ಚಿಂತೆ ಬೇಡ ಯುವಕರು ವೀರ್ಯವನ್ನು ಹೆಚ್ಚಿಗೆ ಮಾಡಲು ಈ ರೀತಿ ಮಾಡಿರಿ

1
2916

ಹಿಂದೆಲ್ಲ ಬಡತನ ಅನ್ನೋದು ಸಾಮಾನ್ಯವಾಗಿತ್ತು. ಆದರೆ ಮನೆ ತುಂಬಾ ಮಕ್ಕಳು ಇರುತ್ತಿದ್ದರು ಆದರೆ ಈಗ ಎಲ್ಲರ ಬಳಿ ದುಡ್ಡಿದೆ ಆಸ್ತಿ ಇದೆ ಆದರೆ ಅದನ್ನು ಅನುಭವಿಸುವುದಕ್ಕೆ ವಾರಸುದಾರರಿಲ್ಲ ಅನ್ನೋ ಕೊರಗು ಸಾಕಷ್ಟು ಕಡೆ ಇದೆ. ಇದಕ್ಕೆ ಸಿಕ್ಕಾಪಟ್ಟೆ ಕಾರಣಗಳು ಇದಾವೆ ಅದರಲ್ಲಿ ಒಂದು ಎಂದರೆ ಮೆನ್ ಇಂಫರ್ಟಿಲಿಟಿ. ಅಂದರೆ ಪುರುಷರ ಬಂಜೆತನ. ಇದಕ್ಕೆ ಸೂಕ್ತ ಪರಿಹಾರ ಏನು ಆಹಾರ ಪದ್ದತಿ ಹೇಗಿರಬೇಕು ಅನ್ನೋದನ್ನ ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತೇವೆ.

ಪುರುಷರಲ್ಲಿ ಕೆಲವು ವಯಸ್ಸಿನ ನಂತರ ವೀರ್ಯಕ್ಷೀಣತೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅದಕ್ಕೆ ಅವರ ಲೈಫ್ ಸ್ಟೈಲ್ ಆಹಾರಕ್ರಮ ಒತ್ತಡದ ಜೀವನ ಸೇರಿ ಹಲವಾರು ಕಾರಣಗಳಿವೆ. ಆದರೆ ಇದು ದೊಡ್ಡ ಸಮಸ್ಯೆಯೇನಲ್ಲ. ಇದಕ್ಕೆ ಹೆಚ್ಚಿನ ಖರ್ಚಿಲ್ಲದೆ ನಮ್ಮ ಆಹಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವುದರ ಮೂಲಕವೇ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಹಾಗಿದ್ದರೆ ಯಾವೆಲ್ಲಾ ಆಹಾರಗಳನ್ನು ತಗೊಂಡ್ರೆ ವೀರ್ಯವಂತ ಆಗುತ್ತೀರಿ ಅನ್ನುವುದನ್ನ ತಿಳಿಯೋಣ. ಅಂಗಡಿಯಲ್ಲಿ ಸಿಗುವ ಶುದ್ದ ಡಾರ್ಕ್ ಚಾಕಲೇಟ್. ಹೌದು ಈ ಡಾರ್ಕ್ ಚಾಕಲೇಟ್ ಇದೆಯಲ್ಲ ಇದು ನಿಮ್ಮ ವೀರ್ಯ ವೃದ್ಧಿ ಮಾಡೋದಕ್ಕೆ ತುಂಬಾನೇ ಸಹಾಯಕಾರಿ. ಡಾರ್ಕ್ ಚಾಕಲೇಟ್ ನಲ್ಲಿ ಇರೋ ಅಮಿನೋ ಆಸಿಡ್ ನಿಮ್ಮ ವೀರ್ಯವನ್ನು ದುಪ್ಪಟ್ಟು ಮಾಡುವ ಶಕ್ತಿ ಹೊಂದಿದೆ. ಅಲ್ಲದೆ ಅದರಲ್ಲಿರುವ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ನಿಮ್ಮ ವೀರ್ಯಕ್ಕೆ ಕುತ್ತು ತರಬಲ್ಲ ರಾಡಿಕಲ್ಸ್ ಮತ್ತು ಟ್ಯಾಕ್ಸಿನ್ ಅಂಶಗಳ ವಿರುದ್ಧ ನಿಲ್ಲುತ್ತವೆ. ಹಾಗಂತ ತುಂಬಾ ಚಾಕಲೇಟ್ ತಿನ್ನೋದನ್ನು ಅಭ್ಯಾಸ ಮಾಡಿಕೊಳ್ಳಬೇಡಿ. ನಿಮ್ಮ ರಕ್ತದೊತ್ತಡ ಹಾಗೂ ಮೂಳೆಗಳ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಆರೋಗ್ಯದ ಸ್ಥಿತಿ ಗಮನದಲ್ಲಿಟ್ಟುಕೊಂಡು ಚಾಕಲೇಟ್ ತಿಂದರೆ ಅಡ್ಡಿ ಇಲ್ಲ.

