ಈ ದೇವಾಲಯದಲ್ಲಿ ನೀರಿನಿಂದ ದೀಪವನ್ನು ಹಚ್ಚಲು ಸಾಧ್ಯ

0
2902

ಭಾರತ ದೇಶವು ನಂಬಿಕೆಗಳ ಮತ್ತು ಹಲವಾರು ವಿಸ್ಮಯಕಾರಿ ಪದ್ಧತಿಗಳಿಗೆ ತವರೂರಾಗಿದೆ. ಇನ್ನು ಭಾರತ ದೇಶದಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿದ್ದಾರೆ ಅಂತ ಹೇಳಲಾಗುತ್ತದೆ. ಇನ್ನೂ ಇಂತಹದ್ದೇ ಒಂದು ಮಹಾಕಾಳಿ ದೇವಿಯ ಪವಾಡವನ್ನು ನಾವು ಈ ಲೇಖನದಲ್ಲಿ ತಿಳಿಸಲಿದ್ದೇವೆ. ಈ ವಿಸ್ಮಯಕಾರಿ ಪವಾಡವೆಂದರೆ ಈ ದೇವಾಲಯದಲ್ಲಿ ನೀರಿನಿಂದ ದೀಪ ಹಚ್ಚುತ್ತಾರೆ. ಇದೇನಪ್ಪಾ ಆಶ್ಚರ್ಯ ನೀರಿನಿಂದ ದೀಪ ಹಚ್ಚುತ್ತಾರ ಅಂತ ನಿಮಗೆಲ್ಲರಿಗೂ ಆಶ್ಚರ್ಯವೆನಿಸಬಹುದು. ಸಾಮಾನ್ಯವಾಗಿ ಎಣ್ಣೆ ಇಲ್ಲದೆ ದೀಪ ಉರಿಯುವುದೇ ಕಷ್ಟ ಆದರೆ ಈ ದೇವಾಲಯದ ದೇವಿಗೆ ನೀರಿನಿಂದಲೇ ದೀಪ ಹಚ್ಚುತ್ತಾರೆ. ( ನೇ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 99453 39940)

ಹೌದು ಈ ದೇವಾಲಯವು ಮಧ್ಯಪ್ರದೇಶ ರಾಜ್ಯದ ಶಾಜಪುರ್ ಎಂಬ ಜಿಲ್ಲೆಯಲ್ಲಿರುವ ನೆಲ್ಲಕೊಂಡ ಎಂಬ ಪ್ರದೇಶದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ ಗಡಿಯಾಘಾಟ್ ಎಂಬ ಹಳ್ಳಿಯಲ್ಲಿ ಇದೆ. ಈ ಹಳ್ಳಿಯಲ್ಲಿ ಗಡಿಯಾಘಾಟ್ ತಾಯಿ ಭಗವತಿ ನೆಲೆಸಿದ್ದಾಳೆ. ಇನ್ನು ಈ ದೇವಾಲಯದಲ್ಲಿಯೇ ನೀರಿನಿಂದ ದೀಪ ಹಚ್ಚುತ್ತಾರೆ. ಸುಮಾರು ಏಳು ವರ್ಷಗಳ ಹಿಂದೆ ಈ ದೇವಾಲಯದ ಅರ್ಚಕನ ಕನಸಿನಲ್ಲಿ ತಾಯಿ ಭಗವತಿ ಬಂದು ತನಗೆ ದೇವಸ್ಥಾನದ ಪಕ್ಕದಲ್ಲಿ ಹರಿಯುವ ಪವಿತ್ರವಾದ ಕಾಳಿ ಸಿಂದ್ ನದಿಯಿಂದ ನೀರನ್ನು ತಂದು ನನಗೆ ದೀಪ ಹಚ್ಚು ಅಂತ ಹೇಳಿದ್ದರಂತೆ ಆ ದಿನದ ನಂತರ ಅರ್ಚಕರು ದೇವಸ್ಥಾನದಲ್ಲಿ ಆ ಪವಿತ್ರವಾದ ನೀರನ್ನು ತಂದು ದೀಪವನ್ನು ಹಚ್ಚುತ್ತಾರೆ.

