ಈ ಜಲಾಶಯದ ಬಗ್ಗೆ ತಿಳಿಯಲು ಹೋಗಿ ಡಿಸ್ಕವರಿ ಚಾನಲ್ ನವರೇ ಹೆದರಿಕೊಂಡು ಓಡಿ ಹೋದರು ಏಕೆ ಗೊತ್ತೇ

0
739

ನಮ್ಮ ಭೂಮಿ ಮೇಲೆ ಇರುವ ಅತ್ಯಂತ ಆಳವಾಗಿ ಇರುವ ಸಮುದ್ರದಿಂದ ಹಿಡಿದು ಅತ್ಯಂತ ಎತ್ತರದ ಪರ್ವತಗಳವರೆಗೂ ಅವುಗಳ ಎತ್ತರ ಮತ್ತು ಆಳಕ್ಕೆ ಸಂಬಂಧಿಸಿದ ಸಾಕ್ಷಿಗಳು ನಮ್ಮ ಹತ್ತಿರ ಇವೆ. ಆದರೆ ಎಷ್ಟೋ ರಹಸ್ಯಗಳು ಅಡಗಿರುವ ನಮ್ಮ ಭಾರತ ದೇಶದಲ್ಲಿ ಇರುವ ಜಲಾಶಯದ ಬಗ್ಗೆ ತುಂಬಾ ಜನಕ್ಕೆ ಗೊತ್ತಿಲ್ಲ. ಈ ಜಲಾಶಯದ ಆಳ ಎಷ್ಟು ಅಂತ ಕೂಡಾ ಪತ್ತೆ ಹಚ್ಚಲು ಇನ್ನು ಸಾಧ್ಯ ಆಗಿಲ್ಲ. ಪ್ರಪಂಚದ ಅತೀ ದೊಡ್ಡ ಟಿವಿ ನೆಟ್ವರ್ಕ್ ನಲ್ಲಿ ಒಂದಾದ ಡಿಸ್ಕವರಿ ಚಾನೆಲ್ ಕೂಡಾ ಈ ಜಲಾಶದಲ್ಲಿ ರೀಸರ್ಚ್ ಮಾಡಲು ಬಂದು ಅದರ ರಹಸ್ಯ ಬೇಧಿಸಲು ಮುಂದಾಗಿ ಭಯದಿಂದ ದೂರ ಹೋಗಿದೆ. ಇನ್ನೊಂದು ವಿಶೇಷ ಅಂದರೆ ನಮ್ಮ ಏಷ್ಯಾ ಖಂಡದಲ್ಲಿ ಎಲ್ಲಾದರೂ ಪ್ರಕೃತಿ ವಿಕೋಪ ನಡೆದರೆ ಈ ಜಲಾಶಯದ ನೀರು ಒಂದೇ ಬಾರಿ ಜಾಸ್ತಿ ಆಗುತ್ತೆ ಅಂತೆ. ಈ ರಹಸ್ಯ ಜಲಾಶಯದ ಹೆಸರು ಭೀಮ್ ಕುಂಡ್. ಇದನ್ನು ಸಂಪೂರ್ಣ ಓದಿ.

ಈ ಭೀಮ್ ಕುಂಡ್ ಜಲಾಶಯಕ್ಕೂ ಮಹಾಭಾರತಕ್ಕೆ ಸಂಬಂಧ ಇದೆ. ದ್ರೌಪತಿ ಸಮೀತವಾಗಿ ಪಾಂಡವರು ವನವಾಸಕ್ಕೆ ಹೋಗುವಾಗ ಮಾರ್ಗದ ಮಧ್ಯದಲ್ಲಿ ಬಿಸಿಲು ತಾಳಲಾರದೆ ದ್ರೌಪತಿ ಒಂದು ಪ್ರದೇಶದಲ್ಲಿ ಬೀಳುತ್ತಾಳೆ ಈ ಸುತ್ತಮುತ್ತಲ ಪ್ರದೇಶದಲ್ಲಿ ಕೇವಲ ಬೆಟ್ಟ ಗುಡ್ಡಗಳು ಬಿಟ್ಟರೆ ಬೇರೇನೂ ಇಲ್ಲ ಕುಡಿಯಲು ನೀರು ಸಹಾ ಇಲ್ಲ. ಇದರಿಂದ ಕೋಪಿತನಾದ ಬಲ ಭೀಮನು ತನ್ನ ಗದೆ ಇಂದ ಗುಡ್ಡಕ್ಕೆ ಜೋರಾಗಿ ಹೊಡೆಯುತ್ತಾರೆ ಈ ಹೊಡೆತಕ್ಕೆ ಅಲ್ಲಿ ದೊಡ್ಡದಾಗಿ ನೀರು ಉಕ್ಕಿ ಬರುತ್ತೆ ಈ ನೀರನ್ನು ಕುಡಿದು ದಾಹ ತೀರಿಸಿಕೊಳ್ಳುತ್ತಾರೆ ಇಷ್ಟು ವರ್ಷ ಕಳೆದರೂ ಸಹ ಎಷ್ಟೆ ಬರಗಾಲ ಬಂದರೂ ಈ ಜಲಾಶಯದ ನೀರು ಕಮ್ಮಿ ಆಗಲಿಲ್ಲ. ಭೀಮನಿಂದ ಉದ್ಭವ ಆದ ಈ ಜಲಾಶಯಕ್ಕೆ ಭೀಮ್ ಕುಂಡ್ ಎಂದು ಹೆಸರಿಡುತ್ತಾರೆ.

