ಧ್ಯಾನವನ್ನು ಈ ರೀತಿ ಮಾಡಿದರೆ ನಿಮಗೆ ದುಪ್ಪಟ್ಟು ಲಾಭ ಸಿಗುತ್ತೆ

0
550

ಮೆಡಿಟೇಶನ್ ಧ್ಯಾನ ಅನ್ನುವುದು ಪುರಾತನ ಕಾಲದಿಂದಲೂ ಇದೆ ಆದರೆ ಇದರ ಪ್ರಯೋಜನವನ್ನು ಎಲ್ಲರೂ ಈಗ ತಿಳಿದುಕೊಳ್ಳುತ್ತಾರೆ ಅದಕ್ಕೆ ಕಾರಣ ಸ್ಟ್ರೆಸ್ ಅಥವಾ ಒತ್ತಡ. ಒಂದಾನೊಂದು ಕಾಲದಲ್ಲಿ ಈ ಒತ್ತಡ ನಮ್ಮಲ್ಲಿ ಇರಲಿಲ್ಲ ಆದ್ರೆ ಈಗ ಕೆಲಸಕ್ಕೆ ಹೋಗುವ ಎಂಬತ್ತರಷ್ಟು ಮಂದಿ ಈ ಒತ್ತಡಕ್ಕೆ ಗುರಿ ಆಗುತ್ತಾ ಇದ್ದಾರೆ ಕಾರಣ ಕೆಲಸದಲ್ಲಿ ಆಗುವ ಬದಲಾವಣೆ ಮೇಲಧಿಕಾರಿ ಗಳ ಒತ್ತಡ ಕೆಲಸ ಇಷ್ಟ ಇಲ್ಲದೆ ಇರುವುದು ಹಣದ ಮೇಲಿನ ವ್ಯಾಮೋಹ ಇನ್ನೂ ತುಂಬಾ ಕಾರಣಗಳಿವೆ. ಧ್ಯಾನ ಈ ಒಂದು ಒತ್ತಡವನ್ನು ಕಡಿಮೆ ಮಾಡುತ್ತೆ ಅದಕ್ಕೆ ಎಲ್ಲರೂ ಈ ಧ್ಯಾನದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ ಈ ಧ್ಯಾನ ಅನ್ನುವುದು ಮೊದಲು ನಮ್ಮ ಭಾರತ ದೇಶದಲ್ಲಿ ಮಾತ್ರ ಇತ್ತು ಈಗ ಪ್ರಪಂಚದ ಎಲ್ಲ ದೇಶಗಳಿಗೂ ಹರಡಿಕೊಂಡಿದೆ ಇದಕ್ಕೆ ಕಾರಣ ಇದು ಒತ್ತಡವನ್ನು ಕಮ್ಮಿ ಮಾಡುತ್ತೆ ಅನ್ನುವ ಉದ್ದೇಶದಿಂದ ಧ್ಯಾನ ನಿರುತ್ಸಾಹ ಮತ್ತು ಆತಂಕವನ್ನು ಕಮ್ಮಿ ಮಾಡುತ್ತದೆ ಏಕಾಗ್ರತೆಯನ್ನು ಬೆಳೆಸುತ್ತದೆ ವಯಸ್ಸು ಬೆಳೆಯುದನ್ನು ಕಮ್ಮಿ ಮಾಡುತ್ತೆ ಹೃದಯಾಘಾತ ಆಗುವುದನ್ನು ಕಮ್ಮಿ ಮಾಡುತ್ತದೆ ಈ ರೀತಿ ತುಂಬಾ ಲಾಭಗಳು ಇವೆ.

