ಸಮುದ್ರದ ಒಳಗಡೆ ಒಂದು ಹೋಟೆಲ್ ಇದೆ ಅಂದ್ರೆ ನಂಬಲೇ ಬೇಕು

0
553

ಜಗತ್ತಿನಲ್ಲಿರುವ ಕೆಲವು ಅದ್ಭುತ ಮತ್ತು ನೀರಿನ ಒಳಗಡೆ ಇರುವ ಮನೆಗಳನ್ನು ಹೇಳಲಿದ್ದೇವೆ. ಮತ್ತು ಈ ಲೇಖನವನ್ನು ಪೂರ್ತಿಯಾಗಿ ಓದಿ. ಫ್ಲೋಟಿಂಗ್ ಹೌಸ್. ನೀರಿನ ಮೇಲೆ ಮನೆ ನಿರ್ಮಿಸುವ ಐಡಿಯಾ ಬೋಟ್ ನಿಂದ ಪಡೆಯಲಾಗಿದೆ. ದುಬೈನಲ್ಲಿರುವ ಈ ಮನೆ ಎಲ್ಲರ ಕನಸಿನಲ್ಲಿರುವ ಮನೆಗಿಂತ ಚೆನ್ನಾಗಿದೆ. ಮೂರು ಅಂತಸ್ತಿನ ಈ ಮನೆಯನ್ನು ಮುಂದಿನ ಫ್ಯೂಚರ್ ಗಳನ್ನು ಜ್ಞಾನದಲ್ಲಿ ಇಟ್ಟುಕೊಂಡು ನಿರ್ಮಿಸಲಾಗಿದೆ. ನೀವು ಇದರ ಮೇಲಿನ ಮಹಡಿಯಿಂದ ನಿಮ್ಮ ಸುತ್ತಮುತ್ತಲಿನ ಸೌಂದರ್ಯವನ್ನು ಸವಿಯಬಹುದಾಗಿದೆ. ಮಧ್ಯಭಾಗದಲ್ಲಿ ಕಿಚನ್ ಮತ್ತು ಬಾತ್ ರೂಮ್ ಸಿಸ್ಟಮ್ ಇದೆ. ಮತ್ತು ನೀರಿನ ಒಳಗಡೆ ಇರುವ ಭಾಗದಲ್ಲಿ ಬೆಡ್ರೂಮ್ ಇದೆ.

ಇದರ ಗೋಡೆಗಳನ್ನು ಗಾಜಿನಿಂದ ನಿರ್ಮಿಸಲಾಗಿದೆ. ಇದರಿಂದ ನಿಮ್ಮ ಸುತ್ತಲೂ ಇರುವ ಮೀನುಗಳನ್ನು ಆರಾಮವಾಗಿ ನೋಡಬಹುದಾಗಿದೆ. ಅಂಡರ್ವಾಟರ್ ರೆಸ್ಟೋರೆಂಟ್. ನಿಮಗೇನಾದ್ರೂ ಹೋಟೆಲ್ ನಲ್ಲಿ ಊಟ ಮಾಡುವ ಅವ್ಯಾಸ ಇದ್ದರೆ ಮತ್ತು ನಿಮಗೇನಾದರೂ ವಿಭಿನ್ನವಾದ ಹೋಟೆಲಿನಲ್ಲಿ ಊಟ ಮಾಡಲು ಇಷ್ಟ ಇದ್ದರೆ ಈ ಅಂಡರ್ವಾಟರ್ ರೆಸ್ಟೋರೆಂಟ್ ನಿಮಗಾಗಿಯೇ ನಿರ್ಮಿಸಲಾಗಿದೆ. ಇದು ಜಗತ್ತಿನಲ್ಲಿನ ಮೊದಲ ಅಂಡರ್ವಾಟರ್ ರೆಸ್ಟೋರೆಂಟ್ ಆಗಿದೆ. ಇದರಲ್ಲಿ ಮನುಷ್ಯರ ಜೊತೆಗೆ ನೀವು ಮೀನುಗಳನ್ನು ನೋಡಿ ಊಟ ಮಾಡಬಹುದಾಗಿದೆ. ಮತ್ತು ಎಲ್ಲ ರೀತಿಯ ಪುಡ್ ಐಟಂಗಳು ನಿಮಗೆ ಸಿಗುತ್ತದೆ. ಇಲ್ಲಿ ಊಟ ಮಾಡುತ್ತಾ ಹೊರಗಿನ ಸೌಂದರ್ಯವನ್ನು ನೀವು ಸವಿಯಬಹುದಾಗಿದೆ. ದ ವಾಟರ್ ಡಿಸ್ಕಸ್ ಹೋಟೆಲ್. ಈ ಹೋಟೆಲಿನಲ್ಲಿ ನೀವು ಬಂದರೆ ಇಲ್ಲಿ ನಿಮಗೆ ಫ್ಯೂಚರ್ ಅನುಭವವಾಗುತ್ತದೆ.

