ವಿಜಯವಾಡ ಕನಕ ದುರ್ಗಮ್ಮ ತಾಯಿಯ ಪವಾಡಗಳು

0
697

ವಿಜಯವಾಡ ಕನಕ ದುರ್ಗಮ್ಮ ತಾಯಿಯು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾದ ಕ್ಷೇತ್ರಗಳಲ್ಲಿ ಇದು ಒಂದು. ಅಖಿಲಾಂಡ ಕೋಟಿ ಬ್ರಹ್ಮಾಂಡ ಸ್ವರೂಪಿಣಿಯಾಗಿ ವಿಜಯವಾಡದ ಇಂದ್ರಕೀಲಾದ್ರಿಯಲ್ಲಿ ನೆಲೆಸಿರುವ ಭಕ್ತರ ಅಭಿಷ್ಟೇಯನ್ನು ನೆರವೇರಿಸುತ್ತಿರುವ ಅಮ್ಮನಿಗಿಂತ ಅಮ್ಮನಾಗಿ ಸಲುಹುತ್ತಿರುವ ಮುಕ್ಕೋಟಿ ದೇವತೆಗಳ ತಾಯಿಯಾದ ಆದಿಪರಾಶಕ್ತಿ ಕನಕ ದುರ್ಗಾ ತಾಯಿ. ಈ ದೇವಾಲಯದಲ್ಲಿ ಅಮ್ಮನವರು ಸ್ವಯಂಬುವಾಗಿ ನಿಂತಿದ್ದಾಳೆ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಶ್ರೀ ಶಕ್ತಿ ಪೀಠಗಳಲ್ಲಿ ಇದು ಒಂದು. ಒಂದು ಸಾರಿ ಈ ಕ್ಷೇತ್ರದ ವಿಶೇಷತೆಗಳನ್ನು ತಿಳಿದುಕೊಳ್ಳೋಣ.

ಸ್ಥಳದ ಇತಿಹಾಸ ಪುರಾಣ. ಪೂರ್ವದಲ್ಲಿ ಕೀಲು ಎಂಬ ಯಕ್ಷನು ಕೃಷ್ಣಾ ನದಿ ತೀರದಲ್ಲಿ ದುರ್ಗಾದೇವಿಗಾಗಿ ಘೋರವಾದ ತಪಸ್ಸನ್ನು ಮಾಡಿದನು. ಇವನ ತಪಸ್ಸಿಗೆ ಅಮ್ಮನವರು ಮೆಚ್ಚಿ ವರವನ್ನು ಕೇಳು ಎನ್ನಲು. ಅಮ್ಮ ನೀನು ಯಾವಾಗಲೂ ನನ್ನ ಹೃದಯದಲ್ಲಿ ನೆಲೆಸಿರಬೇಕು ಬೇಕು ಎಂದು ಕೇಳುತ್ತಾನೆ. ಇದನ್ನು ಆಲಿಸಿದ ಅಮ್ಮ ಮುಗುಳ್ನಗುತ್ತಾ ಕೀಲ ಪವಿತ್ರವಾದ ಕೃಷ್ಣಾ ನದಿ ತೀರದಲ್ಲಿ ಪರ್ವತ ರೂಪದಲ್ಲಿ ನೆಲೆಸು ನಾನು ಕೃತ ಯುಗದಲ್ಲಿ ರಾಕ್ಷಸ ಸಂಹಾರದ ನಂತರ ನಿನ್ನ ಕೋರಿಕೆಯನ್ನು ನೆರವೇರಿಸುತ್ತೇನೆ ಎಂದು ಮಾಯವಾಗುತ್ತಾಳೆ. ಕೀಲನು ಪರ್ವತದ ರೂಪದಲ್ಲಿ ಅಮ್ಮನ ಬರುವಿಕೆಗೆ ಕಾಯುತ್ತಾನೆ. ಲೋಕಗಳನ್ನು ಕಬಳಿಸುತ್ತಿದ್ದ ಮಹಿಷಾಸುರನನ್ನು ಮರ್ದಿಸಿ ಕೀಲನಿಗೆ ಕೊಟ್ಟ ಮಾತಿನ ಪ್ರಕಾರ ಮಹಿಶಾಸುರ ಮರ್ದಿನೀ ರೂಪದಲ್ಲಿ ಕೀಲಾದ್ರಿಯಲ್ಲಿ ನೆಲೆಸುತ್ತಾಳೆ. ಪ್ರತಿದಿನ ಇಂದ್ರನ ಬಳಗವೆಲ್ಲ ಬಂದು ದೇವಿಯನ್ನು ಪೂಜಿಸುತ್ತಿದ್ದರಿಂದ ಇಂದ್ರಕೀಲಾದ್ರಿ ಎಂದು ಪ್ರಸಿದ್ಧಿಯಾಗಿದೆ. ಅಮ್ಮನವರು ಕನಕವರ್ಣ ಶೋಭಿತೆಯಾಗಿರುವುದರಿಂದ ಅಮ್ಮನವರಿಗೆ ಕನಕ ದುರ್ಗಾ ಎಂದು ಹೆಸರು ಶಾಶ್ವತವಾಗಿದೆ. ತದನಂತರ ಇಂದ್ರಕೀಲಾದ್ರಿಯಲ್ಲಿ ಪರಮೇಶ್ವರನನ್ನು ಪ್ರತಿಷ್ಠಾಪಿಸುವ ಸಲುವಾಗಿ ಬ್ರಹ್ಮದೇವರು ಶಿವಾನುಗ್ರಹದಿಂದ ಶತಾಶ್ವಮೇಧ ಯಾಗವನ್ನು ಮಾಡುತ್ತಾನೆ. ಇದರಿಂದ ತೃಪ್ತಿಯಾದ ಶಿವನು ಇಲ್ಲಿ ಜ್ಯೋತಿರ್ಲಿಂಗ ಸ್ವರೂಪದಲ್ಲಿ ನೆಲೆಸುತ್ತಾನೆ.

