ನೀರಿನ ಮೇಲೆ ತೇಲಾಡುವ ಶಕ್ತಿಶಾಲಿ ದೇವರ ಬಗ್ಗೆ ತಪ್ಪದೇ ತಿಳಿದುಕೊಳ್ಳಿರಿ

0
734

ಪ್ರತಿ ಹಿಂದೂ ದೇವಾಲಯವು ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿರುತ್ತದೆ. ಮನಸ್ಸಿಗೆ ಪ್ರಶಾಂತತೆಯನ್ನು ಆಧ್ಯಾತ್ಮಕತೆಯನ್ನು ನೀಡುವಂತಹ ದೇವಾಲಯಗಳು ತುಂಬಾ ಇದೆ. ಈ ದೇವಾಲಯಗಳು ಯಾರ ಊಹೆಗೂ ಸಿಗದ ಎಷ್ಟೋ ರಹಸ್ಯಗಳನ್ನು ತಮ್ಮಲ್ಲಿ ಅಡಗಿಸಿಕೊಂಡಿವೆ. ಇಂದಿನ ವಿಜ್ಞಾನಿಗಳಿಗೂ ಸಹ ಒಂದು ಸವಾಲಾಗಿ ನಿಂತಿದೆ. ಎಷ್ಟೋ ಸಾವಿರ ವರ್ಷಗಳ ಹಿಂದೆ ನಿರ್ಮಿಸಿದ ದೇವಾಲಯಗಳು ಇಂದಿಗೂ ಸೈಂಟಿಫಿಕ್ ಆಗಿ ಭೇದಿಸಲಾಗದ ಎಷ್ಟೋ ರಹಸ್ಯಗಳನ್ನು ಹೊಂದಿದೆ. ಕೆಲವು ಆಲಯಗಳಲ್ಲಿ ವಿಗ್ರಹ ನಿರ್ಮಾಣ ಮತ್ತು ಕೆಲವು ಆಲಯಗಳಲ್ಲಿ ನಿರ್ಮಾಣವೇ ಅಷ್ಟೇ ಅದ್ಭುತವಾಗಿ ಎಲ್ಲರನ್ನೂ ಆಶ್ಚರ್ಯ ಪಡುವ ರೀತಿಯಲ್ಲಿ ಮಾಡುತ್ತದೆ. ಅಂತಹ ಮಿಸ್ಟೀರಿಯಸ್ ಆಲಯಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.

ಬುದ್ದನೀಲಕಂಠ ಆಲಯ. ಈ ಹೆಸರು ಕೇಳಿ ಬುದ್ಧನ ಆಲಯವೆಂದುಕೊಂಡರೆ ಅದು ತಪ್ಪು. ಇದು ಸಾಕ್ಷಾತ್ ಶ್ರೀಮಹಾವಿಷ್ಣುವಿನ ಆಲಯ. ಬುದ್ಧನೀಲಕಂಠ ಎಂದರೆ ಪುರಾತನ ನೀಲಿ ಬಣ್ಣ ಹೊಂದಿರುವ ವಿಗ್ರಹ ಮೂರ್ತಿ ಅನ್ನುವ ಅರ್ಥ ಬರುತ್ತದೆ. ಇದು ನೇಪಾಳದ ಕಠ್ಮಂಡುವಿನಲ್ಲಿ ಇದೆ. ಈ ಆಲಯದಲ್ಲಿ ಶ್ರೀ ಮಹಾವಿಷ್ಣುವು ಆದಿಶೇಷನ ಮೇಲೆ ಮಲಗಿರುವ ಮೂರ್ತಿಯಾಗಿ ನಮಗೆ ದರ್ಶನವನ್ನು ಕೊಡುತ್ತಾರೆ. ಇನ್ನು ಈ ವಿಗ್ರಹ ಮೂರ್ತಿ ಐದು ಮೀಟರ್ ಉದ್ದ ಇರುತ್ತದೆ. ಸಹಜವಾಗಿ ವಿಷ್ಣುಮೂರ್ತಿ ನಮಗೆ ಶೈಲಾ ಮೂರ್ತಿಯಾಗಿ ದರ್ಶನವನ್ನು ನೀಡುತ್ತಾರೆ. ಆದರೆ ಇಲ್ಲಿ ಮಾತ್ರ ಮಲಗಿಕೊಂಡಿರುವ ರೀತಿಯಲ್ಲಿ ನಮಗೆ ದರ್ಶನವನ್ನು ನೀಡುತ್ತಾರೆ ಈ ಸ್ವಾಮಿ. ಇನ್ನೊಂದು ಪ್ರತ್ಯೇಕತೆ ಏನೆಂದರೆ ಇಷ್ಟು ದೊಡ್ಡ ವಿಗ್ರಹ ನೀರಿನ ಮೇಲೆ ಹೇಗೆ ತೇಲುತ್ತದೆ? ಭಕ್ತರನ್ನಷ್ಟೇ ಅಲ್ಲದೆ ಇದು ವಿಜ್ಞಾನಿಗಳಿಗೆ ಸಂಶೋಧಕರಿಗೆ ಎಷ್ಟೋ ಆಕರ್ಷಿತವಾಗಿ 1957ರಲ್ಲಿ ನಡೆದ ಒಂದು ಸಂಶೋಧನೆಯಲ್ಲಿ ಕೆಲವು ಅಧ್ಯಯನಗಳಲ್ಲಿ ತಿಳಿದು ಬಂದಿದ್ದನ್ನು ನೋಡಿ ಆಶ್ಚರ್ಯಕ್ಕೆ ಗುರಿಪಡಿಸುತ್ತದೆ.

