ದಿನಬೆಳಗಾದ್ರೆ ನಾವು ನೀವು ನೋಡುವ ಒಂದು ಗಿಡ ಅದ್ಭುತವನ್ನು ಸೃಷ್ಟಿಸುತ್ತದೆ ಅಂದರೆ ನೀವು ನಂಬುತ್ತೀರಾ? ಅದರ ಹೂವು ಎಲೆ ಬೇರುಗಳು ಅದ್ಭುತ ಔಷಧೀಯ ಗುಣಗಳನ್ನು ಹೊಂದಿವೆ ಅಂದ್ರೆ ನೀವು ನಂಬಲೇಬೇಕು. ಈ ಗಿಡ ಹತ್ತು ಹದಿನೈದು ವರ್ಷ ಬೆಳೆಯುತ್ತಿದ್ದ ಹಾಗೆ ಇದರ ಬೇರಿನಲ್ಲಿ ಗಣೇಶನ ಮೂರ್ತಿಗಳು ರೂಪುಗೊಳ್ಳುತ್ತವಂತೆ. ಅದನ್ನು ಹೆಕ್ಕಿ ತೆಗೆದು ಮನೆಯಲ್ಲಿ ಇಟ್ಟು ಪೂಜೆ ಮಾಡಿದರೆ ಅದು ಯಾವ ಸಂಕಷ್ಟಗಳಿದ್ದರೂ ನಿವಾರಣೆ ಆಗುತ್ತದಂತೆ. ಹಾಗಂತ ಒಂದು ನಂಬಿಕೆ ಕೂಡ ಈ ಗಿಡದ ಬಗ್ಗೆ ಇದೆ. ಆಯುರ್ವೇದದಲ್ಲಿ ಅಷ್ಟೇ ಅಲ್ಲದೆ ಜ್ಯೋತಿಷ್ಯದಲ್ಲೂ ಪ್ರಾಮುಖ್ಯತೆಯನ್ನು ಹೊಂದಿರುವ ಆ ಗಿಡದ ಬಗ್ಗೆ ಈ ಲೇಖನದಲ್ಲಿ ಓದಿ.

ನೀವೇನಾದರೂ ಹಳ್ಳಿ ಕಡೆ ಹೋಗಿದ್ದರೆ ಈ ಗಿಡದ ಪರಿಚಯ ನಿಮಗೆ ಚೆನ್ನಾಗಿರುತ್ತದೆ. ಯಾಕೆಂದರೆ ಹಳ್ಳಿಗಳಲ್ಲಿ ಓಡಾಡುವಾಗ ಕಾಲಿಗೆ ಮುಳ್ಳು ಚುಚ್ಚಿಕೊಂಡುಬಿಟ್ಟರೆ ಮೊದಲು ಮಾಡುವ ಕೆಲಸವೇ ಈ ಗಿಡದ ಹಾಲನ್ನು ಮುಳ್ಳು ಚುಚ್ಚಿದ ಜಾಗಕ್ಕೆ ಹಾಕುವುದು. ಅದಾದ ಕೆಲ ಗಂಟೆಗಳಲ್ಲಿ ಮುಳ್ಳು ಹೊರಬರುತ್ತದೆ. ಈಗ ಒಂದಷ್ಟು ಜನರಿಗೆ ಇದು ಯಾವ ಗಿಡ ಅನ್ನುವುದರ ಬಗ್ಗೆ ಸುಳಿವು ಸಿಕ್ಕಿರಬಹುದು. ಹೌದು ಇದು ಎಕ್ಕದ ಗಿಡ. ಎಕ್ಕದ ಗಿಡ ಎಕ್ಕೆ ಗಿಡ ಬಿಳಿ ಎಕ್ಕ. ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ನಮ್ಮ ಹಳ್ಳಿಗಳ ಕಡೆ ಸರ್ವೇಸಾಮಾನ್ಯ. ಅದರಲ್ಲೂ ಈ ಬಿಳಿ ಎಕ್ಕದ ಹೂವಿಗೆ ಹಾಗೂ ಹೂವಿನ ಹಾರಕೆ ಎಲ್ಲಿಲ್ಲದ ಬೇಡಿಕೆ. ಗಣಪತಿ ದೇವಸ್ಥಾನಕ್ಕೆ ಹೋಗುವವರು ಆಂಜನೇಯನಿಗೆ ಪೂಜೆ ಸಲ್ಲಿಸುವರು ಈ ಎಕ್ಕದ ಹೂವಿನ ಹಾರವನ್ನು ತೆಗೆದುಕೊಂಡು ಹೋಗುತ್ತಾರೆ. ಕನಿಷ್ಟಪಕ್ಷ ಒಂದೆರಡು ಹೂವನ್ನಾದರು ದೇವರಿಗೆ ಇಡುವುದು ಆಚಾರ.
