ನಿತ್ಯ ಚಮಚದಲ್ಲಿ ಊಟ ಮಾಡ್ತೀರ? ಹಾಗಾದ್ರೆ ಈ ಸಮಸ್ಯೆಗಳು ಬರೋದು ಗ್ಯಾರೆಂಟಿ

0
405

ಹಿಂದಿನ ಕಾಲದಲ್ಲಿ ಚಮಚ ಎಂಬುದರ ಬಳಕೆಯೇ ತುಂಬಾ ಕಡಿಮೆ ಇತ್ತು ಆದರೆ ಈಗ ಚಮಚದ ಬಳಕೆ ಹೆಚ್ಚಾಗಿದೇ ಅದರಲ್ಲೂ ಒಂದೊಂದು ಪ್ರದೇಶದಲ್ಲಿ ಒಂದು ಒಂದು ರೀತಿ ಇದೆ ಎಂದರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಆಹಾರ ಕ್ರಮಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ರುಚಿ ಸಂಸ್ಕೃತಿ ಪ್ರತಿಯೊಂದು ಕೂಡ ತುಂಬಾ ಭಿನ್ನವಾಗಿರುತ್ತವೆ. ಉದಾಹರಣೆಗೆ ಚೀನಾದವರು ಊಟ ಮಾಡಲು ಕಡ್ಡಿಗಳನ್ನು ಬಳಸುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಫೋರ್ಕ್ ಸ್ಪೂನ್‍ಗಳನ್ನು ಬಳಸುತ್ತಾರೆ. ಅಂದರೆ ಆಯಾ ದೇಶದ ಊಟದ ಪದ್ದತಿಯು ಆಯಾ ದೇಶದ ಸಂಸ್ಕೃತಿಯ ಪ್ರತಿಬಿಂಬವಾಗಿದೆ.

ಆದರೆ ನಮ್ಮ ಭಾರತ ದೇಶದಲ್ಲಿ ಕೈಯಲ್ಲಿ ಊಟ ಮಾಡುವುದು ಸಂಪ್ರದಾಯ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಕೈಯಿಂದ ಊಟ ಮಾಡುವುದೇ ಸಂಪ್ರದಾಯ ಇದರಿಂದ ನಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಅಡುಗೆಯ ರುಚಿಯನ್ನು ನಾಲಿಗೆಯಿಂದ ಮಾತ್ರವಲ್ಲದೇ ಕೈಯಿಂದಲೂ ಸ್ಪರ್ಶಿಸಿ ಸವಿಯುವುದು ಒಂದು ಉತ್ತಮ ರುಚಿಯನ್ನು ನೀಡುತ್ತದೆ. ನಮ್ಮ ಹಸ್ತಗಳಾಗಲಿ ಹಾಗೂ ಪಾದಗಳಾಗಲಿ ಪಂಚಭೂತಗಳ ಸಂಕೇತವಾಗಿದೆ ಪಂಚಭೂತಗಳೆಂದರೆ ಪೃಥ್ವಿ, ನೀರು, ತೇಜಸ್, ವಾಯು, ಆಕಾಶ ಇದರಲ್ಲಿ ನಮ್ಮ ಹೆಬ್ಬೆರಳು ಅಗ್ನಿಯ ಸಂಕೇತ ಜೊತೆಗೆ ಜೀರ್ಣಶಕ್ತಿಯ ಸಂಕೇತ ಇದು. ಅದಕ್ಕಾಗಿಯೇ ಚಿಕ್ಕ ಮಕ್ಕಳು ಹೆಬ್ಬಾರಳನ್ನು ಬಾಯಲ್ಲಿ ಇಟ್ಟುಕೊಂಡು ಚೀಪುತ್ತಾರೆ. ಇನ್ನು ತೋರು ಬೆರಳು ವಾಯುವನ್ನು ಸೂಚಿಸುತ್ತದೆ. ತರ್ಜನಿಯ ಬೆರಳು ಆಕಾಶ. ಅನಾಮಿಕ ಬೆರಳು ಪೃಥ್ವಿ. ಕಿರುಬೆರಳು ನೀರಿನ ಸಂಕೇತವಾಗಿದೆ.

ಹಾಗಾಗಿ ಕೈಯಿಂದ ಊಟ ಮಾಡಬೇಕು ಹಾಗಾದರೆ ಕೈಯಿಂದ ಊಟ ಮಾಡುವುದರಿಂದ ಏನೆಲ್ಲ ಲಾಭಗಳು ಗೊತ್ತೇ. ಕೈಯಲ್ಲಿ ಮಾಡುವ ಊಟದಿಂದ ಹೆಚ್ಚು ಸಂತಸ ಉಂಟು ಸಿಗುತ್ತದೆ ಜೊತೆಗೆ ಸ್ವಲ್ಪ ತಿಂದರು ತೃಪ್ತಿ ಸಿಗುತ್ತದೆ. ಕೈಯಲ್ಲಿ ಊಟ ಮಾಡುವುದರಿಂದ ನಮ್ಮ ಇಡೀ ಶರೀರ ಐದು ಬೆರಳು ಹಾಗೂ ಹಸ್ತಕ್ಕೆ ಹೋಲಿಸಲಾಗುತ್ತದೆ. ಅದರಲ್ಲಿ ಒಂದು ಶಕ್ತಿಯೂ ಕೂಡ ಅಡಗಿದೆ. ನಮ್ಮ ಕೈಯಿನ ಎಲ್ಲ ಬೆರಳುಗಳು ಪಂಚಭೂತಗಳಿಗೆ ಸಮನವಾಗಿರುವ ಕಾರಣ ನಾವು ಊಟ ಮಾಡುವಾಗ ಈ ಐದು ಬೆರಳುಗಳನ್ನು ಒಗ್ಗೂಡಿಸಿ ತಿನ್ನುತ್ತವೆ ಇದರಿಂದ ನಾವು ಸೇವಿಸುವ ಆಹಾರದ ಸ್ವಾದ ಉತ್ತಮ ಆಗಿರುತ್ತದೆ ಜೊತೆಗೆ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.

ಕೈಯಲ್ಲಿ ಊಟ ಮಾಡುವುದರಿಂದ ಬುದ್ದಿ ಶಕ್ತಿ ಕೂಡ ಹೆಚ್ಚುತ್ತದೆ. ಜೊತೆಗೆ ಕೈಯಲ್ಲಿ ಊಟ ಮಾಡುವುದರಿಂದ ಇಡೀ ದೇಹಕ್ಕೆ ಒಂದು ರೀತಿಯ ವ್ಯಾಯಾಮ ಸಿಗುತ್ತದೆ. ಹಾಗಾಗಿ ಸ್ಫೂನ್ ಅಲ್ಲಿ ಊಟ ಮಾಡುವ ಬದಲು ಕೈಯಲ್ಲಿ ಊಟ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಊಟದ ರುಚಿಯನ್ನು ಕೂಡ ಹೆಚ್ಚಿಸಿಕೊಳ್ಳಿ. ಸ್ಫೂನ್ ಅಲ್ಲಿ ಊಟ ಮಾಡುವುದನ್ನು ಬಿಟ್ಟು ಬಿಡಿ ಅವಶ್ಯಕತೆ ಇದ್ದಾಗ ಮಾತ್ರ ಬಳಸಿ ಸಾಕು. ಈ ಉಪಯುಕ್ತ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗೂ ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here