ಈ ಮೂರು ರಾಶಿಯ ಗಂಡಸರು ತಮ್ಮ ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಸುಖವಾಗಿ ನೋಡಿಕೊಳ್ಳುತ್ತಾರಂತೆ

1
1112

ಈ ಮೂರು ರಾಶಿಯ ಗಂಡಸರು ಅವರ ತಮ್ಮ ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಸುಖವಾಗಿ ನೋಡಿಕೊಳ್ಳುತ್ತಾರಂತೆ. ಈ ರೀತಿ ಇರಬೇಕೆಂಬುದು ಪ್ರತಿಯೊಂದು ಹುಡುಗಿಯರ ಕನಸಾಗಿರುತ್ತದೆ. ಒಂದು ದಿನ ತಮ್ಮ ಕನಸಿನ ರಾಜಕುಮಾರ ಸಿಗಬೇಕೆಂದು ಬಯಸುತ್ತಾರೆ. ಅವರನ್ನು ಪ್ರೀತಿಸಿ ಕರೆದುಕೊಂಡು ಹೋಗುತ್ತಾರೆ ಎಂದು ಅಂದುಕೊಂಡಿರುತ್ತಾರೆ. ಆದರೆ ಅನೇಕ ಬಾರಿ ನಾವು ನಮ್ಮ ರಾಜಕುಮಾರ ಅಂದುಕೊಂಡಿರುವವನೆ ಕೋಪಿಷ್ಠನೂ ಆಗಿರುತ್ತಾನೆ. ಈ ಕಾರಣದಿಂದ ವೈವಾಹಿಕ ಜೀವನದಲ್ಲಿ ಜಗಳ ಹೊಡೆದಾಟ ಕೋಪ ಅನುಮಾನಗಳು ಉಂಟಾಗಿ ಜಗಳ ಅತಿರೇಕವಾಗುತ್ತವೆ. ಚೆನ್ನಾಗಿರುವ ದಂಪತಿಗಳನ್ನು ಕೂಡ ವಿವಾಹ ವಿಚ್ಛೇದನದವರೆಗೂ ಕೊಂಡೊಯ್ಯುತ್ತವೆ. ನೀವು ಕೂಡ ಬಯಸುತ್ತೀರಾ? ಇಲ್ಲ ನೀವು ವಿವಾಹ ಮಾಡಿಕೊಳ್ಳುವಾಗ ಈ ತಪ್ಪುಗಳು ಉಂಟಾಗಬಾರದು ಎಂದರೆ ಇಲ್ಲಿ ಕೆಲವು ರಾಶಿಗಳ ಬಗ್ಗೆ ಹೇಳಲಾಗಿದೆ.

ಈ ರಾಶಿಯವರು ಅವರ ಪತ್ನಿಯರನ್ನು ರಾಣಿಯ ರೀತಿಯಲ್ಲಿ ನೋಡಿಕೊಳ್ಳುತ್ತಾರಂತೆ. ಈ ರಾಶಿಯ ಹುಡುಗರು ಅವರ ಹೆಂಡತಿಯ ಪರವಾಗಿ ತುಂಬಾ ನಂಬಿಕಸ್ಥರಾಗಿರುತ್ತಾರೆ. ಅವರನ್ನು ತುಂಬಾ ಗೌರವಿಸುತ್ತಾರೆ. ಅವರ ಮನೆಯಲ್ಲಿ ಅವರ ಪತ್ನಿಯಾದವಳು ರಾಣಿಯ ರೀತಿಯಲ್ಲಿ ಜೀವನ ನಡೆಸಬೇಕೆಂದು ಬಯಸುತ್ತಾರೆ. ಬನ್ನಿ ಆ ರಾಶಿಗಳು ಯಾವುವು ಎಂದು ಹೇಳುತ್ತೇವೆ ನೋಡಿ. ಮೊದಲನೆಯದಾಗಿ ಮೇಷ ರಾಶಿ. ಈ ರಾಶಿಯ ಹುಡುಗರು ಅವರ ಪತ್ನಿಯನ್ನು ತುಂಬಾ ಆರೈಕೆ ಮಾಡುತ್ತಾರೆ. ಅವರ ಹೆಂಡತಿಯ ಪ್ರತಿಯೊಂದು ಸಣ್ಣ-ಪುಟ್ಟ ಅವಶ್ಯಕತೆಗಳನ್ನು ಸಹ ಪೂರೈಸುತ್ತಾರೆ. ತಮ್ಮ ಪತ್ನಿಯರ ಬೇಕು ಬೇಡಗಳ ಬಗ್ಗೆ ಮನದಲ್ಲಿರುವ ಪ್ರಯತ್ನವನ್ನು ಮಾಡುತ್ತಾರೆ. ಅವರ ಹೆಂಡತಿಗೆ ಏನಾದರೂ ಸ್ವಲ್ಪ ಕೂಡ ಆಘಾತವಾದರೂ ಇವರ ಮನಸ್ಸು ತುಂಬಾ ವಿಚಲಿತವಾಗುತ್ತದೆ.