ಇಂತಹ ಎಕ್ಕದಗಿಡದ ಎಲೆ ಡಯಾಬಿಟಿಸ್ ಕಡಿಮೆ ಮಾಡುತ್ತೆ ಅಂತ ಹೇಳಲಾಗುತ್ತದೆ. ಹೌದು ಎಕ್ಕದ ಗಿಡದ ಎಲೆಯನ್ನು ಉಲ್ಟಾ ಮಾಡಿ ಪಾದದ ಕೆಳಗೆ ಇಟ್ಟು ಅದರ ಮೇಲೆ ಕಾಲು ಚೀಲವನ್ನು ಹಾಕಿ ಬೆಳಗಿನಿಂದ ಸಂಜೆಯವರೆಗೂ ಇರಬೇಕು. ಆನಂತರ ಎಲೆಯನ್ನು ತೆಗೆದರೆ ಅದು ಮನುಷ್ಯನ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದಕ್ಕೆ ಸಹಕಾರಿಯಾಗುತ್ತದೆ ಅಂತ ಹೇಳಲಾಗುತ್ತದೆ. ಹೀಗೆ ಮೂರ್ನಾಲ್ಕು ತಿಂಗಳು ಮಾಡಿದರೆ ಡಯಾಬಿಟಿಸ್ ನಿಯಂತ್ರಣಕ್ಕೆ ಬರುತ್ತೆ ಅಂತ ಹೇಳುತ್ತಾರೆ. ಇನ್ನು ಎಕ್ಕದ ಗಿಡದ ಬೇರಿನ ರಸವನ್ನು ವಿಷ ಜಂತುಗಳು ಕಚ್ಚಿದಾಗ ಬಳಸಲಾಗುತ್ತದೆ. ವಿಷಯುಕ್ತ ಚೇಳುಗಳು ಕಚ್ಚಿದಾಗ ಎಕ್ಕದ ಬೇರನ್ನು ಅರಿಶಿನದೊಂದಿಗೆ ಸ್ವಲ್ಪ ನೀರಿನಲ್ಲಿ ತೇಯ್ದು ಸೇವಿಸಿದರೆ ವಿಷದ ಪ್ರಮಾಣ ಕಡಿಮೆಯಾಗುತ್ತಂತೆ.
