ಹೆಂಗಸರು ಮೂಗುತಿಯನ್ನು ಧರಿಸುವುದರಿಂದ ಅವ್ರಿಗೆ ಈ ಹತ್ತು ಲಾಭ ಸಿಗುತ್ತೆ

0
901

ಹಿಂದಿನ ಕಾಲದಲ್ಲಿ 5 ವರ್ಷ ಮಕ್ಕಳಿಗೆಲ್ಲ ಮೂಗುತಿಯನ್ನು ಹಾಕಿಸುತ್ತಿದ್ದರು ಆದರೆ ಇಂದು ಕಾಲ ಬದಲಾದಂತೆ ಹೆಣ್ಣು ಮಕ್ಕಳು ಕಂಕಣ ಭಾಗ್ಯ ಕುಡಿ ಬಂದಾಗ ಮದುವೆ ಹತ್ತಿರ ಬಂದಾಗ ಮೂಗುತಿ ಹಾಕಿಸಿಕೊಳ್ಳುತ್ತಾರೆ ಈ ಮೂಗುತಿ ಹೆಣ್ಣಿನ ಸೌಂದರ್ಯದ ಪ್ರತೀಕವಾಗಿದೆ, ಸೌಭಾಗ್ಯದ ಪ್ರತೀಕವಾಗಿದೆ. ಹೆಣ್ಣಿನ ಮೂಗಿನಲ್ಲಿ ಮೂಗುತಿ ಇದ್ದರೆ ಮೂಗಿಗೆ ಒಂದು ಅಂದ ಬರುತ್ತದೆ ಮೂಗಿಗೆ ಮೂಗುತಿಯೇ ಅಂದ ಅನ್ನೋ ಹಾಗೆ ಮೂಗುತಿಯ ಬಳಕೆಯು ಪ್ರತಿಯೊಂದು ಧರ್ಮದಿಂದ ಧರ್ಮಕ್ಕೆ ಸಂಪ್ರದಾಯದ ಜೊತೆಗೆ ಅವರವರ ಪ್ರದೇಶಕ್ಕೆ ತಕ್ಕಂತೆ ಆಕಾರದಲ್ಲಷ್ಟೇ ಅಲ್ಲ, ಹೆಸರಲ್ಲೂ ಬದಲಾಗುತ್ತಿರುತ್ತದೆ.ಇಂತಹ ಮೂಗುತಿಯನ್ನು ನತ್ತು ಮೂಗು ಬೊಟ್ಟು ಬೇಸರಿ ಬುಲಾಕು ಇತ್ಯಾದಿಯಾಗಿ ಕರೆಯುತ್ತಾರೆ.

ಆದರೆ ಮೂಗುತಿಯನ್ನು ಹಾಕಿಕೊಳ್ಳುವುದು ಇಂದು ಸಂಪ್ರದಾಯವೋ. ಫ್ಯಾಷನ್ ವೋ ಗೊತ್ತಿಲ್ಲಈ ಮೂಗುತಿಯನ್ನು ಚಿನ್ನದಿಂದ ಮಾಡಿರುವ ಒಂದು ಸಣ್ಣ ಗುಂಡು ಅಥವಾ ಕಲ್ಲಿನಿಂದ ತಯಾರಿಸಿದ ಮೂಗುತಿಯನ್ನು ಹಿಂದೂ ಸಂಪ್ರದಾಯದ ಪ್ರಕಾರ ಎಡಬದಿಯ ಮೂಗಿಗೆ ಚುಚ್ಚಲಾಗುತ್ತದೆ. ಇನ್ನು ಕೆಲವು ಸಂಪ್ರದಾಯದಲ್ಲಿ ಮೂಗುತಿಯನ್ನು ಬಲ ಬದಿಯ ಮೂಗಿಗೆ ಕೂಡ ಚುಚ್ಚಲಾಗುತ್ತದೆ. ಆದರೆ ಈ ಮೂಗುತಿಯನ್ನು ಹಾಕಿಕೊಳ್ಳುವುದರಿಂದ ಏನೆಲ್ಲ ಲಾಭಗಳು ಗೊತ್ತೇ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಸ್ತ್ರೀಯರ ಮನಸ್ಸು ತುಂಬಾ ಬೇಗ ಚಂಚಲವಾಗಿರುತ್ತದೆ ಆದ್ದರಿಂದ ಈ ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯ ನಿರತವಾಗಿ ಮನಸ್ಸು ಸ್ಥಿರವಾಗುತ್ತದೆ ಮಹಿಳೆಯ ಮನಸ್ಸು ಚಂಚಲತೆಗೆ ಒಳಗಾಗುವುದಿಲ್ಲ. ಅಷ್ಟೆ ಅಲ್ಲದೆ ಮೂಗಿಗೆ ಮೂಗುತಿಯನ್ನು ಹಾಕಿಕೊಳ್ಳುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ಬಿಂದು ಒತ್ತಡದ ಆಕ್ಯಪ್ರೆಶರ್ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕೂಡ ಕಡಿಮೆಯಾಗುತ್ತದೆ.

