ಪ್ರಪಂಚದ ಅತೀ ಭಯಾನಕ ಜೈಲುಗಳ ಬಗ್ಗೆ ಒಮ್ಮೆ ನೀವು ತಿಳಿದುಕೊಳ್ಳಬೇಕು

0
593

ಈ ಪ್ರಪಂಚದಲ್ಲಿ ಪ್ರತಿ ದೇಶದಲ್ಲೂ ಅಪರಾಧಿಗಳು ಇರುತ್ತಾರೆ. ಆ ಅಪರಾಧಿಗಳು ಮಾಡಿದ ತಪ್ಪನ್ನು ಆಧರಿಸಿ ಆ ದೇಶಗಳ ಕಾನೂನು ಶಿಕ್ಷೆಯನ್ನು ಕೊಡುತ್ತದೆ. ಯಾರು ಎಂತಹ ತಪ್ಪು ಮಾಡುತ್ತಾರೋ ಅವರಿಗೆ ಅಂತಹ ಶಿಕ್ಷೆಗಳನ್ನು ನೀಡುತ್ತಾರೆ. ನಾವು ಈ ಲೇಖನದಲ್ಲಿ ಭಯವನ್ನು ಹುಟ್ಟಿಸುವ ಕೆಲವು ಜೈಲುಗಳ ಬಗ್ಗೆ ತಿಳಿದುಕೊಳ್ಳೋಣ. ಆ ಜೈಲುಗಳು ಎಷ್ಟು ಭಯವನ್ನು ಹುಟ್ಟಿಸುತ್ತದೆ ಅಂದರೆ ನಿಮಗೂ ಇವುಗಳ ಬಗ್ಗೆ ಕೇಳಿದರೆ ಖಂಡಿತ ಶಾಕ್ ಆಗುತ್ತದೆ. ಜೈಲುಗಳು ಅಂದರೆ ಅಪರಾಧಿಗಳನ್ನು ಹೊರಗಿನ ಪ್ರಪಂಚಕ್ಕೆ ತಿಳಿಯದಂತೆ ಇರಿಸುವಂತಹ ಒಂದು ಪದ್ಧತಿಯನ್ನೇ ಜೈಲು ಅಂತ ಕರೆಯುತ್ತಾರೆ.

ಆ ಅಪರಾಧಿಗಳು ಅವರ ಜೊತೆ ಇರುವ ಸಹ ಅಪರಾಧಿಗಳ ಜೊತೆ ಜೀವನವನ್ನು ಕಳೆಯಬೇಕಾಗುತ್ತದೆ. ಆದರೆ ಕೆಲವೊಂದು ಜೈಲುಗಳಿವೆ ಆ ಜೈಲು ಎಷ್ಟು ಭಯವನ್ನು ಹುಟ್ಟಿಸುತ್ತದೆ ಅಂದರೆ ಎಲ್ಲರಿಂದ ಅಪರಾಧಿಗಳನ್ನು ದೂರ ಮಾಡುವುದಲ್ಲದೆ ಅವರಿಗೆ ಬದುಕಿರುವಾಗಲೇ ನರಕವನ್ನು ತೋರಿಸುತ್ತಾರೆ. ಅವುಗಳಲ್ಲಿ ಒಂದು ಡೆತ್ ಕಾಂಪಿನ್ಸ್. ಈ ಜೈಲು ಮಂಗೋಲಿಯಾ ದೇಶದಲ್ಲಿದೆ. 20 ನೇ ಶತಮಾನದವರೆಗೂ ಅಲ್ಲಿನ ಅಪರಾಧಿಗಳಿಗೆ ಶಿಕ್ಷೆಯ ರೂಪದಲ್ಲಿ 3×5 ಫೀಟ್ ಗಾತ್ರದಲ್ಲಿರುವ ಒಂದು ಬಾಕ್ಸ್ ನಲ್ಲಿ ಆ ಅಪರಾಧಿಗಳನ್ನು ಇರಿಸುತ್ತಿದ್ದರು. ಆ ಬಾಕ್ಸ್ ನಾಲ್ಕು ಕಡೆ ಕ್ಲೋಸ್ ಆಗಿರುತ್ತದೆ. ಅಪರಾಧಿಗಳಿಗೆ ಆಹಾರ ನೀಡುವುದಕ್ಕೆ ಆರು ಇಂಚಿನ ಒಂದು ಕಿಂಡಿ ಇರುತ್ತದೆ. ಆ ಬಾಕ್ಸ್ ನಲ್ಲಿ ಸರಿಯಾಗಿ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ. ಅಷ್ಟೇ ಅಲ್ಲ ಮಲಗುವುದಕ್ಕೂ ಸಹ ಆಗುವುದಿಲ್ಲ.

