ಈ ಸಣ್ಣ ಮನೆ ಮದ್ದು ಮಾಡಿದ್ರೆ ನೆಗಡಿ ಕೆಮ್ಮು ಸೀನು ನಿಮ್ಮ ಹತ್ರ ಸುಳಿಯಲ್ಲ

0
621

ನಮಗೆ ಶೀತ ಮತ್ತು ನೆಗಡಿ ಆದಾಗ ಸೀನು ಬರುವುದು ಸರ್ವೇಸಾಮಾನ್ಯ ನಾವು ಹೆಚ್ಚಿನ ಸಂದರ್ಭಗಳಲ್ಲಿ ಯಾವಾಗಲೂ ಸಹ ಮೆಡಿಕಲ್ ಸ್ಟೋರ್ಗೆ ಹೋಗಿ ಮಾತ್ರೆಗಳನ್ನು ಪಡೆದುಕೊಳ್ಳುತ್ತೇವೆ. ಆದರೆ ನಾವು ಸೀನು ನೆಗಡಿಗೆ ಮತ್ತು ಕೆಮ್ಮಿಗೆ ಯಾವಾಗಲು ಮಾತ್ರೆಗಳನ್ನು ತೆಗೆದುಕೊಂಡರೆ ಅದು ನಮಗೆ ಮುಂದೊಂದು ದಿನ ಅತಿ ಹೆಚ್ಚಿನ ಸಮಸ್ಯೆ ಆಗುತ್ತದೆ ಏಕೆಂದರೆ ಯಾವುದೇ ಇಂಗ್ಲೀಷ್ ಮೆಡಿಸಿನ್ ಅಲ್ಲಿಯೂ ಸಹ ಸದ್ಯದ ಮಟ್ಟಿಗೆ ಕಾಯಿಲೆಯನ್ನು ಬೇಗ ಮುಕ್ತಿ ಗೊಳಿಸುತ್ತದೆ ಆದರೆ ಅದರ ಪರಿಣಾಮ ಮಾತ್ರ ಅತಿ ದೊಡ್ಡದಾಗಿರುತ್ತದೆ. ನಾವು ಪ್ರತಿಯೊಂದಕ್ಕೂ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮನೆಯಲ್ಲಿ ಒಂದಿಷ್ಟು ಮನೆಮದ್ದನ್ನು ಮಾಡಿ ನಮಗೆ ತಿಳಿದಿರುವ ಹಾಗೆ ಅದನ್ನು ಉಪಯೋಗ ಮಾಡಿಕೊಂಡರೆ ಕೆಲವೇ ಸಮಯದಲ್ಲಿ ಶಾಶ್ವತವಾಗಿ ಯಾವುದು ತೊಂದರೆಗಳಿಲ್ಲದೆ ಸೀನು ಮತ್ತು ನೆಗಡಿ ಮತ್ತು ಕೆಮ್ಮಿನ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ತುಳಸಿ ಎಲೆಗಳು ಸೋಂಕಿನ ವಿರುದ್ಧ ಹೋರಾಡಲು ಹೆಚ್ಚಿನ ರೀತಿಯಲ್ಲಿ ಶಕ್ತಿಯನ್ನು ಹೊಂದಿರುತ್ತದೆ ತುಳಸಿ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ನೀವು ಪ್ರತಿ ರಾತ್ರಿ ಮಲಗುವಾಗ ಇದರ ರಸವನ್ನು ಸೇವಿಸಿದರೆ ಕೆಲವೇ ದಿನಗಳಲ್ಲಿ ನಿಮ್ಮ ಒಂದು ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಮತ್ತು ಸೀನಿನ ಸಮಸ್ಯೆ ಈ ಮೂರು ಸಹ ಪರಿಣಾಮಕಾರಿಯಾಗಿ ಗುಣ ಆಗುತ್ತದೆ. ಇನ್ನು ಎರಡನೇದಾಗಿ ಸಿಟ್ರಿಕ್ ಹಣ್ಣುಗಳನ್ನು ವೈದ್ಯರು ಸೂಚಿಸುತ್ತಾರೆ ಸಿಟ್ರಸ್ ಹಣ್ಣುಗಳು ಯಾವುದೆಂದರೆ ಅದು ದ್ರಾಕ್ಷಿ ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣು. ಹುಳಿಗೆ ಸಂಬಂಧಪಟ್ಟ ಎಲ್ಲಾ ಹಣ್ಣುಗಳಲ್ಲಿ ಕೂಡ ಕ್ಲೋರೋ ಮಾಣಿಕ್ ಎಂಬ ಒಂದು ಅಗಾದ ವಸ್ತು ಇದರಲ್ಲಿ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ನಿಮಗೆ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಗೆ ಮಾಡುತ್ತದೆ ನಿಮ್ಮ ದೇಹದಲ್ಲಿ ಆಂಟಿ ಆಕ್ಸಿಡೆಂಟ್ಸ್ ಹೆಚ್ಚಾಗಿ ಕಾಣಿಸಲು ಕೆಲಸ ಮಾಡುತ್ತದೆ ನಿಮ್ಮ ಆರೋಗ್ಯದಲ್ಲಿ ಒಳ್ಳೆಯ ಫಲಿತಾಂಶ ನೀಡುತ್ತದೆ.

