ಈ ಜ್ಯೂಸ್ ಕುಡಿಯುವುದರಿಂದ ಬಿಪಿ ಮದುಮೇಹ ಮತ್ತು ಹೃದಯ ಖಾಯಿಲೆ ಬರಲ್ಲ

0
4247

ನಾವು ತಿನ್ನುವ ಆಹಾರದಿಂದ ನಮಗೆ ಗೊತಿಲ್ಲದ ಹಾಗೆಯೇ ದೇಹದಲ್ಲಿ ಸಾಕಷ್ಟು ಕೊಬ್ಬಿನ ಅಂಶ ಸೇರಿಕೊಲ್ಲುತೆ. ನಾವು ಇದನ್ನು ನಿರ್ಲಕ್ಷ್ಯ ಮಾಡಿದ್ರೆ ಸಕ್ಕರೆ ಖಾಯಿಲೆ ರಕ್ತದ ಒತ್ತಡ ಅಥವ ಆಕಸ್ಮಿಕವಾಗಿ ಹೃದಯಘಾತ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮಗೆ ಈಗಾಗಲೇ ಗೊತ್ತಿರಬಹುದು ಎಷ್ಟೋ ಜನ ಆಕಸ್ಮಿಕವಾಗಿ ಹೃದಯಘಾತವಾಗಿ ಸಡನ್ ಆಗಿ ಸತ್ತು ಹೋಗ್ತಾರೆ ಇದಕ್ಕೆ ಮುಖ್ಯ ಕಾರಣವೇ ಅವರ ದೇಹದಲ್ಲಿ ಶೇಖರಣೆ ಆಗಿರುವ ಕೊಬ್ಬು. ಆದ್ದರಿಂದ ಕೊಬ್ಬನ್ನು ಕಡೆಗಣಿಸದೆ ಅದನ್ನು ಪರಿಹರಿಸಿದರೆ ಇಂತಹ ಖಾಯಿಲೆ ಬರುವುದನ್ನು ತಪ್ಪಿಸಬಹುದು. ಕೊಬ್ಬನ್ನು ಸಾಮಾನ್ಯವಾಗಿ ತಮ್ಮ ಮನೆಗಳಲ್ಲಿಯೇ ಸಿಗುವ ನಿಂಬೆಹಣ್ಣು ಮತ್ತು ಬೆಳ್ಳುಳ್ಳಿಯಿಂದ ಹೋಗಲಾಡಿಸಲು ಇಲ್ಲಿದೆ ಸರಳ ಮಾರ್ಗ. ಅದಲ್ಲದೆ ಕೆಲವು ಕಂಪೆನಿಗಳು ಸಹ ಇವನ್ನು ಉಪಯೋಗಿಸಿ ಔಷಧಿಯನ್ನು ತಯಾರು ಮಾಡುತ್ತಾರೆ. ಆದ್ದರಿಂದ ನಿಂಬೆಹಣ್ಣು ಹಾಗು ಬೆಳ್ಳುಳ್ಳಿಯನ್ನು ಉಪಯೋಗಿಸಿಕೊಂಡು ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ನಾವು ಈಗ ತಿಳಿಯೋಣ.

