ಈ ದೇವಾಲಯದಲ್ಲಿ ವಿಗ್ರಹವು ಗಾಳಿಯಲ್ಲಿ ತೇಲುತ್ತದೆ

0
390

ಪ್ರಪಂಚದಲ್ಲಿ ಬಹಳಷ್ಟು ಚಾರಿತ್ರಿಕ ಕಟ್ಟಡಗಳು ಎಸ್ಟೋ ರಹಸ್ಯಗಳನ್ನು ಅಡಗಿಸಿಕೊಂಡಿವೆ. ಅತ್ಯಂತ ಪುರಾತನ ಸಂಸ್ಕೃತಿಯುಳ್ಳ ನಮ್ಮ ಭಾರತ ದೇಶದಲ್ಲೇ ಈ ರಹಸ್ಯಗಳಿಗೆ ಏನು ಕಡಿಮೆ ಇಲ್ಲ. ಈವತ್ತಿಗೂ ನಮ್ಮ ದೇಶದಲ್ಲಿ ಬಹಳಷ್ಟು ಕಟ್ಟಡಗಳು ಹೇಗೆ ಕಟ್ಟಿದ್ದಾರೆಂದು ರಹಸ್ಯವಾಗಿಯೇ ಉಳಿದಿವೆ. ಅಂತಹ ಕಟ್ಟಡಗಳಲ್ಲಿ ಮುಖ್ಯವಾಗಿ ಕೆಲವು ದೇವಾಲಯಗಳ ಬಗ್ಗೆ ನಾವು ತಿಳಿಸಲಿದ್ದೇವೆ. ಈ ದೇವಾಲಯಗಳನ್ನು ಕಟ್ಟಿರುವ ರೀತಿ ಈವತ್ತಿಗೂ ಒಂದು ರಹಸ್ಯವಾಗಿಯೇ ಉಳಿದುಕೊಂಡಿದೆ. ಈ ರೀತಿಯ ಮೂರು ರಹಸ್ಯವಾದಂತಹ ದೇವಾಲಯಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಕೋನಾರ್ಕ್ ಸನ್ ಟೆಂಪಲ್ ಈ ದೇವಾಲಯವನ್ನು ಕ್ರಿಸ್ತಶಕ 1236ರಿಂದ 1564ರ ಮಧ್ಯಕಾಲದಲ್ಲಿ ಗಂಗಾ ವಂಶಸ್ಥರಾದಂತಹ ಲಾಂಗುಲ ನರಸಿಂಘದೇವ ಎಂಬ ರಾಜ ಕಟ್ಟಿಸಿದ್ದಾರೆ ಎಂದು ಅಲ್ಲಿ ಸಿಕ್ಕ ಕೆಲವು ಆಧಾರಗಳ ಮೂಲಕ ತಿಳಿಯುತ್ತದೆ. ಈ ದೇವಾಲಯವನ್ನು ಏಳು ಕುದುರೆಗಳು 24 ಚಕ್ರಗಳು ಇರುವ ರಥದ ಮಾದರಿಯಲ್ಲಿ ಕಟ್ಟಿಸಿದ್ದಾರೆ.

