ಇನ್ನು ನೂರು ವರ್ಷ ಕಳೆದರು ಸಹ ಲೈಕಾ ಸಾವಿನ ಕಥೆ ಮರೆಯೋಕೆ ಆಗಲ್ಲ ಏಕೆ ಗೊತ್ತೇ?

0
779

ಮಾನವ ಇತಿಹಾಸದಲ್ಲಿ ಪೂರ್ಣ ಪ್ರಮಾಣದ ಸ್ಪೇಸ್ ಮಿಷನ್ ಗೆ ಆಯ್ಕೆಯಾದ ಮೊದಲ ಪ್ರಾಣಿ ಲ್ಯೆಕಾ ಎಂಬ ನಾಯಿಯ ಕಥೆಯನ್ನು ನಾವು ಈ ಲೇಖನದಲ್ಲಿ ಹೇಳಲಿದ್ದೇವೆ. ನಿಜಕ್ಕೂ ಇದನ್ನು ಓದಿದರೆ ಮನುಷ್ಯನ ಕ್ರೂರತೆ ನಿಮಗೆ ಅರ್ಥ ಆಗುತ್ತೆ. ಹೌದು ಮಾನವನು ತನ್ನ ಪಾರುಪತ್ಯವನ್ನು ಭೂಮಿಯಿಂದಾಚೆಗೆ ವಿಸ್ತರಿಸಲು ಹೊರಟಿದ್ದು ಸುಮಾರು 60 ವರ್ಷಗಳ ಹಿಂದೆ. ಅಮೆರಿಕ ಮತ್ತು ರಷ್ಯಾ ನಡುವೆ ನಡೆದ ಶೀತಲ ಸಮರದಲ್ಲಿ ಹಲವಾರು ಶೀಘ್ರ ಗತಿಯ ಸ್ಪೇಸ್ ಎಕ್ಸ್ಪೆರಿಮೆಂಟ್ ಗಳು ನಡೆದು ಹೋದವು. ಈ ನಡುವೆ ರಷ್ಯಾ 1957ರಲ್ಲಿ ಸ್ಪುಟ್ನಿಕ್ ಒನ್ ಎಂಬ ಮಾನವ ಇತಿಹಾಸದ ಮೊಟ್ಟಮೊದಲ ಸ್ಯಾಟಲೈಟ್ ಒಂದನ್ನು ತಯಾರಿಸಿ ಅದನ್ನು ಅಂತರಿಕ್ಷಕ್ಕೆ ಯಶಸ್ವಿಯಾಗಿ ಹಾರಿಸಿ ಬಿಡುತ್ತದೆ. ನಂತರದ ಕೆಲವೇ ದಿನಗಳಲ್ಲಿ ಇನ್ನೊಂದು ಸ್ಯಾಟಲೈಟ್ ಹಾರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗುತ್ತದೆ.

