ಈ ಒಂದು ಎಲೆಯಿಂದ ನಿಮಗೆ ಹತ್ತಾರು ಲಾಭ ಸಿಗುತ್ತೆ

1
1157

ನಿಮಗೆ ಮುತ್ತುಗದ ಗಿಡ ಗೊತ್ತಿದೆಯಾ ಒಂದು ಕಾಲದಲ್ಲಿ ಇದರ ಎಲೆಗಳನ್ನ ಊಟಕ್ಕೆ ಬಳಸುತ್ತಿದ್ದರು. ಈಗ ಪ್ಲಾಸ್ಟಿಕ್ ತಟ್ಟೆಗಳು ಪ್ಲಾಸ್ಟಿಕ್ ಲೋಟಗಳು ಕಡೆಗೆ ಪ್ಲಾಸ್ಟಿಕ್ ಬಾಳೆಎಲೆಗಳು ಬಂದ ನಂತರ ಮುತ್ತುಗದ ಬಳಕೆ ಕಡಿಮೆಯಾಗಿದೆ ಆದರೂ ಈಗಲೂ ನಮ್ಮ ಹಳ್ಳಿಗಳಲ್ಲಿ ಇದನ್ನ ಬಳಸುವ ಪದ್ಧತಿ ಇದೆ. ಬಯಲು ಸೀಮೆಯಲ್ಲಿ ಹೆಚ್ಚಾಗಿ ಬೆಳೆಯುವ ಈ ಮುತ್ತುಗದ ಗಿಡದಲ್ಲಿನ ಔಷಧೀಯ ಗುಣಗಳನ್ನು ನೀವು ತಿಳಿದುಕೊಂಡರೆ ನಿಜಕ್ಕೂ ಆಶ್ಚರ್ಯಕ್ಕೀಡಾಗುತ್ತಿರ. ಹಾಗೆ ಮುತ್ತುಗದ ಎಲೆಯಲ್ಲಿ ಊಟ ಯಾಕೆ ಮಾಡುತ್ತಾರೆ ಅನ್ನುವುದು ನಿಮಗೆ ಗೊತ್ತಾಗುತ್ತದೆ. ಅಂತಹ ಮುತ್ತುಗದ ಔಷಧೀಯ ಗುಣಗಳನ್ನು ಈ ಲೇಖನದಲ್ಲಿ ತಿಳಿಯಿರಿ.

ನಮ್ಮ ಭಾರತೀಯ ಪದ್ಧತಿಯಲ್ಲಿ ಮುತ್ತುಗದ ಎಲೆಗೆ ಪವಿತ್ರವಾದ ಸ್ಥಾನವನ್ನು ಕೊಡಲಾಗಿದೆ. ಊಟಕ್ಕೆ ಮುತ್ತುಗವನ್ನು ಬಳಸುತ್ತಿದ್ದುದ್ದರ ಹಿಂದೆ ಇದ್ದ ಕಾರಣ ಕೂಡ ಇದರಲ್ಲಿನ ಔಷಧೀಯ ಗುಣಗಳೇ. ಮುತ್ತುಗದ ಎಲೆ ಹಾಗೆನೇ ತೇಗದ ಎಲೆಗಳು ಅಗಲವಾಗಿರುತ್ತವೆ ಆದರೂ ಊಟಕ್ಕೆ ತೇಗ ನಿಷಿದ್ಧವಾಗಿತ್ತು. ಮುತ್ತುಗವನ್ನು ಶ್ರೇಷ್ಠ ಅಂತ ಪರಿಗಣಿಸುತ್ತಿದ್ದರು. ಮುತ್ತುಗದ ಎಲೆಯಲ್ಲಿ ಊಟ ಮಾಡುವುದರಿಂದ ಹೊಟ್ಟೆ ಉಬ್ಬರ ಗ್ಯಾಸ್ ನಂತಹ ಸಮಸ್ಯೆಗಳು ಉಂಟಾಗುವುದಿಲ್ಲ ಅನ್ನೋ ನಂಬಿಕೆ ಇತ್ತು. ಹಾಗೆಯೇ ಇದರ ಎಲೆ ಮತ್ತು ಹೂಗಳನ್ನು ಇದರ ತೊಗಟೆ ಮತ್ತು ಹಾಲನ್ನು ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಔಷಧವಾಗಿ ಬಳಸಲಾಗುತ್ತಿತ್ತು.

ಹಾಗೆ ಮುತ್ತುಗದ ಎಲೆಗಳನ್ನು ತುಪ್ಪದಲ್ಲಿ ಹುರಿದು ಮೊಸರಿನ ಕೆನೆಯ ಜೊತೆ ಪ್ರತಿನಿತ್ಯ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ. ತೀವ್ರ ಮಂಡಿ ನೋವಿನಿಂದ ಬಳಲುತ್ತಿದ್ದರೆ ಮುತ್ತುಗದ ಬೀಜದ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಮಂಡಿಗಳ ಮೇಲೆ ಲೇಪಿಸಿದರೆ ನೋವು ಉಪಶಮನವಾಗುತ್ತದೆ. ಚರ್ಮವ್ಯಾಧಿ ಹಾಗೂ ಅಲರ್ಜಿ ಉಂಟಾದಾಗ ಮುತ್ತುಗದ ಬೀಜದ ಪುಡಿಗೆ ನಿಂಬೆರಸ ಬೆರೆಸಿ ಪೇಸ್ಟ್ ಮಾಡಿ ಅದನ್ನು ಅಲರ್ಜಿ ಇರುವ ಜಾಗಕ್ಕೆ ಹಚ್ಚಿದರೆ ಅಲರ್ಜಿ ಕೂಡಾ ನಿವಾರಣೆಯಾಗುತ್ತದೆ. ಇನ್ನು ಮುತ್ತುಗದ ಬೀಜದ ಪುಡಿ ಬೆಟ್ಟದ ನೆಲ್ಲಿಕಾಯಿ ಪುಡಿ ತುಪ್ಪ ಸಕ್ಕರೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ರಾತ್ರಿ ಮಲಗುವಮುನ್ನ ಸೇವಿಸುತ್ತಾ ಬಂದರೆ ದೇಹದ ಶಕ್ತಿ ಹೆಚ್ಚಾಗುತ್ತದೆ.

