ಸುವರ್ಣ ಗಡ್ಡೆಯನ್ನು ತಿಂದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ

0
1006

ನಾವು ನಿತ್ಯ ಎಷ್ಟೆಲ್ಲ ರೀತಿಯ ತರಕಾರಿಗಳನ್ನು ಸೇವಿಸುತ್ತೇವೆ ಅಲ್ಲವೇ ಈ ತರಕಾರಿಗಳಲ್ಲಿ ಹಲವಾರು ರೀತಿಯ ಪೌಷ್ಟಿಕ ಅಂಶಗಳು ಇರುವ ಕಾರಣ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬ ಕಾರಣಕ್ಕೆ ನಾವು ನಿತ್ಯ ತರಕಾರಿಗಳನ್ನು ಸೇವಿಸುತ್ತೇವೆ ಆದರೆ ಅದೇ ರೀತಿಯ ತರಕಾರಿಗಳಲ್ಲಿ ಒಂದಾಗಿರುವ ಸುವರ್ಣ ಗೆಡ್ಡೆ ಇದನ್ನು ಎಲ್ಲರೂ ಕೇಳಿದ್ದೇವೆ ಜೊತೆಗೆ ನೋಡಿದ್ದೇವೆ ಆದರೆ ಇದರ ಬಳಕೆ ಮಾತ್ರ ತುಂಬಾ ವಿರಳ ಏಕೆಂದರೆ ಇದರ ವಾಸನೆ ರುಚಿ ಎಲ್ಲವೂ ಕೂಡ ತುಂಬ ವಿಭಿನ್ನವಾಗಿರುತ್ತದೆ ಆದರೆ ಇದನ್ನು ಬಳಸಿದರೆ ಆರೋಗ್ಯಕ್ಕೆ ಎಷ್ಟೆಲ್ಲ ಒಳ್ಳೆಯದು ಇದನ್ನು ಸೇವಿಸುವುದರಿಂದ ಎಷ್ಟೆಲ್ಲ ರೀತಿಯ ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡಬಹುದು ಎಂದು ತಿಳಿದುಕೊಂಡರೆ ಇನ್ನು ಮುಂದೆ ಆದರೂ ಇದನ್ನು ಬಳಸಲು ಶುರು ಮಾಡುತ್ತೇವೆ ಹಾಗಾದರೆ ಸುವರ್ಣ ಗೆಡ್ಡೆಯನ್ನು ಬಳಸುವುದರಿಂದ ಏನೆಲ್ಲ ಲಾಭಗಳು ಇವೆ ನೋಡೋಣ ಬನ್ನಿ.

ಮೂಲವ್ಯಾಧಿ ಈ ಸಮಸ್ಯೆ ಇತ್ತೀಚಿಗೆ ಹೆಚ್ಚಿದೆ ಅದರೆ ಇದಕ್ಕೆ ಸರಿಯಾಗಿ ಔಷದಿ ಸಿಗದೆ ಈ ಸಮಸ್ಯೆಯಿಂದ ತುಂಬಾ ಒದ್ದಾಡುತ್ತಿದ್ದರೆ ಆದರೆ ತುಂಬಾ ಸುಲಭವಾಗಿ ಮೂಲವ್ಯಾದಿ ಸಮಸ್ಯೆಯಿಂದ ಹೊರ ಬರಬೇಕು ಎಂದರೆ ಸುವರ್ಣ ಗೆಡ್ಡೆಯನ್ನು ನಿತ್ಯ ಆಹಾರದ ಜೊತೆಗೆ ಬಳಸುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ದೂರ ಆಗುತ್ತದೆ. ಆನೇಕಾಲು ರೋಗ ಈ ರೋಗದ ಬಗ್ಗೆ ತಿಳಿದಿದ್ದೇವೆ ಈ ಸಮಸ್ಯೆ ಬಂದರೆ ಸಾಕು ಮೈ ಕೈ ನೋವು ಎಲ್ಲ ಊದಿ ಕೊಳ್ಳುತ್ತದೆ ಈ ಸಮಸ್ಯೆಯನ್ನು ಸುಲಭವಾಗಿ ಗುಣ ಪಡಿಸಿಕೊಳ್ಳಬೇಕು ಎಂದರೆ ಸುವರ್ಣ ಗೆಡ್ಡೆಯನ್ನು ಚೆನ್ನಾಗಿ ಜಜ್ಜಿ ಅದಕ್ಕೆ ಸ್ವಲ್ಪ ತುಪ್ಪ ಮತ್ತು ಜೇನುತುಪ್ಪವನ್ನು ಸೇರಿಸಿ ಊದಿ ಕೊಂಡಿರುವ ಜಾಗಕ್ಕೆ ಹಚ್ಚಿದರೆ ಆನೆಕಾಲು ಸಮಸ್ಯೆ ಗುಣ ಆಗುತ್ತದೆ.

ಚೇಳು ಕಡಿತಕ್ಕೆ ಕೂಡ ಉತ್ತಮ ಔಷದ ಸುವರ್ಣ ಗೆಡ್ಡೆ ಈ ಸಮಸ್ಯೆಗೆ ಏನು ಮಾಡಬೇಕು ಎಂದರೆ ಸುವರ್ಣ ಗೆಡ್ಡೆಯನ್ನು ಚೆನ್ನಾಗಿ ಬೇಯಿಸಿ ಅದನ್ನು ಚೇಳು ಕಚ್ಚಿರುವ ಜಾಗಕ್ಕೆ ಹಚ್ಚಿದರೆ ಚೇಳು ಕಡಿದಿರುವುದು ಗುಣ ಆಗುತ್ತದೆ. ತುಂಬಾ ಜನರ ಪ್ರಯತ್ನ ಆಗಿರುವುದು ತೂಕ ಕಡಿಮೆ ಮಾಡುವುದು ಇಂತಹವರು ನಿತ್ಯ ಇದನ್ನು ಬಳಸಬೇಕು ಜೊತೆಗೆ ಕೊಬ್ಬಿನಂಶದಿಂದ ಚರ್ಮದಲ್ಲಿ ಗಂಟುಗಳಾಗಿದ್ದರೆ ಇದಕ್ಕೆ ಸುವರ್ಣ ಗಡ್ಡೆ ಹಾಗೂ ಒಣಶುಂಠಿಯನ್ನು ಸೇರಿಸಿ ಚೆನ್ನಾಗಿ ಜಜ್ಜಿ ಗಂಟುಗಳು ಆಗಿರುವ ಭಾಗಕ್ಕೆ ಲೇಪಿಸಬೇಕು ಗಂಟುಗಳು ಬೇಗ ಗುಣ ಆಗುತ್ತದೆ. ನೋಡಿ ಸುವರ್ಣ ಗೆಡ್ಡೆಯಲ್ಲಿ ಎಷ್ಟೆಲ್ಲ ರೀತಿಯ ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಇದೆ ಹಾಗಾಗಿ ನಿತ್ಯ ನಿಮ್ಮ ತರಕಾರಿಗಳ ಜೊತೆಗೆ ಈ ಸುವರ್ಣ ಗೆಡ್ಡೆಯನ್ನು ಕೂಡ ಜೊತೆಯಲ್ಲಿ ಬಳಸಿ ಇದರಲ್ಲಿ ಪಲ್ಯ. ಸಾಗು. ಸಿಹಿ ಪದಾರ್ಥ ಎಲ್ಲವನ್ನು ಕೂಡ ತಯಾರಿಸಬಹುದು ಹಾಗಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ. ಈ ಲೇಖನ ಮರೆಯದೇ ಎಲ್ಲ ಕಡೆ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here