ಆ ಅಪರಾಧಿ ಸಾಯುವವರೆಗೂ ಆ ಬಾಕ್ಸ್ ನಲ್ಲಿ ಇರಿಸಿ ಚಿತ್ರಹಿಂಸೆ ನೀಡಿ ಸಾಯಿಸಲಾಗುತ್ತಿತ್ತು. ಅಷ್ಟೇ ಅಲ್ಲದೇ ಖೈದಿಗಳ ಮಲ ಮೂತ್ರವನ್ನು ಸಹ ಆ ಬಾಕ್ಸ್ ನಿಂದ ತೆಗೆಯುತ್ತಿರಲಿಲ್ಲ. ಆ ವಾಸನೆ ಹಿಡಿಯುತ್ತಾ ಆ ಕೈದಿಗಳು ನರಕವನ್ನು ನೋಡಬೇಕಾಗಿತ್ತು. ಚಳಿಗಾಲದಲ್ಲಿ ಆ ಬಾಕ್ಸ್ ನ ಹೊರಗಿನ ಪ್ರಪಂಚದಲ್ಲಿ ಇಡುತ್ತಾ ಇದ್ದರು. ಆ ಚಳಿ ತಾಳಲಾರದೆ ಆ ಕೈದಿಗಳು ಆ ಬಾಕ್ಸ್ ನಲ್ಲಿ ಸಾವನ್ನಪ್ಪುತ್ತಿದ್ದರು. ಆಂಡರ್ಸನ್ ವಿಲ್ಲೆ ಜೈಲ್. ಅಮೇರಿಕನ್ ಸಿವಿಲ್ ವಾರ್ ಟೈಮ್ ನಲ್ಲಿ ಯಾರು ಆ ಯುದ್ಧವನ್ನು ವಿರೋಧಿಸುತ್ತಿದ್ದರೋ ಅವರನ್ನು ಈ ವಿಲ್ಲೆ ಜೈಲ್ ನಲ್ಲಿ ಬಿಡುತ್ತಿದ್ದರು. ಅವರಿಗೆ ತಿನ್ನಲು ಆಹಾರವನ್ನು ನೀಡುತ್ತಿರಲಿಲ್ಲ. ಅವರ ಕೊನೆ ಉಸಿರು ಇರುವವರೆಗೂ ಅನ್ನ ನೀರು ಇಲ್ಲದೆ ಅನೇಕ ಕಾಯಿಲೆಗಳು ಸೋಕಿ ನರಳಾಡುತ್ತ ಸಾಯುತ್ತಿದ್ದರು. ಸತ್ತವರ ಶವಗಳನ್ನು ಸಹ ಅಲ್ಲಿಂದ ತೆಗೆಯುತ್ತಾ ಇರಲಿಲ್ಲ. ಇನ್ನು ಕೆಲವರಾದರೆ ಆ ಸತ್ತ ಶವಗಳನ್ನೇ ತಿನ್ನುತ್ತಾ ಮಳೆಯ ನೀರನ್ನು ಕುಡಿಯುತ್ತ ಬದುಕುತ್ತಿದ್ದರು. ಅವರಿಗೂ ಸಹ ಅನೇಕ ಕಾಯಿಲೆಗಳು ಸೋಕಿ ಕೆಲವು ದಿನಗಳ ನಂತರ ಸಾಯುತ್ತಿದ್ದರು. ಈ ಲೇಖನ ಓದಿದ ನೀವು ಒಮ್ಮೆ ಉಹೆ ಮಾಡಿಕೊಳ್ಳಿರಿ ನಮ್ಮ ಭಾರತದ ಜೈಲುಗಳು ಯಾವ ರೀತಿಯಲ್ಲಿ ಇದೆ ಎಂದು.

LEAVE A REPLY

Please enter your comment!
Please enter your name here