ನಾವು ಹೇಳುವ ಈ ವಸ್ತುಗಳಿಗೆ ಎಕ್ಸ್ ಪೈರಿ ಡೇಟ್ ಇಲ್ಲದೇ ಕೊನೇವರೆಗೂ ಬಳಸಬಹುದು ಒಮ್ಮೆ ಇಲ್ಲಿ ಓದಿ.

0
343

ಈಗಿನ ಕಾಲದಲ್ಲಿ ನಾವು ಬಳಸುವ ಸಣ್ಣ ಪುಟ್ಟ ದೊಡ್ಡ ಎಲ್ಲಾ ವಸ್ತುಗಳಿಂದ ಹಿಡಿದು ಸಂಬಂಧಗಳ ತನಕ ಎಲ್ಲದಕ್ಕೂ ಎಕ್ಸ್ ಪೈರಿ ಡೇಟ್ ಇದೆ ಅಂತಾರೆ ಜನ. ಆದರೆ ಜನ್ಮ ಪೂರ್ತಿ ಸಾಥ್ ಕೊಡುವ ಸಂಬಂಧ ಗಳಂತೆ ಅವಧಿ ಮುಗಿಯದ ಕೆಲವು ಆಹಾರ ಪದಾರ್ಥ ಗಳು ಇವೆ. ಹಾಗಾಗಿ ಮುಂದಿನ ಸಲ ಯಾವುದೋ ಪ್ಯಾಕ್ ಮೇಲೆ ಪ್ರಿಂಟ್ ಆಗಿರುವ ದಿನಾಂಕದ ಆಧಾರದ ಮೇಲೆ ಈ ವಸ್ತುಗಳ ಎಕ್ಸ್ ಪೈರೀ ಡೇಟ್ ಮುಗಿದಿದೆ ಎಂದು ಬಿಸಾಕುವ ಮೊದಲು ಯೋಚನೆ ಮಾಡಿ ಹಾಗಾದ್ರೆ ಅವಧಿ ಮುಗಿಯದ ಪದಾರ್ಥಗಳು ಯಾವ್ಯಾವುದು ಎಂದು ನೋಡೋಣ.

ಮೊದಲನೆಯದು ಜೇನು. ಶುದ್ಧ ಉತ್ತಮ ಕಲ್ಮಶ ಗಳಿಲ್ಲದ ಜೇನು ಆದರೆ ಬಣ್ಣ ಬದಲಾದರೂ ಹರಳುಗಳು ರಚನೆ ಆದರೂ ಅದಕ್ಕೆ ಕೊನೆಗಾಲ ಇಲ್ಲ. ಅಕ್ಕಿಗೆ ಧೂಳು ಹಿಡಿದರೂ ಬೂಸ್ಟ್ ಹಿಡಿದರೂ ಅಕ್ಕಿಯನ್ನು ತೊಳೆದು ಒಣಗಿಸಿ ವರ್ಷನು ಗಟ್ಟಲೆ ಬಳಸಬಹುದು ಆದರೆ ಅದರ ಪರಿಮಳ ಬದಲಾಗಿದೆ ರೂಪ ಬದಲಾಗಿದೆ ಎಂದು ಬಳಕೆ ಮಾಡಲ್ಲ ಅನ್ನುವವರಿಗೆ ನಾವೇನು ಹೇಳಲ್ಲ. ಮುಂದಿನದು ಬಿಳಿ ವಿನೈಗೇರ್. ಸಲಾಡ್ ಗಳಿಗೆ ರುಚಿ ನೀಡುವ ಈ ಪದಾರ್ಥ ನೂರು ವರ್ಷವೂ ಬಾಳುತ್ತೆ.