ಹಾಗೂ ಕೂದಲು ಉದುರುವುದನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಭೇಧಿಯಿಂದ ಸಮಸ್ಯೆಯಾಗಿದ್ದರೆ ಮುತ್ತುಗದ ಬೀಜದ ಕಷಾಯವನ್ನು ಆಡಿನ ಹಾಲಿನ ಜೊತೆಗೆ ಊಟದ ನಂತರ ಸೇವಿಸಿದರೆ ಭೇದಿ ನಿಲ್ಲುತ್ತದೆ. ಮೂತ್ರ ಸಂಬಂಧಿ ಸಮಸ್ಯೆಗಳು ಮೂತ್ರನಾಳದಲ್ಲಿ ಉರಿಯೂತ ಅಥವಾ ಇನ್ಫೆಕ್ಷನ್ ನಂತಹ ಸಮಸ್ಯೆಗಳಿದ್ದರೆ ಮುತ್ತುಗದ ಹೂವಿನ ಕಷಾಯವನ್ನ ಮಾಡಿಕೊಂಡು ಅದಕ್ಕೆ ಸೈಂದವ ಲವಣವನ್ನು ಸೇರಿಸಿ ಕುಡಿದರೆ ಮೂತ್ರ ಸಂಬಂಧಿ ಕಾಯಿಲೆಗಳು ಗುಣವಾಗುತ್ತವೆ. ಮುತ್ತುಗದ ಬೀಜ ಎಣ್ಣೆಯನ್ನು ಹಚ್ಚುವುದರಿಂದ ಕುಷ್ಟ ರೋಗ ಹರಡುವುದು ತಪ್ಪುತ್ತದೆ. ಮುತ್ತುಗದ ಬೇರನ್ನು ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಜೀರ್ಣಶಕ್ತಿ ವೃದ್ಧಿಯಾಗುವುದರ ಜೊತೆಗೆ ನಪುಂಸಕತ್ವ ಹಾಗೂ ಸ್ತ್ರೀಸಂಬಂಧಿ ಕಾಯಿಲೆಗಳಿಗೂ ಪರಿಹಾರ ಸಿಗುತ್ತದೆ.

ಹಾಗೆಯೇ ಹೊಟ್ಟೆ ಉಬ್ಬರ ಗ್ಯಾಸ್ ಮತ್ತು ಹೊಟ್ಟೆನೋವಿನಂತಹ ಸಮಸ್ಯೆಗಳಿದ್ದರೆ ಮುತ್ತುಗದ ಎಲೆಯ ಕಷಾಯ ಮಾಡಿಕೊಂಡು ಕುಡಿದರೆ ಚಿಟಿಕೆ ಹೊಡೆಯುವುದರಲ್ಲಿ ಹೊಟ್ಟೆಯಲ್ಲಿ ಆರಾಮ ಅಂತ ಅನಿಸುವುದಕ್ಕೆ ಶುರುವಾಗುತ್ತದೆ. ಇಷ್ಟೆಲ್ಲಾ ಆರೋಗ್ಯದಾಯಕ ಗುಣಗಳಿದ್ದ ಮುಟ್ಟುಗವನ್ನು ಫಲಾಶ ಬ್ರಾಹ್ಮಿ ಪತ್ರ ಅಂತಲೂ ಕರೆಯಲಾಗುತ್ತಿತ್ತು. ಮತ್ತು ಪ್ರತಿನಿತ್ಯ ಊಟಕ್ಕೆ ಸಾಧ್ಯವಾದಷ್ಟು ಮುತ್ತುಗದ ಎಲೆಗಳನ್ನು ಬಳಸುವ ಪದ್ಧತಿ ನಮ್ಮಲ್ಲಿ ಇತ್ತು. ಅದಕ್ಕೆ ಕಾರಣ ಇದರಲ್ಲಿನ ಔಷಧೀಯ ಗುಣಗಳು ಊಟದ ಜೊತೆಗೆ ನಮ್ಮ ದೇಹವನ್ನು ಸೇರಲಿ ಅನ್ನೋದಾಗಿತ್ತೆ ಹೊರತು ಬೇರಿನ್ನೇನು ಆಗುವುದಕ್ಕೆ ಸಾಧ್ಯವಿಲ್ಲ. ಇವೆಲ್ಲವು ಮುತ್ತುಗದ ವಿಶೇಷ. ಸಾಧ್ಯವಾದರೆ ನೀವು ಕೂಡ ಪ್ಲಾಸ್ಟಿಕ್ ತಟ್ಟೆಗಳನ್ನು ಬಳಸುವ ಬದಲು ಮುತ್ತುಗವನ್ನು ಬಳಸಿದರೆ ಆರೋಗ್ಯಕ್ಕೂ ಒಳಿತು ಹಾಗೆ ಪ್ರಕೃತಿಯನ್ನು ಕಾಪಡಿದಂತಾಗುತ್ತದೆ. ಈ ಲೇಖನವನ್ನು ಶೇರ್ ಮಾಡಿ.

1 COMMENT

  1. Please provide any kind of contact information of the one who has written this article. I would like to know more about these leaves and the tree in details. This is for research purposes. Thank you.

LEAVE A REPLY

Please enter your comment!
Please enter your name here