ಈ ಎರಡರಲ್ಲಿ ಸ್ಯಾಟಲೈಟ್ ನಲ್ಲಿ ಯಾವುದಾದರೂ ಪ್ರಾಣಿಯನ್ನು ಅಂತರಿಕ್ಷಕ್ಕೆ ಕಳುಹಿಸಬೇಕು ಎಂಬುದು ಯೋಜನೆಯಾಗಿತ್ತು. ಈ ರೀತಿ ಮಾಡುವುದರಿಂದ ಸ್ಪೇಸ್ ಮಿಷನ್ ನಲ್ಲಿ ಮನುಷ್ಯ ಸರ್ವೆ ಮಾಡಬಲ್ಲನೇ ಎಂಬುದನ್ನು ತಿಳಿಯುವ ಕುತೂಹಲ ವಿಜ್ಞಾನಿಗಳಿಗಿತ್ತು. ಈ ಎರಡನೇ ಸ್ಯಾಟಲೈಟ್ ಅಂದರೆ ಸ್ಪುಟ್ನಿಕ್ 2 ಅನ್ನು ತಯಾರಿಸಲು ವಿಜ್ಞಾನಿಗಳಿಗೆ ದೊರೆತ ಸಮಯ ಕೇವಲ 4 ವಾರಗಳು ಮಾತ್ರ. ಈ ಅತಿ ಕಡಿಮೆ ಅವಧಿಯಲ್ಲಿ ಕೂಡ ಸ್ಯಾಟಲೈಟ್ ಒಂದನ್ನು ತಯಾರಿಸಿ ಅದನ್ನು ಅಂತರಿಕ್ಷಕ್ಕೆ ಕಳುಹಿಸಲು ವಿಜ್ಞಾನಿಗಳು ತಯಾರಾಗಿ ನಿಂತಿದ್ದರು. ಈ ಸ್ಪುಟ್ನಿಕ್ 2 ಅನ್ನು ವಿಶೇಷವಾಗಿ ನಾಯಿಗೆಂದೇ ವಿನ್ಯಾಸಗೊಳಿಸಲಾಗಿತ್ತು. ಈಗ ವಿಜ್ಞಾನಿಗಳಿಗೆ ನಾಯಿಯೊಂದನ್ನು ಆಯ್ಕೆ ಮಾಡುವ ಸಂದರ್ಭ ಒದಗಿಬಂದಿತ್ತು. ಆದರೆ ನಾವು ಅಂದುಕೊಂಡಂತೆ ಅವರು ಆಯ್ಕೆ ಮಾಡಿದ ನಾಯಿ ಯಾವುದು ಶ್ರೀಮಂತರ ಮನೆಯ ಸಾಕಿದ ನಾಯಿ ಆಗಿರಲಿಲ್ಲ. ಬದಲಾಗಿ ಅದೊಂದು ಬೀದಿ ನಾಯಿ ಆಗಿತ್ತು. ಮಾಸ್ಕೋದ ಬೀದಿಗಳಲ್ಲಿ ಮೂರು ವರ್ಷ ಪ್ರಾಯದ ಹೆಣ್ಣು ನಾಯಿಯನ್ನು ಹುಡುಕಿ ತಂದರು. ಅದಕ್ಕೆ ಲ್ಯೆಕಾ ಎಂದು ನಾಮಕರಣ ಮಾಡಲಾಯಿತು. ಈ ಲೈಕಾಗೆ ತಾನು ಮಾನವನ ಇತಿಹಾಸದ ಅತಿ ದೊಡ್ಡ ಘಟನೆಯೊಂದಕ್ಕೆ ಸಾಕ್ಷಿ ಆಗುತ್ತೇನೆ ಎಂಬ ಅರಿವಿರಲಿಲ್ಲ. ವಿಜ್ಞಾನಿಗಳು ಬೀದಿ ನಾಯಿಯನ್ನೇ ಏಕೆ ಆಯ್ಕೆ ಮಾಡಿದ್ದರು ಎಂದರೆ? ಎಕ್ಸ್ಟ್ರೀಮ್ ಕಂಡೀಶನ್ ನಲ್ಲಿ ಬದುಕುಳಿಯುವ ಸಾಧ್ಯತೆ ಈ ನಾಯಿಗಳಿಗೆ ಹೆಚ್ಚಾಗಿರುವುದರಿಂದ. ಸಾಕಿದ ನಾಯಿಗಳಿಗಿಂತ ಬೀದಿಯಲ್ಲಿ ಬೆಳೆದ ನಾಯಿಗಳು ಎಂತಹ ಕಷ್ಟದ ಪರಿಸ್ಥಿತಿಯನ್ನು ಸಹಿಸಿಕೊಂಡು ಬದುಕಬಲ್ಲವು ಎಂಬ ಲೆಕ್ಕಾಚಾರ ವಿಜ್ಞಾನಿಗಳದ್ದಾಗಿತ್ತು.

