ಈ ಕಲಿಯುಗದಲ್ಲಿ ಇಪ್ಪತ್ತೈದು ಕೋಟಿಗೂ ಹೆಚ್ಚು ಜನರ ಪ್ರಾಣವನ್ನು ಉಳಿಸಿದ ವ್ಯಕ್ತಿ ಇವರು

0
486

ನಮಗೆ ರಾಮಾಯಣದಲ್ಲಿ ಲಕ್ಷ್ಮಣ ಹನುಮಂತನ ಬಗ್ಗೆ ಚೆನ್ನಾಗಿ ಗೊತ್ತು ಲಕ್ಷ್ಮಣನನ್ನು ಕಾಪಾಡಲು ಹನುಮಂತ ಸಂಜೀವಿನಿಯನ್ನು ತಂದು ಕೊಟ್ಟ ಎಂದು ಗೊತ್ತು ಆದರೆ ಈ ಕಲಿಯುಗದಲ್ಲಿ ಇರುವ ಕೋಟ್ಯಾಂತರ ಜನರ ಪ್ರಾಣವನ್ನು ಕಾಪಾಡಲು ಒಬ್ಬ ವ್ಯಕ್ತಿ ಸಂಜೀವಿನಿಯನ್ನು ತಂದಿದ್ದಾನೆ ಎಂದು ನಿಮಗೆ ಗೊತ್ತಾ? ಅವರೇ ಅಲೆಕ್ಸಾಂಡರ್ ಫ್ಲೆಮಿಂಗ್ ಇವರು ಯಾರು ಯಾವ ಸಂಜೀವಿನಿಯನ್ನ ಪ್ರಪಂಚಕ್ಕೆ ತಂದಿದ್ದಾರೆ ಅನ್ನುವ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಯೋಣ.

ಅಲೆಕ್ಸಾಂಡರ್ ಫ್ಲೆಮಿಂಗ್ ಚಿಕ್ಕ ವಯಸ್ಸಲ್ಲೇ ತಂದೆ ತಾಯಿಯನ್ನು ಕಳೆದು ಕೊಂಡರೂ ಶಾಲೆಗೆ ಹೋಗುವುದಕ್ಕೆ ಹದಿನಾಲ್ಕು ಕಿಮೀ ನಡೆಯಬೇಕಾಗಿ ಬಂದರೂ ಆರ್ಥಿಕ ಸಮಸ್ಯೆ ಇಂದ ಓದನ್ನು ಮಧ್ಯದಲ್ಲೇ ನಿಲ್ಲಿಸಿ ಕ್ಲರ್ಕ್ ಆಗಿ ಕೆಲಸ ಮಾಡಬೇಕಾಗಿ ಬಂದರೂ ಇವರು ಯಾವತ್ತೂ ಅವರಲ್ಲಿದ್ದ ನಂಬಿಕೆಯನ್ನು ಕಳೆದುಕೊಂಡು ಇರಲಿಲ್ಲ. ಇಪ್ಪತ್ತು ವರ್ಷ ವಯಸ್ಸಿನಲ್ಲಿ ಆಸ್ತಿ ಬಂದಿದ್ದರಿಂದ ಮಧ್ಯದಲ್ಲಿ ನಿಲ್ಲಿಸಿದ ಓದನ್ನು ಪೂರ್ತಿ ಮಾಡುತ್ತಾರೆ. ಓದು ಪೂರ್ತಿ ಆದ ನಂತರ ಬ್ಯಾಕ್ಟೀರಿಯಾ ಮೇಲೆ ಎಷ್ಟೋ ರೀತಿಯಾದ ಪ್ರಯೋಗಗಳನ್ನು ಮಾಡಿ 1928 ರಲ್ಲಿ ಪೆನ್ಸಿಲಿನ ಅನ್ನಿಕಾಂತಿ ಬಯೋಟಿಕ್ ಅನ್ನು ಕಂಡು ಹಿಡಿಯುತ್ತಾರೆ ಇದು ಪ್ರಪಂಚದಲ್ಲೇ ಮೊತ್ತ ಮೊದಲ ಅಂಟಿ ಬಯೋಟಿಕ್ 1928 ರಲ್ಲಿ ಇದನ್ನು ಕಂಡು ಹಿಡಿದರೂ ಔಷಧಿ ರೂಪದಲ್ಲಿ ಇದನ್ನು ಬಳಸುವುದಕ್ಕೆ 17 ವರ್ಷಗಳ ಸಮಯ ಹಿಡಿಸುತ್ತೆ.

