ನಿಮ್ಮ ಅಂಗೈನಲ್ಲಿ ಈ ರೀತಿಯ ರೇಖೆ ಇದ್ಯ ಈಗಲೇ ಪರೀಕ್ಷೆ ಮಾಡಿಕೊಳ್ಳಿರಿ

0
1016

ನಿಮ್ಮ ಅಂಗೈನಲ್ಲಿ ಇರುವಂತಹ ಇಂತಹ ರೇಖೆಗಳನ್ನು ನೋಡಿಕೊಂಡು ನೀವು ನಿಮ್ಮ ಜೀವನದಲ್ಲಿ ಮುಂದೆ ನಡೆಯುವ ಭವಿಷ್ಯವನ್ನು ನೀವೇ ತಿಳಿದುಕೊಳ್ಳಬಹುದು. ಹೌದು ನಿಮ್ಮ ಅಂಗೈನಲ್ಲಿ ಇರುವಂತಹ ಹಲವಾರು ತ್ರಿಕೋನಾಕೃತಿ ಇರುವ ಇಂತಹ ಭವಿಷ್ಯದ ಗೆರೆಗಳನ್ನು ನೀವು ಕಾಣಬಹುದು. ನಿಮ್ಮ ಅಂಗೈನಲ್ಲಿ ನಾವು ಹೇಳುವ ಈ ರೀತಿ ತ್ರಿಕೋನಾತ್ಮಕ ಆಕೃತಿ ಕಂಡುಬಂದರೆ ಈ ಭವಿಷ್ಯದ ಗೆರೆಗಳಿಂದ ನಿಮಗೆ ಏನೆಲ್ಲಾ ಅದೃಷ್ಟ ಬರುತ್ತದೆ ಅಂತ ಈಗ ಸಂಪೂರ್ಣವಾದ ಮಾಹಿತಿಯನ್ನು ಕೊಡುತ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಮೊದಲನೆಯದು ಚಿತ್ರದಲ್ಲಿ ಇರುವಂತಹ ಈ ತರಹದ ತ್ರಿಕೋನಾಕೃತಿ ಇದ್ದರೆ ಅದನ್ನು ಶನಿಯ ಬೆಟ್ಟದಲ್ಲಿರುವ ತ್ರಿಕೋನಾತ್ಮಕ ಆಕೃತಿ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಕರೆಯಲ್ಪಡುತ್ತಾರೆ. ನಿಮ್ಮ ಅಂಗೈನಲ್ಲಿ ಏನಾದರೂ ಈ ತರಹದ ತ್ರಿಕೋನಾಕೃತಿಯು ನಿಮಗೆ ಇದ್ದರೆ ಯಾವುದೇ ಸಮಸ್ಯೆ ಇಲ್ಲದೆ ಇರುವಂತಹ ವ್ಯಕ್ತಿಗಳು ಎಂದು ಕರೆಯಲ್ಪಡುತ್ತೀರ. ಹಾಗೆ ಇಂತಹ ವ್ಯಕ್ತಿಗಳಿಗೆ ದೈವಭಕ್ತಿಯು ಕೂಡ ಹೆಚ್ಚಾಗಿರುತ್ತದೆ. ಜೀವನದಲ್ಲಿ ಎಂತಹದಾದ ದೊಡ್ಡ ಸಮಸ್ಯೆಯೂ ಬಂದರೂ ಅದನ್ನು ಧೈರ್ಯವಾಗಿ ಎದುರಿಸಿ ಜಯವನ್ನ ತಮ್ಮದಾಗಿಸಿಕೊಳ್ಳುತ್ತಾರೆ. ಯಾವುದೇ ತರಹ ಇನ್ನೊಬ್ಬರ ಹಂಗಿನಲ್ಲಿ ಇರಲು ಇಷ್ಟಪಡುವುದಿಲ್ಲ. ಭವಿಷ್ಯದಲ್ಲಿ ಏನಾದರೂ ಸಾಧಿಸಬೇಕು ಶ್ರಮ ಪಟ್ಟು ಹಣವನ್ನು ಸಂಪಾದಿಸಬೇಕು ಎಂಬ ಛಲ ಇವರಲ್ಲಿ ಇರುತ್ತದೆ. ಈ ರೀತಿ ಗೆರೆಯಲ್ಲಿ ಏನಾದರೂ ಸಮ ಇಲ್ಲದಿದ್ದರೆ ಆಗ ಆ ವ್ಯಕ್ತಿಯು ಮೋಸ ಮಾಡುವ ಮತ್ತು ಇತರರಿಗೆ ನಂಬಿಕೆ ದ್ರೋಹ ಮಾಡುವ ಸಾಕಷ್ಟು ಕೆಟ್ಟ ಕೆಲಸಗಳನ್ನು ಹೆಚ್ಚಾಗಿ ಎದುರಿಸಬೇಕಾಗುತ್ತದೆ.

