೀಯ ಉತ್ಪನ್ನಗಳನ್ನು ಅಮೆಜಾನ್ ಕಂಪೆನಿ ವಿದೇಶಗಳಿಗೆ ಮಾರಾಟ ಮಾಡುತ್ತಿದೆ. ಇದು ನಮ್ಮ ಭಾರತದಲ್ಲಿ ವ್ಯಾಪಾರ ಮಾಡುವ ಸಣ್ಣ ಪುಟ್ಟ ವ್ಯಾಪಾರಿಗಳು ಮತ್ತು ಇನ್ನಿತರ ಕಂಪನಿಯ ದೇಶೀ ವಸ್ತುಗಳಿಗೆ ಭಾರೀ ಬೇಡಿಕೆ ಬಂದಿದೆಯಂತೆ. ಅದರಲ್ಲೂ ವಿದೇಶಿಗರು ನಮ್ಮ ದೇಶದ ಉತ್ಪನ್ನಗಳನ್ನು ತುಂಬಾ ಇಷ್ಟ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡು ಕೊಳ್ಳುತ್ತಿದ್ದಾರಂತೆ. ಈ ಮುಂಚೆ ಭಾರತದ ಉತ್ಪನ್ನಗಳಿಗೆ ಅಷ್ಟಾಗಿ ಬೇಡಿಕೆ ಇರಲಿಲ್ಲ. ಯಾವುದೇ ಸೂಕ್ತ ಮಾರುಕಟ್ಟೆ ಎಂಬುದು ಸಹ ಇರಲಿಲ್ಲ. ಆದರೆ ಅಮೆಜಾನ್ ಇದಕ್ಕೆ ಸೇತುವೆಯಾಗಿ ನಿಂತಿದೆ. ವಿದೇಶದಲ್ಲಿರುವ ಜನ ನಮ್ಮ ಭಾರತದ ಉತ್ಪನ್ನಗಳನ್ನು ಹೆಚ್ಚಿಗೆ ಖರೀದಿ ಮಾಡುತ್ತಿದ್ದಾರಂತೆ. ಇದನ್ನು ಸ್ವತಃ ಅಮೆಜಾನ್ ನ ಸಿಇಓ ಅವರೇ ಒಂದು ಮುಖ್ಯ ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.

ಅದರಲ್ಲಿ ಮುಖ್ಯ ಸಾಲಿನಲ್ಲಿ ನಿಲ್ಲುವ ಉತ್ಪನ್ನ ಯಾವುದೆಂದರೆ ಚಂದ್ರಿಕ್ ಆಯುರ್ವೇದ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಮಾನ್ಯತೆ ದೊರೆತಿದೆಯಂತೆ. ಅವರು ಹೆಚ್ಚಿನ ಸಂಖ್ಯೆಯಲ್ಲಿ ಅವನ್ನು ಖರೀದಿ ಮಾಡುತ್ತಾ ಇದ್ದಾರಂತೆ. ಉದಾಹರಣೆಗೆ ನಮ್ಮ ಚಂದ್ರಿಕಾ ಸೋಪು ಮೆಡಿಮಿಕ್ಸ್ ಹಾಗೂ ಮೈಸೂರು ಸ್ಯಾಂಡಲ್ ಕಂಪೆನಿಯ ಎಲ್ಲಾ ಉತ್ಪನ್ನಗಳಿಗೆ ಅತಿಯಾದ ಬೇಡಿಕೆಯಿದೆಯಂತೆ. ಹಾಗೆ ಚೆನ್ನೈ ನಲ್ಲಿ ತಯಾರಾಗುವ ಕೆಲವು ಬೆಡ್ ಶೀಟ್ ಗಳು ಅಲ್ಲಿ ಭಾರೀ ಬೇಡಿಕೆಯಾಗಿದೆಯಂತೆ. ಹಾಗೆ ಇತ್ತೀಚೆಗೆ ಅಮೆಜಾನ್ ಈ ಒಂದು ವ್ಯಾಪಾರವನ್ನು ಹೆಚ್ಚಿಸಲು ಐವತ್ತು ಸಾವಿರ ಚಿಲ್ಲರೆ ಮಾರಾಟಗಾರರಿಗೆ ನಮ್ಮ ಭಾರತದ ಉತ್ಪನ್ನಗಳನ್ನು ರಫ್ತು ಮಾಡುವ ಯೋಜನೆಯನ್ನು ಹೊಂದಿದೆಯಂತೆ.

ಸದ್ಯಕ್ಕೆ ನೂರ ನಲವತ್ತು ದಶಲಕ್ಷ ಡಾಲರ್ ಗಳ ಉತ್ಪನ್ನಗಳನ್ನು ನಾವು ಅಮೆಜಾನ್ ಮುಖಾಂತರ ವಿದೇಶಗಳಿಗೆ ರಪ್ತು ಮಾಡುತ್ತಿದ್ದೇವೆ. ಆದರೆ ತಿಂಗಳು ಕಳೆದಂತೆ ವರದಿ ಅಂಶಗಳ ಪ್ರಕಾರ ಇದು ದುಪ್ಪಟ್ಟಾಗುವ ಸಾಧ್ಯತೆ ಇದೆಯೆಂದು ಹೇಳುತ್ತಾರೆ. ಇದು ಅಮೆಜಾನ್ ಸಣ್ಣ ಕೈಗಾರಿಗೆ ನೀಡಿರುವ ಅತ್ಯಂತ ದೊಡ್ಡ ಕೊಡುಗೆಯಾಗಿದೆ. ಇದಿಷ್ಟೇಯಲ್ಲದೆ ಸಣ್ಣ ಪುಟ್ಟ ಕೈಗಾರಿಕಾ ಸಂಸ್ಥೆಗಳು ತಯಾರು ಮಾಡುವ ಹಲವು ಉತ್ಪನ್ನಗಳು ಭಾರತದಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತದೆ. ಈ ಉತ್ಪನ್ನಗಳನ್ನು ವಿದೇಶಗಳಿಗೆ ಡಾಲರ್ ಲೆಕ್ಕಾಚಾರದೊಂದಿಗೆ ನಾವು ಅವರಿಗೆ ರಪ್ತು ಮಾಡುವಾಗ ಹೆಚ್ಚಿನ ಬೆಲೆಗೆ ವ್ಯಾಪರವಾಗುತ್ತದೆ. ಇದು ಇಲ್ಲಿನ ದೇಸಿ ಮಾರುಕಟ್ಟೆಗೆ ಮತ್ತು ಸಣ್ಣ ಕೈಗಾರಿಕಾ ಉದ್ಯಮ ನಡೆಸುತ್ತಿರುವ ಜನಕ್ಕೆ ಅತೀ ಹೆಚ್ಚಿನ ಲಾಭ ನೀಡಿದಂತಾಗಿದೆ.

LEAVE A REPLY

Please enter your comment!
Please enter your name here