ಇದು ಪ್ರಪಂಚದಲ್ಲೇ ಅತೀ ಭಯಾನಕ ಸ್ಥಳ ಅಂತೆ

0
829

ಈ ಪ್ರಪಂಚದಲ್ಲಿ ಹಲವಾರು ರಮಣೀಯ ಸ್ಥಳಗಳಿವೆ. ಇಂತಹ ಸ್ಥಳಗಳಿಗೆ ಭೇಟಿ ನೀಡುವುದು ಎಲ್ಲರಿಗೂ ಇಷ್ಟದ ಸಂಗತಿ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಪ್ರಪಂಚದಲ್ಲಿ ಹಲವಾರು ರೋಚಕ ಮತ್ತು ಅತ್ಯಂತ ಭಯಾನಕ ಸ್ಥಳಗಳು ಇವೆ. ನೀವೇನಾದರೂ ಇಂತಹ ಸ್ಥಳಗಳಿಗೆ ಭೇಟಿ ಕೊಟ್ಟರೆ ಭಯಭೀತರಾಗುವುದು ಖಡಾಖಂಡಿತ. ಖಂಡಿತವಾಗಿಯೂ ಈ ಸ್ಥಳಗಳಲ್ಲಿ ಅಲೋಕಿಕ ಶಕ್ತಿಗಳು ಅಥವಾ ದೆವ್ವ ಭೂತಗಳ ಆವಾಸ ಇಲ್ಲ. ಆದರೂ ಈ ಸ್ಥಳಗಳು ಭಯಾನಕವಾಗಿವೆ. ಇಂದು ಈ ಲೇಖನದಲ್ಲಿ ಇಂತಹುದೇ ಕೆಲವೊಂದು ಭಯಾನಕ ಸ್ಥಳಗಳ ಬಗ್ಗೆ ಹೇಳಲಿದ್ದೇವೆ.

ದಿ ಕ್ಯಾಟಕಂಬ್ಸ್ ಆಫ್ ಪ್ಯಾರಿಸ್. ಪ್ರೇಮಿಗಳ ಸ್ವರ್ಗ ಎಂದು ಕರೆಯಲ್ಪಡುವ ಫ್ರಾನ್ಸ್ ನ ಈ ನಗರದ ತಳದಲ್ಲಿ ಪ್ರಪಂಚದ ಅತಿ ದೊಡ್ಡ ಸ್ಮಶಾನ ಒಂದಿದೆ. ಹೌದು ಪ್ಯಾರಿಸ್ ನಗರದ ಅಂಡರ್ ಗ್ರೌಂಡ್ ನಲ್ಲಿ 300 ಕಿಲೋಮೀಟರ್ಗಿಂತಲೂ ಅಧಿಕ ಜಾಗದಲ್ಲಿ ಹರಡಿರುವ ಈ ಸ್ಮಶಾನದ ಹೆಸರೇ ದಿ ಕ್ಯಾಟಕಂಬ್ಸ್. ಈ ಭೂಗತ ಸ್ಮಶಾನದಲ್ಲಿ 60 ಲಕ್ಷಕ್ಕಿಂತಲೂ ಹೆಚ್ಚಿನ ಜನರ ಕಳೆಬರಗಳಿವೆ ಅಂದರೆ ನಿಮಗೆ ಆಶ್ಚರ್ಯವಾಗಬಹುದು. 17ನೇ ಶತಮಾನದಲ್ಲಿ ಕ್ಯಾಟಕಂಬ್ಸ್ ಅಸ್ತಿತ್ವಕ್ಕೆ ಬಂದಿತ್ತು. ಆ ಸಮಯದಲ್ಲಿ ಪ್ಯಾರಿಸ್ ನ ಎಲ್ಲಾ ಸ್ಮಶಾನಗಳು ಮನುಷ್ಯರ ಸಮಾಧಿಗಳಿಂದ ತುಂಬಿಕೊಂಡಿತ್ತು. ಮತ್ತು ಹೊಸ ಸಮಾಧಿಗಳಿಗಾಗಿ ಸ್ಥಳದ ಸಮಸ್ಯೆ ಎದುರಾಗಿತ್ತು. ವರ್ಷಗಳು ಕಳೆದಂತೆ ಈ ಸಮಸ್ಯೆ ಗಂಭೀರವಾಗತೊಡಗಿದ್ದರಿಂದ ಈ ಸಮಸ್ಯೆಗಳಿಗೆ ಉಪಾಯವೊಂದನ್ನು ಹುಡುಕಲಾಯಿತು. ನಗರ ನಿರ್ಮಾಣ ಕಾರ್ಯಕ್ಕೆ ಪ್ಯಾರಿಸ್ ನ ಅಂಡರ್ ಗ್ರೌಂಡ್ ನಲ್ಲಿ ಮೊದಲೇ ಕೊರೆದಿಟ್ಟಿದ್ದ ಸುರಂಗ ಮಾರ್ಗದೊಳಗೆ ಪ್ಯಾರಿಸ್ ನ ಎಲ್ಲಾ ಸ್ಮಶಾನಗಳಲ್ಲಿದ್ದ ಶವಗಳನ್ನು ಶಿಫ್ಟ್ ಮಾಡಲಾಯಿತು. ಇವುಗಳಲ್ಲಿ ಶವಗಳ ಅಸ್ತಿಪಂಜರಗಳೇ ಹೆಚ್ಚಾಗಿತ್ತು. ಪ್ಯಾರಿಸ್ ನ ಈ ಎಲ್ಲಾ ಸ್ಮಶಾನಗಳಲ್ಲಿದ ಅಸ್ಥಿಪಂಜರಗಳನ್ನು ಸುರಂಗಕ್ಕೆ ಶಿಫ್ಟ್ ಮಾಡಲು ಬರೋಬ್ಬರಿ 12 ವರ್ಷಗಳೇ ತಗುಲಿದ್ದವು.