ನೆಲೆಸಿದ ಪರಮೇಶ್ವರನನ್ನು ಮಲ್ಲಿ ಕದಂಬ ಹೂಗಳಿಂದ ಪೂಜಿಸುತ್ತಾನೆ. ಈ ಮಲ್ಲಿ ಕದಂಬ ಹೂಗಳಿಂದ ಪೂಜಿಸಿದ್ದರಿಂದ ಶಿವನಿಗೆ ಮಲ್ಲಿಕಾರ್ಜುನ ಎಂದು ಹೆಸರು ಬಂದಿದೆ. ಎಂದು ಸ್ಥಳಪುರಾಣಗಳಲ್ಲಿ ಹೇಳಲಾಗಿದೆ. ಇನ್ನೊಂದು ಪುರಾಣದ ಪ್ರಕಾರ ದ್ವಾಪರಯುಗದಲ್ಲಿ ಅರ್ಜುನನು ಪಾಶುಪತಾಸ್ತ್ರಕ್ಕೋಸ್ಕರ ಇಂದ್ರಕೀಲಾದ್ರಿಯ ಮೇಲೆ ಘೋರ ತಪಸ್ಸು ಮಾಡಲು ಅರ್ಜುನನನ್ನು ಪರೀಕ್ಷೆ ಮಾಡಲು ಶಿವನು ಕಿರಾತಕನ ವೇಷದಾರಿಯಾಗಿ ಬಂದು ಅರ್ಜುನನ ಜೊತೆ ಮಲ್ಲ ಯುದ್ಧವನ್ನು ಮಾಡಿ ಅರ್ಜುನನ ಭಕ್ತಿಯನ್ನು ಮೆಚ್ಚಿ ಪಾಶುಪತಾಸ್ತ್ರವನ್ನು ಕರುಣಿಸುತ್ತಾನೆ. ಸ್ವಾಮಿ ಇಲ್ಲಿ ಮಲ್ಲ ಯುದ್ಧವನ್ನು ಮಾಡಿದ್ದರಿಂದ ಮಲ್ಲಿಕಾರ್ಜುನ ಎಂದು ಕರೆಯಲಾಗುತ್ತದೆ. ಈ ಕ್ಷೇತ್ರವನ್ನು ದರ್ಶನ ಮಾಡಿದ ಜಗದ್ಗುರು ಆದಿ ಶಂಕರಾಚಾರ್ಯರು ಇಲ್ಲಿ ಜ್ಯೋತಿರ್ಲಿಂಗ ಅದೃಶ್ಯವಾಗಿ ಇರುವುದನ್ನು ಗಮನಿಸಿ ಅಮ್ಮನವರ ದೇವಾಲಯದ ಉತ್ತರ ಭಾಗದಲ್ಲಿ ಮಲ್ಲಿಕಾರ್ಜುನ ದೇವಾಲಯವನ್ನು ಪುನರ್ ಪ್ರತಿಷ್ಠಾಪನೆ ಮಾಡಿದರು.

ತುಂಬಾ ರೌದ್ರಾವತಾರದಲ್ಲಿ ಇದ್ದ ಅಮ್ಮನವರನ್ನು ಗರ್ಭಗುಡಿಯಲ್ಲಿ ಶ್ರೀಚಕ್ರ ಪ್ರತಿಷ್ಠಾಪನೆ ಮಾಡಿ ಅಮ್ಮನವರನ್ನು ಶಾಂತಿ ಸ್ವರೂಪ ಬರುವ ಹಾಗೆ ಮಾಡಿದರು. ಅಲ್ಲಿನಿಂದ ಅಮ್ಮನವರು ತುಂಬಾ ಶಾಂತ ಸ್ವರೂಪದಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ ಇಲ್ಲಿ ಮತ್ತೊಂದು ವಿಶೇಷವೆಂದರೆ ಸ್ವಾಮಿಯವರ ದಕ್ಷಿಣ ದಿಕ್ಕಿನಲ್ಲಿ ಅಮ್ಮನವರು ನೆಲೆಸಿದ್ದಾರೆ. ಕನಕ ದುರ್ಗಮ್ಮನವರಿಗೆ ತುಂಬಾ ಪ್ರೀತಿಯಾದಂತಹ ನವರಾತ್ರಿ ಉತ್ಸವಗಳು ಈ ಸಮಯದಲ್ಲಿ ಅಮ್ಮನವರನ್ನು ಪೂಜೆ ಮಾಡಿದರೆ ಸಕಲ ಶುಭ ಫಲಗಳನ್ನು ಪಡೆಯಬಹುದು. ಈ ಒಂಬತ್ತು ದಿನಗಳು ಅಮ್ಮನವರು ವಿವಿಧ ಅಲಂಕಾರಗಳಲ್ಲಿ ದರ್ಶನ ನೀಡುತ್ತಾಳೆ. ಈ ಲೇಖನವನ್ನು ಶೇರ್ ಮಾಡಿ. ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

LEAVE A REPLY

Please enter your comment!
Please enter your name here