ಮಂಡಿನೋವು ಕಾಲು ನೋವಿರುವವರು ಈ ಎಕ್ಕದ ಗಿಡದ ಎಲೆಯನ್ನು ಕೆಂಡದ ಮೇಲೆ ಸುಟ್ಟು ಅದನ್ನು ನೋವಿರುವ ಜಾಗಕ್ಕೆ ಕಟ್ಟಿದರೆ ಶೀಘ್ರವಾಗಿ ನೋವು ನಿವಾರಣೆಯಾಗುತ್ತದೆ. ಇನ್ನೂ ಬಂಗು ಅಂತ ಹೇಳುತ್ತಾರಲ್ಲ ಮುಖದ ಮೇಲೆ ಹಾಗೂ ಮೈಕೈಗಳ ಮೇಲೆ ಕಪ್ಪುಕಲೆ ಆಗುವುದು. ಅದಕ್ಕೆ ರಾಮಬಾಣ ಈ ಎಕ್ಕದಗಿಡ. ಈ ಗಿಡದ ಬೇರನ್ನು ಸ್ವಲ್ಪ ನಿಂಬೆ ರಸದಲ್ಲಿ ಅರಿಶಿಣದೊಂದಿಗೆ ತೇಯ್ದು ಬಂಗು ಇರುವ ಜಾಗಕ್ಕೆ ಹಚ್ಚಿದರೆ ಕಾಲಕ್ರಮೇಣ ಬಂಗು ನಿವಾರಣೆಯಾಗುತ್ತದೆ. ಮೂಲವ್ಯಾಧಿಗೂ ಈ ಎಕ್ಕದ ಗಿಡವನ್ನು ಔಷಧವಾಗಿ ಬಳಸುವುದುಂಟು. ಮೂಲವ್ಯಾಧಿ ಮೊಳಕೆ ಇರೋ ಜಾಗಕ್ಕೆ ಎಕ್ಕದ ಎಲೆಯ ಹಾಲನ್ನ ಹಚ್ಚುವುದರಿಂದ ಮೂಲವ್ಯಾಧಿ ಸಹ ಗುಣ ಆಗುತ್ತದಂತೆ.
ಆಯುರ್ವೇದದಲ್ಲಿ ಸಾಕಷ್ಟು ಬಳಕೆಯಲ್ಲಿರುವ ಈ ಗಿಡ ಮಔಷದ ಅಂತಲೇ ಪರಿಗಣಿಸಲ್ಪಟ್ಟಿದೆ. ಯಾವುದೇ ರೋಗಕ್ಕೂ ಔಷಧಿಗಳು ಕೆಲಸ ಮಾಡದೆ ಇದ್ದರೆ ಎಕ್ಕದ ಗಿಡವನ್ನು ಅಂತಿಮವಾಗಿ ಬಳಸಿ ಅಂತ ಹೇಳಲಾಗುತ್ತದೆ. ಅದು ರೋಗದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೀಗೆ ಆಯುರ್ವೇದ ಅಷ್ಟೇ ಅಲ್ಲ ಇದನ್ನು ಜ್ಯೋತಿಷ್ಯ ಹಾಗು ತಂತ್ರ ವಿದ್ಯೆಯನ್ನು ಸಹ ಬಳಸಲಾಗುತ್ತಂತೆ. ಭೂಮಿ ಮೇಲೆ ದೀರ್ಘಾವಧಿ ಇರುವ ಎಕ್ಕದ ಗಿಡಗಳನ್ನು ತಾಂತ್ರಿಕರು ತಮ್ಮ ಸಾಧನೆಗಳಿಗೆ ಬಳಕೆ ಮಾಡುತ್ತಾರೆ ಅಂತ ಅದರ ಬಗ್ಗೆ ಗೊತ್ತಿರುವವರು ಹೇಳುತ್ತಾರೆ. ಇನ್ನು ಎಕ್ಕದ ಗಿಡದ ಬೇರಿನಲ್ಲಿ ರೂಪಗಳು ಗಣಪತಿ ಪ್ರತಿಮೆಗಳಿಗೆ ಎಲ್ಲಿಲ್ಲದ ಬೇಡಿಕೆ ಆದ್ದರಿಂದ ಎಕ್ಕದ ಗಿಡ ಅಡಿಯಿಂದ ಮುಡಿವರೆಗೆ ಉಪಯೋಗಕಾರಿಯೇ. ಇದು ಎಕ್ಕದ ಗಿಡದ ಬಗೆಗಿನ ಮಾಹಿತಿ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.