ಈ ಮಾನವ ಅಸ್ತಿಪಂಜರಗಳೆಲ್ಲವನ್ನೂ ಸಿಸ್ಟಮ್ಯಾಟಿಕ್ ಆಗಿ ಜೋಡಿಸಲಾಗಿತ್ತು. ನಂತರ ಇವೆಲ್ಲವನ್ನು ಗೋಡೆಗಳ ಮೇಲೆ ಅಲಂಕರಿಸಿಡಲಾಯಿತು. ಕೊನೆಗೆ 1840ರಲ್ಲಿ ಈ ಅಸ್ತಿಪಂಜರದ ಸಂಗ್ರಹದ ಸುರಂಗವನ್ನು ಮ್ಯೂಸಿಯಂ ರೂಪದಲ್ಲಿ ಪ್ರವಾಸಿಗಳಿಗಾಗಿ ತೆರೆದಿಡಲಾಯಿತು. ಇಂದು ಈ ಸ್ಥಳ ಒಂದು ಬಹು ಚರ್ಚಿತ ಪ್ರವಾಸಿ ತಾಣವಾಗಿದೆ. ನಿಮಗೇನಾದರೂ ಸತ್ತ ಜನರ ಕಳೆಬರಹಗಳ ನಡುವೆ ನಡೆದಾಡುವ ಧೈರ್ಯವಿದ್ದರೆ ಖಂಡಿತಾ ಇಲ್ಲಿಗೆ ಒಮ್ಮೆ ಬೇಟಿ ಕೊಡಿ. ಆದರೆ ಗ್ಯೆಡ್ ನ ಜೊತೆ ಒಳಗೆ ಹೋಗಲು ಮರೆಯಬೇಡಿ. ಏಕೆಂದರೆ 300 ಕಿಲೋಮೀಟರ್ ಗಳಿಗಿಂತಲೂ ಜಾಸ್ತಿ ಜಾಗದಲ್ಲಿ ಹರಡಿಕೊಂಡಿರುವ ಈ ಸುರಂಗದ ಒಳಗೆ ನೀವು ಒಬ್ಬಂಟಿಯಾಗಿ ಹೋದರೆ ಹಲವಾರು ತಿರುವುಗಳಿಂದ ಕೂಡಿದ ಸುರಂಗದಲ್ಲಿ ನೀವು ಕಳೆದು ಹೋಗುವ ಸಾಧ್ಯತೆಯೂ ಇದೆ.

