ಭವಿಷ್ಯದಲ್ಲಿ ಮನುಷ್ಯರು ಮಂಗಳ ಗ್ರಹದಲ್ಲಿ ವಾಸ ಮಾಡಬೇಕು ಅಂತ ಅಲ್ಲಿ ಮರ ಗಿಡಗಳನ್ನು ಬೆಳೆಸುತ್ತಾ ಇದ್ದಾರೆ

0
410

ಸೌರಮಂಡಲದಲ್ಲಿನ ಅತ್ಯಂತ ರಹಸ್ಯಮಯ ಗ್ರಹವಾಗಿರುವ ಮಂಗಳ ಗ್ರಹವು ಪ್ರತಿಬಾರಿಯೂ ನಮ್ಮನ್ನು ತನ್ನತ್ತ ಆಕರ್ಷಿಸುತ್ತ ಬಂದಿದೆ. ವಿಜ್ಞಾನಿಗಳ ಸಂಶೋಧನೆಗಳ ಕೇಂದ್ರಬಿಂದುವಾಗಿರುವ ಮಂಗಳ ಗ್ರಹವು ತನ್ನೊಳಗೆ ಹಲವಾರು ರಹಸ್ಯಗಳನ್ನು ತನ್ನೊಳಗೆ ಬಚ್ಚಿಟ್ಟಿದೆ ಎಂಬುದು ಮಾತ್ರ ಸುಳ್ಳಲ್ಲ. ವಿಜ್ಞಾನಿಗಳು ದಶಕಗಳಿಂದ ಹಲವಾರು ರೋವರ್ಸ್ ಗಳನ್ನು ಮಂಗಳ ಗ್ರಹಕ್ಕೆ ಕಳುಹಿಸಿ ಆ ಗ್ರಹವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರಾದರೂ ಇಲ್ಲಿಯ ತನಕ ಆ ರಹಸ್ಯಮಯ ಕೆಂಪು ಗ್ರಹವನ್ನು ಪೂರ್ಣ ಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳುವಲ್ಲಿ ವಿಜ್ಞಾನಿಗಳು ವಿಫಲರಾಗಿದ್ದಾರೆ ಎಂದೇ ಹೇಳಬಹುದು. ನಾವು ಇಂದಿನ ಲೇಖನದಲ್ಲಿ ಮಂಗಳ ಗ್ರಹದ ಬಗೆಗಿನ ಕೆಲವೊಂದು ವಿಷಯವನ್ನು ತಿಳಿಯಿರಿ.

ಭೂಮಿಯ ಗಾತ್ರದ ಅರ್ಧದಷ್ಟಿರುವ ಈ ಗ್ರಹದಲ್ಲಿಯೂ ಕೂಡ ಭೂಮಿಯ ರೀತಿಯೇ ಋತುಗಳು ಬದಲಾಗುತ್ತಿರುತ್ತದೆ. ಸಾಕಷ್ಟು ಮಟ್ಟಿಗೆ ಈ ಗ್ರಹವು ಭೂಮಿಗೆ ಹೋಲಿಕೆಯಾದರು ಮನುಷ್ಯರಾರು ಈ ಗ್ರಹದಲ್ಲಿ ಆಕ್ಸಿಜನ್ ಮಾಸ್ಕ್ ಇಲ್ಲದೆ ಬದುಕಲಾರರು. ಇಲ್ಲಿ ಆಕ್ಸಿಜನ್ ಇಲ್ಲವೇನೆಂದಿಲ್ಲ ಆಕ್ಸಿಜನ್ ಮಂಗಳ ಗ್ರಹದಲ್ಲಿ ಇದೆ. ಆದರೆ ಅದು ಪಾಯಿಂಟ್ 2 ಪರ್ಸೆಂಟ್ ಗಿಂತಲೂ ಕಡಿಮೆ ಪ್ರಮಾಣದಲ್ಲಿದೆ. ಅತ್ಯಧಿಕವಾಗಿ ಕಾರ್ಬನ್ ಡೈಯಾಕ್ಸೈಡ್ ಇರುವ ಮಂಗಳ ಗ್ರಹದಲ್ಲಿ ಆಕ್ಸಿಜನ್ ನ ಪ್ರಮಾಣ ಅತಿ ಅಲ್ಪವಾಗಿದೆ. ಮಂಗಳದಲ್ಲಿನ ಈ ಕಾರ್ಬನ್ ಡೈ ಆಕ್ಸೈಡನ್ನು ಆಕ್ಸಿಜನ್ ಆಗಿ ಪರಿವರ್ತಿಸುವ ಬಗ್ಗೆ ವಿಜ್ಞಾನಿಗಳು ಸಂಶೋಧನೆಗಳನ್ನೂ ನಡೆಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ್ಯ ಎನಿಸಿದರೂ ಭವಿಷ್ಯದಲ್ಲಿ ವಿಜ್ಞಾನಿಗಳು ಇದರಲ್ಲಿ ಯಶಸ್ಸನ್ನು ಸಾಧಿಸಿದರೆ ಮಂಗಳ ಗ್ರಹ ಮನುಷ್ಯನ ಎರಡನೇ ಮನೆಯಾಗಲಿದೆ.