ಬೆಳ್ಳುಳ್ಳಿ. ನಾವು ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿ ಇದೆಯಲ್ಲಾ ಅದು ಗಂಡಸರ ಪಾಲಿಗೆ ಸಂಜೀವಿನಿ ಅಂದರು ತಪ್ಪಿಲ್ಲ. ಯಾಕೆಂದರೆ ನಿಮ್ಮ ವೀರ್ಯಾಣುಗಳ ತ್ವರಿತ ವೃದ್ಧಿಗೆ ಬೆಳ್ಳುಳ್ಳಿ ಸಹಾಯಕ. ಬೆಳ್ಳುಳ್ಳಿಯಲ್ಲಿ ಎರಡು ವಿಶೇಷವಾದ ಅಂಶಗಳಿವೆ. ಒಂದು ಅಲಿಸಿನ್. ಅದು ಗುಪ್ತಾಂಗಗಳಿಗೆ ರಕ್ತ ಸುಗಮವಾಗಿ ಸಂಚಾರ ಆಗೋದಕ್ಕೆ ಸಹಾಯ ಮಾಡುತ್ತದೆ. ಇನ್ನೊಂದು ಸೆಲೆನಿಯಂ. ಅದರಲ್ಲಿ ಇರೋ ಆಂಟಿ ಆಕ್ಸಿಡೆಂಟ್ಸ್ ವೀರ್ಯದ ಶಕ್ತಿ ಕುಂದದಂತೆ ಕಾಪಾಡುತ್ತದೆ. ದಿನಕ್ಕೆ ಎರಡು ಎಸಳು ಬೆಳ್ಳುಳ್ಳಿಯಿಂದ ನಿಮ್ಮ ವೀರ್ಯೋತ್ಪತ್ತಿ ಹೆಚ್ಚಾಗುವುದರಲ್ಲಿ ಸಂದೇಹ ಬೇಡ.

ಬಾಳೆಹಣ್ಣು. ಎಲ್ಲಾ ರೋಗಗಳಿಗೆ ಒಳ್ಳೇದು ಅಂತ ಹೇಳುತ್ತಾರೆ. ಮನಸ್ಸಲ್ಲಿ ಕಾಮೋದ್ರೇಕವಾಗದೆ ಇದ್ದಲ್ಲಿ ಹೇಗೆ ತಾನೇ ವೀರ್ಯ ಉತ್ಪತ್ತಿಯಾಗುತ್ತದೆ. ಹೀಗಾಗಿ ಪುರುಷನ ಕಾಮಾಸಕ್ತಿಯನ್ನು ಹೆಚ್ಚಿಸುವುದಕ್ಕೆ ಬಾಳೆಹಣ್ಣಿನ ನಿಯಮಿತ ಸೇವನೆ ಕೆಲಸ ಮಾಡುತ್ತದೆ. ಬಾಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಎ ಮತ್ತು ಬಿ1 ಪುರುಷರ ದೇಹಕ್ಕೆ ಇನ್ನಷ್ಟು ಚೈತನ್ಯ ತುಂಬುವುದರ ಜೊತೆಗೆ ಲೈಂಗಿಕ ಕ್ರಿಯೆಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತದೆ.

ಕೋಸುಗೆಡ್ಡೆ ಇದಂತೂ ನಮ್ಮ ನಿತ್ಯ ಜೀವನದಲ್ಲಿ ಬಳಕೆಯಾಗುವ ತರಕಾರಿ. ಇದು ಕೂಡ ವೀರ್ಯಾಣು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ ಅಕಾರಣ ವೀರ್ಯ ನಷ್ಟವನ್ನು ತಪ್ಪಿಸುತ್ತದೆ. ಶತಾವರಿ. ಇದು ತುಂಬಾ ಅಪರೂಪದಲ್ಲಿ ಅಪರೂಪವಾಗಿ ಬಳಕೆ ಆಗುವ ತರಕಾರಿ. ಆದರೆ ಇದರಲ್ಲಿನ ಗುಣಗಳು ಪುರುಷರ ಬಂಜೆತನವನ್ನು ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತದೆ. ಶತಾವರಿಯಲ್ಲಿರುವ ವಿಟಮಿನ್ ಸಿ ಪುರುಷರ ದೇಹಕ್ಕೆ ತುಂಬಾನೇ ಉಪಯೋಗಕಾರಿ. ವಾಲ್ ನಟ್ ಇದಂತೂ ನಾಲಿಗೆಗೆ ತುಂಬಾ ಇಷ್ಟವಾಗುತ್ತದೆ. ಒಮ್ಮೆ ತಿಂದರೆ ಇನ್ನಷ್ಟು ಬೇಕು ಅನ್ನಿಸುತ್ತದೆ. ನಮ್ಮಲ್ಲಿ ಇದಕ್ಕೆ ಆಕ್ರೋಡು ಅಂತಲೂ ಕರೆಯುತ್ತಾರೆ. ಇದರಲ್ಲಿರುವ ಅಂಶಗಳು ವೀರ್ಯದ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ನಾಲಿಗೆಗು ರುಚಿ ದೇಹಕ್ಕೂ ಆರೋಗ್ಯ. ಇದರೊಟ್ಟಿಗೆ ನುಗ್ಗೆಕಾಯಿ ಬೆಳ್ಳುಳ್ಳಿಯ ಸೋದರ ಸಂಬಂಧಿ ಈರುಳ್ಳಿ ಇನ್ನಿತರೆ ಆಹಾರ ಪದಾರ್ಥಗಳ ನಿಯಮಿತ ಸೇವನೆ ವೀರ್ಯೋತ್ಪತ್ತಿಗೆ ತುಂಬಾನೇ ಸಹಾಯಕಾರಿ. ಈ ಲೇಖನವನ್ನು ಶೇರ್ ಮಾಡಿ. ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.

1 COMMENT

LEAVE A REPLY

Please enter your comment!
Please enter your name here