ಈ ಒಂದು ಗಿಡ ಮನುಷ್ಯನ ನೂರು ರೋಗ ಗುಣ ಮಾಡುತ್ತೆ

3
3680

ಕಳೆಗಿಡದಂತೆ ಕಂಡು ಬರುವ ಈ ಸಸ್ಯ ಸರ್ವರೋಗ ನಿವಾರಣೆ ಮಾಡುವುದು ಎಂದರೆ ನೀವು ನಂಬುವಿರಾ? ಹೌದು ಈ ಸಸ್ಯ ಬಯಲುಸೀಮೆ ಯಲ್ಲಿ ಎಲ್ಲೆಂದರಲ್ಲಿ ಕಂಡು ಬರುತ್ತದೆ. ಅಲ್ಲದೆ ಮಲ್ನಾಡಿನಲ್ಲಿಯೂ ಸಹ ಕಾಣಸಿಗುತ್ತದೆ. ಈ ಗಿಡದ ಪ್ರಯೋಜನ ಎಷ್ಟಿದೆಯೆಂದರೆ ನೀವು ವೈದ್ಯರನ್ನು ದೂರ ಇಡಬಹುದು. ಇದರ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಹೊಂದಿದೆ. ಇದರ ಮಹತ್ವ ಎಲ್ಲಿಯದೆಂದರೆ ರಾಮಾಯಣದಲ್ಲೂ ಸಹ ಈ ಗಿಡದ ಬಗ್ಗೆ ಉಲ್ಲೇಖವಿದೆ. ಗಾಂಧಾರಿ ಎಣ್ಣೆಯಲ್ಲಿ ಈ ಗಿಡವನ್ನು ಬೆರೆಸಿ ಕುದಿಸಿ ಕುರು ಸಾರ್ವಬೌಮನಿಗೆ ಹಚ್ಚುತ್ತಿದ್ದಳಂತೆ ಆದ್ದರಿಂದಲೇ ಆತನ ಶರೀರ ವಜ್ರ ಕಾಯವಾಯಿತು ಎಂಬ ನಂಬಿಕೆ ಇದೆ.

ಇಷ್ಟಕ್ಕೂ ಈ ಗಿಡ ಯಾವುದು ಏನೆಲ್ಲಾ ಇದರ ಪ್ರಯೋಜನವಿದೆ ಎಂದು ನೋಡೋಣ. ಇದಲ್ಲದೆ ರಾಮ ಲಕ್ಷ್ಮಣರಿಗೆ ಶಸ್ತ್ರ ಹಾಗೂ ಶಾಸ್ತ್ರ ವಿದ್ಯೆಯನ್ನು ಬೋಧನೆ ಮಾಡುವ ವಿಶ್ವಾಮಿತ್ರ ಮಹರ್ಷಿಗಳು ಬಲ ಮತ್ತು ಅತಿಬಲ ಎಂಬ ಮಂತ್ರವನ್ನು ಹೇಳಿಕೊಡುತ್ತಿರುತ್ತಾರೆ. ಇದನ್ನು ಬೇರೆ ಯಾರೂ ಕೇಳಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಮಂತ್ರೋಪದೇಶ ಮಾಡುತ್ತಾರೆ. ಅದೇ ಸಮಯದಲ್ಲಿ ಅಲ್ಲಿ ಬೆಳೆದು ಕೊಂಡಿದ್ದ ಎರಡೂ ಗಿಡಗಳು ಈ ಮಂತ್ರವನ್ನು ಕೇಳಿಸಿಕೊಳ್ಳುತ್ತವೆ. ಅಲ್ಲದೇ ಕೇಳಿಸಿಕೊಂಡ ಕಾರಣಕ್ಕಾಗಿ ಭೀತಿ ಶುರುವಾಯಿತು. ಆದ್ದರಿಂದ ವಿಶ್ವಾಮಿತ್ರರಲ್ಲಿ ಕ್ಷಮೆ ಯಾಚಿಸುತ್ತವೆ. ಆಗ ವಿಶ್ವಾಮಿತ್ರರು ನೀವು ಜಗತ್ತಿನಲ್ಲಿ ಎಲ್ಲೇ ಹುಟ್ಟಿದರೂ ಜನಕ್ಕೆ ಬಲ ಹಾಗು ಆರೋಗ್ಯವನ್ನು ಒದಗಿಸಿ ಎಂದು ಆಶೀರ್ವದಿಸಿದರು. ಆ ಎರಡು ಗಿಡಗಳೇ ಬಲ ಮತ್ತು ಅತಿಬಲ. ನಾವಿಲ್ಲಿ ನಿಮಗೆ ಇಂದು ಪರಿಚಯಿಸುವ ಗಿಡದ ಹೆಸರು ಅತಿಬಲ.