ಆದರೆ ಈ ದೇವಾಲಯದಲ್ಲಿ ಸ್ವಲ್ಪ ಭಾಗವನ್ನು 17 ನೇ ಶತಮಾನದಲ್ಲಿ ಧ್ವಂಸ ಮಾಡಿದ್ದಾರೆಂದು ಚಾರಿತ್ರಿಕರು ವಿವರಿಸುತ್ತಾ ಬಂದಿದ್ದಾರೆ. ಆ ಧ್ವಂಸ ಮಾಡಿದ ಸ್ಥಳದಲ್ಲಿ 52 ಟನ್ನುಗಳ ದೊಡ್ಡ ಆಯಸ್ಕಾಂತವಿತ್ತೆಂದು ಆ ಆಯಸ್ಕಾಂತದಿಂದ ದೇವಾಲಯದಲ್ಲಿನ ವಿಗ್ರಹವನ್ನು ಗಾಳಿಯಲ್ಲಿ ತೇಲುವಂತೆ ಮಾಡುತ್ತಿತ್ತು ಎಂದು ಚಾರಿತ್ರಿಕರು ವಿವರಗಳನ್ನು ನೀಡುತ್ತಾರೆ. ಆದರೆ ಈ ಆಯಸ್ಕಾಂತದ ನಿರ್ಮಾಣವನ್ನು ಯಾರು ಧ್ವಂಸ ಮಾಡಿದರು ಏಕೆ ಧ್ವಂಸ ಮಾಡಿದರು ಎಂಬ ವಿಷಯವು ಯಾರಿಗೂ ತಿಳಿದುಬಂದಿಲ್ಲ. ಅಷ್ಟೇ ಅಲ್ಲದೆ ಈ ಆಲಯದಲ್ಲಿ ಇರುವ ರಥಚಕ್ರಗಳಲ್ಲಿ ಎಷ್ಟೋ ವಿಜ್ಞಾನವು ಅಡಗಿದೆ. ಏಕೆಂದರೆ ಅವು ಸನ್ ಡಯಲ್ಸ್. ಈ ಸನ್ ಡಯಲ್ಸ್ ಈವತ್ತಿಗೂ ಖಚಿತವಾದ ಸಮಯ ತೋರಿಸುತ್ತದೆ. ಅಂದರೆ ನಮ್ಮ ಭಾರತ ದೇಶದ ನಿರ್ಮಾಣ ಮತ್ತು ನೈಪುಣ್ಯತೆ ಎಂತಹದ್ದು ಅಂತ ಎಲ್ಲರಿಗೂ ಅರ್ಥವಾಗುತ್ತದೆ.

ಬೃಹದೀಶ್ವರ ಆಲಯ. ತಮಿಳುನಾಡಿನಲ್ಲಿರುವ ತಂಜಾವೂರಿನಲ್ಲಿರುವ ಈ ಆಲಯವನ್ನ ಕಟ್ಟಿ ಸರಿ ಸುಮಾರು ಸಾವಿರ ವರ್ಷಗಳ ಮೇಲಾಗಿದೆ. ಈ ಆಲಯವನ್ನು ಕ್ರಿಸ್ತಶಕ 1010ರಲ್ಲಿ ಚೋಳ ವಂಶಕ್ಕೆ ಸೇರಿದ ರಾಜೇಂದ್ರ ಚೋಳರು ಕಟ್ಟಿಸಿದ್ದಾರೆ ಅಂತ ಚಾರಿತ್ರಿಕರು ವಿವರವನ್ನು ನೀಡುತ್ತಾರೆ. ಈ ಆಲಯವನ್ನು ಕುಂಜರ ರಾಜರಾದ ವಾಸ್ತುಶಿಲ್ಪಿ ಕೈಯಲ್ಲಿ ಅಗಮಶಾಸ್ತ್ರದ ಪ್ರಕಾರ ನಿರ್ಮಿಸಿದ್ದಾರೆಂದು ಅಲ್ಲಿನ ಶಾಸನಗಳು ತಿಳಿಸುತ್ತವೆ. ಈ ದೇವಾಲಯವನ್ನು ಗ್ರಾನೈಟ್ ಕಲ್ಲುಗಳಿಂದ ಕಟ್ಟಲ್ಪಟ್ಟಿದೆ. ಈ ದೇವಾಲಯವನ್ನು ನಿರ್ಮಿಸಲು ಸುಮಾರು 130000 ಟನ್ನುಗಳ ಗ್ರಾನೈಟ್ ಕಲ್ಲುಗಳನ್ನ ಉಪಯೋಗಿಸಿದ್ದಾರೆ ಅಂತ ತಿಳಿದು ಬರುತ್ತದೆ. ಈ ದೇವಾಲಯದ ಗಾಳಿಗೋಪುರದ ಚಂಡಿನ ಆಕಾರದ ಕಟ್ಟಡ ಒಂದೇ 80 ಟನ್ ಗಳ ತೂಕವಿರುತ್ತದೆ. ಈ ಗಾಳಿಗೋಪುರದ ಎತ್ತರ 216 ಅಡಿಗಳು ಕ್ರೈನ್ ಮತ್ತು ಮಿಷಿನ್ ಗಳಂತಹ ಯಾವುದೇ ಪರಿಕರಗಳು ಇಲ್ಲದೆ ಆ ಕಾಲದಲ್ಲಿ ಇಷ್ಟು ದೊಡ್ಡ ಕಲ್ಲನ್ನು ಅಷ್ಟು ಮೇಲಕ್ಕೆ ಹೇಗೆ ಕೊಂಡೊಯ್ದರು ಎನ್ನುವುದು ಈವತ್ತಿಗೂ ಒಂದು ರಹಸ್ಯವಾಗಿಯೇ ಉಳಿದಿದೆ.

