ಭಾರತ ರತ್ನ ಪ್ರಶಸ್ತಿ ಬಗ್ಗೆ ಪ್ರತಿಯೊಬ್ಬರು ತಿಳಿಯಲೇ ಬೇಕು ಏಕೆ ಗೊತ್ತೇ?

0
625

ಇಂದು ನಿಮಗೆ ಭಾರತರತ್ನ ಪುರಸ್ಕಾರದ ಬಗ್ಗೆ ನಿಮಗೆ ಗೊತ್ತಿಲ್ಲದ ಅಚ್ಚರಿ ಮಾಹಿತಿಗಳನ್ನು ತಿಳಿಸಿ ಕೊಡುತ್ತೇವೆ. ಈ ಲೇಖನವನ್ನು ಪೂರ್ತಿಯಾಗಿ ಓದಿ. ಏಕೆ ಅಂದ್ರೆ ಭಾರತ ರತ್ನದ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಕೂಡ ಹೌದು. ನಿಮ್ಮ ಎರಡು ನಿಮಿಷ ಸಮಯ ಕೊಟ್ಟು ಈ ಮಾಹಿತಿ ತಪ್ಪದೇ ಸಂಪೂರ್ಣ ಓದಿ. ಭಾರತರತ್ನ ಪುರಸ್ಕಾರ ನಮ್ಮ ಭಾರತ ದೇಶದ ಅತ್ಯುನ್ನತ ನಾಗರಿಕ ಗೌರವದ ಪ್ರಶಸ್ತಿಯಾಗಿದೆ. ಹಾಗೂ ಈ ಪ್ರಶಸ್ತಿಯನ್ನು 1954 ಜನವರಿ 2 ರಂದು ಮೊದಲ ಬಾರಿಗೆ ಸ್ಥಾಪಿಸಲಾಯಿತು. ಮತ್ತೆ ಈ ಪ್ರಶಸ್ತಿಯನ್ನು ಕಲೆ ಸಾಹಿತ್ಯ ವೈಜ್ಞಾನಿಕ ಸಾಧನೆಗಳು ಸಾಮಾಜಿಕ ಸೇವೆ ಮತ್ತು ಕ್ರೀಡೆಯಲ್ಲಿ ಅತ್ಯುತ್ತಮ ಸೇವೆಗಳನ್ನು ಸಲ್ಲಿಸಿರುವ ವ್ಯಕ್ತಿಗೆ ಜನವರಿ 23ರಂದು ಈ ಪ್ರಶಸ್ತಿಯನ್ನು ಕೊಟ್ಟು ಪುರಸ್ಕರಿಸಲಾಗುತ್ತದೆ.

ಇನ್ನು ಈ ಪ್ರಶಸ್ತಿಯನ್ನು ಸ್ವೀಕರಿಸುವುದಕ್ಕೆ ಯಾರು ಯೋಗ್ಯ ಅಂತ ಅನಿಸುತ್ತದೋ ಅವರ ಹೆಸರನ್ನು ಪ್ರಧಾನಮಂತ್ರಿಯವರು ನಮ್ಮ ದೇಶದ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗುತ್ತದೆ. ಇನ್ನೂ ಒಂದು ವರ್ಷದಲ್ಲಿ ಮೂವರು ವ್ಯಕ್ತಿಗಳಿಗೆ ಮಾತ್ರ ಭಾರತ ರತ್ನ ಪ್ರಶಸ್ತಿಯನ್ನು ಕೊಡುವುದಕ್ಕೆ ನಮ್ಮ ಸಂವಿಧಾನದಲ್ಲಿ ಅವಕಾಶ ಇದೆ. ಮೊದಲಿನಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಬದುಕಿರುವ ವ್ಯಕ್ತಿಗಳಿಗೆ ಮಾತ್ರ ಕೊಡಬೇಕು ಅನ್ನೋ ನಿಯಮ ಇತ್ತು. ಆದರೆ ನಂತರದ ದಿನಗಳಲ್ಲಿ ಆ ನಿಯಮವನ್ನು ಬದಲಾಯಿಸಲಾಯಿತು. ಅಂದರೆ ಮರಣದ ನಂತರ ಕೂಡ ಭಾರತ ರತ್ನ ಕೊಡಬಹುದು ಅಂತ ಬದಲಾಯಿಸಲಾಯಿತು. ಹಾಗೂ ಈ ನಿಯಮದಡಿ ಮರಣದ ನಂತರ ಮೊದಲು ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಲಾಲ್ ಬಹುದ್ದೂರ್ ಶಾಸ್ತ್ರಿ ಅವರು. ಹಾಗೂ ಈ ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕಾರ ಮಾಡುವ ವ್ಯಕ್ತಿಗೆ ಯಾವುದೇ ರೀತಿಯ ಬಹುಮಾನದ ಹಣವನ್ನು ಕೊಡುವುದಿಲ್ಲ.