ಮಂಗಳ ಗ್ರಹದಲ್ಲಿ ಐರನ್ ಆಕ್ಸೈಡ್ ನ ಪ್ರಮಾಣವು ಅತಿ ಹೆಚ್ಚಿರುವುದರಿಂದ ಇದು ಕೆಂಪಾಗಿದೆ. ಇದೇ ಕಾರಣದಿಂದ ಮಂಗಳ ಗ್ರಹವನ್ನು ರೆಡ್ ಪ್ಲಾನೆಟ್ ಎಂದು ಕರೆಯಲಾಗುತ್ತದೆ. ಮಂಗಳ ಗ್ರಹದ ಹೆಸರು ರೋಮನ್ ಯುದ್ಧದ ದೇವತೆಗಳಿಂದ ಪ್ರೇರಿತವಾಗಿ ಮಾರ್ಸ್ ಎಂದು ಇಡಲಾಗಿತ್ತು. ಗಾತ್ರದಲ್ಲಿ ಭೂಮಿಯ ಅರ್ಧದಷ್ಟಿರುವ ಈ ಗ್ರಹದ ಸರ್ಫೇಸ್ ಏರಿಯಾವನ್ನು ಗಣನೆಗೆ ತೆಗೆದುಕೊಂಡರೆ ಮಂಗಳ ಗ್ರಹದ ಪೂರ್ಣ ಸರ್ಫೇಸ್ ಏರಿಯಾ ಭೂಮಿಯ ಡ್ರೈ ಸರ್ಫೇಸ್ ಏರಿಯಾಗೆ ಸಮಾನವಾಗಿದೆ. ಮಾರ್ಸ್ ನಲ್ಲಿ ಒಂದು ವರ್ಷವೂ 787 ದಿನಗಳಲ್ಲಿ ಕೊನೆಯಾಗುತ್ತದೆ. ಇಲ್ಲಿ ಭಯಂಕರವಾದ ಚಂಡಮಾರುತಗಳು ಆಗಾಗ ಬೀಸುತ್ತಿರುತ್ತದೆ. ಇಡೀ ಗ್ರಹವನ್ನೇ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಈ ಘೋರ ಚಂಡಮಾರುತಗಳು ಒಮ್ಮೆ ಬಂದರೆ ನಿರಂತರವಾಗಿ ತಿಂಗಳುಗಳವರೆಗೆ ಮುಂದುವರೆಯುತ್ತಿರುತ್ತದೆ. ನಮ್ಮ ಭೂಮಿಯಿಂದ ಮಂಗಳದ ಸರಾಸರಿ ದೂರ 22ಕೋಟಿ 50ಲಕ್ಷ ಕಿಲೋಮೀಟರ್ ಆಗಿದೆ.