ಇನ್ನು ಎರಡನೆಯದು ಈ ಚಿತ್ರದಲ್ಲಿ ಇರುವಂತಹ ಈ ತ್ರಿಕೋನಾಕೃತಿ ನಿಮ್ಮ ಅಂಗೈಯಲ್ಲಿ ಕಂಡು ಬಂದರೆ ಇದನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಗುರುವಿನ ಬೆಟ್ಟದಲ್ಲಿರುವ ತ್ರಿಕೋನಾಕೃತಿ ಎಂದು ಕರೆಯಲ್ಪಡುತ್ತಾರೆ. ಈ ಆಕೃತಿ ಇರುವಂತಹ ವ್ಯಕ್ತಿಯವರು ರಾಜ್ಯತಾಂತ್ರಿಕ ಮತ್ತು ತಮ್ಮ ಪ್ರಗತಿಯ ಜೀವನದ ಹಾದಿಯಲ್ಲಿ ನಡೆಯುವ ಮಹತ್ವವಾದ ಆಕಾಂಕ್ಷೆಗಳನ್ನು ಹೆಚ್ಚಿಗೆ ರೀತಿಯಲ್ಲಿ ಹೊಂದಿರುವವರಾಗಿರುತ್ತಾರೆ. ಮತ್ತು ನಿಮ್ಮ ಜೀವನದಲ್ಲಿ ಮುಂದೆ ಇರುವ ಎಲ್ಲಾ ಕಾರ್ಯಗಳಿಗೆ ಮೊದಲೇ ಎಲ್ಲಾ ತರಹದ ಯೋಚನೆ ಮಾಡಿ ನಂತರ ಕೆಲಸವನ್ನು ಪ್ರಾರಂಭಿಸುತ್ತೀರಿ. ಹಣಕಾಸಿನ ವಿಚಾರದಲ್ಲಿ ತುಂಬಾನೆ ಯೋಚನೆ ಮಾಡಿ ಖರ್ಚು ಮಾಡುತ್ತೀರ. ಈ ಗೆರೆಯಲ್ಲಿ ಏನಾದರೂ ನಿಮಗೆ ಸಮನಾಗಿ ಇಲ್ಲದಿದ್ದರೆ ಈ ವ್ಯಕ್ತಿಗಳು ತಾವು ಮಾಡಿದ ಕೆಲಸಕ್ಕೆ ತಾವೇ ಹೆಮ್ಮೆ ಪಟ್ಟು ಸ್ವಾರ್ಥಿಗಳಾಗಿರುತ್ತಾರೆ.

