ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಗಳು ಡೌನ್ಲೋಡ್ ಆಗಿದ್ರೆ ಕೊಡಲೇ ಡಿಲಿಟ್ ಮಾಡಿರಿ

0
823

ಪ್ಲೇ ಸ್ಟೋರ್ ನಿಂದ ನೀವು ಈ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಂಡರೆ ಹ್ಯಾಕರ್ ಗಳು ನಿಮ್ಮ ಮೊಬೈಲ್ ನಲ್ಲಿರುವ ಗುಪ್ತ ಮಾಹಿತಿಗಳು ಅವರಿಗೆ ಸುಲಭವಾಗಿ ಸಿಗುತ್ತದೆ. ನಿಮ್ಮ ಎಲ್ಲರಿಗೂ ಸಹ ಗೂಗಲ್ ಪ್ಲೇ ಸ್ಟೋರ್ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿದೆ ಏಕೆಂದರೆ ಪ್ರತಿಯೊಂದು ಆಂಡ್ರಾಯ್ಡ್ ಅಪ್ಲಿಕೇಶನ್ ಗಳನ್ನು ನೀವು ಪ್ಲೇ ಸ್ಟರೆ ಡೌನ್ಲೋಡ್ ಮಾಡಿಕೊಳ್ಳುತ್ತೀರಿ. ಪ್ಲೇ ಸ್ಟೋರ್ ಇದು ಸಮುದ್ರ ಇದ್ದಂತೆ ಇಲ್ಲಿ ಪ್ರತಿನಿತ್ಯ ಸಾವಿರಾರು ಅಪ್ಲಿಕೇಶನ್ಗಳು ಕಾಲಿಡುತ್ತಲೇ ಇರುತ್ತವೆ. ನಾವು ಈ ಹಿಂದೆ ಕಂಪ್ಯೂಟರ್ನಲ್ಲಿ ಮಾಡುತ್ತಿದ್ದ ಎಲ್ಲ ರೀತಿಯ ಕೆಲಸಗಳನ್ನು ಸಹ ನಾವು ಇಂದು ಮೊಬೈಲ್ ಅಪ್ಲಿಕೇಶನ್ ಮುಖಾಂತರ ಮಾಡುತ್ತಿದ್ದೇವೆ. ಮನುಷ್ಯನಿಗೆ ಮೊಬೈಲ್ ಎಷ್ಟರಮಟ್ಟಿಗೆ ಆಪ್ತ ಗೆಳೆಯನ ಆಗಿದೆ ಎಂದರೆ ಅದು ಒಂದು ಕ್ಷಣ ಆತನ ಬಳಿ ಇಲ್ಲದಿದ್ದರೆ ತನ್ನ ಸರ್ವಸ್ವವನ್ನು ಕಳೆದುಕೊಂಡ ರೀತಿಯಲ್ಲಿ ಆತ ಭಾವಿಸುತ್ತಾನೆ.

ತಂತ್ರಜ್ಞಾನ ಎಷ್ಟು ವೇಗವಾಗಿ ಇದೆಯೋ ಅಷ್ಟೇ ವೇಗವಾಗಿ ಜನರು ಸಹ ಮೋಸ ಹೋಗುತ್ತಿದ್ದಾರೆ ನಮಗೆ ಪ್ಲೇ ಸ್ಟೋರ್ ನಲ್ಲಿ ದೊರೆಯುವ ಸಾಕಷ್ಟು ಅಪ್ಲಿಕೇಶನ್ಗಳು ಗೂಗಲ್ ಪರಿಶೀಲನೆಯ ನಂತರವೇ ಪ್ಲೇ ಸ್ಟೋರ್ ನಲ್ಲಿ ಕಾಲಿಡಲು ಅವಕಾಶ ನೀಡುತ್ತದೆ. ಆದರೆ ಕೆಲವೊಂದು ಹ್ಯಾಕರ್ ಗಳು ಗೂಗಲ್ ಗೂ ಸಹ ಮೋಸ ಮಾಡಿ ಪ್ಲೇ ಸ್ಟೋರ್ ನಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದಾರೆ. ಗೂಗಲ್ ನವರಿಗೆ ಮೋಸ ಮಾಡಿ ಅಪ್ಲಿಕೇಶನ್ಗಳನ್ನು ಹರಿದು ಬಿಡುತ್ತಿದ್ದಾರೆ ನೀವು ಅಂತಹ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡರೆ ನೀವು ಸಮಸ್ಯೆಗೆ ಸಿಲುಕಿ ಬಿಟ್ಟಿರಿ ಎಂದು ಅರ್ಥ.

