ಈ ದೇಶದಲ್ಲಿರುವ ಶಾಲೆ ಮಕ್ಕಳು ಬಾತ್ ರಾಮ್ ಕ್ಲೀನ್ ಮಾಡಬೇಕು ಕಸ ಗುಡಿಸಬೇಕು ಇನ್ನು ಅನೇಕ ನಿಮಯ ಇದೆ

0
438

ಸ್ಕೂಲ್ ದಿನಗಳು ಎಲ್ಲರಿಗೂ ನೆನಪಿನಲ್ಲಿರುತ್ತದೆ. ಮತ್ತು ಪ್ರತಿ ವ್ಯಕ್ತಿಯು ಆ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತಾರೆ. ಮುಂಜಾನೆ ಬೇಗ ಏಳುವುದು ಸ್ಕೂಲ್ ಹೋಗಲು ರೆಡಿ ಆಗುವುದು ಮತ್ತು ಟಿಫನ್ ಪ್ಯಾಕ್ ಮಾಡಿಕೊಂಡು ಸ್ಕೂಲ್ ಹೋಗುವುದು ಈ ಎಲ್ಲಾ ಬಾಲ್ಯದ ಸ್ಕೂಲ್ ದಿನಗಳು ಎಲ್ಲರಿಗೂ ನೆನಪಿರುತ್ತವೆ. ಹೋಂವರ್ಕ್ ಮಾಡಿಕೊಂಡು ಹೋಗಲಿಲ್ಲ ಅಂದ್ರೆ ಪನಿಷ್ಮೆಂಟ್ ಕೊಡುವುದು. ಸ್ಕೂಲ್ ಲೈಫ್ನಲ್ಲಿ ಜೋಡಣೆಯಾಗಿರುತ್ತದೆ. ಮತ್ತು ಇಂದಿಗೂ ಎಲ್ಲರಿಗೂ ನೆನಪಿನಲ್ಲಿರುತ್ತವೆ. ಇದರ ಜೊತೆಗೆ ಸ್ಕೂಲ್ ನಿಯಮಗಳಂತೂ ನಿಮಗೆ ನೆನಪಿನಲ್ಲಿರಬಹುದು. ಅದರಲ್ಲಿ ಕೂದಲು ಚಿಕ್ಕದಾಗಿ ಕಟ್ ಮಾಡಿಕೊಂಡು ಹೋಗುವುದು ಟೈ ಹಾಕಿಕೊಂಡು ಹೋಗುವುದು ಪದ್ಧತಿ ಇರುತ್ತದೆ. ಇಂತಹ ನಿಯಮಗಳಂತೂ ಎಲ್ಲಾ ಸ್ಕೂಲ್ ನಲ್ಲಿ ಇರುತ್ತವೆ. ಇವು ನಿಮಗೆ ಬೇಜಾರು ಕೂಡ ಮಾಡಿರಬಹುದು ಈ ಲೇಖನದಲ್ಲಿ ನಿಮಗೆ ಜಗತ್ತಿನಲ್ಲಿನ ಇಂತಹ ಕೆಲವು ಸ್ಕೂಲ್ ಗಳ ಬಗ್ಗೆ ಹೇಳಲಿದ್ದೇವೆ.

ಅಲ್ಲಿಯ ನಿಯಮಗಳು ತುಂಬಾನೇ ವಿಚಿತ್ರವಾಗಿದೆ. ಮೊದಲನೆಯದು. ಬಾತ್ರೂಮ್ ಕೂಪನ್. ನ್ಯೂಯಾರ್ಕ್ ನಲ್ಲಿ ಮಕ್ಕಳಿಗೆ ದಿನದಲ್ಲಿ ಕೇವಲ ಮೂರು ಬಾರಿ ಬಾತ್ರುಮ್ ಹೋಗಲು ಅನುಮತಿ ಇದೆ. ಹೌದು ಈ ರೂಲ್ಸ್ ಯಾಕೆ ಮಾಡಿದ್ದಾರೆ ಅಂದರೆ ಮಕ್ಕಳು ತಮ್ಮ ಹೆಚ್ಚು ಸಮಯವನ್ನು ಬಾತ್ರೂಮಿನಲ್ಲಿ ಕಳೆಯಬಾರದು ಅಂತ. ಮತ್ತು ಅವರ ಅಧ್ಯಯನಕ್ಕೆ ಅಡ್ಡಿ ಆಗದಿರಲಿ ಅಂತ. ಹೀಗೆ ಮಾಡಿದರೆ ಅವರು ಸುಳ್ಳು ಹೇಳುವುದನ್ನು ತಪ್ಪಿಸಬಹುದು. ಈ ಕಾರಣ ಪ್ರತಿ ಮಕ್ಕಳಿಗೆ ಮೂರು ಕೂಪನ್ ನೀಡಲಾಗಿರುತ್ತದೆ. ಒಂದು ವೇಳೆ ಇವರು ಕೂಪನ್ ಕಳೆದುಕೊಂಡರೆ ಅವರು ಬಾತ್ರೂಮ್ ಹೋಗಲು ಸಾಧ್ಯವಿಲ್ಲ.