ನಿಮ್ಮ ಸೀನಿನ ಸಮಸ್ಯೆಗೆ ಬೇಗ ಪರಿಹಾರ ಸಿಗಲು ನೀವು ನೆಲ್ಲಿಕಾಯಿಯನ್ನು ಜ್ಯೂಸ್ ಮಾಡಿಕೊಂಡು ಅಥವಾ ಹಾಗೂ ನೆಲ್ಲಿಕಾಯಿಯ ಸೇವನೆ ಮಾಡಬಹುದು. ಪ್ರತಿದಿನ ಮೂರು ಬಾರಿ ನೀವು ನೆಲ್ಲಿ ಕಾಯಿಯ ಜ್ಯೂಸ್ ಅಥವಾ ನೆಲ್ಲಿಕಾಯಿಯ ಸೇವನೆಯನ್ನು ಮಾಡುವುದರಿಂದ ನಿಮ್ಮ ಕೆಮ್ಮು ಮತ್ತು ನೆಗಡಿ ಮತ್ತು ಸೀನಿನ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ದೊರೆಯುತ್ತದೆ. ಇದರಿಂದ ಯಾವುದೇ ಸೈಡ್ ಎಫೆಕ್ಟ್ಸ್ ಇರೋದಿಲ್ಲ. ಮತ್ತು ಸಣ್ಣ ಮಕ್ಕಳಿಗೆ ಮೂರು ಚಮಚ ಅಂಗಡಿಯಲ್ಲಿ ಸಿಗುವ ನೆಲ್ಲಿ ಜ್ಯೂಸ್ ಕುಡಿಸಬಹುದು.

ನೀವು ನಿಮಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ಶುಂಠಿಯನ್ನು ಸಹ ಉಪಯೋಗ ಮಾಡಿಕೊಂಡು ನಿಮ್ಮ ಶೀತ ಮತ್ತು ನೆಗಡಿ ಮತ್ತು ಸೀನಿನಿಂದ ಮುಕ್ತಿಯನ್ನು ಪಡೆದು ಕೊಳ್ಳಬಹುದು ಈ ಒಂದು ಮನೆ ಮದ್ದು ಮಾಡುವುದು ಹೇಗೆ ಅಂತ ಅಂದರೆ 2 ಟೇಬಲ್ ಸ್ಪೂನ್ ಜೇನು ತುಪ್ಪಕ್ಕೆ ಕಟ್ ಮಾಡಿಕೊಂಡು ಮಿಶ್ರಣ ಮಾಡಿರಿ ನಂತರ ಇವುಗಳನ್ನು ಕುದಿಯುವ ಬಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ರಾತ್ರಿಯ ಸಮಯದಲ್ಲಿ ಎರಡು ಹೊತ್ತು ನೀವು ತೆಗೆದುಕೊಂಡು ಮಲಗಿದರೆ ನಿಮ್ಮ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ದೊರಕುತ್ತದೆ.

LEAVE A REPLY

Please enter your comment!
Please enter your name here