ಮಾರುಕಟ್ಟೆಯಲ್ಲಿ ಸಿಗುವ ವಿಧವಿಧ ಫೇಸ್ ಪ್ಯಾಕ್ ಉತ್ಪನ್ನಗಳನ್ನು ಹಚ್ಚಿ ಮುಖವನ್ನು ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲೇ ಸಿಗುವ ವಸ್ತುಗಳಿಂದ ಹರ್ಬಲ್ ಫೇಶಿಯಲ್ ಮಾಡಿಕೊಂಡು ನಿಮ್ಮ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡಿ ಸುಂದರವಾಗಿ ಕಾಣಬಹುದು. ಇಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತೇವೆ ಹಣ್ಣುಗಳ ರಾಜ ಮಾವಿನ ಹಣ್ಣಿನ ಫೇಶಿಯಲ್ ಹೇಗೆ ಮಾಡಿಕೊಳ್ಳುವುದು ಇದರಿಂದ ಚರ್ಮಕ್ಕೆ ಏನೆಲ್ಲ ಉಪಯೋಗ ಸಿಗುತ್ತದೆ ಒಂದು ರುಪಾಯಿ ಖರ್ಚು ಇಲ್ಲದೆ ನೀವು ಎಷ್ಟೊಂದು ಲಾಭ ಪಡೆಯಬಹುದು ಅದು ಹೇಗೆ ಎಂದು ತಿಳಿಯೋಣ.
ಇದು ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ ಮಾವಿನಹಣ್ಣು ಎಲ್ಲಾಕಡೆ ದೊರೆಯುತ್ತದೆ. ಅದನ್ನು ಯಾವ ರೀತಿ ನಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದು ಎಂದು ನೋಡೋಣ. ಬೇಕಾಗಿರುವ ಸಾಮಗ್ರಿಗಳು. ಮಾವಿನ ಹಣ್ಣು ಒಂದು ಹಾಲಿನ ಕೆನೆ ಇಲ್ಲವೇ ಆಲಿವ್ ಆಯಿಲ್ ನಾಲ್ಕು ಟೇಬಲ್ ಚಮಚ ಬೆಣ್ಣೆ ಒಂದು ಟೇಬಲ್ ಚಮಚ ಕಡಲೆಹಿಟ್ಟು ಒಂದು ಟೇಬಲ್ ಚಮಚ. ಇದನ್ನು ಮಾಡಿಕೊಳ್ಳುವ ವಿಧಾನ. ಮೊದಲಿಗೆ ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಂಡು ಅದಕ್ಕೆ ಹಾಲಿನ ಕೆನೆ ಅಥವಾ ಆಲಿವ್ ಆಯಿಲ್ ಹಾಕಿ ಮಿಕ್ಸ್ ಮಾಡಿ. ಅದನ್ನು ಪೇಸ್ಟ್ ರೀತಿ ಮಾಡಿಕೊಳ್ಳಿ.