ಇವರು ಕಂಡು ಹಿಡಿದ ಪೆನ್ಸಿಲಿನಗೆ 1100 ರೀತಿಯ ಬ್ಯಾಕ್ಟೀರಿಯಾಗಳನ್ನೂ ಸಾಯಿಸುವ ಸಾಮರ್ಥ್ಯ ಇದೆ ಈ ಒಂದು ಔಷಧಿ ವೈದ್ಯ ಪ್ರಪಂಚವನ್ನೇ ಬದಲಾಯಿಸಿ ಬಿಡುತ್ತೆ. ವೈದ್ಯ ಪ್ರಪಂಚದಲ್ಲಿ ಚರಿತ್ರೆಯನ್ನು ಸೃಷ್ಟಿ ಮಾಡುತ್ತೆ. ಅಲೆಕ್ಸಾಂಡರ್ ಕಂಡು ಹಿಡಿದ ಈ ಔಷಧಿ ಪ್ರಪಂಚದಾದ್ಯಂತ ಇದುವರೆಗೂ ಇಪ್ಪತ್ತೈದು ಕೋಟಿ ಜನರ ಪ್ರಾಣವನ್ನು ಕಾಪಾಡಿದೆ. ಕಳೆದ ನೂರು ವರ್ಷಗಳಲ್ಲಿ ಮಾನವನಿಂದ ಸೃಷ್ಟಿಸಿದ ಅಧ್ಬುತ ಗಳಲ್ಲಿ ಇದು ಕೂಡ ಒಂದು ಅದೇ ಪೆನ್ಸಿಲಿನ ಇದನ್ನು ಕಂಡು ಹಿಡಿದು 78 ವರ್ಷಗಳಾದರೂ ಈಗಲೂ ಸಹಾ ಟೈಪಾಯ್ಡ್ ನಿಮೋನಿಯಾ ಕ್ಷಯಾ ಅಂತಹ ರೋಗಗಳಿಗೆ ಈ ಪೆನ್ಸಿಲಿನ್ ಮದ್ದು ಬಳಸುತ್ತಿದ್ದರು ಪೆನ್ಸಿಲಿನ ಅನ್ನು ಕಂಡು ಹಿಡಿದು ಕೆಲವು ಕೋಟ್ಯಂತರ ಜನರ ಪ್ರಾಣವನ್ನು ಕಾಪಾಡಿದ ಇವರಿಗೆ 1945 ರಲ್ಲಿ ವಿಶ್ವದ ಶ್ರೇಷ್ಠ ನೊಬೆಲ್ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿದ್ದಾರೆ. 30 ದೇಶಕ್ಕೂ ಅಧಿಕ ಯೂನಿವರ್ಸಿಟಿಗಳು ಇವರಿಗೆ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸುತ್ತಾರೆ.

ಒಂದು ಸಾಧಾರಣ ರೈತ ಕುಟುಂಬದಲ್ಲಿ ಹುಟ್ಟಿದ ಇವರು ಭೌತಿಕವಾಗಿ ಈಗ ಇಲ್ಲದಿದ್ದರೂ ಪೆನ್ಸಿಲಿನ ರೂಪದಲ್ಲಿ ಕೆಲವು ಕೋಟಿ ಕೋಟಿ ಜನರ ಪ್ರಾಣವನ್ನು ಕಾಪಾಡುತ್ತಾಲೇ ಇದ್ದಾರೆ ಇನ್ನು ಮುಂದೆ ಕಾಪಾಡುತ್ತಾಲೇ ಇರುತ್ತಾರೆ. ಈಗ ನೀವೇ ಹೇಳಿ ಪೆನ್ಸಿಲಿನ ಎನ್ನುವುದು ಒಂದು ಸಂಜೀವಿನಿ ಅಲ್ವಾ? ಅಲೆಕ್ಸಾಂಡರ್ ಫ್ಲೆಮಿಂಗ್ ಅವರು ಮಾನವ ಜನಕ್ಕೆ ದೇವರು ರೀತಿ ಅಲ್ವಾ? ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ಉಪಯೋಗ ಎನಿಸಿದಲ್ಲಿ ದಯವಿಟ್ಟು ಇದನ್ನು ಶೇರ್ ಮಾಡಿ ಎಲ್ಲರಿಗು ತಿಳಿಸಿರಿ.

LEAVE A REPLY

Please enter your comment!
Please enter your name here