ಭಾರತವು ಕಳುಹಿಸಿದ ಮಂಗಳಯಾನವು ಮಂಗಳ ಗ್ರಹಕ್ಕೆ ತಲುಪಲು 258 ದಿನಗಳನ್ನು ತೆಗೆದುಕೊಂಡಿತು. ಹಾಗೆಯೇ ಭಾರತವು ಈ ಮಂಗಳಯಾನ ಮಿಷನ್ ನ ಮೂಲಕ ಮಂಗಳ ಗ್ರಹಕ್ಕೆ ತಲುಪಿದ ಏಷ್ಯಾದ ಪ್ರಥಮ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ತನ್ನ ಪ್ರಥಮ ಪ್ರಯತ್ನದಲ್ಲಿ ಮಂಗಳ ಗ್ರಹಕ್ಕೆ ತನ್ನ ಯಾನವನ್ನು ತಲುಪಿಸಿದ ಮೊದಲ ದೇಶವೆಂಬ ಕೀರ್ತಿಯು ಭಾರತಕ್ಕೆ ಲಭಿಸಿದೆ. ಮಂಗಳಕ್ಕೆ ಪೋಗೋಸ್ ಮತ್ತು ಡೈಮೋಸ್ ಎಂಬ ಎರಡು ಚಿಕ್ಕದಾದ ಉಪಗ್ರಹಗಳು ಇವೆ. ನಾಸಾದ ಪ್ರಕಾರ ಭವಿಷ್ಯದಲ್ಲಿ ಮಂಗಳದಲ್ಲಿಯೂ ಶನಿ ಗ್ರಹದ ಹಾಗೆ ಇರುವ ರಿಂಗ್ಸ್ ಗಳಿರುತ್ತವೆ ಎಂಬುದಾಗಿದೆ. ಎರಡರಿಂದ ನಾಲ್ಕು ಕೋಟಿ ವರ್ಷಗಳ ಬಳಿಕ ಫೋಗೋಸ್ ಉಪಗ್ರಹ ಮಂಗಳ ಗ್ರಹಕ್ಕೆ ಡಿಕ್ಕಿ ಹೊಡೆದು ಅದರ ಚೂರುಗಳು ಮಂಗಳದ ಸುತ್ತ ರಿಂಗ್ಸ್ ಅನ್ನು ನಿರ್ಮಿಸುತ್ತದೆ ಎಂಬುದು ನಾಸಾದ ವಿವರಣೆಯಾಗಿದೆ.

ಕೋಟ್ಯಾಂತರ ವರ್ಷಗಳ ಹಿಂದೆ ಮಂಗಳಗ್ರಹದಲ್ಲಿಯೂ ಭೂಮಿಯ ರೀತಿ ಜೀವನಾಂಶ ಇತ್ತೆಂದು ಹೇಳಲಾಗುತ್ತದೆ. ಹಾಗೆಯೇ ನಿಧಾನವಾಗಿ ವಾತಾವರಣದ ಏರುಪೇರಿನಿಂದಾಗಿ ಮಂಗಳದಲ್ಲಿನ ಜೀವನಾಂಶ ನಶಿಸುತ್ತಾ ಬಂದಿತ್ತು ಎಂಬುದಾಗಿದೆ. ಇನ್ನೊಂದು ಸಿದ್ಧಾಂತದ ಪ್ರಕಾರ ಸುಮಾರು 4 ಕೋಟಿ ವರ್ಷಗಳ ಹಿಂದೆ ಮಂಗಳಗ್ರಹದಲ್ಲಿನ ಮ್ಯಾಗ್ನೆಟೋಸ್ ಸ್ಪಿಯರ್ ಒಮ್ಮೆಲೆ ನಾಶವಾಗಿ ಹೋಗಿತ್ತು. ಇದರಿಂದಾಗಿ ಸೂರ್ಯನ ಹಾನಿಕಾರಕ ಕಿರಣಗಳು ಮತ್ತು ರೇಡಿಯೇಷನ್ ವಾತಾವರಣದಲ್ಲಿ ಸೇರಿದ ಪರಿಣಾಮ ಮಂಗಳದ ಮೇಲಿನ ಜೀವನ ಅಂಶವು ಸಮಯದಲ್ಲಿ ನಶಿಸುತ್ತಾ ಹೋಯಿತು ಎನ್ನಲಾಗುತ್ತದೆ. ಈ ಲೇಖನವನ್ನು ಶೇರ್ ಮಾಡಿ ಎಲ್ಲರಿಗು ಈ ಉಪಯುಕ್ತ ಮಾಹಿತಿ ತಿಳಿಯಲಿ.

LEAVE A REPLY

Please enter your comment!
Please enter your name here