ಫೇಶಿಯಲ್ ಮೊದಲನೆಯ ಹಂತ ಕ್ಲಿನ್ಸಿಂಗ್ ಎಂದರೆ ಮುಖದಲ್ಲಿನ ಜಿಡ್ಡು ಮತ್ತು ಕೊಳೆಯನ್ನು ತೆಗೆಯುವುದು. ಇದನ್ನು ಮಾಡಲು ಒಂದು ಅಥವಾ ಎರಡು ಟೇಬಲ್ ಸ್ಪೂನ್ ಮಾವಿನ ಹಣ್ಣಿನ ಪೇಸ್ಟ್ ತೆಗೆದುಕೊಂಡು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ನಂತರ ಒಂದು ಹತ್ತಿ ಉಂಡೆ ತೆಗೆದುಕೊಂಡು ಮುಖವನ್ನು ಸ್ವಚ್ಛ ಮಾಡಿಕೊಳ್ಳಿ. ಎರಡನೇಯ ಹಂತ ಫೇಸ್ ಮಸಾಜ್. ಮಸಾಜ್ ಮಾಡಿಕೊಳ್ಳಲು ಎರಡು ಟೇಬಲ್ ಸ್ಪೂನ್ ಪೇಸ್ಟ್ ಗೆ ಒಂದು ಟೇಬಲ್ ಸ್ಫೂನ್ ಬೆಣ್ಣೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಂಡು 20 ರಿಂದ 30 ನಿಮಿಷ ಮಸಾಜ್ ಮಾಡಿಕೊಳ್ಳಿ. ನಂತರ ಮೂರರಿಂದ ನಾಲ್ಕು ನಿಮಿಷ ಮುಖಕ್ಕೆ ಸ್ಟೀಮ್ ಅಥವಾ ಹಬೆ ತೆಗೆದುಕೊಳ್ಳಿ. ನಂತರ ಹತ್ತಿ ಉಂಡೆ ತೆಗೆದುಕೊಂಡು ಮುಖವನ್ನು ಸ್ವಚ್ಛ ಮಾಡಿಕೊಳ್ಳಿ. ಸ್ಟೀಮ್ ತೆಗೆದುಕೊಳ್ಳುವುದರಿಂದ ಬೆವರಿನ ಗ್ರಂಥಿಗಳು ತೆರೆದು ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ತಗೆಯಲು ಸಹಾಯಕವಾಗುತ್ತದೆ.
ಮೂರನೆಯ ಹಂತ ಸ್ಕ್ರಬ್. ಮಾವಿನಹಣ್ಣಿನ ವಾಟೆಯನ್ನು ತೆಗೆದುಕೊಂಡು ನಿಧಾನವಾಗಿ ನಿಮ್ಮ ಮುಖವನ್ನು ಉಜ್ಜಿ ಮಸಾಜ್ ಮಾಡಿಕೊಳ್ಳಿ. ನಾಲ್ಕನೇ ಹಂತ ಫೇಸ್ ಪ್ಯಾಕ್. ಮೊದಲು ಮಾವಿನಹಣ್ಣಿನ ಸಿಪ್ಪೆಯಿಂದ ಮುಖವನ್ನು ಮಸಾಜ್ ಮಾಡಿ ನಂತರ ಮೂರು ಟೇಬಲ್ ಸ್ಪೂನ್ ಮಾವಿನ ಹಣ್ಣಿನ ಪೇಸ್ಟ್ ಗೆ ಕಡಲೆಹಿಟ್ಟನ್ನು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಪ್ಯಾಕ್ ಹಾಕಿಕೊಳ್ಳಿ. ಕಣ್ಣಿನ ಸುತ್ತ ಕಪ್ಪು ಕಲೆ ಇದ್ದರೆ ಹಣ್ಣಿನ ಸಿಪ್ಪೆಯನ್ನ ಇಡಿ. ಇಪ್ಪತ್ತು ನಿಮಿಷದ ನಂತರ ಪ್ಯಾಕ್ ತೆಗೆದು ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈಗ ನಿಮ್ಮ ಮುಖ ಮಾವಿನ ಹಣ್ಣಿನ ಫೇಶಿಯಲ್ ನಿಂದ ಕಂಗೊಳಿಸುತ್ತಿದೆ. ಮಾವಿನ ಹಣ್ಣು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಮತ್ತು ಮುಖದ ಸುಕ್ಕನ್ನು ಕಡಿಮೆ ಮಾಡಿ ಚರ್ಮವನ್ನು ಬಿಗಿಗೊಳಿಸಿ ಮುಖಕ್ಕೆ ಹೊಸ ಹೊಳುಪನ್ನು ಕೊಡುತ್ತದೆ. ಹಾಗಾಗಿ ಎಲ್ಲ ವಯಸ್ಸಿನವರೂ ಮತ್ತು ಎಲ್ಲಾ ರೀತಿಯ ಸ್ಕಿನ್ ಇರುವವರು ಇದನ್ನು ಮಾಡಿಕೊಳ್ಳಬಹುದು. ಇದು ಮಾವಿನ ಹಣ್ಣಿನ ಫೇಶಿಯಲ್ ವಿಧಾನ. ಈ ಲೇಖನವನ್ನು ಶೇರ್ ಮಾಡಿ. ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.
Good