ಶುದ್ಧ ವೆನಿಲಾ ಎಕ್ಸ್ಟ್ರಾಕ್ಟ್. ವೆನಿಲಾ ಎಸ್ಸೆನ್ಸ್ ಬೆರಕೆ ಇಲ್ಲದೆ ಶುದ್ಧವಾಗಿದ್ದರೆ ಸ್ವಚ್ಛವಾಗಿ ಅದನ್ನ ಮಾಡಲಾಗಿ ಇದ್ದರೆ ಅದರ ಪರಿಮಳ ಮತ್ತು ರುಚಿ ಎಂದಿಗೂ ಬದಲಾಗುವುದಿಲ್ಲ. ಇನ್ನೊಂದು ಉಪ್ಪು. ನೀರು ಎಣ್ಣೆ ತಾಗಿಸದೆ ಅತೀವ ಶಾಖ ಇಂದ ದೂರ ಇಟ್ಟರೆ ಕಲ್ಲು ಉಪ್ಪು ಪುಡಿ ಉಪ್ಪು ಎಲ್ಲಾ ವರ್ಷಗಟ್ಟಲೆ ಹಾಳು ಆಗಲ್ಲ. ಈ ವಸ್ತು ಗಳಲ್ಲಿ ಕಾರ್ನ್ ಫ್ಲೋರ್ ಕೂಡ ಒಂದು. ಗಾಳಿ ಹೋಗದಂತೆ ಏರ್ ಟೈಟ್ ಡಬ್ಬದಲ್ಲಿ ಕಾರ್ನ್ ಸ್ಟಾರ್ಚ್ ಮುಚ್ಚಿ ಇಟ್ಟರೆ ಅದು ಎಂದಿಗೂ ಕೆಡುವುದಿಲ್ಲ. ಈ ಪುಡಿಯಲ್ಲಿ ಗಡ್ಡೆಗಳ ರಚನೆ ಆಗಬಹುದು ಆದರೆ ಅದರಿಂದ ಬಳಕೆಗೆ ಯಾವುದೇ ತೊಂದರೆ ಇಲ್ಲ.

ಸಕ್ಕರೆ ಬ್ಯಾಕ್ಟೀರಿಯಾದ ಬೆಳವಣಿಗೆ ಸಂಪೂರ್ಣ ಸಪೋರ್ಟ್ ಮಾಡದೇ ಇರುವುದರಿಂದ ಇದು ಹಾಳು ಆಗಲ್ಲ ಅಂದರೆ ನೀವು ಮುಚ್ಚಳ ತೆರೆದಿಟ್ಟ ಕಾರಣ ಇರುವೆಗಳು ಉಡಿ ಉಪ್ಪಟೆ ಗಳು ಅದರಲ್ಲಿ ಸೇರಿಕೊಳ್ಳದೆ ಇದ್ದರೆ. ಇನ್ಸ್ಟಂಟ್ ಕಾಫಿ ಪುಡಿ. ನೀವು ದೊಡ್ಡ ಪ್ರಮಾಣದಲ್ಲಿ ಇನ್ಸ್ಟಂಟ್ ಕಾಫಿ ಪುಡಿ ತಂದು ಇಟ್ಟಿದ್ದರೆ ಅದರಲ್ಲಿ ಫ್ರೀಜರ್ ನಲ್ಲಿ ಇಟ್ಟು ಮರೆತು ಬಿಟ್ಟಿದ್ದರೆ ಸರಿ ಮತ್ತೆ ನೆನಪಾದಾಗ ಅದು ಬಳಕೆಗೆ ಸಿದ್ಧವಾಗೆ ಇರುತ್ತೆ. ಹಾರ್ಡ್ ಲಿಕರ್. ನೀವು ಕಾಸ್ಟಲಿ ವಿಸ್ಕಿ ಹಾಲನ್ನು ನೀವು ಗಡಿಬಿಡಿಯಲ್ಲಿ ಮುಗಿಸಬೇಕಾಗಿಲ್ಲ. ಪ್ರತೀ ಬಳಕೆಯ ನಂತರ ಬಾಟಲ್ ಗಳನ್ನ ಸರಿಯಾಗಿ ಮುಚ್ಚಿ ಬೆಳಕಿಲ್ಲದ ತಂಪು ಸ್ಥಳದಲ್ಲಿ ಇಡಿ ದಶಕ ಗಳ ಕಾಲ ನೋ ಟೆನ್ಷನ್. ಕೊನೆಯದಾಗಿ ಮೇಪಲ್ ಸಿರಪ್. ಪಾಶ್ಚಾತ್ಯ ಸಂಸ್ಕೃತಿ ಇಂದ ಸಿಹಿ ತಿಂಡಿಗಳು ಡೆಸರ್ಟ್ ಗಳಿಗೆ ನಾವು ತೆಗೊಂಡಿರುವ ಮೇಪಲ್ ಸಿರಪ್ ಅನ್ನು ಫ್ರೀಜರ್ ನಲ್ಲಿ ಇಟ್ಟು ತುಂಬಾ ಸಮಯದ ವರೆಗೆ ಬಳಸಬಹುದು.

LEAVE A REPLY

Please enter your comment!
Please enter your name here