ಈ ಜಲಾಶಯಕ್ಕೆ ನೀಲ್ ಕುಂಡ್ ನಾರಾಧ್ ಕುಂಡ್ ಎಂಬ ಹೆಸರು ಇವೆ. ಈ ಜಲಾಶಯ ಮಧ್ಯಪ್ರದೇಶದ ಚತರ್ಪೂರ್ ಜಿಲ್ಲೆ ಅಲ್ಲಿ ಇದೆ. ಈ ಜಲಾಶಯದ ಎಡಕ್ಕೆ ಒಂದು ಶಿವ ಲಿಂಗ ಕೂಡ ಇದೆ. ಮಾನವನ ಆಲೋಚನೆಗೆ ಸಿಗದ ಪ್ರದೇಶಗಳಲ್ಲಿ ಇದೂ ಕೂಡ ಒಂದು ಏಕೆಂದರೆ ಇದರ ಆಳ ಎಷ್ಟು ಅಂತ ಯಾರೂ ಹೇಳಲು ಸಾಧ್ಯ ಆಗುತ್ತಿಲ್ಲ. ಇದರಲ್ಲಿ ಇರುವ ನೀರು ನೋಡಲಿಕ್ಕೆ ತುಂಬಾ ಶುದ್ಧವಾಗಿ ಇರತ್ತೆ ನೀಲಿ ಬಣ್ಣದಲ್ಲಿ ಇರುತ್ತದೆ ಈ ಜಲಾಶಯದಲ್ಲಿ ತುಂಬಾ ಜನ ಸ್ನಾನ ಮಾಡುತ್ತಾರೆ ಆದರೂ ಸಹ ಇದು ತನ್ನ ಶುದ್ಧತೆಯನ್ನು ಕಳೆದುಕೊಂಡಿಲ್ಲ. ಈ ಜಲಾಶಯದ ಒಳಗೆ ಸ್ವಲ್ಪ ದೂರ ಹೋದ ನಂತರ ಸಮುದ್ರದ ಅಲೆಗಳು ಹೊಡೆದರೆ ಯಾವ ರೀತಿ ಆಗುತ್ತೋ ಅದೇ ರೀತಿ ಅನುಭವ ಆಗುತ್ತದೆ ಅಂತೆ. ಅದಕ್ಕೆ ವಿಜ್ಞಾನಿಗಳು ಈ ಜಲಾಶಯ ಸಮುದ್ರದ ಜೊತೆ ಕನೆಕ್ಟ್ ಆಗಿದೆ ಎನ್ನುತ್ತಾರೆ. ಇದೆಲ್ಲ ಯಾರೋ ಸೃಷ್ಟಿ ಮಾಡಿರೋ ಕಥೆ ಎಂದು ಹೇಳಲು ಆಗುವುದಿಲ್ಲ ಯಾಕೆ ಅಂದರೆ ಏಷ್ಯಾ ಖಂಡದಲ್ಲಿ ಎಲ್ಲೇ ಆದರೂ ಸರಿ ಪ್ರಕೃತಿ ವಿಕೋಪಗಳು ಇರುವುದಕ್ಕೂ ಮುಂಚೆನೇ ಈ ಜಲಾಶಯದಲ್ಲಿ ನೀರು ತನ್ನಷ್ಟಕ್ಕೆ ತಾನೇ ಜಾಸ್ತಿ ಆಗುತ್ತೆ ಅಂತೆ. ಇದು ನಮ್ಮ ಭಾರತ ದೇಶದಲ್ಲಿ ಇರುವ ಭೀಮ್ ಕುಂಡ್ ಜಲಾಶಯದ ರಹಸ್ಯ.

LEAVE A REPLY

Please enter your comment!
Please enter your name here