ಕೇರಳದ ಪದ್ಮನಾಭ ದೇವಾಲಯದ ಮಿಸ್ಟರಿ ಕೇಳಿದರೆ ನಿಮಗೆ ಆಶ್ಚರ್ಯ ಆಗುತ್ತೆ.

0
643

ಕೇರಳದ ಪದ್ಮನಾಭ ಸ್ವಾಮಿ ದೇವಾಲಯದ ಬಗ್ಗೆ ಈ ಪ್ರಪಂಚಕ್ಕೆ ಗೊತ್ತು ಏಕೆ ಎಂದರೆ ಅಲ್ಲಿ ಸಿಕ್ಕ ನಿಧಿ ಇಂದ. ಈ ಲೇಖನದಲ್ಲಿ ನಾವು ಪದ್ಮನಾಭ ದೇವಸ್ಥಾನದ ಇತಿಹಾಸ ಮತ್ತು ಮಿಸ್ಟರಿ ಬಗ್ಗೆ ತಿಳಿದುಕೊಳ್ಳೋಣ. ಕೇರಳ ರಾಜ್ಯದ ತಿರುವನಂತಪುರ ದಲ್ಲಿರುವ ಪದ್ಮನಾಭ ಸ್ವಾಮಿ ದೇವಾಲಯ ದೇಶದ ಅತೀ ಪುರಾಣಗಳ ದೇವಾಲಯ ಗಳಲ್ಲಿ ಒಂದು. ಇದರಲ್ಲಿ ಆಚಾರ್ಯ ಏನು ಅಂದರೆ ಈ ದೇವಾಲಯವನ್ನು ನಿರ್ಮಾಣ ಮಾಡಿದ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಆದರೆ 500ಬಿಸಿ ಇಂದ 300 ಎಡಿ ಮಧ್ಯದಲ್ಲಿ ಬಂದ ಸಾಹಿತ್ಯಗಳಲ್ಲಿ ಈ ದೇವಾಲಯದ ಉಲ್ಲೇಖ ಗಳಿವೆ. ಒಂಬತ್ತನೆಯ ಶತಮಾನದ ಕವಿ ನಮಲ್ವರ್ ತನ್ನ ಕವನಗಳಲ್ಲಿ ಈ ದೇವಾಲಯದ ಬಗ್ಗೆ ತುಂಬಾ ಅದ್ಬುತವಾಗಿ ಬರೆದಿದ್ದಾರೆ ಅಂತೆ ಆಗಿನ ಕಾಲದಲ್ಲಿ ಈ ದೇವಾಲಯವನ್ನು ದೇವಾಲಯದ ಹತ್ತಿರ ಇರುವ ಕೆಲವು ದೇವಸ್ಥಾನ ಗಳನ್ನೂ ಶುದ್ಧ ಬಂಗಾರ ಇಂದ ನಿರ್ಮಾಣ ಮಾಡುವುದರಿಂದ ಈ ದೇವಾಲಯವನ್ನು ಬಂಗಾರದ ದೇವಾಲಯ ಎಂದು ಕೂಡ ಕರೆಯುತ್ತಾರೆ. ತಿರುವಕೂರ್ ರಾಜ ಕುಟದ ಆಳ್ವಿಕೆಯಲ್ಲಿ ಇದ್ದ ಈ ದೇವಸ್ಥಾನ ಮಹಾ ವಿಷ್ಣುವನ್ನು ಪೂಜಿಸುವ 108 ದಿವ್ಯ ದೇವಾಲಯಗಳಲ್ಲಿ ಒಂದು.

