ಮನುಸ್ಪೃತಿ ಗ್ರಂಥದಲ್ಲಿ ಹೇಳಿದ ಪ್ರಕಾರ ಮಹಿಳೆಯರು ಈ ತಪ್ಪುಗಳು ಮಾಡಲೇ ಬಾರದು

0
909

ಹಿಂದೂ ಧರ್ಮದಲ್ಲಿ ಸಾಕಷ್ಟು ಗ್ರಂಥಗಳು ಇದೆ ಅದರಲ್ಲಿ ಸಾಕಷ್ಟು ನೀತಿ ನಿಯಮಗಳನ್ನು ಪುರುಷ ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ ಕೆಲವು ಆಚಾರ ವಿಚಾರಗಳನ್ನು ತಿಳಿಸುತ್ತಾ ಇದೆ ಅದೇ ರೀತಿ ಮನುಸ್ಪೃತಿ ಎಂಬ ಅತೀ ಮುಖ್ಯ ಗ್ರಂಥ. ಮನುಸ್ಪೃತಿ ಹಿಂದೂ ಧರ್ಮದ ಒಂದು ಪ್ರಮುಖ ಗ್ರಂಥ ವಾಕ್ಯತೆ. ಮನುಸ್ಮೃತಿಯಲ್ಲಿ ಸ್ತ್ರೀಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಲಾಗಿದೆ. ಇದರ ಪ್ರಕಾರ ಮಹಿಳೆ ಆದವಳು ಈ 6 ಕೆಲಸಗಳನ್ನು ಮಾಡಲೇಬಾರದು. ಆ ಆರು ಕೆಲಸಗಳು ಯಾವುವು ಅಂತ ಹೇಳುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಮನುಸ್ಪೃತಿಯ ಪ್ರಕಾರ ಮಹಿಳೆಯರು ಮಧ್ಯಪಾನ ಮಾಡಬಾರದು.

ಮದ್ಯಪಾನ ಮಾಡಿದಾಗ ಪ್ರಪಂಚದ ಅರಿವಿರುವುದಿಲ್ಲ. ಈ ವೇಳೆ ಮರ್ಯಾದೆ ಹೋಗುವ ಕೆಲಸ ಮಾಡುವ ಸಾಧ್ಯತೆ ಇರುತ್ತದೆ. ಮದ್ಯಪಾನ ವ್ಯಕ್ತಿ ಒಂದೇ ಅಲ್ಲ ಸಮಾಜಕ್ಕೂ ಹಾನಿಕಾರಕ ಹಾಗಾಗಿ ಮಹಿಳೆಯರು ಮಾತ್ರ ಅಲ್ಲ ಪುರುಷರು ಕೂಡ ಮಧ್ಯಪಾನ ಮಾಡಬಾರದು. ಮತ್ತು ದುಷ್ಟ ಪುರುಷನ ಸಹವಾಸದಿಂದ ಮಹಿಳೆಯ ಆದವಳು ದೂರವಿರಬೇಕೆಂದು ಮನುಸ್ಪೃತಿಯಲ್ಲಿ ಹೇಳಲಾಗಿದೆ. ದುಷ್ಟ ಪುರುಷನ ಸಹವಾಸ ಮಾಡಿದರೆ ಮಹಿಳೆ ಕಷ್ಟ ಅನುಭವಿಸಬೇಕಾಗುತ್ತದೆ. ದುಷ್ಟನ ಭಾವದಂತೆ ಮಹಿಳೆಯ ಸ್ವಭಾವ ಬದಲಾಗುವ ಸಾಧ್ಯತೆ ಇರುತ್ತದೆ. ಮದುವೆಯಾದ ಮಹಿಳೆಯು ಸದಾ ಪತಿಯೊಂದಿಗೆ ಜೊತೆಗಿರಬೇಕೆಂದು ಗ್ರಂಥದಲ್ಲಿ ಹೇಳಲಾಗಿದೆ. ಪತಿಗೆ ರೋಗ ಅಥವಾ ಇನ್ಯಾವುದೇ ಸಮಸ್ಯೆ ಕಾಡಿದಾಗಲೂ ಆತನ ಜೊತೆಗಿರಬೇಕು.