ಇವರಿಗೆ ಅವರ ಪತ್ನಿಯ ಜೊತೆಗೆ ಒಂದು ವಿಶೇಷವಾದ ಸಂಬಂಧವಿರುತ್ತದೆ. ಈ ರಾಶಿಯ ಹುಡುಗರನ್ನು ಮದುವೆಯಾದರೆ ಇವರ ಜೀವನದ ವೈವಾಹಿಕ ಸಂಬಂಧವು ಕೊನೆಯ ಉಸಿರು ಇರುವವರೆಗೂ ಕೂಡ ಇವರ ಸಂಬಂಧವು ಉತ್ತಮವಾಗಿರುತ್ತದೆ. ಸಣ್ಣಪುಟ್ಟ ಜಗಳಗಳು ಇವರಿಬ್ಬರ ಮಧ್ಯೆ ನಡೆದರೂ ಕೂಡ ಅವುಗಳನ್ನು ಬೇಗ ಅರ್ಥ ಮಾಡಿಕೊಂಡು ಮತ್ತೆ ಮೊದಲಿಗಿಂತ ಹೆಚ್ಚು ಪ್ರೀತಿಸುತ್ತಾರೆ. ಎರಡನೆಯದಾಗಿ ಮಕರ ರಾಶಿ. ಈ ರಾಶಿ ಗಂಡಸರು ಅವರ ಹೆಂಡತಿಯ ಬಗ್ಗೆ ಹೆಮ್ಮೆ ಪಡುತ್ತಾರೆ. ಇವರು ತಮ್ಮ ಪತ್ನಿಯ ಜೀವನದಲ್ಲಿಯು ಪುಣ್ಯ ಸ್ಥಾನದಲ್ಲಿ ಇರಬೇಕೆಂದು ಬಯಸುತ್ತಾರೆ. ಪತ್ನಿಗೆ ವೃತ್ತಿಯಲ್ಲಿ ಉನ್ನತಿಯಾಗುತ್ತಿದ್ದರೆ ಇವರು ಅಸೂಯೆ ಪಡುವುದಿಲ್ಲ. ಬದಲಾಗಿ ಖುಷಿ ಪಡುತ್ತಾರೆ. ಅವರ ಪತ್ನಿಯ ರಕ್ಷಣೆಗಾಗಿ ಅವರ ಜೀವನವನ್ನೇ ಮುಡಿಪಾಗಿ ಇರುತ್ತಾರೆ. ಇವರು ಅವರ ಪತ್ನಿಯೊಂದಿಗೆ ತುಂಬಾ ನಂಬಿಕಸ್ಥರಾಗಿರುತ್ತಾರೆ. ಬೇರೆ ಹೆಂಗಸಿನ ಕಡೆಗೆ ಎಂದು ಕೂಡ ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ.

ಇದೇ ಸಂಗತಿ ಇವರನ್ನು ಪತ್ನಿಯ ಜೊತೆ ಮತ್ತು ಇವರ ದಾಂಪತ್ಯ ಜೀವನವನ್ನು ಮತ್ತಷ್ಟು ಬಲಗೊಳಿಸುತ್ತದೆ. ಮೂರನೆಯದಾಗಿ ಧನಸ್ಸು ರಾಶಿ. ಈ ರಾಶಿ ಹುಡುಗರು ಮಹಿಳೆಯರನ್ನು ಹೆಚ್ಚಾಗಿ ಗೌರವಿಸುತ್ತಾರೆ. ಇವರು ಹೆಂಗಸರಲ್ಲಿ ಯಾವುದೇ ಭೇದ ಭಾವಗಳನ್ನು ಮಾಡುವುದಿಲ್ಲ. ಇವರು ಹೆಂಗಸರಿಗೆ ಏನು ಬೇಕು ಏನು ಬೇಡ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇವರು ತನ್ನ ಹೆಂಡತಿಯ ಮುಖದಲ್ಲಿ ನಗುವನ್ನು ನೋಡಲು ಸದಾ ಬಯಸುತ್ತಾರೆ. ಇವರಿಗೆ ಅವರ ಪತ್ನಿಯೂ ಸಾಗರದಲ್ಲಿ ಸಿಗುವ ಮುತ್ತಿಗಿಂತ ಏನು ಕಡಿಮೆ ಇಲ್ಲ ಅಂದುಕೊಳ್ಳುತ್ತಾರೆ. ಆದ್ದರಿಂದ ಇವರು ತಮ್ಮ ಪತ್ನಿ ಆರೈಕೆಯನ್ನು ಚೆನ್ನಾಗಿ ಮಾಡುತ್ತಾರೆ. ಧನಸ್ಸು ರಾಶಿಯವರ ಜೊತೆ ಮದುವೆ ಆಗುವ ಹುಡುಗಿಯರು ತುಂಬಾ ಅದೃಷ್ಟವಂತರು ಅಂತ ಹೇಳಬಹುದು. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

1 COMMENT

LEAVE A REPLY

Please enter your comment!
Please enter your name here