ಹಾಗೆಯೇ ಈ ಸ್ಯಾಟಲೈಟ್ ನಲ್ಲಿ ಸಣ್ಣದೊಂದು ಕ್ಯಾಬಿನ್ ಮಾಡಿ ಅದರಲ್ಲಿ ನಾಯಿಯನ್ನು ಕೂರಿಸುವ ಯೋಜನೆ ಹಾಕಿಕೊಳ್ಳಲಾಯಿತು. ಈ ಕ್ಯಾಬಿನ್ ನಲ್ಲಿ ಒಂದು ಕಾರ್ಬನ್ ಡೈಯಾಕ್ಸೈಡ್ ಅಬ್ಸೊಬರ್ ಒಂದು ಆಕ್ಸಿಜನ್ ಜನರೇಟರ್ ಮತ್ತು ಒಂದು ಕೂಲಿಂಗ್ ಫ್ಯಾನ್ ಅನ್ನು ಅಳವಡಿಸಲಾಗಿತ್ತು. ನಾಯಿಗೆ ಏಳು ದಿನಕ್ಕಾಗುವಷ್ಟು ಆಹಾರ ಮತ್ತು ಮಲಮೂತ್ರ ಸಂಗ್ರಹಿಸಲು ಒಂದು ಬ್ಯಾಗ್ ಕೂಡ ಜೋಡಿಸಲಾಗಿತ್ತು. ಲ್ಯೆಕಾಳನ್ನು ತಂದ ನಂತರ ಇಪ್ಪತ್ತು ದಿನಗಳವರೆಗೆ ಒಂದು ಸಣ್ಣ ಪಂಜರದಲ್ಲಿಟ್ಟು ತರಬೇತಿ ನೀಡಲಾಯಿತು. ಇದು ಆಕೆಗೆ ಸ್ಯಾಟಲೈಟ್ ನಲ್ಲಿನ ಆ ಅಲುಗಾಡಲಾಗದ ಸಣ್ಣ ಕ್ಯಾಬಿನ್ ನಲ್ಲಿನ ಪರಿಚಯ ಆಗಲೆಂದು ಮಾಡಲಾಗಿತ್ತು. ನಂತರ ಸ್ಪೇಸ್ ಡ್ರಾಪ್ ಉಡಾವಣೆಯಾಗುವ ಮುಂಚೆ ಮೂರು ದಿನಗಳವರೆಗೆ ಅದೇ ಕ್ಯಾಬಿನ್ ನಲ್ಲಿಟ್ಟು ಲ್ಯೆಕಾಗೆ ತರಬೇತಿ ನೀಡಲಾಗಿತ್ತು. ಇಲ್ಲಿ ಅಲುಗಾಡಲು ಸಾಧ್ಯವಿಲ್ಲದೆ ಕುಳಿತಲ್ಲಿಯೇ ಕುಳಿತಿರಬೇಕಾಗಿತ್ತು ಆ ಪ್ರಾಣಿ. ಮುಂದೇ ಆ ದಿನ ಬಂದೇಬಿಟ್ಟಿತು 1957 ನವೆಂಬರ್ 3ನೇ ತಾರೀಖು ಸ್ಪುಟ್ನಿಕ್ 2 ಉಡಾವಣೆಯ ದಿನ ಲೈಕಾಳನ್ನು ಸ್ಯಾಟಲೈಟ್ ಏರಿಸುವ ಕೆಲ ಗಂಟೆಗಳ ಮುಂಚೆ ಅಧಿಕಾರಿಯೊಬ್ಬರು ಅವಳನ್ನು ತನ್ನ ಮನೆಗೆ ಕರೆದೊಯ್ದರು. ಅಲ್ಲಿ ಲ್ಯೆಕಾ ತನ್ನ ಮರಿಗಳೊಂದಿಗೆ ಕೆಲವು ಹೊತ್ತು ಕಳೆದು ಮತ್ತೆ ತನ್ನ ಅಧಿಕಾರಿಯೊಂದಿಗೆ ಸ್ಪೇಸ್ ಸ್ಟೇಷನ್ ಗೆ ಮರಳಿ ಬರುತ್ತಾಳೆ. ಆ ಕಾಲದಲ್ಲಿ ಅಂತರಿಕ್ಷಕ್ಕೆ ತಲುಪಿದ ನಂತರ ವಾಪಾಸ್ ಭೂಮಿಗೆ ಬರುವ ಟೆಕ್ನಾಲಜಿ ಇರಲಿಲ್ಲ. ಹಾಗಾಗಿ ಎಲ್ಲರಿಗೂ ತಿಳಿದಿತ್ತು ಇದೊಂದು ಒನ್ ವೇ ಜರ್ನಿ ಎಂದು. ಅಂತರಿಕ್ಷದಲ್ಲಿ ಲೈಕಾ ಎಷ್ಟು ದಿನ ಬದುಕಬಲ್ಲದು ಎಂಬುದಷ್ಟೇ ವಿಜ್ಞಾನಿಗಳಿಗೆ ತಿಳಿಯಬೇಕಾಗಿತ್ತು.