ಪತಿಯಿಂದ ದೂರವಿರುವ ಪತ್ನಿ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಾಳೆ. ಇದು ಆಕೆ ಚಾರಿತ್ರ್ಯಕ್ಕೆ ಕಳಂಕ ತರುವ ಸಾಧ್ಯತೆ ಇರುತ್ತದೆ. ಕೆಲ ಮಹಿಳೆಯರು ಕೆಲಸವಿಲ್ಲದೆ ಸುತ್ತಾಡುತ್ತಿರುತ್ತಾರೆ. ಮನುಸ್ಪೃತಿಯ ಪ್ರಕಾರ ಕೆಲಸವಿಲ್ಲದೆ ಅಲ್ಲಿ ಇಲ್ಲಿ ವಿನಃ ಸುತ್ತಾಡಬಾರದು. ಮದುವೆಯಾದ ಮಹಿಳೆ ಹೀಗೆ ಮಾಡಿದ್ದಲ್ಲಿ ಆಕೆಗೆ ಸಿಗಬೇಕಾದ ಸನ್ಮಾನ ಗೌರವ ಸಿಗದೇ ಇರುವ ಸಾಧ್ಯತೆ ಇರುತ್ತದೆ. ಹಗಲಿನಲ್ಲಿ ಹಾಗೂ ಬೆಳಗ್ಗೆ ಸೂರ್ಯೋದಯವಾದ ನಂತರ ಮಹಿಳೆಯರು ಮಲಗಬಾರದು. ಎಂದು ಗ್ರಂಥದಲ್ಲಿ ಹೇಳಲಾಗಿದೆ. ತುಂಬಾ ಸಮಯ ಮಹಿಳೆಯು ಮಲಗಿದ್ದಲ್ಲಿ ಮನೆಯ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುವುದಿಲ್ಲ.

ಇದರಿಂದ ಮನೆಯಲ್ಲಿ ಅಶಾಂತಿ ಕಾಡುತ್ತದೆ. ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯ ಮೂಡುತ್ತದೆ. ಪತಿ ಪತ್ನಿ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆಗಳು ಇರುತ್ತದೆ. ಬೇರೆಯವರ ಮನೆಯಲ್ಲಿ ನೆಲೆಸುವುದು ಮನುಸ್ಪೃತಿಯ ಪ್ರಕಾರ ಸೂಕ್ತವಲ್ಲ. ಪತಿಯ ಮನೆಯ ಪರಿಸ್ಥಿತಿ ಹೇಗೆ ಇರಲಿ ಅದನ್ನು ಅನುಸರಿಸಿಕೊಂಡು ಹೋಗಬೇಕು. ಪತಿ ಮನೆ ತೊರೆದು ಬೇರೆಯವರ ಮನೆಯಲ್ಲಿ ವಾಸವಾಗುವುದು ಮಹಿಳೆ ಶ್ರೇಯಸ್ಸಿಗೆ ಅಡ್ಡಿಯಾಗಿರುತ್ತದೆ. ಆದರೆ ಕಾಲ ಬದಲಾದಂತೆ ಯಾವ ಸ್ತ್ರೀ ಮತ್ತು ಪುರುಷನು ಸಹ ರೀತಿ ನೀತಿ ನಿಯಮಗಳನ್ನು ಪಾಲಿಸುತ್ತಾ ಇಲ್ಲ ಆದರು ನಾವು ನಮ್ಮ ಶಸ್ತ್ರ ಸಂಪ್ರದಾಯಗಳಿಗೆ ಒಂದಿಷ್ಟು ಮಹತ್ವ ನೀಡೋದು ನಮ್ಮ ಆದ್ಯ ಕರ್ತವ್ಯ ಆಗಿದೆ. ಈ ಲೇಖನವನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ಮರೆಯದೇ ತಿಳಿಸಿ.

LEAVE A REPLY

Please enter your comment!
Please enter your name here