ಲಕ್ಷ್ಮಿ ಪೂಜೆ ಮಾಡೋವಾಗ ಈ ತಪ್ಪು ಮಾಡಿದ್ರೆ ಖಂಡಿತ ನಿಮಗೆ ದರಿದ್ರ ಹೊಡೆಯುತ್ತೆ

0
663

ಲಕ್ಷ್ಮಿ ಪೂಜೆ ಮಾಡುವ ವೇಳೆ ನಾವು ಈ ತಪ್ಪುಗಳನ್ನು ಮಾಡಿದರೆ ನಮಗೆ ಆರ್ಥಿಕ ನಷ್ಟ ಉಂಟಾಗುತ್ತದೆ ಮತ್ತು ನಮ್ಮ ಪೂಜೆಯಲ್ಲಿ ಯಾವುದೇ ರೀತಿಯಲ್ಲಿ ಒಳ್ಳೆಯ ಫಲ ದೊರೆಯುವುದಿಲ್ಲ. ಲಕ್ಷ್ಮಿ ಪೂಜೆ ನಮ್ಮ ಹಿಂದೂಗಳಿಗೆ ಒಂದು ಪ್ರಮುಖ ಪೂಜೆ ಗಳಲ್ಲಿ ಒಂದಾಗಿದೆ ನಾವು ಲಕ್ಷ್ಮಿಯನ್ನು ಪೂಜಿಸುವುದರಿಂದ ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಎಂಬುದು ನಮ್ಮ ಹಿಂದುಗಳ ನಂಬಿಕೆಯಾಗಿದೆ. ಈಗಿನ ಬ್ಯುಸಿ ಲೈಫ್ನಲ್ಲಿ ಏನೋ ಒಂದು ರೀತಿ ಪೂಜೆಯನ್ನು ಮಾಡಿ ನಾವು ಕೈ ತೊಳೆದುಕೊಂಡರು ಸಾಕು ಎನ್ನುವ ಜನರೇ ಹೆಚ್ಚು ಕಾಟಾಚಾರಕ್ಕೆ ಪೂಜೆ ಮಾಡಿದರೆ ಖಂಡಿತ ಅದರ ಶುಭ ಫಲ ನಿಮಗೆ ದೊರೆಯುವುದಿಲ್ಲ. ಕೆಲವರಂತೂ ಹೆಚ್ಚಿನ ಸಮಯ ಪೂಜೆ ಮಾಡಿದರೂ ಸಹ ಅವರಿಗೆ ಲಕ್ಷ್ಮಿಯ ಕೃಪೆ ದೊರೆಯುವುದಿಲ್ಲ ಏಕೆಂದರೆ ಅವರು ಮಾಡಿಕೊಳ್ಳುವ ಕೆಲವು ತಪ್ಪುಗಳಿಂದಲೇ ಅವರಿಗೆ ಯಾವುದೇ ರೀತಿಯ ಫಲ ಸಿಗುತ್ತಿಲ್ಲ.

