ಅದು 1889 ಆಗ ಬ್ರಿಟಿಷರು ಮತ್ತು ಆಫ್ಗನ್ ಸೈನ್ಯದ ನಡುವೆ ಆಫ್ಘಾನಿಸ್ತನದಲ್ಲಿ ನಡೆಯುತ್ತಿದ್ದ ಯುದ್ಧವನ್ನು ಮುಂದುವರೆಸುತ್ತಾ ಇದ್ದವರು ಬ್ರಿಟಿಷ್ ಆರ್ಮಿ ಆಫೀಸರ್ ಆದ ಲೆಫ್ಟಿನೆಂಟ್ ಕರ್ನಲ್ ಮಾರ್ಟಿನ್. ಇವರು ಅತ್ಯಂತ ಧೈರ್ಯ ಶಾಲಿ ಆಫೀಸರ್ ಇವರು ಈ ಯುದ್ಧವನ್ನು ಮಾಡುತ್ತಲೇ ತನ್ನ ಕ್ಷೇಮ ಸಮಾಚಾರವನ್ನು ಪ್ರತೀ ಸಲ ತನ್ನ ಹೆಂಡತಿಗೆ ಕಳುಹಿಸುತ್ತಿದ್ದರು ಈ ಯುದ್ದ ಒಂದು ದಿನದ ಯುದ್ಧವಲ್ಲ ತಿಂಗಳ ಗಟ್ಟಲೆ ನಡಿತನೆ ಇತ್ತು ಕೆಲವರು ದಿನಗಳ ನಂತರ ತನ್ನ ಹೆಂಡತಿಗೆ ಅವರ ಕ್ಷೇಮ ಸಮಾಚಾರ ಬರುವುದು ನಿಂತು ಹೋಗುತ್ತೆ ಆಕೆಗೆ ಭಯದಿಂದ ಏನು ಮಾಡಬೇಕೆಂಬುದು ಅರ್ಥ ಆಗಲ್ಲ ತನ್ನ ಗಂಡನಿಂದ ಕ್ಷೇಮ ಸಮಾಚಾರ ಬರುತ್ತಾ ಎಂದು ರಾತ್ರಿ ಹಗಲು ಕಾಯುತ್ತಾ ಇರುತ್ತಾಳೆ.

ಒಂದು ದಿನ ತನ್ನ ಕುದುರೆಯಲ್ಲಿ ಹೊರಗೆ ಹೋಗುವಾಗ ಬೈಧ್ಯನಾಥ್ ಮಹಾ ದೇವಸ್ಥಾನ ಸಿಗುತ್ತೆ ಈ ದೇವಸ್ಥಾನ ಇಂದ ಬರುವ ತಿಳಿಯದ ಮಂತ್ರಗಳಿಗೆ ಏನೋ ಉತ್ಸಾಹ ಬರುತ್ತೆ ತಕ್ಷಣ ನಿಂತು ಈ ದೇವಸ್ಥಾನಕ್ಕೆ ಹೋಗುತ್ತಾಳೆ ಅಲ್ಲಿ ಬ್ರಾಹ್ಮಣರು ಮಹಾ ಶಿವನ ಪೂಜೆ ಮಾಡುತ್ತಿದ್ದರು ಆಕೆಯನ್ನು ನೋಡಿದ ಪೂಜ್ಯರು ಆಕೆಯಲ್ಲಿ ಏನೋ ಸಂಕಟ ಇದೆ ಎಂದು ತಿಳಿಯುತ್ತಾರೆ ವಿಚಾರಿಸಿದಾಗ ಆಕೆ ತನ್ನ ಗಂಡನ ಬಗ್ಗೆ ಹೇಳಿ ಕಣ್ಣೀರು ಇಡುತ್ತಾಳೆ ಆಗ ಅಲ್ಲಿದ ಬ್ರಾಹ್ಮಣರು ನಿನ್ನ ಸಂಕಟ ಈ ಮಹಾದೇವನ ಹತ್ತಿರ ಹೇಳಿಕೊ ಎಂದು ಸೂಚಿಸುತ್ತಾರೆ ಅದರಂತೆ ಆಕೆ ಮಹಾ ಶಿವನನ್ನು ಪೂಜಿಸುತ್ತಾರೆ 11 ದಿನಗಳವರೆಗೆ ಈ ಮಹಾಶಿವನ ಪ್ರಾರ್ಥನೆ ಮಾಡುತ್ತಾಳೆ ತನ್ನ ಕೋರಿಕೆ ಈಡೇರಿಸಿದ್ದಾರೆ ಈ ವೈದ್ಯನಾಥ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡುವುದಾಗಿ ಕೇಳಿಕೊಳ್ಳುತ್ತಾಳೆ.