ಇದು ಪುರುಷತ್ವ ಸಮಸ್ಯೆಯಿಂದ ಹೃದಯದ ಖಾಯಿಲೆಯವರೆಗೆ ಎಲ್ಲವನ್ನು ಉಪಶಮನ ಮಾಡುವ ಶಕ್ತಿ ಈ ಅತಿಬಲಕ್ಕಿದೆ. ಹಳದಿ ಅಥವಾ ಮಿಶ್ರ ಬಣ್ಣದ ಹೂವುಗಳು ಅಂಟು ಅಂಟಾದ ಸಣ್ಣ ರೋಮಗಳು, ಹೃದಯಕಾರದ ಎಲೆಗಳನ್ನು ಇದು ಹೊಂದಿದೆ. ಕಣ್ಣಿನಲ್ಲಿ ಸಮಸ್ಯೆ ಇದ್ದರೆ ಅತಿಬಲದ ಎಲೆಗಳನ್ನು ತೊಳೆದು ನೀರಲ್ಲಿ ಕುದಿಸಿ ಕಷಾಯವನ್ನು ಮಾಡಿ ಕುಡಿದರೆ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಕಿಡ್ನಿಯಲ್ಲಿರುವ ಕಲ್ಲು ಕರಗಿ ಮೂತ್ರನಾಳದ ಮೂಲಕ ಹೊರಗೆ ಹೋಗಲು ಇದರ ನಾಲ್ಕೈದು ಎಲೆಗಳನ್ನು ನೀರಲ್ಲಿ ನೆನೆಸಿ ನಂತರ ಅದನ್ನು ಚೆನ್ನಾಗಿ ಕುದಿಸಿ ಶೋಧಿಸಿದ ಕಷಾಯವನ್ನು ದಿನಕ್ಕೆ ಮೂರು ಬಾರಿ ನಿಯಮಿತವಾಗಿ ಕುಡಿಯುತ್ತಾ ಬರಬೇಕು. ಗಾಯವಾಗಿ ರಕ್ತ ಸೋರುತ್ತಿದ್ದರೆ ರಕ್ತ ಸ್ರಾವವನ್ನು ತಡೆಯಲು ಅತಿಬಲದ ಎಲೆಗಳನ್ನು ಬಳಸಬಹುದು. ವಾರಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಅತಿಬಲದ ಕಷಾಯವನ್ನು ಕುಡಿಯುತ್ತಾ ಬಂದರೆ ಹೃದಯ ಅತೀ ಆರೋಗ್ಯದಿಂದ ಕೆಲಸ ಮಾಡುತ್ತದೆ. ಬ್ಲಾಕ್ ಆಗದಂತೆ ಸರಾಗವಾಗಿ ರಕ್ತಸಂಚಾರವನ್ನು ಸುಲಭಗೊಳಿಸುತ್ತದೆ. ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಜಾಸ್ತಿ ಇವೆ. ಇವುಗಳು ಕಚ್ಚಿದರೆ ನಂಜು ಆಗಿ ದೊಡ್ಡ ಸಮಸ್ಯೆಯಾಗುವುದು.