ಲಕ್ಷ್ಮಿ ಪೂಜೆ ಮಾಡುವ ವೇಳೆ ನಾವೊಂದಿಷ್ಟು ಉಪಯುಕ್ತ ಮಾಹಿತಿಗಳನ್ನು ನಿಮಗೆ ತಿಳಿಸುತ್ತಿದ್ದೇವೆ ನೀವು ಮಾಡುವ ಒಂದು ಪೂಜೆಯಲ್ಲಿ ಯಾವುದೇ ವಿಘ್ನ ಬರದೇ ಇರಲು ಆ ಪೂಜೆ ನಿಮಗೆ ನೂರರಷ್ಟು ಫಲ ಸಿಗಲು ನಾವು ಹೇಳಿದ ರೀತಿಯಲ್ಲಿ ಮಾಡಿರಿ. ಭಗವಂತ ವಿಷ್ಣು ತುಳಸಿಪ್ರಿಯ ನಾಗಿದ್ದಾನೆ ಆತನಿಗೆ ತುಳಸಿಯು ಅತಿ ಹೆಚ್ಚು ಪ್ರಿಯವಾಗಿದೆ ಆತನನ್ನು ಪೂಜೆ ಮಾಡುವಾಗ ನಾವು ತುಳಸಿಯನ್ನು ಬಳಕೆ ಮಾಡಿ ಆತನನ್ನು ಸಂತೃಪ್ತಿ ಗೊಳಿಸುತ್ತೇವೆ. ಆದರೆ ಲಕ್ಷ್ಮಿ ಇದಕ್ಕೆ ತದ್ವಿರುದ್ಧವಾಗಿ ಇದ್ದಾಳೆ ಆಕೆಗೆ ತುಳಸಿ ಮೇಲೆ ದ್ವೇಷವಿದೆ ಲಕ್ಷ್ಮಿಯನ್ನು ಯಾವುದೇ ಕಾರಣಕ್ಕೂ ಸಹ ತುಳಸಿಯನ್ನು ಬಳಸಿ ಪೂಜೆ ಮಾಡಲೇ ಬಾರದು ನೀವು ಆಕಸ್ಮಾತ್ ಆಕೆಗೆ ಲಕ್ಷ್ಮಿ ಪೂಜೆಯನ್ನು ಮಾಡುವಾಗ ತುಳಸಿಯನ್ನು ಬಳಕೆ ಮಾಡಿದರೆ ನಿಮಗೆ ಕಂಡಿತ ಶುಭ ಫಲ ದೊರೆಯುವುದಿಲ್ಲ ಮತ್ತು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಹಾಗೆಯೇ ನಾವು ದೀಪವನ್ನು ಬೆಳಗುವಾಗ ಲಕ್ಷ್ಮೀದೇವಿಯ ಎಡಭಾಗಕ್ಕೆ ಬಲಭಾಗಕ್ಕೆ ಈ ರೀತಿ ಇಡಬೇಡಿ ಏಕೆಂದರೆ ನಾವು ಧನಲಕ್ಷ್ಮಿಯನ್ನು ಪೂಜೆ ಮಾಡುವಾಗ ದೀಪಗಳನ್ನು ಒಟ್ಟಿಗೆ ಜೋಡಿಸಿ ದೇವಿಯ ಮುಂದೆ ಇಡಬೇಕು ಕೆಲವರು ದೀಪವನ್ನು ಎಡಭಾಗಕ್ಕೆ ಬಲಭಾಗಕ್ಕೆ ಬೇರೆ ಬೇರೆ ಮಾಡಿ ಇಡುತ್ತಾರೆ ಆದರೆ ಲಕ್ಷ್ಮಿ ಪೂಜೆ ಮಾಡುವಾಗ ಈ ಒಂದು ತಪ್ಪನ್ನು ಸಹ ಮಾಡಬೇಡಿ. ದೇವಿಗೆ ದೂಪ ದ್ರವ್ಯಗಳನ್ನು ಸಮರ್ಪಣೆ ಮಾಡಿದ ಮೇಲೆ ಅದನ್ನು ದೇವಿಯ ಎಡಭಾಗಕ್ಕೆ ಇಡುವುದು ತುಂಬಾ ಒಳ್ಳೆಯದು ಹಾಗೆಯೇ ನೀವು ದೇವಿಗೆ ಯಾವಾಗಲೂ ಸ್ವಲ್ಪ ಕೆಂಪು ಬಣ್ಣದ ಮಿಶ್ರಿತ ಕಮಲದ ಹೂಗಳನ್ನು ಇಡುವುದು ತುಂಬಾ ಒಳ್ಳೆಯದು.

ಆದರೆ ಮುಖ್ಯವಾಗಿ ನೀವು ಒಂದನ್ನು ತಿಳಿಯಬೇಕು ಅದೇನೆಂದರೆ ಭಗವಾನ್ ವಿಷ್ಣುವಿನ ಪೂಜೆಯನ್ನು ಮಾಡಿದ ನಂತರವೇ ನೀವು ಲಕ್ಷ್ಮಿಯ ಪೂಜೆಯನ್ನು ಮಾಡಬೇಕು ಇದರಿಂದ ನೀವು ಸಂಪೂರ್ಣ ಫಲ ಪಡೆಯುತ್ತೀರಿ. ಹಾಗೆಯೇ ಅದೇ ದಿನ ಸಂಜೆ ಸಮಯದಲ್ಲಿ ನೀವು ಗಣಪತಿಗೆ ಮೊದಲ ಪೂಜೆಯನ್ನು ಅರ್ಪಿಸಿದ ನಂತರ ವಿಷ್ಣು ಹಾಗೂ ಲಕ್ಷ್ಮಿಯ ಪೂಜೆಯನ್ನು ಮಾಡುವುದು ಸೂಕ್ತವಾಗಿದೆ. ನೀವು ದೇವಿಗೆ ಸಮರ್ಪಣೆ ಮಾಡುವ ನೈವೇದ್ಯವನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ತುಂಬಾ ಒಳ್ಳೆಯದು ಅದನ್ನು ನಿಮ್ಮ ಸುತ್ತಮುತ್ತಿನ ಜನರಿಗೆ ಅಥವಾ ಯಾವುದಾದರೂ ಒಂದು ಹಸುವಿಗೆ ಇಟ್ಟು ಅದರ ಜೊತೆಗೆ ನೀವು ಅದನ್ನು ಸ್ವೀಕರಿಸಿದರೆ ಖಂಡಿತ ನಿಮ್ಮ ಮೇಲೆ ಲಕ್ಷ್ಮಿಯ ಕೃಪೆ ಬೀರಲಿದೆ. ಈ ವಿಧಾನಗಳನ್ನು ಅನುಸಾರ ಮಾಡಿಕೊಂಡು ಲಕ್ಷ್ಮಿ ಪೂಜೆ ಮಾಡಿದರೆ ಲಕ್ಷ್ಮಿಯ ಒಂದು ಕೃಪಾಕಟಾಕ್ಷ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಸಂಪೂರ್ಣವಾಗಿ ದೊರೆಯುತ್ತದೆ.

LEAVE A REPLY

Please enter your comment!
Please enter your name here