ಸುಮಾರು 1300 ವರ್ಷಗಳ ಹಿಂದಿಂದಲೂ ಈ ವಿಗ್ರಹವು ನೀರಿನ ಮೇಲೆ ತೇಲುತ್ತಿದೆ ಅಂತ ಹೇಳಲಾಗುತ್ತದೆ. ಇಷ್ಟು ತೂಕವಿರುವ ಬಾರಿ ವಿಗ್ರಹವು ನೀರಿನ ಮೇಲೆ ತೆಲುವುದರ ಹಿಂದೆ ಇರುವ ರಹಸ್ಯಗಳೇನು? ಭಕ್ತರು ಇದನ್ನು ಆ ಸ್ವಾಮಿಯಲ್ಲಿರುವ ಮಹಿಮೆ ಅಂತ ಹೇಳುತ್ತಾರೆ. ಪರಿಶೋಧಕರು ಮಾತ್ರ ಈ ವಿಗ್ರಹ ಹೀಗೆ ಹೇಗೆ ತೇಲುತ್ತದೆ ಎಂಬ ಅಂಶದ ಮೇಲೆ ಸಂಶೋಧನೆಗಳನ್ನು ಮಾಡಿದರು. ಆದರೆ ಈ ವಿಗ್ರಹ ಮೂರ್ತಿ ತೇಲಾಡುವ ವಿಷಯಗಳನ್ನು ಮಾತ್ರ ಕಂಡು ಹಿಡಿಯಲು ಇದುವರೆಗೂ ಆಗಲಿಲ್ಲ. ಆದರೆ ಈ ವಿಗ್ರಹ ಮೂರ್ತಿಯ ಬಗ್ಗೆ ಅಲ್ಲಿನ ಸ್ಥಾನಿಕರ ನಂಬಿಕೆ ಮತ್ತು ಕಥೆಯೊಂದು ಇದೆ. ಊರ ಒಂದು ರೈತ ಒಂದು ದಿನ ಹೊಲದಲ್ಲಿ ಊಳಬೇಕಾದರೆ ಒಂದು ಸ್ಥಳಕ್ಕೆ ಬಂದ ತಕ್ಷಣ ನೇಗಿಲು ನಿಂತು ಬಿಡುತ್ತದಂತೆ. ಇನ್ನು ನೇಗಿಲು ಇಳಿದ ಪ್ರಾಂತದಲ್ಲಿ ರಕ್ತವು ಹೊರಗಡೆ ಬರುತ್ತಂತೆ. ರಕ್ತ ಬರುವ ಸ್ಥಳದಲ್ಲಿ ಅಗೆದು ನೋಡಿದರೆ ಅಲ್ಲಿ ಕಾಣಿಸಿದ ದೃಶ್ಯಕ್ಕೆ ಅಲ್ಲಿನವರು ಅದ್ಭುತವನ್ನು ನೋಡುತ್ತಿರುವ ರೀತಿ ಹಾಗೆ ಇದ್ದು ಬಿಡುತ್ತಾರೆ.

ನಂತರ ಅಲ್ಲಿರುವ ಸಹಾಯಕರೊಂದಿಗೆ ಆ ವಿಗ್ರಹವನ್ನು ಹೊರ ತೆಗೆದು ಅಲ್ಲಿರುವ ಮತ್ತೊಂದು ಜಾಗಕ್ಕೆ ತೆಗೆದುಕೊಂಡು ಹೋದರಂತ ಹೇಳಲಾಗುತ್ತದೆ. ಮತ್ತೊಂದು ಕಥೆಯ ಪ್ರಕಾರ ಏಳನೇ ಶತಮಾನದಲ್ಲಿ ಚಕ್ರವರ್ತಿ ವಿಷ್ಣುಗುಪ್ತನ ಕಾಲದಲ್ಲಿ ಕಟ್ಮಂಡುವಿನಲ್ಲಿ ಈತನು ಪರಿಪಾಲಿಸುತಿದ್ದಂತಹ ಉಚ್ಛರಿ ವಂಶಸ್ಥರ ಭೀಮಾರ್ಜುನ ದೇವ ಎಂಬ ರಾಜನು ಈ ವಿಗ್ರಹ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪನೆ ಮಾಡಿದ್ದಾರೆಂದು ಹೇಳಲಾಗುತ್ತದೆ. ಆದರೆ ಈ ವಿಗ್ರಹ ಎನ್ನುವುದು ಎಷ್ಟೋ ನೂರು ವರ್ಷಗಳಿಂದ ಶ್ರೀವೆಂಕಟೇಶ್ವರ ಸ್ವಾಮಿ ತಿರುಮಲದಲ್ಲಿ ಯಾವ ರೀತಿ ಪೂಜೆಗಳು ಅಭಿಷೇಕಗಳು ಸ್ವೀಕರಿಸುತ್ತಿದ್ದಾರೆ ಅದೇ ರೀತಿ ಪೂಜೆಗಳನ್ನು ಅಭಿಷೇಕಗಳನ್ನು ನಿರ್ವಹಿಸುತ್ತಿದ್ದಾರಂತೆ.