ಇದೊಂದು ಸೂಸೈಡ್ ಮಿಷನ್ ಎಂದೇ ಕರೆಸಿಕೊಂಡಿತ್ತು. ಮಾನವ ಮುಂದೊಂದು ದಿನ ಅಂತರಿಕ್ಷಕ್ಕೆ ಏರುವಲ್ಲಿ ಈ ಯಾನದಿಂದ ಎಷ್ಟು ಪ್ರಯೋಜನವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದರು ವಿಜ್ಞಾನಿಗಳು. ಕ್ಷಣಗಣನೆ ಆರಂಭವಾಗುತ್ತಿದ್ದಂತೆ ರಭಸವಾಗಿ ಆಕಾಶಕ್ಕೆ ಏರಿತ್ತು ಸ್ಪುಟ್ನಿಕ್ 2. ಮುಂದೆ ಸಾಗುತ್ತಾ ಸಾಗುತ್ತಾ ಅಂತರಿಕ್ಷದಲ್ಲಿ ರಾಕೆಟ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. ಇದರಿಂದಾಗಿ ರಾಕೆಟ್ ನ ಒಂದು ವಿಭಾಗ ರಾಕೆಟ್ ನಿಂದ ಬಿಡಿಸಿಕೊಳ್ಳಲೇ ಇಲ್ಲ. ಒಳಗಿನ ಟೆಂಪರೇಚರ್ ಏರತೊಡಗಿತು. ಲೈಕಾಳ ಹಾರ್ಟ್ ಬೀಟ್ ಅನ್ನು ಕೂಡ ಭೂಮಿಯ ಮೇಲೆ ಕುಳಿತ ವಿಜ್ಞಾನಿಗಳು ತಿಳಿಯುವಷ್ಟು ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಲೈಕಾಳ ಹಾರ್ಟ್ ಬೀಟ್ ರೇಟ್ 103ರಿಂದ ಹೆಚ್ಚಾಗಿ 240ರವರಿಗೂ ತಲುಪಿತು. ಒಳಗಿನ ಹೆಚ್ಚಿದ ಟೆಂಪರೇಚರ್ ನಿಂದ ಲೈಕಾ ಬದುಕುಳಿಯುವ ಸಾಧ್ಯತೆ ಕ್ಷೀಣವಾಯಿತು. ಆದರೂ ಸುಮಾರು 5 ಗಂಟೆಗಳ ವರೆಗೆ ಬದುಕುಳಿದಿದ್ದ ಲ್ಯೆಕಾ ಕೊನೆಗೂ ಅಂತರಿಕ್ಷದಲ್ಲಿಯೇ ಕೊನೆ ಉಸಿರೆಳೆದಳು.

ಕೇವಲ ನಾಲ್ಕೇ ವಾರದಲ್ಲಿ ಶೀಘ್ರಗತಿಯಲ್ಲಿ ಸ್ಪೇಸ್ ಡ್ರಾಪ್ ಒಂದನ್ನು ನಿರ್ಮಿಸಿದ್ದರಿಂದಾಗಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಯಿತು. ಆದರೆ ಮಾನವನ ಕಾತುರತೆಗೆ ಮೂಕ ಪ್ರಾಣಿ ಒಂದು ಬಲಿಯಾಗಿತ್ತು. ಇಲ್ಲಿ ನಿಯಂತ್ರಣ ಕಳೆದುಕೊಂಡ ಸ್ಪುಟ್ನಿಕ್ 2 ಭೂಮಿಗೆ ವೇಗವಾಗಿ ಸುತ್ತು ಬರಲಾರಂಭಿಸಿತು. ಸುಮಾರು 162 ದಿನಗಳವರೆಗೆ ಅಂತರಿಕ್ಷದಲ್ಲಿ ಸುತ್ತುತ್ತಿದ್ದ ಸ್ಯಾಟಲೈಟ್ ಏಪ್ರಿಲ್ ಹದಿನಾಲ್ಕು 1958ರಂದು ಸಿಡಿದು ಚೂರಾಗಿ ಭೂಮಿಯಲ್ಲಿ ಬಿದ್ದಿತ್ತು. ಇದರೊಂದಿಗೆ ಲ್ಯೆಕಾಳ ಮೃತ ಶರೀರವು ಸುಟ್ಟು ಚೂರಾಯಿತು. ಮಾನವನ ಇತಿಹಾಸದಲ್ಲೊಂದು ಮೈಲಿಗಲ್ಲು ಕರೆಸಿಕೊಳ್ಳುವ ಈ ಘಟನೆಯಲ್ಲಿ ಕೊನೆಗೂ ಲ್ಯೆಕಾ ಬದುಕಿ ಬರಲಿಲ್ಲ ಆದರೆ ಆ ನಾಯಿಯ ತ್ಯಾಗ ಮಾತ್ರ ಇಂದಿಗೂ ಬದುಕುಳಿದಿದೆ. ಲ್ಯೆಕಾ ಸತ್ತ 50 ವರ್ಷಗಳ ನಂತರ 2008ರಲ್ಲಿ ರಷ್ಯಾ ಸರ್ಕಾರ ಲ್ಯೆಕಾಳ ನೆನಪಿಗಾಗಿ ಮಾಸ್ಕೊದಲ್ಲಿ ಒಂದು ಮೂರ್ತಿ ಅನಾವರಣಗೊಳಿಸಿತು. ಸ್ಪೇಸ್ ಡ್ರಾಪ್ ಒಳಗೆ ಇರುವ ನಾಯಿಯ ಈ ಮೂರ್ತಿ ಲ್ಯೆಕಾ ತೋರಿದ ಧೈರ್ಯ ಮತ್ತು ತ್ಯಾಗದ ಸಂಕೇತವಾಗಿದೆ. ಈ ಲೇಖನವನ್ನು ಶೇರ್ ಮಾಡಿ.

LEAVE A REPLY

Please enter your comment!
Please enter your name here