ಏಕೆಂದರೆ ಫಿಲ್ಬರ್ಟ್ ಎಂಬ ವ್ಯಕ್ತಿ ಎಂಬ ಈ ಕ್ಯಾಟಕಂಬ್ಸ್ ಸುರಂಗದೊಳಗೆ ಹೋದವ ನಾಪತ್ತೆಯಾಗಿದ್ದ. ಬಳಿಕ ಹನ್ನೊಂದು ವರ್ಷಗಳ ನಂತರ ಆತನ ಶವ ಅದೇ ಸುರಂಗದಲ್ಲಿ ಪತ್ತೆಯಾಗಿತ್ತು. ಇಲ್ಲಿ ವಿಚಿತ್ರವೇನೆಂದರೆ ಫಿಲ್ಬರ್ಟ್ ನ ಶವ ಸಿಕ್ಕ ಸ್ಥಳದ ಸ್ವಲ್ಪವೇ ದೂರದಲ್ಲಿ ಸುರಂಗದಿಂದ ಹೊರಗಡೆ ಹೋಗುವ ದಾರಿ ಇತ್ತು. ಸ್ಯೆಂಟ್ ಜಾರ್ಜ್ ಚರ್ಚ್ ಝಿಕ್ ರಿಪಬ್ಲಿಕ್. ನಿಮಗೇನಾದರೂ ಸಮಸ್ಯೆ ಭಯಗಳಿದ್ದರೆ ನೀವು ಖಂಡಿತವಾಗಿಯೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತೀರಿ ಅಲ್ಲಿ ನಿಮ್ಮ ಮನಸ್ಸಿಗೆ ಶಾಂತಿ ಸಿಕ್ಕಿ ನಿಮ್ಮ ಭಯ ದುಗುಡಗಳೆಲ್ಲವೂ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ. ಆದರೆ ನಿಮ್ಮ ಭಯನಿವಾರಣೆಗೆ ಹೋದ ಆ ಧಾರ್ಮಿಕ ಸ್ಥಳದ ವಾತಾವರಣವೇ ನಿಮ್ಮನ್ನು ಭಯಗೊಳಿಸಿದರೆ ನಿಮಗೆ ಹೇಗಾಗಬಹುದು. ಹೌದು ಇಂತಹುದೇ ಒಂದು ಚರ್ಚ್ ಝೆಕ್ ರಿಪಬ್ಲಿಕ್ ನಲ್ಲಿದೆ.

1960ರಲ್ಲಿ ಈ ಚರ್ಚಿನ ಮೇಲ್ಚಾವಣಿ ತುಂಡಾಗಿ ಕೆಳಗೆ ಬಿದ್ದಿತ್ತು. ಅಲ್ಲಿಂದಲೇ ಜನರು ಈ ಚರ್ಚ್ ಶಾಪಗ್ರಸ್ತ ಆಗಿದೆ ಎಂದು ನಂಬಿದ್ದರು. ನಂತರ ಜನರು ಇಲ್ಲಿಗೆ ಬರುವುದನ್ನೇ ನಿಲ್ಲಿಸಿದರು. ಅಲ್ಲಿಂದ ಈ ಚರ್ಚ್ ನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಾ ಹೋಯಿತು. ಆ ನಂತರ ಮುಂದಿನ ದಿನಗಳಲ್ಲಿ ಜನರನ್ನು ಈ ಚರ್ಚ್ ನತ್ತ ಸೆಳೆಯಲು ಜೇಕಬ್ ಎಂಬಾತನಿಗೆ ಈ ಚರ್ಚ್ ನ ರೀ ಇನ್ನೊವೇಷನ್ ಕೆಲಸವನ್ನು ವಹಿಸಿಕೊಡಲಾಯಿತು. ಜನರು ಈ ಚರ್ಚ್ ಶಾಪಿತವಾಗಿದೆ ಎಂದು ತಿಳಿದಿರುವ ವಿಚಾರ ಜೇಕಬ್ ಗೆ ಗೊತ್ತಿತ್ತು. ಅದಕ್ಕಾಗಿ ಜನರನ್ನು ಈ ಚರ್ಚಿನತ್ತ ಪುನಃ ಸೆಳೆಯಲು ಜೇಕಬ್ ಮಾಡಿದ ಕೆಲಸ ತುಂಬಾ ವಿಚಿತ್ರವಾಗಿತ್ತು. ಜೇಕಬ್ ಚರ್ಚ್ ಒಳಗೆ ಸಿಮೆಂಟ್ ಪ್ಲಾಸ್ಟಿಕ್ ನಿಂದ ಮಾಡಿದ ದೆವ್ವ ಅಥವಾ ಭೂತದ ರೀತಿಯ ಆಕೃತಿಗಳನ್ನು ರಚಿಸುತ್ತಾನೆ. ಹೀಗೆ ಜೇಕಬ್ ಈ ಚರ್ಚ್ ಗೆ ಒಂದು ಭಯಾನಕ ಸ್ವರೂಪ ಕೊಟ್ಟುಬಿಡುತ್ತಾನೆ. ಅಲ್ಲಿಂದ ಈ ಚರ್ಚ್ ಪ್ರವಾಸಿಗಳಿಗೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಅಲ್ಲಿಂದ ಪ್ರತಿವರ್ಷ ಸಾವಿರಾರು ಪ್ರವಾಸಿಗರು ಈ ಚರ್ಚ್ ಗೆ ಬರುತ್ತಾರೆ.

LEAVE A REPLY

Please enter your comment!
Please enter your name here