ಈ ದೇಶದ ಒಂದು ಗ್ರಾಮದಲ್ಲಿ ಪ್ರತೀ ಮನೆಗೂ ಒಂದು ವಿಮಾನ ಇದೆ ಅಂತೆ

0
485

ಈ ಆಧುನಿಕ ಯುಗದಲ್ಲಿ ಪ್ರತೀ ಒಬ್ಬರ ಮನೆಯಲ್ಲಿ ಬೈಕ್ ಅಥವಾ ಕಾರ್ ಇರುವುದು ಸರ್ವೇ ಸಾಮಾನ್ಯ ಆದರೆ ಪ್ರತೀ ಒಬ್ಬರ ಮನೆಯಲ್ಲಿ ವಿಮಾನ ಇರುವುದರ ಬಗ್ಗೆ ಕೇಳಿದ್ದೀರಾ ಭವಿಷ್ಯತ್ತಿನಲ್ಲಿ ಈ ರೀತಿ ನಡೆಯಬಹುದು ಎಂದುಕೊಂಡು ಇದ್ದೀರಾ? ನಾವು ಹೇಳುವ ಗ್ರಾಮದಲ್ಲಿ ಇರುವ ಪ್ರತೀ ಒಂದು ಮನೆಯಲ್ಲೂ ವಿಮಾನ ಇರುತ್ತೆ ಇದಕ್ಕೆ ಸಂಬಂಧ ಪಟ್ಟ ವಿಷಯವನ್ನು ಈ ಲೇಖನದಲ್ಲಿ ನಾವು ತಿಳಿಯೋಣ. ಇದು ಅಮೆರಿಕಾ ದೇಶದ ಫ್ಲೋರಿಡಾ ದಲ್ಲಿನ ಒಂದು ಗ್ರಾಮ ಅಥವಾ ಖಾಸಗಿ ವಿಮಾನ ನಿಲ್ದಾಣ ಅದರ ಹೆಸರು ಸ್ಪ್ರೋ ಸ್ಕ್ರಿಟ್ ವಿಮಾನ ನಿಲ್ದಾಣ ಈ ಗ್ರಾಮವೇ ಒಂದು ವಿಮಾನ ನಿಲ್ದಾಣ ಏಕೆಂದರೆ ಇಲ್ಲಿರುವ ಪ್ರತೀ ಒಂದು ಮನೆಯಲ್ಲೂ ಒಂದು ವಿಮಾನವಿರುತ್ತೆ ಇಲ್ಲಿನ ಜನಸಂಖ್ಯೆ ಸುಮಾರು ಆರು ಸಾವಿರ ಜನ ಇಲ್ಲಿ ಇನ್ನೊಂದು ವಿಶೇಷ ಏನು ಅಂದರೆ ಇಲ್ಲಿ ವಾಸಿಸುವ ಪ್ರತೀ ಒಬ್ಬರೂ ಧನವಂತರೇ ಅಷ್ಟೇ ಅಲ್ಲ ನಾವು ಮನೆಗೊಂದು ಬೈಕ್ ಇರಬೇಕು ಎಂದು ಹೇಗೆ ಅಂದುಕೊಳ್ಳುತ್ತೇವೆ ಇಲ್ಲಿರುವವರು ಮನೆಗೊಂದು ವಿಮಾನ ಇರಬೇಕು ಅಂದುಕೊಳ್ಳುತ್ತರಂತೆ.