ಧ್ಯಾನವನ್ನು ತುಂಬಾ ರೀತಿ ಮಾಡುತ್ತಾರೆ ಆದರೆ ಹೆಚ್ಚಾಗಿ ಮಾಡುವುದು ಉಸಿರಾಟವನ್ನು ಗಮನಿಸುವ ರೀತಿಯಲ್ಲಿ ಅಂದರೆ ಬೆನ್ನು ನೇರವಾಗಿ ಇರಬೇಕು ಆರಾಮಾಗಿ ಕೂರಬೇಕು ತುಂಬಾ ಜನ ಪದ್ಮಾಸನದಲ್ಲಿ ಕೂರಲು ಸಲಹೆ ನೀಡುತ್ತಾರೆ. ಒಂದು ವೇಳೆ ನಿಮಗೆ ಮೊಣಕಾಲು ನೋವು ಇದ್ದರೆ ಒಂದು ಕುರ್ಚಿಯಲ್ಲಿ ಕೂರಿ ಆದರೆ ದೇಹ ಶಾಂತ ವಾಗಿ ಇರಬೇಕು ಆರಾಮಾಗಿ ಇರಬೇಕು ಬೆನ್ನು ಮತ್ತು ತಲೆ ನೇರವಾಗಿ ಇರಬೇಕು. ನಿಮ್ಮ ಅಂಗೈ ಜ್ಞಾನ ಮುದ್ರೆಯಲ್ಲಿ ಇರಬೇಕು ಈ ರೀತಿ ಕೂತ ನಂತರ ಎರಡು ಮೂರು ಬಾರಿ ಜೋರಾಗಿ ಉಸಿರನ್ನು ತೆಗೆದುಕೊಂಡು ಬಿಡಬೇಕು ನಂತರ ನೀವು ಬಲವಂತವಾಗಿ ಉಸಿರಡದೆ ಉಸಿರಾಟ ಹೇಗೆ ನಡೆಯುತ್ತಿದೆ ಎಂದು ಗಮನಿಸಬೇಕು ಅಂದರೆ ಉಸಿರಾಟದಲ್ಲಿ ನಿಮ್ಮ ಎದೆ ಹೊಟ್ಟೆ ಹೇಗೆ ಅಲುಗಾಡುತ್ತಿದೆ ಹೇಗೆ ಉಬ್ಬುತ್ತದೆ ನಿಮ್ಮ ಮೂಗಿನ ರಂಧ್ರ ಹೇಗೆ ಉಬ್ಬುತ್ತಿದೆ ಈ ರೀತಿ ತುಂಬಾ ಇದೆ ಇವುಗಳಲ್ಲಿ ಯಾವುದಾದರೂ ಒಂದನ್ನು ಗಮನಿಸುತ್ತಾ ಇರಬೇಕು ಯಾವುದನ್ನು ಗಮನಿಸಬೇಕು ಎಂಬುದು ನಿಮ್ಮ ಇಷ್ಟ.

ಧ್ಯಾನದ ಕೊನೆಯಲ್ಲಿ ನಿಧಾನವಾಗಿ ಮೆತ್ತಗೆ ಕಣ್ಣು ತೆರೆಯಬೇಕು ನಿಮ್ಮ ಮನಸ್ಸು ಎಷ್ಟು ರೆಲ್ಯಾಕ್ಸ್ ಆಗಿದಿಯೋ ಗಮನಿಸಬೇಕು ಧ್ಯಾನ ಮಾಡಿದ ಪ್ರತೀ ಸಾರಿ ಸರಿಯಾಗಿ ಮಾಡಲು ಆಗುವುದಿಲ್ಲ ಒಂದೊಂದು ಬಾರಿ ಎಷ್ಟೋ ಏಕಾಗ್ರತೆ ಇಂದ ಮಾಡಬೇಕು ಎಂದು ಕೊಂಡರೂ ಸಾಧ್ಯವಾಗುವುದಿಲ್ಲ ಇಂಥ ಸಮಯದಲ್ಲಿ ನಿರಾಸೆ ಪಡದೆ ಮುಂದಿನ ದಿನ ಪ್ರಯತ್ನಿಸಬೇಕು ಮುಖ್ಯವಾಗಿ ಎರಡು ಮೂರು ದಿನ ಧ್ಯಾನ ಮಾಡಿದ ನಂತರ ಜೀವನ ಬದಲಾಗಿ ಬಿಡಬೇಕು ಅಂದುಕೊಳ್ಳಬೇಡಿ ದಿನ ನಿತ್ಯ ಮಾಡುತ್ತಾ ಇರಬೇಕು. ಇನ್ನೊಂದು ಮುಖ್ಯ ವಿಷಯ ನಿಮ್ಮ ಒತ್ತಡಕ್ಕೆ ಮುಖ್ಯ ಕಾರಣ ಸ್ಕ್ರೀನ್ ಅದು ನಿಮ್ಮ ಟಿವಿ ಆಗಿರಬಹುದು ಕಂಪ್ಯೂಟರ್ ಆಗಿರಬಹುದು ಅಥವಾ ಮೊಬೈಲ್ ಆಗಿರಬಹುದು ಹೆಚ್ಚು ಸಮಯವಲ್ಲದೆ ಒಂದು ಲಿಮಿಟ್ ನಲ್ಲಿ ಬಳಸುವುದು ಅಭ್ಯಾಸ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here