ಆಕೆ ಪೂರ್ತಿ ಒಂದು ವರ್ಷದ ತನಕ ಭಯಂಕರವಾದ ತಲೆನೋವನ್ನು ಅನುಭವಿಸಿದಳು. ಅದರ ನಂತರ ಡಾಕ್ಟರ್ಸ್ ಆಕೆಯ ತಲೆಯನ್ನ ಸ್ಕ್ಯಾನ್ ಮಾಡಿದರು. ನಂತರ ತಿಳಿದ ವಿಷಯ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಇತ್ತು. ಟೆಕ್ಸಸ್ ನಲ್ಲಿ ಇರುವ ಯಾರ್ಡ್ರಿಯ ಹೆಸರಿನ ಮಹಿಳೆ ತುಂಬಾನೇ ಹಾರ್ಡ್ ವರ್ಕ್ ಮಾಡುತ್ತಾಳೆ. ಈಕೆ ಪೂರ್ತಿ ದಿನ ಏನಾದರೂ ಮಾಡುತ್ತಲೇ ಇರುತ್ತಾಳೆ. 2015ರಲ್ಲಿ 31 ವಯಸ್ಸಿನ ಈ ಮಹಿಳೆಗೆ ಪದೇ ಪದೇ ತಲೆನೋವು ಬರಲು ಪ್ರಾರಂಭಿಸಿತು. ಮೊದಲಿಗೆ ಇದು ಸಾಮಾನ್ಯ ತಲೆನೋವಿನಂತೆ ಕಾಣಿಸಿತು. ಆದರೆ ಈ ನೋವು ಎಷ್ಟು ಭಯಾನಕವಾಗಿತ್ತು ಅಂದರೆ ಆ ನೋವಿನ ಪರಿಣಾಮ ಕಣ್ಣಿನ ಮೇಲೆ ಬೀಳುತ್ತಿತ್ತು. ಇದರಿಂದ ಕಣ್ಣುಗಳು ಸರಿಯಾಗಿ ಕಾಣುತ್ತಿರಲಿಲ್ಲ. ತನ್ನ ಜೊತೆಗೆ ಏನು ನಡೆಯುತ್ತಿದೆ ಅಂತ ಆಕೆಗೆ ತಿಳಿದಿರಲೇ ಇಲ್ಲ. ಆದರೆ ಆಕೆಗೆ ಒಂದು ಅಂದಾಜು ಅಂತೂ ಖಂಡಿತ ಇತ್ತು. ಇದು ಸೀರಿಯಸ್ ಆಗಿದೆ ಅಂತ.

ಇದರ ನಂತರ ಆಕೆ ಡಾಕ್ಟರ್ಸ್ ನ ಬೇಟಿಯಾಗಲು ಪ್ಲಾನ್ ಮಾಡಿದ್ದಳು. ನಂತರ ಆಕೆ ಡಾಕ್ಟರ್ಸ್ ಬಳಿ ಬೇಟಿಯನ್ನ ನೀಡಿದಳು. ನಂತರ ಡಾಕ್ಟರ್ಸ್ ಆಕೆಗೆ ಸಿಟಿ ಸ್ಕ್ಯಾನ್ ಮಾಡಿಸಲು ಸೂಚನೆಯನ್ನು ನೀಡಿದರು. ಡಾಕ್ಟರ್ಸ್ ಕೂಡ ತುಂಬಾ ಚಿಂತೆಯಲ್ಲಿದ್ದರು ಅದು ಆಕೆಯ ತಲೆಯಲ್ಲಿ ಟ್ಯೂಮರ್ ಇರದಿರಲಿ ಅಂತ. ಯಾವಾಗ ಡಾಕ್ಟರ್ ಸ್ಕ್ಯಾನ್ ಮಾಡಿದರು ಆಗ ಅವರಿಗೆ ತಿಳಿದಿದ್ದು ಅಲ್ಲಿ ಏನೋ ಇದೆ ಅಂತ. ಅದು ಸ್ಪೈನಲ್ ಫ್ಲೋಟ್ ಅನ್ನ ತಲೆಯ ಒಳಗಡೆ ಹೋಗದಂತೆ ತಡೆಯುತ್ತಿದೆ ಅಂತ. ಮತ್ತಷ್ಟು ವಿಷಯವನ್ನ ತಿಳಿಯಲು ಆಕೆಯ ತಲೆಗೆ ಉಪಕರಣಗಳನ್ನು ಅಳವಡಿಸಿದರು ಆದರೆ ಇದರಿಂದ ಏನೂ ಪೂರ್ತಿಯಾಗಿ ತಿಳಿದು ಬರಲಿಲ್ಲ.
