ನಮಸ್ತೆ ಸ್ನೇಹಿತರೆ ಇಂದು ನಾವು ರಿಂಗ್ ವಾರ್ಮ್ ಗಜ ಕರ್ಣ ಅಥವಾ ಹುಳುಕಡ್ಡಿ ಇಂದ ಹೊರಬರಲು ಏನು ಮಾಡಬೇಕು ಎಂದು ತಿಳಿದುಕೊಳ್ಳೋಣ. ಈ ಹುಳುಕಡ್ಡಿ ಒಂದು ಜಾಗ ಇಂದ ಇನ್ನೊಂದು ಜಾಗಕ್ಕೆ ಬೀಗ ಹರಡುತ್ತದೆ ಇದನ್ನ ಕಡಿಮೆ ಮಾಡಲು ನೀವು ಈ ಮನೆ ಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಹುಲಕಡ್ಡಿ ಸ್ವಲ್ಪ ಆಗಿದ್ದರೆ ನೀವು ಮೊದಲು ಮಾಡಬೇಕಾಗಿರುವುದು ಎಂದರೆ ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಕೊಂಡು ಈ ರಸವನ್ನು ಹುಳುಕಡ್ಡಿ ಆಗಿರುವ ಜಾಗಕ್ಕೆ ಹಚ್ಚಬೇಕು ಹತ್ತಿ ಇಂದ ಈ ರಸವನ್ನು ತೆಗೆದು ಕೊಂಡು ನೀಟಾಗಿ ಹುಳುಕಡ್ಡಿ ಮೇಲೆ ಹಚ್ಚಿ ಒಂದು ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚೆಗಿನ ನೀರಿನಲ್ಲಿ ತೊಳೆದುಕೊಳ್ಳಿ ಹೀಗೆ ದಿನದಲ್ಲಿ ನಾಲ್ಕರಿಂದ ಐದು ಬಾರಿ ಮಾಡಿದರೆ ಆದಷ್ಟು ಬೇಗ ಹುಳುಕಡ್ಡಿ ಕಡಿಮೆ ಆಗುತ್ತದೆ ಹುಳುಕಡ್ಡಿ ಏನಾದರೂ ಪ್ರೀ ಸ್ಟೇಜ್ ನಲ್ಲಿ ಇದ್ದರೆ ಖಂಡಿತ ಬೇಗ ಕಡಿಮೆ ಆಗುತ್ತದೆ.

ಇದೇ ರೀತಿ ಹರಿಶಿನ ಕೂಡಾ ಹಚ್ಚಬಹುದು. ಹರಿಶಿಣ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಅದನ್ನು ಪೇಸ್ಟ್ ರೀತಿ ಮಾಡಿಕೊಳ್ಳಿ ಈ ಪೇಸ್ಟ್ ಅನ್ನು ಹುಳುಕಡ್ಡಿ ಮೇಲೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಛಾಗಿನ ನೀರಿನಲ್ಲಿ ತೊಳೆದುಕೊಳ್ಳಿ ಇದು ತುಂಬಾ ಸುಲಭವಾದ ಮನೆ ಮದ್ದು ಆಗಿದೆ ಗಜಕರ್ಣ ಏನಾದರೂ ಇನಿಸಿಯಲ್ ಸ್ಟೇಜ್ ನಲ್ಲಿ ಇದ್ದಾಗ ನಿಜವಾಗಲೂ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ನಿಮಗೆ ಏನಾದರೂ ಹುಳುಕಡ್ಡಿ ತುಂಬಾ ಜಾಸ್ತಿ ಇದ್ದು ನವೆ ಬರುತ್ತದೆ ಎಂದರೆ ನೀವು ಈ ಮನೆ ಮದ್ದು ಬಳಸಿ ಇದಕ್ಕೆ ಬೇಕಾಗಿರುವುದು ತುಳಸಿ ರಸ ನಿಂಬೆ ಹಣ್ಣಿನ ರಸ ಬೇಕು ಈ ಎರಡನ್ನೂ ಒಂದು ಸ್ಪೂನ್ ಅಷ್ಟು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಈ ಜಾಗಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಾಗಿನ ನೀರಿನಲ್ಲಿ ತೊಳೆಯಿರಿ ಇದನ್ನು ಕನಿಷ್ಟ ದಿನದಲ್ಲಿ 3 ಬಾರಿ ಆದರೂ ಮಾಡಿರಿ ಹೀಗೆ ಕ್ರಮೇಣ ಮಾಡುತ್ತಾ ಇದ್ದರೆ ಹುಳುಕಡ್ಡಿ ಅಥವಾ ಗಜಕರ್ಣ ಆದಷ್ಟು ಬೇಗ ಕಡಿಮೆ ಆಗುತ್ತದೆ
ಈ ಮನೆ ಮದ್ದು ಬಳಸಿದರೆ ಹುಳುಕಡ್ಡಿ ಆಗಿರುವ ಜಾಗದಲ್ಲಿ ಮಚ್ಚೆ ಆಗುತ್ತದೆ ಅಂದರೆ ಕಲೆ ಆಗುತ್ತದೆ. ಈ ಕಲೆ ಆಗಬಾರದು ಎಂದರೆ ಬೇವಿನ ಸೊಪ್ಪಿನ ಪೇಸ್ಟ್ ಅಂದರೆ ಬೇವಿನ ಸೊಪ್ಪನ್ನು ಚೆನ್ನಾಗಿ ಸ್ವಲ್ಪ ನೀರು ಹಾಕಿ ಜಜ್ಜಿ ಕೊಂಡು ಪೇಸ್ಟ್ ಮಾಡಿಕೊಳ್ಳಿ ಅದೇ ರೀತಿ ತುಳಸಿ ಪೇಸ್ಟ್ ಬೇಕು ಮತ್ತು ಹರಿಶಿನ ಈ ಮೂರನ್ನು ಒಂದು ಟೀ ಸ್ಪೂನ್ ಅಷ್ಟು ತೆಗೆದುಕೊಂಡು ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಹುಳುಕಡ್ಡಿ ಮೇಲೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೇಚ್ಛಾಗಿನ ನೀರಿನಲ್ಲಿ ತೊಳೆಯಿರಿ ಇದನ್ನು ಕೂಡ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಮಾಡಬೇಕು ಆದಷ್ಟು ಬೇಗ ಕಡಿಮೆ ಆಗುತ್ತೆ ಹಾಗೂ ಕಲೆ ಕೂಡ ಇರುವುದಿಲ್ಲ.