ದಿನದಿಂದ ದಿನಕ್ಕೆ ತನ್ನ ಸಹಜತ್ವವನ್ನು ಮತ್ತು ಆಕರ್ಷಣೆಯನ್ನು ಕಳೆದುಕೊಳ್ಳದ ಹಾಗೆ ಆ ಮೂರ್ತಿಯ ಒಂದು ಬಣ್ಣ ಬೆಳೆಯುತ್ತಿದೆಯಂತೆ. ಈ ವಿಗ್ರಹವನ್ನು ಪರಿಶೀಲಿಸಿದ ಶಾಸ್ತ್ರತಗ್ಞರು ಮತ್ತು ಪರಿಶೋಧಕರು ಭೂಮಿಯಲ್ಲಿನ ಲಾವಾದಂತಹ ಪದಾರ್ಥಗಳೊಂದಿಗೆ ಸಿಲಿಕಾನ್ ಸಮ್ಮೇಳಿತವಾದ ಕಡಿಮೆ ಸಾಂದ್ರತೆಯುಳ್ಳ ಶಿಲೆಯಿಂದ ಈ ವಿಗ್ರಹ ಮೂರ್ತಿಯನ್ನು ತಯಾರಿಸಿದ್ದಾರೆ ಅಂತ 1641ರಿಂದ 1674ರ ಮಧ್ಯೆ ನೇಪಾಳವನ್ನು ಪಾಲಿಸಿದ ರಾಜ ಪ್ರತಾಪಮಲ್ಲ ಈ ವಿಗ್ರಹವನ್ನು ದರ್ಶಿಸಿಕೊಂಡು ಸಾವನ್ನಪ್ಪಿದ ಅಂತ ಕೆಲವರ ನಂಬಿಕೆಯಾಗಿದೆ. ಮತ್ತೆ ಅದರ ಹಿಂದೆ ಇರುವ ಕಾರಣಗಳು ಇದುವರೆಗೂ ತಿಳಿದುಬಂದಿಲ್ಲ. ಮತ್ತು ಈ ಆಲಯದಲ್ಲಿ ಕಾರ್ತಿಕ ಮಾಸ 11ನೇ ದಿನ ಅಂದರೆ ಏಕಾದಶಿಯಿಂದ ಹರಿಬೋಧಿನಿ ಎಂಬ ಒಂದು ಮೇಳವನ್ನು ನಡೆಸಲಾಗುತ್ತದೆ.

ಈ ಹಬ್ಬದ ಮುಖ್ಯ ಉದ್ದೇಶ ಮಲಗಿರುವ ಶ್ರೀಮಹಾವಿಷ್ಣುವನ್ನು ಎಚ್ಚರಿಸುವುದು. ಈ ಮೇಳದಲ್ಲಿ ತುಂಬಾ ಜನ ಪಾಲ್ಗೊಂಡು ಈ ಸ್ವಾಮಿಯನ್ನು ದರ್ಶಿಸಿಕೊಳ್ಳುತ್ತಾರೆ. ಮತ್ತು ಈ ಆಲಯವನ್ನು ನರಾಯಂಥನ್ ಆಲಯವೆಂದು ಕರೆಯಲಾಗುತ್ತದೆ. ಈ ಆಲಯದಲ್ಲಿ ಶ್ರೀಮಹಾವಿಷ್ಣುವು ಶೈಲ ಯೋಗ ಮುದ್ರೆಯಲ್ಲಿ ಶತಾಬ್ದಗಳಿಂದ ನೀರಿನಲ್ಲಿ ತೇಲುತ್ತಿರುವುದು ಪರಿಶೋಧಕರಿಗೆ ಆಶ್ಚರ್ಯ ಪಡುವ ವಿಷಯವಾಗಿದೆ. ಇಷ್ಟು ದೊಡ್ಡ ವಿಗ್ರಹವು ಅಷ್ಟು ವರ್ಷಗಳಿಂದ ನೀರಿನ ಮೇಲೆ ತೇಲುತ್ತಿರುವುದು ಇಂದಿಗೂ ಒಂದು ಮಿಸ್ಟರಿಯಾಗಿ ಉಳಿದಿದೆ ಅಂತ ಹೇಳಬಹುದು. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here