ಈ ದೇವಾಲಯದಲ್ಲಿ ಇರುವ 6 ಗ್ರೌಂಡ್ ಫ್ಲೋರ್ ಕೊಠಡಿಗಳು ಪ್ರಪಂಚವನ್ನು ತನ್ನ ಕಡೆ ಸೆಳೆಯುವಂತೆ ಮಾಡುತ್ತೆ 2011 ರಲ್ಲಿ ಸುಪ್ರೀಮ್ ಕೋರ್ಟ್ ಆದೇಶದಂತೆ ಈ 6 ಕೊಠಡಿಗಳನ್ನು ತೆರೆಯಲಾಗುತ್ತದೆ ಈ 6 ಕೊಠಡಿಗೆ ಎ ಬಿ ಸಿ ದಿ ಇ ಎಫ್ ಎಂದು ಹೆಸರಿಡುತ್ತಾರೆ ಆದರೆ ಈ 6 ಕೊಠಡಿಗಳಲ್ಲಿ ಬೀ ಕೊಠಡಿಯನ್ನು ಮಾತ್ರ ಓಪನ್ ಮಾಡಲಿಲ್ಲ ಉಳಿದ 5 ಕೊಠಡಿಗಳಲ್ಲಿ ಸಿಕ್ಕ ನಿಧಿ ಪ್ರಪಂಚವನ್ನೇ ಆಶ್ಚರ್ಯ ಪಡುವ ರೀತಿ ಮಾಡುತ್ತೆ. ಸಾವಿರಾರು ವಜ್ರ ವೈದುರ್ಯಗಳು ಚಿನ್ನದ ನಾಣ್ಯಗಳು ವಜ್ರದ ಕಿರೀಟ ಮುತ್ತು ರತ್ನಗಳು ಮೂರೂವರೆ ಅಡಿ ಮಹಾ ವಿಷ್ಣು ವಿಗ್ರಹ ರೋಮ್ ನೆಪೋಲಿಯನ್ ಕಾಲದ ನಾಣ್ಯ ಗಳು ಸಿಕ್ಕಿವೆ ಒಂದು ನಾಣ್ಯ ಎರಡು ಕೋಟಿಗಿಂತ ಹೆಚ್ಚು ಬೆಲೆಬಾಳುವ ವಸ್ತು ಅಂತೆ. ನಂತರ ಇದು ನಮ್ಮ ದೇಶದಲ್ಲೇ ಅತೀ ಹೆಚ್ಚು ಸಂಪತ್ತು ಇರುವ ದೇವಾಲಯ ಆಗಿ ಪ್ರಸಿದ್ದಿ ಆಗುತ್ತೆ.

ಇನ್ನು ಮಿಸ್ಟರಿ ಆಗಿ ಉಳಿದಿರುವ ಬೀ ಕೊಠಡಿ ಬಗ್ಗೆ ಹೇಳುವುದಾದರೆ ಈ ಕೊಠಡಿಗೆ ಉಳಿದ ಕೊಠಡಿ ರೀತಿ ಲಾಕ್ ವ್ಯವಸ್ಥೆ ಇಲ್ಲ ಚರಿತ್ರೆ ಎನ್ ಹೇಳುತ್ತೆ ಅಂದರೆ ಈ ಬೀ ಕೊಠಡಿ ಅನ್ನು ನಾಗ ಬಂಧ ದಿಂದ ಮುಚ್ಚಿ ಹಾಕಿದ್ದಾರೆ ಎಂದು ಹೇಳುತ್ತಾರೆ ಅಂದರೆ ಇದು ಯಾವುದೇ ಯಂತ್ರಗಳ ಸಹಾಯ ಇಲ್ಲದೆ ಮಂತ್ರಗಳ ಸಹಾಯದಿಂದ ಮುಚ್ಚಿರುವ ವಿಧಾನ ಇದು ತುಂಬಾ ಅಪಾಯ ಕೂಡಾ. ಈ ಬೀ ಕೊಠಡಿಯ ಬಾಗಿಲು ಮೇಲೆ ಎರಡು ನಾಗ ದೇವರುಗಳು ಈ ನಾಗ ಬಂಧ ಶಕ್ತಿ ಇಂದ ಈ ಕೊಠಡಿಯನ್ನು ರಕ್ಷಿಸುತ್ತವೆ ಎಂದು ಹೇಳುತ್ತಾರೆ. ತುಂಬಾ ಶಕ್ತಿಯುತವಾದ ಗರುಡ ಮಟ್ಟವನ್ನು ಉಪಯೋಗಿಸಿದಾಗ ಮಾತ್ರ ಈ ನಾಗ ಬಂಧ ಬಿಡುಗಡೆ ಆಗುತ್ತೆ ಅಂತೆ.

LEAVE A REPLY

Please enter your comment!
Please enter your name here