ನಾಯಿಗಳು ಕಚ್ಚಿದರೆ ಸುಲಭ ಪರಿಹಾರವೇನೆಂದರೆ ಅತಿಬಲದ ಎಲೆಗಳನ್ನು ಜಜ್ಜಿ ರಸವನ್ನು ತೆಗೆದು ಕಚ್ಚಿದ ಜಾಗಕ್ಕೆ ಹಾಕಿ ಬಟ್ಟೆಯಲ್ಲಿ ಕಟ್ಟಿದರೆ ನಂಜು ಏರದೆ ಗಾಯ ಬೇಗ ವಾಸಿಯಾಗುತ್ತದೆ. ಮಕ್ಕಳಿಗೆ ಜಂತುಹುಳುಗಳ ಸಮಸ್ಯೆ ಇದ್ದರೆ ಇದರ ಕಷಾಯವನ್ನು ದಿನಕ್ಕೆರಡು ಬಾರಿ ಎರಡೆರಡು ಚಮಚ ಕುಡಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಜ್ವರ ಹಾಗು ವಿಷಮಶೀತ ಜ್ವರದಿಂದ ಬಳಲುತ್ತಿರುವವರು ಅತಿಬಲದ ಕಷಾಯ ಮಾಡಿ ಅದಕ್ಕೆ ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ಜ್ವರ ಕಡಿಮೆಯಾಗುವುದು ಮತ್ತು ದೇಹಕ್ಕೆ ಶಕ್ತಿ ಸಿಗುತ್ತದೆ. 100ಗ್ರಾಮ್ ಶತಾವರಿ ಬೇರಿನ ಪುಡಿ ಮತ್ತು 50ಗ್ರಾಮ್ ಅತಿಬಲದ ಬೀಜವನ್ನು ಜೋನಿ ಬೆಲ್ಲ ಅಥವಾ ಕಪ್ಪು ಬೆಲ್ಲದೊಂದಿಗೆ ಸೇರಿಸಿ ಸ್ವಲ್ಪ ನೀರು ಬೆರೆಸಿ ಉಂಡೆ ತಯಾರಿಸಿಟ್ಟು ಪ್ರತಿನಿತ್ಯ ಎರಡು ಬಾರಿ ಹಾಲಿನ ಜೊತೆ ಸೇವಿಸಿದರೆ ಪುರುಷತ್ವದ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಸೊಂಟದ ನೋವಿನಿಂದ ಬಳಲುತ್ತಿರುವವರು ಸೊಂಟಕ್ಕೆ ಎಳ್ಳೆಣ್ಣೆ ಅಥವಾ ಹರಳೆಣ್ಣೆಯ ಮಸಾಜ್ ಮಾಡಿ ನಂತರ ಎರಡು ಹಿಡಿ ಅತಿಬಲದ ಎಲೆಗಳನ್ನು ನೋವಿರೋ ಜಾಗಕ್ಕೆ ಇಟ್ಟು ಬಟ್ಟೆಯ ಸಹಾಯದಿಂದ ರಾತ್ರಿ ಕಟ್ಟಿದರೆ ಬೆಳಗ್ಗೆಗೆ ನೋವು ವಾಸಿಯಾಗುವುದು. ಕೆಮ್ಮು ಅಸ್ತಮದಂತಹ ರೋಗಗಳಿಗೆ ಕೂಡ ಈ ಅತಿಬಲದ ಎಲೆಯನ್ನು ಉಪಯೋಗಿಸಬಹುದು.

ಒಟ್ಟಾರೆಯಾಗಿ ಈ ಗಿಡದ ಪ್ರತಿಯೊಂದು ಭಾಗವು ಔಷಧಿಯಂತೆ ಕೆಲಸ ಮಾಡುತ್ತದೆ. ಇದರ ಎಣ್ಣೆ ಮಾಡಿ ಮೈಗೆ ಹಚ್ಚುತ್ತಿದ್ದರೆ ದೇಹ ಪುಷ್ಟಿಯಾಗುತ್ತದೆ. ಚರ್ಮ ವ್ಯಾಧಿ ನಿವಾರಣೆಗೆ ಇದರ ಇಡೀ ಗಿಡವನ್ನು ಎಣ್ಣೆಯಲ್ಲಿ ಹಾಕಿ ಕಾಯಿಸಿ ಮೈಗೆ ಹಚ್ಚಬೇಕು. ಹೀಗೆ ಅತಿಬಲದ ಗಿಡದ ಉಪಯೋಗ ಬಹಳ. ಸ್ನೇಹಿತರೇ ಅತಿಬಲದ ಗಿಡವನ್ನು ಎಲ್ಲಾದರೂ ಕಂಡರೆ ನಿರ್ಲಕ್ಷ್ಯ ಮಾಡದೆ ಅದನ್ನು ಉಪಯೋಗಿಸಿಕೊಳ್ಳಿ. ಇದನ್ನು ಮನೆಯಲ್ಲಿ ಬೆಳೆಸಿದರೆ ತುಂಬಾ ಒಳ್ಳೆಯದು. ಇಂತಹ ಸಸ್ಯಗಳನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಸ್ನೇಹಿತರೇ ಈ ಉಪಯುಕ್ತ ಮಾಹಿತಿ ಇಷ್ಟವಾದರೆ ಶೇರ್ ಮಾಡಿ ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ ಇದರ ಬಗ್ಗೆ ತಿಳಿಸಿ.

3 COMMENTS

LEAVE A REPLY

Please enter your comment!
Please enter your name here