ಈ ಹಣ್ಣುಗಳು ತಿಂದರೆ ಸಾಕು ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬರುತ್ತೆ

0
756

ನಮ್ಮ ಹತ್ತಿರದಲ್ಲೇ ಸಿಗುವ ಕೆಲವು ಹಣ್ಣುಗಳಿಂದ ಮಧುಮೇಹ ಖಾಯಿಲೆಯನ್ನು ನಿಯಂತ್ರಿಸಿಕೊಳ್ಳಬಹುದು. ಅವುಗಳಲ್ಲಿ ಕೆಲವು ಹಣ್ಣಿನ ಬಗ್ಗೆ ಇರುವ ಪ್ರಯೋಜನಗಳನ್ನು ತಿಳಿಯೋಣ. ಹಲಸಿನ ಹಣ್ಣಿನಲ್ಲಿ ಅತೀ ಹೆಚ್ಚು ಪೋಷಕಾಂಶಗಳು ಇವೆ. ಅಲ್ಲದೇ ವಿಟಮಿನ್ ಎ ವಿಟಮಿನ್ ಸಿ ಕ್ಯಾಲ್ಸಿಯಂ ಪೊಟ್ಯಾಶಿಯಂ ಹಾಗೂ ಕಬ್ಬಿಣದ ಅಂಶಗಳು ಹೇರಳವಾಗಿದೆ. ಇದರಲ್ಲಿರುವ ನೈಸರ್ಗಿಕವಾದ ಸಕ್ಕರೆ ಅಂಶ ಹಾಗೂ ಆಹಾರದ ಫೈಬರ್ ರಕ್ತದಲ್ಲಿರುವ ಅತೀ ಹೆಚ್ಚಿನ ಹಾನಿಕಾರಕ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಇದು ಮಧುಮೇಹಿಗಳಲ್ಲಿ ಇನ್ಸುಲಿನ್ ರೆಸಿಸ್ಟೆನ್ಸ್ ಪ್ರಮಾಣವನ್ನು ಹೆಚ್ಚಿಸುತ್ತದೆ ಅಲ್ಲದೆ ಮಧುಮೇಹಿಗಳಲ್ಲದವರಿಗೆ ಮಧುಮೇಹ ಬರದಂತೆ ತಡೆಗಟ್ಟಲು ಉತ್ತಮವಾದ ಹಣ್ಣಾಗಿದೆ.

ನೇರಳೆಹಣ್ಣು ಅಥವಾ ಬ್ಲಾಕ್ ಜಾಮೂನ್ ಎಂದು ಕರೆಯಲ್ಪಡುವ ಈ ಹಣ್ಣು ಮಧುಮೇಹಿ ರೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶವು ಹೇರಳವಾಗಿವೆ. ಹಾಗೂ ಫೈಬರ್ ಅಂಶವು ಸಹ ಅತೀ ಹೆಚ್ಚಿನ ಮಟ್ಟದಲ್ಲಿದೆ. ಇದು ಅತೀ ಕಡಿಮೆ ಜಿಯಾಲೆವೆಲ್ ಹೊಂದಿರುವ ಹಣ್ಣಾಗಿದೆ. ನೇರಳೆ ಹಣ್ಣು ಶೇಕಡ 82 ನೀರು ಹಾಗೂ 14.5 ರಷ್ಟು ಕಾರ್ಬೋಹೈಡ್ರೆಟ್ ನ್ನು ಹೊಂದಿದ್ದು ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವುದಕ್ಕೆ ಬಹಳ ಸಹಾಯಕಾರಿ. ಇದರಲ್ಲಿರುವ ಹೈಪೋಗ್ಲೆಮೆಸಿಕ್ ಎಂಬ ಅಂಶವು ರಕ್ತದಲ್ಲಿ ಹಾಗೂ ಮೂತ್ರದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇದರ ಬೀಜ ಕೂಡ ಸಹ ಔಷಧೀಯ ಅಂಶವನ್ನು ಹೊಂದಿರುವುದರಿಂದ ಮಧುಮೇಹ ರೋಗಿಗಳು ಇದನ್ನು ಉಪಯೋಗಿಸಬಹುದು. ನೇರಳೆ ಹಣ್ಣಿನ ಬೀಜವನ್ನು ಪುಡಿಮಾಡಿ ಶೇಖರಿಸಿ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣ ಮಾಡಬಹುದು. ಇದರ ಬೀಜದಲ್ಲಿರುವ ಜಮೊಲಿನ್ ಎಂಬ ಅಂಶ ನಮ್ಮ ದೇಹದಲ್ಲಿರುವ ಸ್ಟಾರ್ಚ್ನ್ನು ಸಕ್ಕರೆಯಾಗಿ ಪರಿವರ್ತನೆಯಾಗುವುದನ್ನು ತಡೆಯುತ್ತದೆ. ಮಧುಮೇಹಿಗಳಲ್ಲಿ ಕಂಡುಬರುವಂತಹ ಮಲಬದ್ಧತೆಯನ್ನು ತಡೆಯಲು ನೇರಳೆಹಣ್ಣು ಉಪಯುಕ್ತವಾಗಿದೆ.

ಪಪ್ಪಾಯಿ ಹಣ್ಣು ಮಧುಮೇಹಿ ರೋಗಿಗಳಿಗೆ ತುಂಬಾ ಒಳ್ಳೆಯದು. ಇದರಲ್ಲಿ ಅತೀ ಹೆಚ್ಚು ನೈಸರ್ಗಿಕವಾದ ರೋಗ ನಿರೋಧಕ ಶಕ್ತಿ ಇದೆ. ಮಧುಮೇಹದಿಂದ ಆಗುವಂತಹ ಜೀವಕೋಶಗಳ ನಾಶವನ್ನು ಇದು ತಡೆಯಲು ಸಹಾಯಕವಾಗಿದೆ. ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ಬರುವ ಹೃದಯ ಮತ್ತು ನರಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟುವುದರಲ್ಲಿ ಪಪ್ಪಾಯಿ ಹಣ್ಣು ಒಳ್ಳೆಯ ಪ್ರಯೋಜನಕಾರಿ. ಅಲ್ಲದೇ ಇದನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಮುಂದೆಯೂ ಸಹ ಹೃದಯ ಮತ್ತು ನರ ಸಂಬಂಧಿಸಿದ ಖಾಯಿಲೆಗಳು ಬರುವುದನ್ನು ತಡೆಗಟ್ಟಬಹುದು.

LEAVE A REPLY

Please enter your comment!
Please enter your name here