ನಾವು ಹೇಳುವ ಈ ಔಷಧಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಹೃದಯಾಘಾತ ಸಂಬಂಧ ಸಮಸ್ಯೆ ಇರುವವರು ಮುಂದೆ ಖಾಯಿಲೆ ದೊಡ್ಡದಾಗುವುದನ್ನು ತಪ್ಪಿಸಿಕೊಳ್ಳಬಹುದು. ಅಲ್ಲದೇ ಹೃದಯ ಸಂಬಂಧಿ ಖಾಯಿಲೆ ಇಲ್ಲದವರೂ ಸಹ ಇದನ್ನು ಸೇವಿಸಿದರೆ ಮುಂದೆ ಇಂತಹ ಖಾಯಿಲೆಗಳು ಬರುವುದನ್ನು ನೀವು ತಡೆಯಬಹುದು. ನಾವು ನಿಮಗೆ ಒಂದು ಮಿಶ್ರಣದಿಂದ ಜ್ಯೂಸ್ ಮಾಡುವುದು ಹೇಳುತ್ತೇವೆ. ಮಿಶ್ರಣದ ಜ್ಯೂಸ್ ಮಾಡುವ ಬಗೆ ಹೇಗೆಂದರೆ ಸುಮಾರು ಆರು ನಿಂಬೆಹಣ್ಣು ಮತ್ತು ಮೂವತ್ತು ಬೆಳ್ಳುಳ್ಳಿ ಫೀಸ್ ಗಳನ್ನು ತೆಗೆದುಕೊಳ್ಳಬೇಕು. ಮೊದಲಿಗೆ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆದು ಸಣ್ಣದಾಗಿ ಹೆಚ್ಚಿಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಹಿಂಡಿ ಎರಡನ್ನು ಮಿಶ್ರಣ ಮಾಡಬೇಕು. ನಂತರ ಅದಕ್ಕೆ ಎರಡು ಲೀಟರ್ ನೀರನ್ನು ಸೇರಿಸಬೇಕು. ಇದನ್ನು ಐದರಿಂದ ಹತ್ತು ನಿಮಿಷಗಳ ಕಾಲ ಕುದಿಸಬೇಕು.

ಅದನ್ನು ಚೆನ್ನಾಗಿ ಸೋಸಿಕೊಂಡು ಆ ರಸವನ್ನು ಗಾಜಿನ ಬಾಟಲಿಯಲ್ಲಿ ಶೇಖರಿಸಿ ನಂತರ ಅದನ್ನು ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಬೇಕು. ಪ್ರತಿ ದಿನ ತಪ್ಪದೇ 50ಎಮ್.ಎಲ್ ನಷ್ಟು ರಸವನ್ನು ಖಾಲಿ ಹೊಟ್ಟೆಗೆ ಸೇವಿಸಬೇಕು. ಹೀಗೆ ಕ್ರಮವಾಗಿ ಮೂರು ವಾರಗಳ ಅವಧಿ ಕುಡಿಯಬೇಕು. ಮತ್ತೆ ಒಂದು ವಾರ ಅಂತರ ಬಿಟ್ಟು ನಂತರ ಮೊದಲಿನ ಕ್ರಮದಂತೆ ಈ ಮಿಶ್ರಣವನ್ನು ಕುಡಿಯುತ್ತಾ ಬರಬೇಕು. ಹೀಗೆ ಮಾಡುತ್ತ ದೇಹದ ಬದಲಾವಣೆಗಳನ್ನು ತಿಳಿದುಕೊಂಡು ಸ್ವಲ್ಪ ಸ್ವಲ್ಪವೇ ಈ ಮದ್ದನ್ನು ಸೇವಿಸುವುದು ಕಡಿಮೆ ಮಾಡುತ್ತಾ ಬರಬೇಕು. ಇದರಿಂದ ನಮ್ಮ ದೇಹದಲ್ಲಿರುವ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆ ಅಲ್ಲದೇ ಮುಂದೆಯೂ ಸಹ ಆರೋಗ್ಯವಾಗಿ ಇರುತ್ತೀರಿ. ಸ್ನೇಹಿತರೇ ತಿಳಿಯಿತಲ್ಲವೇ ನಮ್ಮ ದೇಹದ ಕೆಟ್ಟ ಕೊಬ್ಬನ್ನು ಹೇಗೆ ಕಡಿಮೆ ಮಾಡಬಹುದು ಎಂದು. ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ಇಂತಹ ಉಪಯೋಗ ಮಾಹಿತಿಯನ್ನು ತಿಳಿಸಿ.

LEAVE A REPLY

Please enter your comment!
Please enter your name here