ಏಕೆಂದರೆ ಕೆಲವು ಹ್ಯಾಕರ್ ಗಳು ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿರುವ ಕೆಲವೊಂದು ಮಾಹಿತಿಗಳು ಮತ್ತು ಗುಪ್ತ ಫೋಟೋಗಳು ಎಲ್ಲವನ್ನು ಸಹ ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ಕದಿಯುತ್ತಿದ್ದಾರೆ. ಈ ಒಂದು ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಿಕೊಂಡರೆ ಖಂಡಿತವಾಗಿಯೂ ನಿಮ್ಮಲ್ಲಿರುವ ಸಾಕಷ್ಟು ಮಾಹಿತಿಗಳು ಅನ್ಯರ ಪಾಲಾಗುವುದು ಖಚಿತ ನಿಮಗೆ ಗೊತ್ತಿಲ್ಲದೆ ನಿಮ್ಮ ರಹಸ್ಯ ಮಾಹಿತಿಗಳು ರವಾನೆ ಆಗುತ್ತದೆ ಹಾಗಾದರೆ ಈ ಒಂದು ಅಪ್ಗಳನ್ನು ಯಾವುವು ಎಂಬುದು ನಾವು ನಿಮಗೆ ಎಂದು ತಿಳಿಸಿಕೊಡುತ್ತೇವೆ. ನೀವು ನಿಮಗೆ ಗೊತ್ತಿಲ್ಲದ ಹಾಗೆ ಈ ಒಂದು ಅಪ್ಲಿಕೇಶನ್ಗಳನ್ನು ನೀವ್ ಏನಾದ್ರೂ ಮಿಸ್ಟೇಕ್ ಆಗಿ ಡೌನ್ಲೋಡ್ ಮಾಡಿ ಕೊಂಡಿದ್ದಾರೆ ದಯವಿಟ್ಟು ಇಂದೇ ಅದನ್ನು ಡಿಲೀಟ್ ಮಾಡಿಬಿಡಿ ಅನ್ ಇನ್ಸ್ಟಾಲ್ ಮಾಡಿ ಇಲ್ಲವಾದಲ್ಲಿ ನಿಮ್ಮ ಮಾಹಿತಿಗಳು ಅನ್ಯ ಜನರ ಪಾಲಾಗುತ್ತೆ.

ಮೊದಲನೆಯದಾಗಿ ಈಸಿ ಸೆಲ್ಫಿ ಕ್ಯಾಮೆರಾ ಎರಡನೇದಾಗಿ ಫೋನ್ ಫಾಸ್ಟ್ ಬೋಸ್ಟರ್. ಮೂರನೇದಾಗಿ ಪವರ್ ಟೋಟಲ್ ಕ್ಲೀನರ್. ನಾಲ್ಕನೇದಾಗಿ ಡೈಲಿ ಹೊರೋ ಪ್ಲಸ್. ಐದನೇದಾಗಿ ಸುಪರ್ ಪವರ್ ಮ್ಯಾನೇಜರ್. ಆರನೇ ಕ್ರೆಡಿಟ್ ಕಾರ್ಡ್ ಲಿಮಿಟ್. ಸ್ನೇಹಿತರೆ ನಾವು ನಿಮಗೆ ಇಲ್ಲಿ ತಿಳಿಸುವುದು ಕೆಲವೊಂದು ಉದಾರಣೆಗಳು ಅಷ್ಟೇ ಈ ರೀತಿಯ ಸಾಕಷ್ಟು ಅಪ್ಲಿಕೇಶನ್ಗಳನ್ನು ನಾವು ನಿಮಗೆ ಮುಂದೊಂದು ದಿನ ಮತ್ತಷ್ಟು ತಿಳಿಸುತ್ತೇವೆ ನೀವೇನಾದರೂ ಸದ್ಯದ ಮಟ್ಟಿಗೆ ಈ ಒಂದು ಡೇಂಜರಸ್ ಅಪ್ಲಿಕೇಶನ್ಗಳನ್ನು ಇದ್ರೆ ಕೊಡಲೇ ಅದನ್ನ ಕಿತ್ತು ಹಾಕಿ ಒಮ್ಮೆ ನಿಮ್ಮ ಫೋನ್ ರೀಬೂಟ್ ಮಾಡಿಕೊಳ್ಳಿರಿ.

LEAVE A REPLY

Please enter your comment!
Please enter your name here