ಇದರ ನಂತರ ಡಾಕ್ಟರ್ ಎಂ ಆರ್ ಐ ಸ್ಕ್ಯಾನ್ ಮಾಡಲು ನಿರ್ದೇಶನ ನೀಡಿದರು. ಅವರಿಗಂತೂ ಇದೊಂದು ಟ್ಯೂಮರ್ ಇರಬಹುದು ಅಂತ ಶಂಕೆಯಂತೂ ಪ್ರಾರಂಭದಿಂದಲೇ ಇತ್ತು. ಆದರೆ ಅದು ತಪ್ಪಾಗಿತ್ತು. ಸ್ಕ್ಯಾನ್ ನಲ್ಲಿ ತಿಳಿದಿದ್ದ ಆಕೆಯ ತಲೆಯಲ್ಲಿ ರೌಂಡ್ ಶೇಪ್ ವಸ್ತುಗಳು ಇವೆ ಅಂತ. ಅವು ಒಳಭಾಗದಲ್ಲಿ ಸಿಲುಕಿವೆ ಅಂತ ಆದರೆ ಅಲ್ಲಿ ಆಘಾತಕಾರಿ ವಿಷಯವೇನೆಂದರೆ ಅವು ಟೇಪ್ ಹುಳದ ಮೊಟ್ಟೆಗಳಾಗಿದ್ದವು. ಆಕೆ ಪೂರ್ತಿ ಒಂದು ವರ್ಷಗಳ ಕಾಲ ತಲೆನೋವನ್ನು ಅನುಭವಿಸಿದ್ದಳು. ಇದಕ್ಕೆ ಕಾರಣ ಆ ಚಿಕ್ಕಪುಟ್ಟ ಮೊಟ್ಟೆಗಳಾಗಿದ್ದವು. ಯಾರ್ಡ್ರಿಯಾಳ ಡಾಕ್ಟರ್ಸ್ ಈ ರೋಗಕ್ಕಾಗಿ ಸ್ಪೆಷಲ್ ಡಾಕ್ಟರ್ ಗಳನ್ನು ಅಲ್ಲಿಗೆ ಕರೆಸಿದರು. ಇದರ ನಂತರ ಆಕೆಯ ತಲೆಯಿಂದ ಆ ಹುಳುಗಳನ್ನು ಮತ್ತು ಮೊಟ್ಟೆಗಳನ್ನು ಆಚೆ ತೆಗೆಯುವ ಪ್ಲಾನ್ ಕೂಡ ಮಾಡಿದರು. ಮೈನ್ ಸರ್ಜರಿ ಬಂದ ನಂತರ ಕೆಲಸ ಶುರುವಾಯಿತು. ಎಡಿರಾಗೆ ಅನಸ್ಲೇಷಿಯ ನೀಡಿದರು. ನಂತರ ತಲೆಯ ಭಾಗವನ್ನು ತೆರೆದರು. ಅದು ಆ ಭಾಗದಲ್ಲಿ ಮೊಟ್ಟೆಗಳು ಇದ್ದವು. ನಂತರ ಡಾಕ್ಟರ್ಸ್ ಗೆ ಎಂಟು ಅಂಟಿಕೊಂಡಿರುವ ಟೇಪ್ ಹುಳುಗಳ ಮೊಟ್ಟೆಗಳು ಸಿಕ್ಕವು.

ಅದನ್ನು ತೆರೆದ ಕಣ್ಣಿನಿಂದ ನೋಡುವುದು ತುಂಬಾ ಕಷ್ಟವಾಗಿತ್ತು. ಆದರೆ ಕೆಲವು ಆಧುನಿಕ ಮಷೀನ್ ಗಳನ್ನು ಬಳಸಿದರು. ಇಲ್ಲಿ ಭಯಾನಕ ವಿಷಯ ಏನಾಗಿತ್ತು ಎಂದರೆ. ಆದಷ್ಟು ಬೇಗ ಆ ಮೊಟ್ಟೆಗಳಿಂದ ಹುಳಗಳು ಆಚೆ ಬರುವ ಸಮಯ ಕೂಡ ಬಂದಿತ್ತು. ಈ ಪೂರ್ತಿಯಾದ ಸರ್ಜರಿಯನ್ನು ಡಾಕ್ಟರ್ಸ್ ಒಂದು ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಿದ್ದರು. ಇದನ್ನ ಯಾರ್ಡ್ರಿಯ ನೋಡಲಿಲ್ಲ. ಆಕೆಯ ಜೀವವಂತೂ ಉಳಿಯಿತು. ಜೊತೆಗೆ ತಲೆ ನೋವಂತು ಕಡಿಮೆಯಾಯಿತು. ಈ ಮಾತಿನಿಂದ ಆಕೆ ಸಂತೋಷವಾಗಿದ್ದಳು. ಆದರೆ ಈ ಕಥೆ ಇಲ್ಲಿಗೆಯೇ ಮುಗಿಯಲಿಲ್ಲ. ಈಗ ಆ ಮೊಟ್ಟೆಗಳು ಆಚೆ ಬಂದಿದ್ದವು. ಅಂದರೆ ಪ್ಲೋಟ್ ಆಕೆಯ ತಲೆಯಲ್ಲಿ ಆರಾಮವಾಗಿ ಹೋಗುತ್ತಿದ್ದವು. ಈಗ ಆಕೆ ತುಂಬಾ ಖುಷಿಯಾಗಿದ್ದಳು. ಯಾವ ತಲೆನೋವಿಲ್ಲದೆ ತನ್ನ ಜೀವನವನ್ನು ನಡೆಸುತ್ತಿದ್ದಳು. ಸರ್ಜರಿಯ ನಂತರ ಯಾರ್ಡ್ರಿಯ ಗೆ ಡಾಕ್ಟರ್ಸ್ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅದು ಹೇಗೆ ಈ ಟೇಪ್ ಹುಳಗಳು ಆಕೆಯ ತಲೆಯಲ್ಲಿ ಪ್ರವೇಶ ಮಾಡಿದವು ಅಂತ.