ಹಾಗೆಯೇ ಕುದುರೆಗೆ ಹೇಗೆ ಮೂಗಿಗೆ ದಾರವನ್ನು ಕಟ್ಟಿ ಅದನ್ನು ನಿಯಂತ್ರಿಸಲಾಗುತ್ತೆದೆಯೋ ಅದೇ ರೀತಿಯಾಗಿ ಮೂಗುತಿ ಕೂಡ ಹೆಣ್ಣಿನ ಕೋಪ ಹಟ ಚಂಚಲತೆಯನ್ನು ಕಡಿಮೆ ಮಾಡುತ್ತದೆ. ಮೂಗಿಗೆ ಮೂಗುತಿ ಹಾಕಿಕೊಳ್ಳುವುದರಿಂದ ಮಹಿಳೆಯರಿಗೆ ಶ್ವಾಸಕೋಶದ ತೊಂದರೆಗಳು ಬರುವುದಿಲ್ಲ. ಮೂಗುತಿ ಅಲ್ಲಿ ಇರುವ ಚೈತನ್ಯದಿಂದ ಇಡೀ ಮುಖಕ್ಕೆ ಚೈತನ್ಯ ಕಾಣುತ್ತದೆ. ಮೂಗುತಿಯನ್ನು ಹಾಕಿಕೊಳ್ಳುವುದರಿಂದ ಮಹಿಳೆಯರ ಮನಸ್ಸು ಯಾವಾಗಲೂ ಸ್ಥಿರವಾಗಿರುತ್ತದೆ. ಮೂಗುತಿಯನ್ನು ಧರಿಸುವುದರಿಂದ ಇಡೀ ದೇಹಕ್ಕೆ ಒಂದು ರೀತಿಯ ಶಕ್ತಿ ನೀಡುತ್ತದೆ. ಮೂಗುತಿಯನ್ನು ಧರಿಸುವುದರಿಂದ ಮೂಗಿಗೆ ಒಳ್ಳೆಯ ಗಾಳಿ ಬರುತ್ತದೆ ಹಾಗೂ ಕೆಟ್ಟ ಶಕ್ತಿಗಳು ಹೊರ ಹೋಗಲು ಸಹಾಯ ನೀಡುತ್ತದೆ.

ಹಾಗಾಗಿ ಮಹಿಳೆಯರು ಮೂಗಿಗೆ ಮೂಗುತಿ ಹಾಕಿಕೊಳ್ಳಬೇಕು ಇದರಿಂದ ತಮಗೆ ಗೊತ್ತಿಲ್ಲದ ಹಾಗೆ ತಾವು ನಿಯಂತ್ರಣದಲ್ಲಿ ಇರಲು ಸಹಾಯ ಮಾಡುತ್ತದೆ ಕೋಪ. ಸಿಟ್ಟು ಜಗಳ ಇದನ್ನೆಲ್ಲ ಕಡಿಮೆ ಮಾಡಿಕೊಳ್ಳಲು ಉತ್ತಮ ಮದ್ದು ಎಂದರೆ ಅದು ಮೂಗುತಿ ಹಾಗಾಗಿ ಪ್ರತಿಯೊಬ್ಬ ಮಹಿಳೆ ಕೂಡ ಮೂಗುತಿ ದರಿಸಿಕೊಳ್ಳಿ. ಇತ್ತೀಚೆಗೆ ಕೆಲವರು ಅಂದಕ್ಕಾಗಿ ಪ್ಯಾಷನ್ ಮೂಗುತಿ ಹಾಕಿಕೊಂಡು ತೆಗೆದು ಬಿಡುತ್ತಾರೆ ಆದರೆ ಇದಕ್ಕಿಂತ ಮೂಗುತಿಯನ್ನು ಚುಚ್ಚಿಸಿಕೊಳ್ಳುವುದು ಒಳ್ಳೆಯದು. ಈ ಲೇಖನ ಮರೆಯದೇ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here