11 ದಿನಗಳ ಮಹಾಶಿವನ ಸ್ಮರಣೆಯ ನಂತರ ಆಕೆಗೆ ಒಂದು ಪತ್ರ ಬರುತ್ತದೆ ಅದು ತನ್ನ ಗಂಡನಿಂದ ಬಂದ ಪತ್ರ ಅದರಲ್ಲಿ ನಾನು ಕ್ಷೇಮವಾಗಿ ಇದ್ದೇನೆ ಆಫ್ಘಾನಿಸ್ತಾನದ ಹೋರಾಟಗಾರರು ಸುತ್ತುವರೆದರಿಂದ ಸಮಾಚಾರ ಕಲಿಸಲು ಸಾಧ್ಯ ಆಗಲಿಲ್ಲ ಅವರಿಂದ ನಾವು ತಪ್ಪಿಸಿಕೊಂಡು ಬದುಕಿ ಬರುತ್ತೇವೆ ಎಂದು ಅಂದುಕೊಂಡಿರಲಿಲ್ಲ ಸಾವು ನನ್ನ ಕರಿತಿದೆ ಎನ್ನುವ ಸಮಯದಲ್ಲಿ ಭಾರತದ ದೇಶದ ಒಬ್ಬ ಯೋಗಿ ಕಾಣಿಸುತ್ತಾನೆ ಉದ್ದನೆಯ ಗುಂಗುರು ಕೂದಲು ಇರುವ ಅವರ ತೇಜಸ್ವಿಗೆ ನನ್ನ ಕಣ್ಣೆಲ್ಲಾ ಮಂಜಾಗಿತ್ತು ಭಸ್ಮ ಅಲಂಕಾರ ಮಾಡಿಕೊಂಡ ಈ ರೂಪ ನೋಡಿದಾಕ್ಷಣ ಆ ಹೋರಾಟಗಾರರು ಅಲ್ಲಿಂದ ಹೋಡಿ ಹೋದರು ಅವರ ತೇಜಸ್ಸಿನ ನಮ್ಮ ಅಪಜಯ ಕೂಡ ಜಯವಾಗಿ ಬದಲಾಗುತ್ತೆ ನಮ್ಮ ಜಯಕ್ಕೆ ಈ ಯೋಗಿ ಕಾರಣ ಎಂದು ಪತ್ರದಲ್ಲಿ ಬರೆದಿರುತ್ತದೆ ಅಷ್ಟೆ ಅಲ್ಲದೆ ಈ ಯೋಗಿ ನನ್ನ ಹತ್ತಿರ ನಿನ್ನ ಗೃಹಿಣಿ ನಿನಗಾಗಿ ನನ್ನನ್ನು ಪ್ರಾರ್ಥಿಸುತ್ತಾಳೆ ಈ ಪ್ರಾರ್ಥನೆಯಲ್ಲಿ ಇರುವ ನಿಸ್ವಾರ್ಥ ನನ್ನನ್ನು ಬರುವ ರೀತಿ ಮಾಡಿದೆ ಎಂದು ಪತ್ರದಲ್ಲಿ ಬರೆದಿರುತ್ತೆ.
ಕೆಲವು ದಿನದ ನಂತರ ಮಾರ್ಟಿನ್ ಬರುತ್ತಾನೆ ಗಂಡ ಹೆಂಡತಿ ಇಬ್ಬರೂ ಸೇರಿ ಈ ದೇವಸ್ಥಾನಕ್ಕೆ ಹೋಗಿ ನೋಡಿದಾಗ ಆ ಯೋಗಿ ಮಹಾಶಿವ ಎಂದು ತಿಳಿಯುತ್ತದೆ ಆಗಿನಿಂದ ಅವರಿಬ್ಬರೂ ಈ ದೇವಸ್ಥಾನದ ಅಭಿವೃದ್ಧಿಗೆ ತನ್ನ ಹಣವನ್ನೆಲ್ಲಾ ದಾನ ಮಾಡುತ್ತಾರೆ. ನಾವು ಕೂಡ ಆ ದೇವರ ಹತ್ತಿರ ಹಣ್ಣಕ್ಕಾಗಿ ಆಸ್ತಿಗಾಗಿ ಪ್ರಾರ್ಥನೆ ಮಾಡಬಾರದು ನಮ್ಮ ಪ್ರಾರ್ಥನೆ ನಿಶ್ಚಲವಾಗಿ ಇದ್ದರೆ ಖಂಡಿತ ಫಲ ಸಿಗುತ್ತೆ ಆಗಿನ ಈ ಒಂದು ದೇವಾಲಯವನ್ನು ನೀವು ಈಗಲೂ ಸಹ ಕಾಣಬಹುದು. ಪ್ರತಿ ನಿತ್ಯ ಇಲ್ಲಿಗೆ ನೂರಾರು ಜನರು ಬಂದು ತಮ್ಮ ಕಷ್ಟಗಳಿಂದ ಮುಕ್ತಿ ಪಡೆಯುತ್ತಾರೆ. ಮಾಹಾನ್ ಮಹಿಮಾ ಶಿವ ಜಾತಿ ಧರ್ಮ ಮತ ಕುಲ ಯಾವುದನ್ನು ಸಹ ನೋಡೋದಿಲ್ಲ ಆತನಿಗೆ ಪ್ರೀತಿಯಿಂದ ಮತ್ತು ಭಕ್ತಿಯಿಂದ ನಮ್ಮನು ನಾವು ಸಮರ್ಪಣೆ ಮಾಡಿಕೊಂಡರೆ ಆತ ಸಕಲವನ್ನು ನೀಡುತ್ತಾರೆ.