ತಾಯಿಯ ಮಾತಿನಂತೆ ದೀಪವು ಹತ್ತಿ ಉರಿಯುತ್ತದೆ. ಇದನ್ನು ಪೂಜಾರಿ ಊರಿನ ಜನಕ್ಕೆ ಹೇಳಿದ ನಂತರ ಜನರು ಯಾರು ನಂಬದೇ ಪೂಜಾರಿಯನ್ನ ಟೀಕಿಸತೊಡಗುತ್ತಾರೆ. ಅದಾದ ನಂತರ ತಾಯಿಯ ಮಹಿಮೆಯನ್ನು ಅರಿತ ಜನರು ಆ ತಾಯಿಗೆ ಆ ಪುಣ್ಯ ನೀರಿನಿಂದ ದೀಪ ಹಚ್ಚುವುದನ್ನು ರೂಡಿ ಮಾಡಿಕೊಳುತ್ತಾರೆ. ಈಗಲೂ ಸಹ ಈ ತಾಯಿಗೆ ಈ ಪುಣ್ಯ ನೀರಿನಿಂದಲೇ ದೀಪವನ್ನು ಹಚ್ಚುತ್ತಾರೆ. ಈ ನದಿಯು ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಮಳೆಗಾಲದಲ್ಲಿ ದೀಪ ಹಚ್ಚುವುದಿಲ್ಲ. ನವರಾತ್ರಿಯ ನಂತರ ನೀರು ಕಡಿಮೆಯಾದ ನಂತರ ಈ ತಾಯಿಗೆ ದೀಪವನ್ನು ಹಚ್ಚುತ್ತಾರೆ. ಆದರೆ ವಿಸ್ಮಯವೇನೆಂದರೆ ಈ ತಾಯಿಯ ದೇವಾಲಯದಲ್ಲಿ ಮಾತ್ರ ಈ ಪವಾಡ ನಡೆಯುತ್ತದೆ. ಏನೇ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 99453 39940

ಆ ದೇವಾಲಯದಲ್ಲಿ ಮಾತ್ರ ಆ ನದಿಯ ನೀರಿನಿಂದ ಆ ದೀಪವನ್ನು ಹಚ್ಚಬಹುದು. ದೇವಾಲಯದ ಆಚೆ ಯಾವುದೇ ಕಾರಣಕ್ಕೂ ಆ ನೀರಿನಿಂದ ದೀಪ ಉರಿಯುವುದಿಲ್ಲ. ಇದು ಈ ಕ್ಷೇತ್ರದ ತಾಯಿಯ ಮಹಿಮೆ. ನೀರನ್ನು ಬೆಂಕಿ ಆರಿಸುವುದಕ್ಕೆ ಮಾತ್ರ ಉಪಯೋಗಿಸುತ್ತಾರೆ. ಆದರೆ ಇಲ್ಲಿ ಈ ತಾಯಿಯ ಮಹಿಮೆಯಿಂದ ದೀಪವನ್ನು ಸಹ ಬೆಳಗಿಸುತ್ತಾರೆ. ಈ ಪುಣ್ಯ ನೀರನ್ನು ಬಳಸಿ ಮಹಾಕಾಳಿಗೆ ದೀಪವನ್ನು ಹಚ್ಚುವುದು ನಿಜಕ್ಕೂ ಒಂದು ಪವಾಡವೇ ಸರಿ. ನೀವು ಏನಾದರೂ ಮಧ್ಯಪ್ರದೇಶಕ್ಕೆ ಹೋದರೆ ತಪ್ಪದೆ ನೀವು ಸಹ ಈ ದೇವಿಯ ದರ್ಶನವನ್ನು ಪಡೆದು ಧನ್ಯರಾಗಿ ಅಂತ ಹೇಳುತ್ತಿದ್ದೇವೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here