ನೀವು ಬೇರೆ ಜಗತ್ತಿನಲ್ಲಿ ಇದ್ದ ಹಾಗೆ ಅನುಭವವಾಗುತ್ತದೆ. ಈ ಹೋಟೆಲ್ ನಲ್ಲಿ 21 ರೂಂಗಳು ಇವೆ. ಇದರ ಕೆಳಗೆ ಮಲಗಲು ಬೆಡ್ರೂಮ್ ಮತ್ತು ಊಟಮಾಡಲು ರೆಸ್ಟೋರೆಂಟ್ ಮಜಾ ಮಾಡಲು ಡಿಸ್ಕೋ ಎಂಟರ್ಟೈನ್ಮೆಂಟ್ ಗಾಗಿ ಸಿನಿಮಾ ಹಾಲ್ ಮತ್ತು ತುಂಬಾ ಅನುಕೂಲಗಳು ಇವೆ. ಮತ್ತು ಮೇಲ್ಭಾಗದಲ್ಲಿ ಫುಟ್ಬಾಲ್ ಗ್ರೌಂಡ್ ಇದೆ. ಇದನ್ನು ನೀವು ನಿಮ್ಮ ಬೆಡ್ರೂಮಿನಿಂದ ನೋಡಬಹುದು. ದ ಕ್ಯೂಬ್ ಹೋಟೆಲ್. ಈ ಹೋಟೆಲ್ ಯುಎಸ್ ನಲ್ಲಿ ಇದೆ. ನೀರಿನ ಒಳಗಡೆ ಈ ಹೋಟೆಲಿನಲ್ಲಿ ತುಂಬಾ ರೂಮ್ಸ್ ಇವೆ. ಈ ಫೈವ್ ಸ್ಟಾರ್ ಹೋಟೆಲ್ ತನ್ನ ಸಿಸ್ಟಮ್ ಜೊತೆ ತುಂಬಾನೇ ವಿಶೇಷತೆಗಳನ್ನು ಒಳಗೊಂಡಿದೆ.

ಈ ಹೋಟೆಲ್ ಒಳಗಡೆ ಹೋಗಲು ಒಂದು ಲಕ್ಷ ಐವತ್ತು ಸಾವಿರ ಜನ ವೈಟಿಂಗ್ ನಲ್ಲಿ ಇದ್ದಾರೆ. ಅಂದರೆ ಇವತ್ತು ನೀವು ಈ ಹೋಟೆಲ್ ಒಳಗಡೆ ಹೋಗಲು ಬುಕ್ ಮಾಡಿದರೆ ಐದು ವರ್ಷಗಳ ಕಾಲ ವೈಟ್ ಮಾಡಬೇಕಾಗುತ್ತದೆ. ಫ್ಯೂಚರ್ ಹೌಸ್. ಬನ್ನಿ ಫ್ಯೂಚರ್ ಮನೆಗಳನ್ನು ತೋರಿಸುತ್ತೇವೆ. ನೀರಿನಲ್ಲಿ ತೇಲುತ್ತಿರುವ ಈ ಫ್ಯೂಚರ್ ಕಾಲೋನಿಯನ್ನು ಯುಎಸ್ ಗೌರ್ಮೆಂಟ್ ನವರು ನಿರ್ಮಿಸುತ್ತಿದ್ದಾರೆ. ಇದರ ಒಳಗಡೆ ತುಂಬಾ ವಿಶಾಲವಾಗಿದೆ. ಇದರ ಒಳಗಡೆ ಫ್ಯೂಚರ್ ಟೆಕ್ನಾಲಜಿ ಒಳಗೊಂಡಿದೆ. ಮತ್ತು ಮುಂದೆ ಇವುಗಳಲ್ಲಿ ಮರ ಗಿಡಗಳು ಪ್ರಾಣಿಗಳು ಇರುತ್ತವೆ. ಮತ್ತು ಜನರು ಇಲ್ಲಿ ಬೇಸಾಯವನ್ನು ಮಾಡಬಹುದು. ಆದರೆ ಮನುಷ್ಯರಿಗಿಂತ ಇದರಲ್ಲಿ ರೋಬೋಟ್ ಗಳು ಹೆಚ್ಚಾಗಿ ಕೆಲಸ ಮಾಡುತ್ತವೆ. ಈ ಲೇಖನವನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ

LEAVE A REPLY

Please enter your comment!
Please enter your name here