ಆಕೆ ಹೇಳಿದಳು ಎರಡು ವರ್ಷಗಳ ಹಿಂದೆ ಆಕೆ ತನ್ನ ಪರಿವಾರದವರ ಜೊತೆಗೆ ಮೆಕ್ಸಿಗೋ ಗೆ ಹೋಗಿದ್ದಳು ಆಗ ಡಾಕ್ಟರ್ಸ್ ಗೆ ತಿಳಿದಿದ್ದು ಖಂಡಿತ ಈಕೆ ಅಲ್ಲಿ ಹಸಿಯಾದ ಮಾಂಸವನ್ನು ತಿಂದಿರಬಹುದು ಅಂತ. ಆ ಹಸಿಯಾದ ಮಾಂಸದ ಕಾರಣ ಅದರಲ್ಲಿರುವ ಲಾರ್ವಾ ಯಾರ್ಡ್ರಿಯಾಳ ಶರೀರದಲ್ಲಿ ಪ್ರವೇಶ ಮಾಡಿದೆ ಎಂದು. ಡಬ್ಲ್ಯೂ ಹೆಚ್ ಓ ಅಂದರೆ ವರ್ಲ್ಡ್ ಹೆಲ್ತ್ ಆರ್ಗನೈಜೇಷನ್. ಇವರು ಹೇಳಿದ್ದು ಟೇಪ್ ಹುಳಗಳ ಇನ್ಸ್ಫೆಕ್ಷನ್ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತದೆ ಅಂತೇ. ಒಂದು ವೇಳೆ ಯಾರಾದರೂ ಮನುಷ್ಯರು ಅರ್ಧ ಬೇಯಿಸಿದ ಮಾಂಸ ಅಥವಾ ಹಸಿಯಾದ ಮಾಂಸ ಯಾವ ಪ್ರಾಣಿಯ ಮಾಂಸವಾದರೂ ತಿಂದರೆ ಈ ಕಾಯಿಲೆ ಬರುವ ಚಾನ್ಸಸ್ ತುಂಬಾನೇ ಇರುತ್ತದಂತೆ. ಇದರಿಂದ ಅದರಲ್ಲಿನ ಪರಾವಲಂಬಿ ಜೀವಿಗಳು ಮಾನವನ ಶರೀರದಲ್ಲಿ ಪ್ರವೇಶ ಮಾಡುತ್ತವೆ. ಇದೇ ರೀತಿ ಯಾರ್ಡ್ರಿಯಾಳ ಬದುಕಲ್ಲಿಯೂ ಆಗಿತ್ತು. ಈ ಕಾರಣದಿಂದ ನೀವು ಏನೇ ತಿಂದರೂ ಅದನ್ನು ಒಮ್ಮೆ ಸರಿಯಾಗಿ ನೋಡಿ ತಿನ್ನುವುದು ಒಳ್ಳೆಯದು. ಒಂದು ವೇಳೆ ವಿದೇಶಕ್ಕೆ ಪ್ರಯಾಣ ಮಾಡಿದರೆ ನೀರನ್ನು ಕೂಡ ಸರಿಯಾಗಿ ನೋಡಿ ಕುಡಿಯ ಬೇಕಾಗುತ್ತದೆ. ಕೆಲವು ಇದನ್ನು ನಂಬುವುದೇ ಇಲ್ಲ. ಆದರೆ ಅಮೇರಿಕದಲ್ಲಿ ಪ್ರತಿ ವರ್ಷ ಒಂದು ಸಾವಿರ ಜನರು ಇದೇ ಕಾರಣದಿಂದ ಸಾಯುತ್ತಾರೆ. ಆದರೆ ಅದೃಷ್ಟದಿಂದ ಯಾರ್ಡ್ರಿಯ ಈ ಕೇಸ್ ನಲ್ಲಿ ಉಳಿದುಕೊಂಡಳು. ಈ ಚಿಕಿತ್ಸೆಗೆ ಸುಮಾರು 24 ಲಕ್ಷ ಖರ್ಚು ಬರುತ್ತದೆ. ಹಾಗಾಗಿ ನಾನ್ ವೆಜ್ ತಿನ್ನುವ ಮೊದಲು ಗಮನಿಸಿ ತಿನ್ನಿ. ಈ ಲೇಖನವನ್ನು ಶೇರ್ ಮಾಡಿ.