ವೀರಭದ್ರ ದೇವಾಲಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿಯಲ್ಲಿದೆ ಈ ದೇವಾಲಯ. ಈ ದೇವಾಲಯವನ್ನು ಕ್ರಿಸ್ತಶಕ 1530ರಲ್ಲಿ ವಿಜಯನಗರದ ರಾಜರು ಕಟ್ಟಿಸಿದ್ದಾರೆ ಎಂದು ಅಲ್ಲಿರುವ ಆಧಾರಗಳ ಮೂಲಕ ತಿಳಿದುಬರುತ್ತದೆ. ಆ ಆಲಯವೆಲ್ಲ 70 ಸ್ಥಂಭಗಳಿಂದ ಕೂಡಿಕೊಂಡಿದೆ. ಆದರೆ ಇವುಗಳಲ್ಲಿರುವ ಒಂದು ಸ್ಥಂಭ ಮಾತ್ರ ಭೂಮಿಗೆ ತಾಕದ ರೀತಿಯಲ್ಲಿ ಗಾಳಿಯಲ್ಲಿ ತೇಲುತ್ತಿರುತ್ತದೆ. ಈ ವಿಸ್ಮಯವನ್ನು ನೋಡಲು ಬಹಳಷ್ಟು ಕಡೆಯಿಂದ ಎಷ್ಟೋ ಮಂದಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇಷ್ಟು ತೂಕವಾದ ಈ ಸ್ಥಂಭವು ಈ ರೀತಿ ಗಾಳಿಯಲ್ಲಿ ಹೇಗೆ ತೇಲುತ್ತದೆ ಎನ್ನುವುದು ಯಾರಿಗೂ ತಿಳಿಯದ ಒಂದು ರಹಸ್ಯವಾಗಿಯೇ ಉಳಿದುಕೊಂಡಿದೆ.

1910ರಲ್ಲಿ ಒಬ್ಬ ಬ್ರಿಟಿಷ್ ಇಂಜಿನಿಯರ್ ಈ ವಿಚಿತ್ರ ಸ್ಥಂಭವನ್ನು ನೋಡಿ ಆಶ್ಚರ್ಯ ಪಡುತ್ತಾರೆ. ಆ ಸ್ಥಂಭಕ್ಕೆ ಮತ್ತು ಭೂಮಿಗೆ ಇರುವ ಖಾಲಿ ಸ್ಥಳವನ್ನು ತುಂಬಲು ಮುಂದಾಗುತ್ತಾನೆ. ಆದರೆ ಅದರಿಂದ ಆ ಆಲಯದ ಕಟ್ಟಡವು ಬಿರುಕು ಬಿಡುವುದನ್ನು ಗಮನಿಸುತ್ತಾನೆ. ಆ ಇಂಜಿನಿಯರ್ ಆ ಸ್ಥಂಭದ ಕುರಿತು ಎಷ್ಟೋ ಪರಿಶೋಧನೆಗಳನ್ನು ಮಾಡಿದರು. ಆದರೆ ನಿರ್ಮಾಣ ರಹಸ್ಯವನ್ನು ಮಾತ್ರ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಅದೇ ಅಲಯದಲ್ಲಿ ಒಂದು ದೊಡ್ಡ ಪಾದ ಮುದ್ರೆಯು ಸಹ ಇದೆ ಈ ಮುದ್ರೆ ಸುಮಾರು ನೂರು ಅಡಿಗಳ ಉದ್ದವಿರುತ್ತದೆ. ಅಷ್ಟು ದೊಡ್ಡ ಪಾದ ಮುದ್ರೆಯು ಯಾರದ್ದು ಅಂತ ಅಲ್ಲಿಗೆ ಹೇಗೆ ಬಂತು ಎಂಬುದು ಕೂಡ ಒಂದು ರಹಸ್ಯವಾಗಿಯೇ ಉಳಿದಿದೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here