ಎರಡನೆಯದು. ರೈಸಿಂಗ್ ಹ್ಯಾಂಡ್ಸ್. ಇದರ ಬಗ್ಗೆ ನೀವು ಚೆನ್ನಾಗಿ ತಿಳಿದಿರುತ್ತೀರ. ಕ್ಲಾಸ್ ರೂಮ್ ನಲ್ಲಿ ಟೀಚರ್ ಏನಾದರೂ ಪ್ರಶ್ನೆ ಕೇಳಿದಾಗ ಉತ್ತರ ಗೊತ್ತಿದ್ದರೆ ನಾವು ಕೈ ಮೇಲೆ ಎತ್ತುತ್ತೇವೆ. ಆದರೆ ಯುಕೆನಲ್ಲಿ ಲೋಟಿಂಗ್ ಅನ್ನುವ ಊರಿನ ಸ್ಕೂಲ್ ನಲ್ಲಿ ಈ ರೀತಿ ಮಾಡುವುದು ನಿರ್ಬಂಧವಿದೆ. ಅವರ ಪ್ರಕಾರ ಯಾರಿಗೆ ಉತ್ತರ ಬರುತ್ತದೆ ಅವರು ಕೈ ಮೇಲೆ ಎತ್ತುವುದರಿಂದ ಬೇರೆ ಮಕ್ಕಳಿಗೆ ಕಲಿಯಲು ಅವಕಾಶ ಸಿಗುವುದಿಲ್ಲ ಅಂತ ನಂಬಿಕೆ. ಈ ಕಾರಣ ಮಕ್ಕಳ ತಂದೆ ತಾಯಿಯರು ಈ ನಿಯಮವನ್ನು ವಿರೋಧಿಸಿದರು. ಯಾಕೆಂದರೆ ಈ ಮಕ್ಕಳ ಮನಸ್ಸಿನಿಂದ ಭಯ ಭಾವನೆಯನ್ನು ದೂರ ಮಾಡಲು.

ಮೂರನೆಯದು. ಸ್ಲೀಪಿಂಗ್ ಇನ್ ಕ್ಲಾಸ್ ರೂಮ್. ನಿಮಗೆ ಗೊತ್ತಿರಬಹುದು. ಕ್ಲಾಸ್ ನಲ್ಲಿ ಮಲಗುವುದು ಸ್ಕೂಲ್ ನಿಯಮದ ಪ್ರಕಾರ ಅಪರಾಧವಾಗಿರುತ್ತದೆ. ಒಂದು ವೇಳೆ ಮಲಗಿದ್ದನ್ನ ನೋಡಿದರೆ ಸಾಕು ಶಿಕ್ಷೆ ಖಂಡಿತ. ಆದರೆ ಚೀನಾದ ಒಂದು ಸ್ಕೂಲ್ ನಲ್ಲಿ ಹೀಗೆಲ್ಲ ನಡೆಯುವುದಿಲ್ಲ. ಅಲ್ಲಿ ಮಕ್ಕಳಿಗೆ ಕ್ಲಾಸಿನಲ್ಲಿ ಮಲಗುವುದಕ್ಕೆ ಅನುಮತಿ ನೀಡುತ್ತಾರೆ. ಈ ನಿಯಮದ ಪ್ರಕಾರ ಅವರಿಗೆ ಮಲಗಲು ಅರ್ಧ ಗಂಟೆ ಸಮಯ ನೀಡುತ್ತಾರೆ. ಇದರ ಜೊತೆಗೆ ಮಕ್ಕಳಿಗೆ ಮನೆಯಿಂದ ಹಾಸಿಗೆ ದಿಂಬು ತರಬಹುದು. ಈ ರೀತಿ ಮಾಡಲು ಕಾರಣವೇನೆಂದರೆ? ಮಕ್ಕಳು ಓದುವ ಕಡೆ ಗಮನ ಕೊಡಲಿ ಅಂತ. ಮತ್ತು ಇದರಿಂದ ಅವರ ಮೆದುಳಿಗೆ ರೆಸ್ಟ್ ಸಿಗಲಿ ಅಂತ.

ನಾಲ್ಕನೆಯದು. ಕ್ಲೀನಿಂಗ್. ಸ್ಕೂಲ್ ನಲ್ಲಿ ಸ್ವಚ್ಛತೆ ತುಂಬಾ ಮುಖ್ಯವಾಗಿರುತ್ತದೆ. ಯಾಕೆಂದರೆ ಶುದ್ಧ ವಾತಾವರಣವಿದ್ದರೆ ಮಕ್ಕಳು ಆರೋಗ್ಯದಿಂದ ಇರುತ್ತಾರೆ. ಆದರೆ ಜಪಾನ್ ನಲ್ಲಿ ಎಲ್ಲಾ ಸ್ವಚ್ಛತೆ ಮಾಡಲು ಕೆಲಸಗಾರರು ಇರುವುದಿಲ್ಲ ಬದಲಿಗೆ ಅಲ್ಲಿಯ ಸ್ವಚ್ಛತೆ ಸ್ಟೂಡೆಂಟ್ ಗಳೇ ಮಾಡುತ್ತಾರೆ. ಬಾತ್ ರೂಂ ಸಹ ಶಾಲೆ ಮಕ್ಕಳೇ ತೊಳೆಯಬೇಕು ಅಂತೆ. ಇದೇನು ತಪ್ಪೇನಿಲ್ಲ. ಯಾಕೆಂದರೆ ಈ ರೀತಿ ಅವರು ಕೆಲಸಗಳನ್ನು ಕಲಿಯಬಹುದಾಗಿದೆ. ಈ ಲೇಖನವನ್ನು ಶೇರ್ ಮಾಡಿ. ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here