ಪ್ರಶಸ್ತಿಯನ್ನು ಸ್ವೀಕಾರ ಮಾಡುವ ವ್ಯಕ್ತಿಗೆ ರಾಷ್ಟ್ರಪತಿಗಳು ಸಹಿ ಮಾಡಿರುವ ಒಂದು ಸನದ್ ಅಂದರೆ ಸರ್ಟಿಫಿಕೇಟ್ ಹಾಗೂ ಒಂದು ಚಿನ್ನದ ಮೇಡಲ್ ಅನ್ನು ಕೊಡಲಾಗುತ್ತದೆ. ಇನ್ನು ಈ ಮೇಡಲ್ 5.8 ಸೆಂಟಿ ಮೀಟರ್ ಉದ್ದ 4.7 ಸೆಂಟಿ ಮೀಟರ್ ಅಗಲ ಹಾಗೂ 3.1 ಮಿಲಿ ಮೀಟರ್ ದಪ್ಪ ಇರುತ್ತದೆ. ದೇವನಗಿರಿ ಲಿಪಿಯಲ್ಲಿ ಭಾರತ ರತ್ನ ಅಂತ ಬರೆದಿರುತ್ತಾರೆ. ಹಾಗೂ ಭಾರತ ರತ್ನ ಪ್ರಶಸ್ತಿಯನ್ನು ಕೋಲ್ಕತ್ತಾದ ಆಲಿಪೋರೆ ಮಿಂಟ್ನಲ್ಲಿ ತಯಾರಿಸುತ್ತಾರೆ. ಅಷ್ಟೇ ಅಲ್ಲದೆ ಇಲ್ಲಿ ಪರಂವೀರ್ ಚಕ್ರ ಪದ್ಮವಿಭೂಷಣ ಪದ್ಮಭೂಷಣ ಈ ರೀತಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಈ ಆಲಿಪೊರೆಮಿಂಟ್ ನಲ್ಲಿ ತಯಾರಿಸಲಾಗುತ್ತದೆ. ಮತ್ತು ಭಾರತ ರತ್ನ ಪ್ರಶಸ್ತಿಯನ್ನು ಭಾರತೀಯರಿಗೆ ಮಾತ್ರ ಅಲ್ಲದೆ ಭಾರತೀಯರಲ್ಲದೆ ಇರುವವರಿಗೆ ಕೂಡ ಕೊಟ್ಟಿದ್ದಾರೆ.

1987ರಲ್ಲಿ ಖಾನ್ ಅಬ್ದುಲ್ ಗಫರ್ ಖಾನ್ ಹಾಗೂ 1990ರಲ್ಲಿ ನೆಲ್ಸನ್ ಮಂಡೇಲಾ ಇವರಿಬ್ಬರಿಗೂ ಕೂಡ ಭಾರತ ರತ್ನ ಪ್ರಶಸ್ತಿ ಲಭಿಸಿದೆ. ಇನ್ನು ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಜನಕ್ಕೆ ಕೆಲವು ಸವಲತ್ತುಗಳನ್ನು ಕೊಡಲಾಗುತ್ತದೆ. ಅದೇನಂದರೆ ಭಾರತದಾದ್ಯಂತ ಫ್ರೀ ಫಸ್ಟ್ ಕ್ಲಾಸ್ ಫ್ಲೈಟ್ ಟಿಕೆಟ್ ಹಾಗೂ ಫ್ರೀ ಫಸ್ಟ್ ಕ್ಲಾಸ್ ಟ್ರೈನ್ ಟಿಕೆಟ್ ಅನ್ನು ಕೊಡಲಾಗುತ್ತದೆ. ಪಾರ್ಲಿಮೆಂಟ್ ಮೀಟಿಂಗ್ ಗಳನ್ನು ಅಟೆಂಡ್ ಮಾಡುವ ಅವಕಾಶ ಇರುತ್ತದೆ. ಮತ್ತು ಅವಶ್ಯಕತೆ ಇದ್ದಲ್ಲಿ ಝೆಡ್ ಕ್ಯಾಟಗೆರಿ ಸೆಕ್ಯುರಿಟಿ ಸಿಸ್ಟಮ್ ಅನ್ನು ಕೊಡಲಾಗುತ್ತದೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ವ್ಯಕ್ತಿಯಾಗಿ ಅವರನ್ನ ಆಹ್ವಾನ ಮಾಡಲಾಗುತ್ತದೆ. ಭಾರತೀಯರಾಗಿ ನೀವು ಈ ಲೇಖನವನ್ನು ಮರೆಯದೇ ಶೇರ್ ಮಾಡಿ.

LEAVE A REPLY

Please enter your comment!
Please enter your name here