ಈ ಟೌನ್ ನಲ್ಲಿನಿರುವ ಜನರಿಗೆ ವಿಮಾನ ಅಂದರೆ ತುಂಬಾ ಇಷ್ಟ ವಿಮಾನ ಎಷ್ಟೆ ದುಬಾರಿ ಆದರೂ ವಿಮಾನ ಖರೀದಿ ಮಾಡುತ್ತಾರೆ ಅಂತೆ. ಕೆಲವು ಮನೆಗಳಲ್ಲಿ ಎರಡು ಮೂರು ವಿಮಾನಗಳು ಇವೆ ನಾವು ಮನೆ ಮುಂದೆ ಹೇಗೆ ಬೈಕ್ ಮತ್ತು ಕಾರ್ ಗಳನ್ನು ಪಾರ್ಕ್ ಮಾಡುತ್ತೇವೆ ಅದೇ ರೀತಿ ಅವರ ಮನೆ ಮುಂದೆ ಅವರು ಪಾರ್ಕ್ ಮಾಡುತ್ತಾರೆ ಕೆಲವರಿಗೆ ಅವರದೇ ಆದಂಥ ವಿಮಾನ ನಿಲ್ದಾಣ ಇರುತ್ತೆ ಇನ್ನು ಕೆಲವರು ರೋಡ್ ಪಕ್ಕದಲ್ಲೇ ಪಾರ್ಕಿಂಗ್ ಮಾಡಿಕೊಳ್ಳುತ್ತಾರೆ ಈ ವಿಮಾನಗಳೆಲ್ಲಾ ನಿಂತಿರುವಾಗ ಆ ಸ್ಟ್ರೋ ಸ್ಕ್ರಿತ್ ಕಾಲೊನಿ ವಿಮಾನ ನಿಲ್ದಾಣದಂತೆ ಕಾಣುತ್ತೆ ಇವರು ಪ್ರತೀ ಶನಿವಾರ ಸಾಟರ್ಡೆ ಮಾರ್ನಿಂಗ್ ಗಾಗಲ್ ಮಾಡುತ್ತಾರೆ ಅಂದರೆ ಪ್ರತೀ ಶನಿವಾರ ಹತ್ತಿರ ವಿರುವ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿ ಟಿಫನ್ ಮಾಡುತ್ತಾ ಮಾತಾಡಿ ಕೊಳ್ಳುವುದು ಡೇಟೋನಾ ಬೀಚ್ ನಗರದ ದಕ್ಷಿಣಕ್ಕೆ 11ಕಿಮೀ ದೂರದಲ್ಲಿ ಈ ಸ್ಟ್ರೋ ಸ್ಟ್ರೀಟ್ ವಿಮಾನ ನಿಲ್ದಾಣವಿದೆ ಇದು ಒಂದು ಖಾಸಗಿ ವಿಮಾನ ನಿಲ್ದಾಣ.

ಎರಡನೇ ಪ್ರಪಂಚದ ಯುದ್ದ ಸಮಯದಲ್ಲಿ ನಾವೆಲ್ ಏರೆ ಸ್ಟೇಷನ್ ದೇರನ್ ಮತ್ತು ಎನಿಲಿಯಸ್ ದೇಟೋರ ಬೀಚ್ ಹೊರವಲಯದಲ್ಲಿ ಈ ವಿಮಾನ ನಿಲ್ದಾಣ ವನ್ನ್ ನಿರ್ಮಾಣ ಮಾಡುತ್ತಾರೆ ಆದರೆ 1946 ನೆ ವರ್ಷದಲ್ಲಿ ಯು ಎಸ್ ಮಿಲಿಟರಿ ಈ ಏರ್ಪೋರ್ಟ್ ಅನ್ನು ಖಾಲಿ ಮಾಡಿಸುತ್ತೆ ಆಗಿನಿಂದ ಈ ವಿಮಾನ ನಿಲ್ದಾಣ ಅವರ ಖಾಸಗಿ ವಿಮಾನ ನಿಲ್ದಾಣ ವಾಗಿದೆ. ಈಗ ಈ ಒಂದು ಟೌನ್ ನಲ್ಲಿ ಮಾತ್ರ ಇದೆ ಭವಿಷ್ಯತ್ತಿನಲ್ಲಿ ಎಲ್ಲಾ ಗ್ರಾಮಗಳಲ್ಲಿ ಈ ರೀತಿ ಆಗಬಹುದು. ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಖಂಡಿತ ಶೇರ್ ಮಾಡಿ ಹಾಗೂ ಈ ಕುತೂಹಲಕಾರಿ ವಿಷಯವನ್ನು ಎಲ್ಲರಿಗೂ ತಿಳಿಸಿ.

LEAVE A REPLY

Please enter your comment!
Please enter your name here