ಇನ್ನು ಮೂರನೆಯದು. ಈ ಚಿತ್ರದಲ್ಲಿ ಕಾಣುವಂತಹ ಈ ರೀತಿ ಏನಾದರೂ ತ್ರಿಕೋನಾಕೃತಿ ನಿಮ್ಮ ಅಂಗೈನಲ್ಲಿ ಇದ್ದರೆ ಅದನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಶುಕ್ರನ ಬೆಟ್ಟದ ಮೇಲಿರುವ ದೊಡ್ಡ ತ್ರಿಕೋನ ಎಂದು ಕರೆಯಲ್ಪಡುತ್ತಾರೆ. ಈ ತರ ಆಕೃತಿ ಇರುವಂತಹ ವ್ಯಕ್ತಿಗಳು ತುಂಬಾ ಮೃದು ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳು ತುಂಬಾ ಸರಳ ಸರಿಹೊಂದುವ ಉನ್ನತ ಮೌಲ್ಯಗಳಿಗೆ ವಾಸಿಸುವಂತಹ ತುಂಬಾ ಭಾವನಾತ್ಮಕ ಪ್ರೇಮಿಗಳಾಗಿರುತ್ತಾರೆ. ಹಾಗೆಯೇ ತುಂಬಾ ಬುದ್ಧಿವಂತರಾಗಿಯು ಇರುತ್ತಾರೆ. ಯಾವುದೇ ಕೆಟ್ಟ ಆಲೋಚನೆಗಳನ್ನು ಇವರು ಮಾಡುವುದಿಲ್ಲ. ಇನ್ನೊಬ್ಬರಿಗೆ ಸಹಾಯವನ್ನು ಮಾಡಿ ತಮ್ಮ ಸಂತೋಷವನ್ನು ಹಾರೈಸಿಕೊಳ್ಳುತ್ತಾರೆ. ಈ ಗೆರೆ ಏನಾದರೂ ನಿಮಗೆ ಸಮನಾಗಿ ಇಲ್ಲದಿದ್ದರೆ ಈ ವ್ಯಕ್ತಿಗಳು ಮುಂದಿನ ಭವಿಷ್ಯದಲ್ಲಿ ಒಂದು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಇನ್ನು ನಾಲ್ಕನೆಯದಾಗಿ ಈ ಚಿತ್ರದಲ್ಲಿ ಕಾಣುವಂತಹ ಈ ರೀತಿ ತ್ರಿಕೋನಾಕೃತಿ ನಿಮ್ಮ ಅಂಗೈನಲ್ಲಿ ಕಂಡುಬಂದರೆ ಇದನ್ನು ತಲೆಯ ಗೆರೆಯ ಮೇಲಿನ ತ್ರಿಕೋನಾಕೃತಿ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಕರೆಯಲ್ಪಡುತ್ತಾರೆ. ಈ ರೀತಿ ಇರುವಂತಹ ವ್ಯಕ್ತಿಗಳು ಭವಿಷ್ಯದಲ್ಲಿ ತುಂಬಾ ಚಾಣಕ್ಯ ಮತ್ತು ಉನ್ನತ ಶಿಕ್ಷಣವನ್ನು ಪಡೆಯುವವರಾಗಿರುತ್ತಾರೆ. ಎಲ್ಲರ ಜೀವನವನ್ನು ಸರಿಪಡಿಸಲು ಇವರು ಮುಂದಾಗುತ್ತಾರೆ. ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ಛಲವನ್ನು ಇವರು ಹೊಂದಿರುವವರಾಗಿರುತ್ತಾರೆ. ತಮ್ಮನ್ನೇ ನಂಬಿಕೊಂಡಿರುವ ತಮ್ಮ ಆತ್ಮೀಯರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳುತ್ತಾರೆ. ಈ ರೀತಿಯ ಗೆರೆ ನಿಮಗೆ ಸಮನಾಗಿ ಇಲ್ಲದಿದ್ದರೆ ಇವರು ಭವಿಷ್ಯದಲ್ಲಿ ತುಂಬಾ ದುರಾದೃಷ್ಟವಂತರು ಆಗುತ್ತಾರೆ. ಮತ್ತು ಜೀವನದಲ್ಲಿ ಇವರಿಗೆ ಯಶಸ್ಸು ಸಿಗುವುದು ತುಂಬಾ ಕಡಿಮೆ ಅಂತಾನೆ ಹೇಳಬಹುದು.

ಇನ್ನು ಕೊನೆಯದಾಗಿ ಐದನೆಯದು. ಈ ಚಿತ್ರದಲ್ಲಿ ಕಾಣುವಂತ ಈ ರೀತಿ ತ್ರಿಕೋನಾಕೃತಿ ನಿಮ್ಮ ಅಂಗೈನಲ್ಲಿ ಕಂಡುಬಂದರೆ ಅದನ್ನು ಸೂರ್ಯನ ಬೆಟ್ಟದ ಮೇಲೆ ಇರುವ ತ್ರಿಕೋನಾತ್ಮಕ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಕರೆಯಲ್ಪಡುತ್ತಾರೆ. ಈ ರೀತಿ ಇರುವಂತಹ ವ್ಯಕ್ತಿಗಳು ತುಂಬಾ ಧಾರ್ಮಿಕವಾಗಿ ಇರುತ್ತಾರೆ. ಮತ್ತು ಇತರರನ್ನು ಅತ್ಯಂತ ಒಳ್ಳೆಯ ರೀತಿಯಲ್ಲಿ ಕಾಣುತ್ತಾರೆ. ಮತ್ತು ಹೆಣ್ಣು ಮಕ್ಕಳ ವಿಚಾರದಲ್ಲಿ ಈ ವ್ಯಕ್ತಿಗಳು ತುಂಬಾನೇ ಗೌರವ ಕೊಡುತ್ತಾರೆ. ಮುಂದಿನ ದಿನಗಳಲ್ಲಿ ಏನಾದರೂ ಸಾಹಸ ಮಾಡಿ ಹೆಸರು ಮಾಡಬೇಕು ಎಂಬ ಆತ್ಮವಿಶ್ವಾಸವನ್ನು ಇವರು ಇಟ್ಟುಕೊಂಡಿರುತ್ತಾರೆ. ಈ ಗೆರೆ ಏನಾದರೂ ಸಮನಾಗಿ ಇಲ್ಲದಿದ್ದರೆ ಇವರು ಇನ್ನೊಬ್ಬ ವ್ಯಕ್ತಿಯನ್ನು ಟೀಕಿಸುವುದಲ್ಲದೇ ಜೀವನದಲ್ಲಿ ಇವರಿಗೂ ಕೂಡ ಯಶಸ್ಸು ಸಿಗುವುದು ತುಂಬಾ ಕಷ್ಟ. ಈ ಲೇಖನವನ್ನು ಶೇರ್ ಮಾಡಿ.

LEAVE A REPLY

Please enter your comment!
Please enter your name here